ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಲೈಂಗಿಕ ಕ್ರಿಯೆ ಒಂದು ಪ್ರಕೃತಿ ಸಹಜ ಪ್ರಕ್ರಿಯೆ. ಈ ಕ್ರಿಯೆಯಲ್ಲಿ ಕೆಲವರು ಯಶಸ್ವಿಯಾದರೆ, ಕೆಲವರು ಅತೃಪ್ತಿಯಿಂದಲೇ ಇರುತ್ತಾರೆ. ಈ ತಪ್ಪುಗಳುನ್ನು ನೀವು ಮಾಡದಿದ್ದರೆ, ನಿಮ್ಮ ಲೈಂಗಿಕ ಜೀವನದಲ್ಲಿ ಸಂತಸದಿಂದಿರಲು ಸಾಧ್ಯ ಎನ್ನುತ್ತದೆ ಸಂಶೋಧನೆ

news18
Updated:February 5, 2019, 4:10 PM IST
ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
  • News18
  • Last Updated: February 5, 2019, 4:10 PM IST
  • Share this:
ಬೆಂಗಳೂರು: ನಿಮ್ಮ ಪ್ರಿಯತಮೆ ಅಥವಾ ಪ್ರಿಯತಮನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ನೀವು ಅನುಸರಿಸುವ ಮಾರ್ಗಗಳು ಹೇಗಿರಬೇಕು ಮತ್ತು ಹೇಗಿರಬಾರದು ಎಂಬ ಬಗ್ಗೆ ಅದೆಷ್ಟೋ ಜನರಿಗೆ ತಿಳಿದಿರುವುದಿಲ್ಲ. ಈ ಕಾರಣಕ್ಕಾಗಿಯೇ ದಾಂಪತ್ಯ ಕಲಹ, ಲೈಂಗಿಕ ಅತೃಪ್ತಿ ಸೃಷ್ಟಿಯಾಗಬಹುದು. ಲೈಂಗಿಕ ಕ್ರಿಯೆ ಒಂದು ಪ್ರಕೃತಿ ಸಹಜ ಪ್ರಕ್ರಿಯೆ. ಈ ಕ್ರಿಯೆಯಲ್ಲಿ ಕೆಲವರು ಯಶಸ್ವಿಯಾದರೆ, ಕೆಲವರು ಅತೃಪ್ತಿಯಿಂದಲೇ ಇರುತ್ತಾರೆ. ಈ ತಪ್ಪುಗಳುನ್ನು ನೀವು ಮಾಡದಿದ್ದರೆ, ನಿಮ್ಮ ಲೈಂಗಿಕ ಜೀವನದಲ್ಲಿ ಸಂತಸದಿಂದಿರಲು ಸಾಧ್ಯ ಎನ್ನುತ್ತದೆ ಸಂಶೋಧನೆ.

1. ಮುತ್ತು ನೀಡದಿರುವುದು

ಕೆಲವರು ಲೈಂಗಿಕ ಕ್ರಿಯೆ ವೇಳೆ ಒಬ್ಬರನ್ನೊಬ್ಬರು ಮುತ್ತಿಡುವುದಿಲ್ಲ. ಯಾಕೆ? ಅದಕ್ಕೆ ಪೊಸಿಷನ್​ಗಳ ಸಮಸ್ಯೆಯಿರಬಹುದು, ಅಥವಾ ಕ್ರಿಯೆಯ ಉತ್ತುಂಗ ಮುಟ್ಟುವ ಯೋಚನೆಯೊಂದೇ ಕೆಲವರಿಗೆ ಮುಖ್ಯವಾಗಿರಬಹುದು. ಮುತ್ತಿಡುವುದರಿಂದ ಲೈಂಗಿಕ ಕ್ರಿಯೆಗೆ ತೊಂದರೆಯಾಗಬಹುದು ಎಂದೂ ಕೆಲವರು ಯೋಚಿಸಬಹುದು. ಆದರೆ ಮುತ್ತಿಡುವುದರಿಂದ ಲೈಂಗಿಕ ಕ್ರಿಯೆಗೆ ಮತ್ತಷ್ಟು ಕಿಕ್​ ಸಿಗುತ್ತದೆ ಎನ್ನುತ್ತದೆ ಸಂಶೋಧನೆ. ಈ ಕಾರಣಕ್ಕಾಗಿಯೇ ಲೈಂಗಿಕ ಕ್ರಿಯೆ ವೇಳೆ ನಿಮ್ಮ ಪ್ರೇಯಸಿ, ಪ್ರಿಯತಮನಿಗೆ ಮುತ್ತು ಕೊಡಬೇಕೆಂದು ಸೂಚಿಸಲಾಗಿದೆ.

2. ಕ್ರಿಯೆಯ ಆರಂಭಕ್ಕೂ ಮುನ್ನ ಕಚ್ಚುವುದು

ಲೈಂಗಿಕ ಕ್ರಿಯೆ ಆರಂಭಿಸುವ ಮುನ್ನ ಉತ್ಸಾಹದಲ್ಲಿ ಕೆಲವರು ತಮ್ಮ ಪಾರ್ಟ್​ನರ್​ ದೇಹದ ಯಾವುದಾದರೂ ಭಾಗವನ್ನು ಗಟ್ಟಿಯಾಗಿ ಕಚ್ಚುವ ಅಭ್ಯಾಸ ಹೊಂದಿರುತ್ತಾರೆ. ಇದರಿಂದ ಸೆಕ್ಸ್​ ಮೂಡ್​ ಇನ್ನಷ್ಟು ರಂಗೇರುತ್ತದೆ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ ಲೈಂಗಿಕ ಕ್ರಿಯೆ ಆರಂಭದ ಹೊಸ್ತಿಲಲ್ಲಿ ದೈಹಿಕವಾಗಿ ನೋವಾದಲ್ಲಿ ಅದು ಕ್ರಿಯೆಯನ್ನು ಕುಂಠಿತಗೊಳಿಸಬಹುದು. ಈ ಅಭ್ಯಾಸವಿದ್ದಲ್ಲಿ, ಮೊದಲು ತಮ್ಮ ಪಾರ್ಟ್​ನರ್​ ಸಂಪೂರ್ಣ ಸಿದ್ಧರಾಗಿದ್ದಾರೆ ಎಂಬುದನ್ನು ಅರಿತು, ನಂತರ ಮಾಡಿ.

3. ದೇಹದ ಮಿಕ್ಕೆಲ್ಲಾ ಅಂಗಗಳನ್ನೂ ಇಗ್ನೋರ್​ ಮಾಡುವುದು

ಲೈಂಗಿಕ ಕ್ರಿಯೆ ವೇಳೆ ಜನನಾಂಗ ಹೊರತುಪಡಿಸಿ ದೇಹದ ಮಿಕ್ಕೆಲ್ಲಾ ಭಾಗಗಳನ್ನು (ಬೆನ್ನು, ಹೊಟ್ಟೆ, ಮುಂಗೈ, ಮುಂಗಾಲು, ಮೊಣಕೈ, ಕಾಲು) ನಿರ್ಲಕ್ಷಿಸುವುದು ತಪ್ಪು. ಕೇವಲ ಜನನಾಂಗದಿಂದ ಮಾತ್ರ ಲೈಂಗಿಕ ಕ್ರಿಯೆಯ ವೇಳೆ ಉತ್ಸಾಹ ಮೂಡುತ್ತದೆ ಎಂಬುದು ತಪ್ಪು ಕಲ್ಪನೆ. ದೇಹದ ಇತರ ಭಾಗಗಳ ಜತೆಗಿನ ಸರಸ ನಿಮ್ಮ ಕ್ರಿಯೆಗೆ ಇನ್ನಷ್ಟು ಉತ್ಸಾಹ ತುಂಬುತ್ತದೆ.4. ಇಡೀ ದೇಹದ ಭಾರವನ್ನು ಬಿಡುವುದು

ನಿಮ್ಮ ಪಾರ್ಟ್​ನರ್​ ಮೇಲೆ ನಿಮ್ಮಿಡೀ ಭಾರವನ್ನು ಬಿಟ್ಟರೆ ಅದರಿಂದ ಉಸಿರಾಟದ ಸಮಸ್ಯೆ ಆಗಬಹುದು. ಕೆಲವೊಮ್ಮೆ ಗಮನಕ್ಕೇ ಬಾರದೇ ಕೆಲವರು ತಮ್ಮ ಭಾರವನ್ನು ಸಂಪೂರ್ಣವಾಗಿ ಸಂಗಾತಿಯ ಮೇಲೆ ಬಿಡುತ್ತಾರೆ. ಆದರೆ ಉಸಿರು ಗಟ್ಟುವಂತಾದರೆ ಸೆಕ್ಸ್​ನಲ್ಲಿನ ಉತ್ಸಾಹ ಕಡಿಮೆಯಾಗುತ್ತದೆ. ಲೈಂಗಿಕ ಕ್ರಿಯೆಯ ಅವಧಿಯೂ ಬಹುಬೇಗ ಮುಗಿಯುವ ಸಾಧ್ಯತೆ ಇದರಿಂದ ಹೆಚ್ಚಾಗುತ್ತದೆ.

5. ಶೀಘ್ರ ಅಥವಾ ದೀರ್ಘ ಸ್ಕಲನ

ಈ ಸಮಸ್ಯೆ ಹೆಚ್ಚಿನದಾಗಿ ಗಂಡಸರಲ್ಲಿ ಕಂಡು ಬರುತ್ತದೆ. ಮೊದಲನೆಯ ಸಮಸ್ಯೆ ಅಂದರೆ ಶೀಘ್ರ ಸ್ಕಲನ. ಈ ಸಮಸ್ಯೆ ಹೆಚ್ಚಿನ ಜನರಲ್ಲಿ ಕಂಡು ಬರುತ್ತದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವವರ ಸಂಖ್ಯೆಯೂ ಬಹಳ ದೊಡ್ಡದು. ಎರಡನೆಯ ಸಮಸ್ಯೆ ದೀರ್ಘ ಸ್ಕಲನ. ಇದರಿಂದ ನಿಮ್ಮ ಸಂಗಾತಿಗೆ ತಾಂತ್ರಿಕ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದಂತೆ ಅನಿಸುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿಯೇ ಲೈಂಗಿಕ ಕ್ರಿಯೆಯ ವೇಳೆ ಫೋರ್​ ಪ್ಲೇಗೆ ಹೆಚ್ಚಿನ ಒತ್ತು ನೀಡಬೇಕು. ಈ ಮೂಲಕ ಶೀಘ್ರ ಮತ್ತು ದೀರ್ಘ ಸ್ಕಲನಗಳನ್ನು ತಡೆಗಟ್ಟಿ, ಸರಿದೂಗಿಸಬಹುದು. ನಿಮ್ಮ ಸಂಗಾತಿಗೂ ಇದರಿಂದ ಸಂಪೂರ್ಣ ತೃಪ್ತಿ ಸಿಗುತ್ತದೆ.

6. ಸ್ಕಲನಕ್ಕೂ ಮುನ್ನ ಸಂಗಾತಿಗೆ ತಿಳಿಸದಿರುವುದು

ಎಷ್ಟೋ ಜನ ಲೈಂಗಿಕ ಕ್ರಿಯೆಯ ಉತ್ತುಂಗ ಮುಟ್ಟಿ ಸ್ಕಲನಕ್ಕೊಳಗಾದಾಗ ತಮ್ಮ ಸಂಗಾತಿಗೆ ಹೇಳುವುದೇ ಇಲ್ಲ. ಇದರಿಂದ ಲೈಂಗಿಕ ಕ್ರಿಯೆಯಲ್ಲಿ ವೈಮನಸ್ಸು ಉಂಟಾಗಬಹುದು. ಯಾವುದೇ ಕಾರಣಕ್ಕೂ ನೀವು ಸಂಗಾತಿಗೆ ತಿಳಿಸದೇ ಕ್ರಿಯೆ ಮುಗಿಸಬಾರದು. ಮುಗಿಯುವ ವೇಳೆ ಸಂಗಾತಿಗೆ ತಿಳಿಸಬೇಕು. ಇದರಿಂದ ಸಂಗಾತಿಯೂ ಅಂತಿಮ ಹಂತಕ್ಕೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಮತ್ತು ಇಬ್ಬರಲ್ಲೂ ಸಂತೃಪ್ತಿ ಮೂಡುತ್ತದೆ.

7. ಪಾರ್ನ್​ ಸಿನೆಮಾಗಳಂತೆ ನಡೆದುಕೊಳ್ಳುವುದು

ಕೆಲವರಿಗೆ ಪಾರ್ನ್​ ಸಿನೆಮಾಗಳಂತೆ ನಿಜ ಜೀವನದಲ್ಲೂ ಸೆಕ್ಸ್​ ಮಾಡುವ ಹಂಬಲವಿರುತ್ತದೆ. ಆದರೆ ನಿಮ್ಮ ಇಚ್ಛೆಯನ್ನು ಕಾರ್ಯರೂಪಕ್ಕೆ ತರುವ ಮುನ್ನ ನಿಮ್ಮ ಸಂಗಾತಿಗೆ ತಿಳಿಸಿ. ಯಾಕೆಂದರೆ ನಿಮ್ಮ ಸಂಗಾತಿಗೆ ಅದು ಇಷ್ಟವಾಗದಿದ್ದರೆ, ಅನ್​ ಕನ್ಫರ್ಟ್​ ಫೀಲ್​ ಆಗಬಹುದು. ಇದರಿಂದ ಲೈಂಗಿಕ ಕ್ರಿಯೆ ಹಾಳಾಗುತ್ತದೆ.
First published:February 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ