Immunity Booster Tips: ಈ 5 ಆಹಾರಗಳು ಮತ್ತು ಅಭ್ಯಾಸದಿಂದ ದೂರ ಉಳಿದರೆ ನಿಮ್ಮ ರೋಗನಿರೋಧಕ ಶಕ್ತಿ ಇಮ್ಮಡಿ

How to improve immunity: ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಲು ಕೆಲವೊಂದು ಆಹಾರವನ್ನು ಸೇವಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಕೆಲವು ಆಹಾರ ಪದಾರ್ಥಗಳಿಂದ ದೂರು ಇರುವುದು. ಹಾಗಾದರೆ ಯಾವುದು ಆ ಆಹಾರಗಳು ಮತ್ತು ಪದಾರ್ಥಗಳು? ಈ ಕೆಳಗಿವೆ ಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Health Tips to Boost Immunity during COVID-19: ಕೊರೋನಾ ನಮ್ಮ ಆರೋಗ್ಯದ ಮೇಲೆ ನಾವೆಲ್ಲರೂ ಗಮನಹರಿಸುವಂತೆ ಮಾಡಿದೆ. ರೋಗನಿರೋಧಕ ಶಕ್ತಿ ಎನ್ನುವ ಪದ ಈಗ ಎಷ್ಟು ಮುಖ್ಯ ಎನ್ನುವುರು ಮನವರಿಕೆ ಆಗಿದೆ. ಸಾಂಕ್ರಾಮಿಕ ಕಾಲದಲ್ಲಿ ಬಹುತೇಕರು ರೋಗನಿರೋಧಕ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆರೋಗ್ಯಪೂರ್ಣ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಜೊತೆಗೆ ಅನಾರೋಗ್ಯಕರ ಆಹಾರವನ್ನೂ ಸಹ ದೂರ ಇಡುವುದು ಅಷ್ಟೇ ಪ್ರಾಮುಖ್ಯತೆ ಗಳಿಸುತ್ತದೆ. ಆಗ ಮಾತ್ರವೇ ರೋಗನಿರೋಧ ಶಕ್ತಿ ವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಈ 5 ಆಹಾರವನ್ನು ನೀವು ನಿಯಂತ್ರಿಸಲೇಬೇಕು.

  ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಲು ಕೆಲವೊಂದು ಆಹಾರವನ್ನು ಸೇವಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಕೆಲವು ಆಹಾರ ಪದಾರ್ಥಗಳಿಂದ ದೂರು ಇರುವುದು. ಹಾಗಾದರೆ ಯಾವುದು ಆ ಆಹಾರಗಳು ಮತ್ತು ಪದಾರ್ಥಗಳು? ಈ ಕೆಳಗಿವೆ ಪಟ್ಟಿ. Do not eat this list:

  ಸಕ್ಕರೆ:

  ನೀವು ಸಿಹಿ ಪ್ರಿಯರೇ, ಹಾಗಾದರೆ ಸಕ್ಕರೆಯನ್ನು ನೀವು ನಿಯಂತ್ರಿಸಲೇಬೇಕು. ಪ್ರತಿನಿತ್ಯ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಅದ್ಭುತ ಬದಲಾವಣೆಯನ್ನು ಗಮನಿಸಬಹುದು. ಸಕ್ಕರೆ ಹೆಚ್ಚಿರುವ ಆಹಾರ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದರಿಂದ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ ಆಲ್ಫಾ, ಸಿ-ರಿಯಾಕ್ಟಿವ್ ಪ್ರೋಟೀನ್ ಮತ್ತು ಇಂಟರ್ಲ್ಯುಕಿನ್ -6 ನಂತಹ ಉರಿಯೂತದ ಪ್ರೋಟೀನ್‌ಗಳ ಉತ್ಪಾದನೆಯು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸಕ್ಕರೆಯುಕ್ತ ಆಹಾರ ಮತ್ತು ಪಾನೀಯಗಳಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

  ಉಪ್ಪು:

  ಅತಿಯಾದ ಉಪ್ಪಿನ ಸೇವನೆ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಚಿಪ್ಸ್, ಬೇಕರಿ ಆಹಾರಗಳು, ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಉಪ್ಪಿನಂಶವಿರುತ್ತದೆ. ಇದರಿಂದ ಬ್ಯಾಕ್ಟೀರಿಯಾದ ಸೋಂಕಿನೊಡನೆ ಹೋರಾಡಲು ಕಷ್ಟವಾಗುತ್ತದೆ. ಪ್ರತಿದಿನ 5 ಗ್ರಾಂಗಿಂತಲೂ ಹೆಚ್ಚಿನ ಉಪ್ಪು ಸೇವಿಸಬಾರದು. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಪ್ರಕಾರ, ವಯಸ್ಕರು ಸೇವಿಸಬೇಕಾದ ಗರಿಷ್ಠ ಪ್ರಮಾಣದ ಉಪ್ಪು ಇದು .ಅತಿಯಾದ ಉಪ್ಪು ಸೇವನೆಯು ಗ್ಲುಕೊಕಾರ್ಟಿಕಾಯ್ಡ್ ಮಟ್ಟವನ್ನು ಹೆಚ್ಚಿಸುತ್ತದೆ. ಗ್ಲುಕೊಕಾರ್ಟಿಕಾಯ್ಡ್ ಕಾರ್ಟಿಸೋನ್ ಉರಿಯೂತವನ್ನು ಕಡಿಮೆ ಮಾಡಲು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ.

  ಕರಿದ ಆಹಾರ ಪದಾರ್ಥಗಳು:

  ಕರಿದ ತಿನಿಸುಗಳು ನಮ್ಮ ಇಮ್ಯೂನಿಟಿಯನ್ನು ಕುಗ್ಗಿಸುವುದರಲ್ಲಿ ಗಣನೀಯ ಪಾತ್ರವಹಿಸುತ್ತವೆ. ಸಂಶೋಧನೆಯ ಪ್ರಕಾರ ಹೃದ್ರೋಗಕ್ಕೆ ಕಾರಣವಾಗುತ್ತದೆ. ಅಲ್ಲದೇ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ ಎನ್ನಲಾಗುತ್ತದೆ. ಕರಿದ ಆಹಾರಗಳು ಸುಧಾರಿತ ಗ್ಲೈಕೇಶನ್ ಎಂಡ್ ಪ್ರಾಡಕ್ಟ್‌ಗಳಲ್ಲಿ (ಎಜಿಇ) ಅಧಿಕವಾಗಿವೆ. ಇವುಗಳನ್ನು ಸಕ್ಕರೆ ಪ್ರೋಟೀನ್ ಅಥವಾ ಲಿಪಿಡ್‌ಗಳೊಂದಿಗೆ ಬೆರೆಸಿದಾಗ ಹೆಚ್ಚಿನ ತಾಪಮಾನದ ಡೀಪ್ ಫ್ರೈ ಅಡುಗೆಗಳಲ್ಲಿ ಇವು ಪರಿಣಾಮ ಬೀರುತ್ತವೆ. ಫ್ರೈ ಮಾಡುವ ಆಹಾರಗಳು ಉರಿಯೂತಕ್ಕೆ ಕಾರಣವಾಗುವುದಲ್ಲದೇ ಸೆಲ್ಯುಲಾರ್ಗಳಿಗೆ ಹಾನಿಯುಂಟುಮಾಡುತ್ತವೆ. ಫ್ರೆಂಚ್ ಫ್ರೈಸ್, ಸಮೋಸಾ, ಪ್ಯಾಕೇಜ್ಡ್ ಚಿಪ್ಸ್ ,ಡೀಪ್ ಫ್ರೈಡ್ ಆಹಾರಗಳನ್ನು ಆದಷ್ಟು ನಿಯಂತ್ರಿಸಿ.

  ಇದನ್ನೂ ಓದಿ: ತ್ವಚೆಯ ಆರೈಕೆಯಿಂದ ಹೃದಯದ ಆರೋಗ್ಯದವರೆಗೆ ರೆಡ್ ವೈನ್ ಪ್ರಯೋಜನಗಳು ಒಂದೆರೆಡಲ್ಲ

  ಕೆಫಿನ್: 

  ಅತಿಯಾದ ಕಾಫಿ ಕೂಡ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಅತಿಯಾದ ಕಾಫಿ, ಟೀ ಸೇವನೆ ನಿಮ್ಮ ನಿದ್ದೆಗೂ ತೊಂದರೆ ನೀಡುತ್ತದೆ. ಇದು ಉರಿಯೂತದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

  ಇದನ್ನೂ ಓದಿ: Cancer: ರಕ್ತ ಪರೀಕ್ಷೆಯಿಂದ ಕ್ಯಾನ್ಸರ್ ಲಕ್ಷಣಗಳ 50 ವಿಧಗಳನ್ನು ಪತ್ತೆಹಚ್ಚಬಹುದು: ಅಧ್ಯಯನ

  ಮದ್ಯಪಾನ:

  ರೋಗನಿರೋಧಕ ಶಕ್ತಿಯನ್ನು ಅತಿ ಹೆಚ್ಚು ಕುಂದಿಸುವ ಆಹಾರ ಪದ್ಧತಿಯಲ್ಲಿ ಮದ್ಯಪಾನವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅತಿಯಾದ ಮದ್ಯಪಾನ ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ನಾಶಮಾಡಬಹುದು. ಮಯೋ ಕ್ಲಿನಿಕ್ ಪ್ರಕಾರ ಮದ್ಯಪಾನ ಬೇಗ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.
  Published by:Sharath Sharma Kalagaru
  First published: