Mango Plant: ಮನೆಯಲ್ಲೇ ಸುಲಭವಾಗಿ ಮಾವಿನ ಹಣ್ಣು ಬೆಳೆಯುವುದು ಹೇಗೆ ಗೊತ್ತಾ? ಈ ಕ್ರಮಗಳನ್ನು ಅನುಸರಿಸಿ

ಬೇಸಿಗೆಯ ಸಮಯದಲ್ಲಿ ಗಿಡಕ್ಕೆ ಚೆನ್ನಾಗಿ ನೀರುಣಿಸಿ, ಆದರೆ ಮಣ್ಣಲ್ಲಿ ತೇವಾಂಶವಾಗಿರಬೇಕೆ ಹೊರತು ಅತಿಯಾಗಿ ಒದ್ದೆಯಾಗಿರಬಾರದು ಎಂಬುದನ್ನು ಗಮನದಲ್ಲಿಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಣ್ಣುಗಳ ರಾಜನೆಂದೇ ಪ್ರಖ್ಯಾತವಾದ ಮಾವಿನ ಹಣ್ಣು (Mango) ಎಂದರೆ ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ ಹೇಳಿ? ಈ ರುಚಿಕರವಾದ ಮಾವು ಮೂಲತಃ ಭಾರತೀಯ ಹಣ್ಣು. ಆದರೆ ಪೋರ್ಚುಗೀಸರು ಮೊದಲು ಇದನ್ನು ಬಳಸಿದರು ಎಂದು ಇತಿಹಾಸ ಹೇಳುತ್ತದೆ. ಇತಿಹಾಸ (History) ಅದೇನೆ ಇರಲಿ ಮಾವಿನ ಹಣ್ಣುಗಳನ್ನು ಮನೆಯಲ್ಲೇ ಬೆಳೆಯಬಹುದೆ ಎಂದು ಒಮ್ಮೆಯಾದರೂ ಅನಿಸಿಯೇ ಇರುತ್ತದೆ ಅಲ್ಲವೆ? ಮಾವು ಸಾಮಾನ್ಯವಾಗಿ ಉಷ್ಣವಲಯದಲ್ಲಿ ಬೆಳೆಯುವ ಬೆಳೆಯಾಗಿದೆ. ಚಳಿ ಪ್ರದೇಶದಲ್ಲಿ ಖಂಡಿತವಾಗಿ ಮಾವನ್ನು ಮನೆಯಲ್ಲಿ ಬೆಳೆಯಲಾಗದು. ಆದರೆ, ಕೆಲ ನಿರ್ದಿಷ್ಟ ವಾತಾವರಣದಲ್ಲಿ ಮನೆಯಲ್ಲೂ ಸಹ ಮಾವನ್ನು ಬೆಳೆಯಬಹುದಾಗಿದೆ.

  ಆದರೆ, ಹೀಗೆ ಮನೆಯೊಳಗೆ ಮಾವು ಬೆಳೆಯಬೇಕೆಂದಿದ್ದರೆ ಕುಬ್ಜ ಜಾತಿಯ ಮಾವಿನ ತಳಿಯನ್ನು ಬೆಳೆಯುವುದೇ ಸೂಕ್ತ. "ಕೆನ್ಸಿಂಗ್ಟನ್ ಪ್ರೈಡ್" ಎಂಬ ಕುಬ್ಜ ಜಾತಿಯ ಮಾವಿನ ತಳಿಯನ್ನು ಮನೆಯಲ್ಲಿ ಬೆಳೆಯಬಹುದಾಗಿದೆ.

  ಕೆನ್ಸಿಂಗ್ಟನ್ ಪ್ರೈಡ್ ಮಾವಿನ ತಳಿ

  ಮೊದಲಿಗೆ ನಿಮ್ಮ ಸ್ಥಳೀಯ ನರ್ಸರಿಯಿಂದ ಈ ತಳಿಯ ಮಾವಿನ ಬೀಜಗಳನ್ನು ಪಡೆದು ಅನಂತರ ಬೆಳೆಯಲು ಪ್ರಾರಂಭಿಸಿ. ಸಾಮಾನ್ಯವಾಗಿ ಕೆನ್ಸಿಂಗ್ಟನ್ ಪ್ರೈಡ್ ಮಾವಿನ ತಳಿಯ ಗಿಡ ಎಂಟು ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ಆದರೆ ಆ ಎತ್ತರವನ್ನು ನಾವು ಐದು ಅಡಿಗಳವರೆಗೆ ಸೀಮಿತಗೊಳಿಸಬಹುದಾಗಿದೆ. ಕುಂಡದಲ್ಲಿ ಬೆಳೆಯಲು ಅನುಕೂಲವಾದ ಮಣ್ಣನ್ನು ಉಪಯೋಗಿಸಿ. ಒಂದು ವೇಳೆ ಅಂತಹ ಮಣ್ಣು ಇಲ್ಲದಿದ್ದಲ್ಲಿ ಬೀಜವನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಯಲು ಇಟ್ಟು ಅನಂತರ ನೆಡಿ.

  ಬೀಜ ನೆಡುವಾಗ ಅದರ ಚೂಪಾದ ಬಿಂದು ಮಣ್ಣಿನ ಭಾಗಕ್ಕೆ ಮುಖವಿರುವಂತಹ ಭಂಗಿಯಲ್ಲಿ ನೆಡಿ. ಬೀಜವನ್ನು ಕುಂಡದ ತಳದಿಂದ ಒಂದಿಂಚಿನಷ್ಟು ಮೇಲೆ ಇರುವಂತೆ ನೆಡಿ. ಕುಂಡಕ್ಕೆ ಡ್ರೈನ್ ರಂಧ್ರಗಳಿರುವುದನ್ನು ಖಚಿತಪಡಿಸಿಕೊಳ್ಳಿ. ಅನಂತರ ಕುಂಡದಲ್ಲಿ ತೇವಾಂಶವಿರುವ ಮಣ್ಣಿನಿಂದ ಬೀಜವನ್ನು ಮುಚ್ಚುವಂತೆ ಮಾಡಿ. ನಂತರ ನಿಯಮಿತವಾಗಿ ನೀರುಣಿಸಿ.

  ಸಾವಯವ ಗೊಬ್ಬರ ಹಾಕಿ

  ಇನ್ನು ಗೊಬ್ಬರದ ವಿಚಾರಕ್ಕೆ ಬಂದರೆ ಹಲವಾರು ಬಗೆಯ ಗೊಬ್ಬರಗಳು ಲಭ್ಯವಿದೆ. ಸಾವಯವ ಗೊಬ್ಬರವಾದಂತಹ ಬಯೋಜೋಮ್ ಅನ್ನು ಬೇಕಾದರೆ ನೀವು ಬಳಸಬಹುದು. ಇದನ್ನು ತಿಂಗಳಿಗೊಮ್ಮೆ ಬಳಸಿ. ಸಾವಯವ ಗೊಬ್ಬರಗಳಲ್ಲಿ ಇನ್ನು ಹಲವು ಬಗೆಗಳಿದ್ದು ಎಲ್ಲ ಪೋಷಕಾಂಶಗಳಿಂದ ಕೂಡಿರುವ ಗೊಬ್ಬರವನ್ನು ಬಳಸುವುದು ಸೂಕ್ತ. ಚಿಕ್ಕ ಗಿಡಗಳಾಗಿದ್ದರೆ ಎರಡು ವಾರಗಳಿಗೊಮ್ಮೆ ಗೊಬ್ಬರ ಬಳಸಿ ಹಾಗೂ ವಯಸ್ಕ ಗಿಡವಾಗಿದ್ದರೆ ತಿಂಗಳಿಗೊಮ್ಮೆ ಗೊಬ್ಬರ ಬಳಸಿ. ಬೀಜ ನೆಟ್ಟ ಒಂದೆರಡು ವಾರದಲ್ಲೇ ಅದು ಚಿಗುರಲಾರಂಭಿಸುತ್ತದೆ ಎಂಬುದು ನೆನಪಿರಲಿ.

  ಇದನ್ನೂ ಓದಿ: Health Tips: ನಿತ್ಯ ಈ ಡಯೆಟ್ ಫಾಲೋ ಮಾಡಿದ್ರೆ ನಿಯಂತ್ರಣಕ್ಕೆ ಬರುತ್ತೆ ಮಧುಮೇಹ

  ಸರಿಯಾದ ರೀತಿ ಪೋಷಣೆ ಅತ್ಯಗತ್ಯ

  ಒಂದೊಮ್ಮೆ ಬಿಜ ಒಡೆದು ಸಸಿ ಹೊರಬಂತೆಂದರೆ ಅದಕ್ಕೆ ಸಕಾಲಕ್ಕೆ ಪೋಷಕ ತತ್ವಗಳನ್ನು ಒದಗಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಪೋಷಕ ತತ್ವವಿರುವ ಗೊಬ್ಬರಗಳನ್ನು ಹಾಕಲು ಮರೆಯಬೇಡಿ. ಗಿಡದ ಸುತ್ತಲೂ ಗೊಬ್ಬರವನ್ನು ಹರಡಿ. ಮಾವಿನ ಗಿಡ ಬೇರುಗಳು ಆಳವಾಗಿರುವುದರಿಂದ ಮಣ್ಣಿನಿಂದ ಪೋಷಕ ತತ್ವಗಳನ್ನು ಹೀರಿಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಗೊಬ್ಬರ ಹಾಕಿದ ತರುವಾಯ ನೀರನ್ನು ಹಾಕಲು ಮರೆಯಬೇಡಿ. ಇದರಿಂದ ಗೊಬ್ಬರ ಮಣ್ಣಿನಲ್ಲಿ ನಯವಾಗಿ ಹೊಕ್ಕಿ ಬೇರುಗಳು ಅದನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ.

  ಇನ್ನೊಂದು ವಿಷಯವೆಂದರೆ ಗಿಡಗಳಿಗೆ ಫಂಗಸ್ ಆಕ್ರಮಣ ಆಗುವುದು ಸಹಜ. ಹಾಗಾಗಿ ಫಂಗಸ್ ಆಗದಂತೆ ಕ್ರಮವಹಿಸುವುದು ಮುಖ್ಯ. ಆದಾಗ್ಯೂ ಫಂಗಸ್ ಹಿಡಿದಲ್ಲಿ ಗಿಡದ ಎಲೆಗಳಲ್ಲಿ ಕಲೆಗಳು ಕಾಣಸಿಗುತ್ತವೆ. ಇತರ ಲಕ್ಷಣವೆಂದರೆ ಬಿಳಿಯಾದ ಪೌಡರ್ ಕಂಡುಬರುವುದು, ಬೇರೆ ಬಣ್ಣಕ್ಕೆ ತಿರುಗುವುದು ಇತ್ಯಾದಿ. ಈಗಾಗಲೇ ಮಾರುಕಟ್ಟೆಯಲ್ಲಿ ಆಂಟಿಫಂಗಲ್ ಕಂಪೌಂಡುಗಳು ಲಭ್ಯವಿದ್ದು ಅವುಗಳನ್ನು ಸೂಚನೆಗಳ ಪ್ರಕಾರ ಕ್ರಮಬದ್ಧವಾಗಿ ಬಳಸುವುದರಿಂದ ಫಂಗಸ್ ಆಗದಂತೆ ನೋಡಿಕೊಳ್ಳಬಹುದು. NSA, SA ಹಾಗೂ BCA ಗಳೆಂಬ ವಿಧಗಳ ಕಂಪೌಂಡುಗಳು ಲಭ್ಯವಿದ್ದು ಇವುಗಳ ಸಂಯೋಜನೆಯನ್ನು ಬಳಸುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು.

  ಇದನ್ನೂ ಓದಿ: ರೋಡ್​ ಟ್ರಿಪ್ ಪ್ಲ್ಯಾನ್​ ಮಾಡ್ತಿದ್ರೆ, ಇಲ್ಲಿದೆ ನೋಡಿ ಸೂಪರ್ ಪ್ಲೇಸ್​ಗಳು

  ಇತರೆ ಸಾಮಾನ್ಯ ಕ್ರಮಗಳು

  ಮೊದಲಿಗೆ ಈ ಮಾವಿನ ಬೀಜ ನೆಟ್ಟಿದ ಅಥವಾ ಸಸಿ ಇರುವ ಕುಂಡವನ್ನು ಮನೆಯ ಒಂದು ಪ್ರದೇಶದಲ್ಲಿ ಅಂದರೆ ಸೂರ್ಯನ ಬೆಳಕು ಬೀಳುವಲ್ಲಿ ಇಡಬೇಕು. ಗಮನಿಸಿ, ಈ ಪ್ರದೇಶದಲ್ಲಿ ಕನಿಷ್ಠ ಆರು ಗಂಟೆಗಳ ಕಾಲ ಸೂರ್ಯನ ಬೆಳಕು ಬೀಳುವಂತಿರಬೇಕು. ಆದಾಗ್ಯೂ ನೇರವಾಗಿ ಸೂರ್ಯನ ಕಿರಣಗಳು ಈ ಗಿಡಕ್ಕೆ ಬೀಳದಂತಿರಬೇಕು.

  ಬೇಸಿಗೆಯ ಸಮಯದಲ್ಲಿ ಗಿಡಕ್ಕೆ ಚೆನ್ನಾಗಿ ನೀರುಣಿಸಿ, ಆದರೆ ಮಣ್ಣಲ್ಲಿ ತೇವಾಂಶವಾಗಿರಬೇಕೆ ಹೊರತು ಅತಿಯಾಗಿ ಒದ್ದೆಯಾಗಿರಬಾರದು ಎಂಬುದನ್ನು ಗಮನದಲ್ಲಿಡಿ. ಇನ್ನು ಚಳಿಗಾಲದಲ್ಲಿ ಮಧ್ಯಮ ಪ್ರಮಾಣದಲ್ಲಿ ಆಗಾಗ ನೀರುಣಿಸಿ.
  Published by:Pavana HS
  First published: