ಜೀವನದಲ್ಲಿ (Life) ಯಶಸ್ಸು (Success) ಸಿಗಬೇಕು ಅಂದ್ರೆ ಸಾಕಷ್ಟು ಶ್ರಮ ಪಡಬೇಕು. ನಮ್ಮ ಗುರಿ ಯಾವುದು ಎಂಬುದು ನಮ್ಮ ಶ್ರಮ ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತದೆ. ಈ ಪರೀಕ್ಷೆಯಲ್ಲಿ (Exam) ಪಾಸ್ ಆಗಿ ಉತ್ತಮ ಬದುಕು ಹೊಂದುವುದೇ ಜೀವನದ ಮಹತ್ಸಾಧನೆ. ನೀವು ಹಿಡಿದ ಕಾರ್ಯ ಪೂರ್ಣಗೊಳಿಸಲು ಸಾಕಷ್ಟು ಕಷ್ಟ ಪಟ್ಟಿರಬಹುದು. ನಿಮ್ಮ ಯಶಸ್ಸಿಗೆ ನಿಮ್ಮ ಮಾನಸಿಕ ಆರೋಗ್ಯವೂ (Mental Health) ಮುಖ್ಯವಾಗಿದೆ. ನಾವು ಏನೇ ಮಾಡಿದರೂ ಅದು ಹೊಟ್ಟೆಗೆ ಬಟ್ಟೆಗೆ ಅನ್ನೋ ಮಾತಿದೆ. ಆದರೆ ಇದು ಇತ್ತೀಚಿನ ದಿನಗಳಲ್ಲಿ ದುಡ್ಡಿಗಾಗಿ ಮತ್ತು ಯಶಸ್ಸಿಗಾಗಿ ಎಂದು ಬದಲಾದಂತಿದೆ.
ಜನರು ಐಷಾರಾಮಿ ಜೀವನ ಹೊಂದಲು ಬೇಕಾದ ಎಲ್ಲಾ ಪ್ರಯತ್ನ ಮಾಡ್ತಾರೆ. ಅದರಲ್ಲಿ ಕೆಲವರು ಯಶಸ್ಸು ಸಾಧಿಸುತ್ತಾರೆ. ಇನ್ನು ಕೆಲವರು ಇಲ್ಲ.
ಕೇವಲ ಶ್ರೀಮಂತರಾದರೆ ಸಾಕಾಗಲ್ಲ. ನೀವು ಯಾವುದೇ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಮಾತ್ರ ನೀವು ನಿಮ್ಮ ಇಚ್ಛೆ ಮತ್ತು ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ ಆಗುತ್ತದೆ. ಆದರೆ ಯಶಸ್ವಿಯಾಗುವುದು ಹೇಗೆ? ಯಶಸ್ವಿಯಾಗಲು ನೀವು ಸರಿಯಾದ ದಿಕ್ಕಿನಲ್ಲಿ ಶ್ರಮಿಸುವುದು ಅವಶ್ಯಕ. ಯಾಕಂದ್ರೆ ನಿಮ್ಮ ಗಮ್ಯಸ್ಥಾನ ಏನೆಂದು ಮಾರ್ಗವೇ ನಿರ್ಧರಿಸುತ್ತದೆ.
ಹೀಗಾಗಿ ನರವಿಜ್ಞಾನವು ಮೂರು ಮಾನಸಿಕ ಆರೋಗ್ಯ ಸಲಹೆ ನೀಡುತ್ತದೆ. ಇದು ನಿಮ್ಮ ಕೆಲಸವನ್ನು ಸುಲಭವಾಗಿಸುತ್ತದೆ. ಜೊತೆಗೆ ನೀವು ಬಯಸಿದ ಪ್ರಗತಿ ಮತ್ತು ಯಶಸ್ಸಿಗೆ ಹಾದಿ ಮಾಡಿ ಕೊಡುತ್ತದೆ.
ನರವಿಜ್ಞಾನ ಎಂದರೇನು?
ತುಂಬಾ ಜನರು ಯಶಸ್ವಿ ಬದುಕಿಗಾಗಿ ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ಆದರೆ ಯಶಸ್ವಿಯಾಗುವುದಿಲ್ಲ. ನೀವು ಯಶಸ್ವಿಯಾಗಲು ಸರಿಯಾದ ದಿಕ್ಕಿನಲ್ಲಿ ಶ್ರಮಿಸುವುದು ಮುಖ್ಯ. ನರಗಳಿಗೆ ಸಂಬಂಧಪಟ್ಟ ವಿಷಯ ತಿಳಿಸುವ ವಿಜ್ಞಾನವನ್ನು ನರವಿಜ್ಞಾನ ಎಂದೂ ಕರೆಯುತ್ತಾರೆ.
ನಿಮ್ಮ ಮೆದುಳು ಮತ್ತು ನರಮಂಡಲವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸರಿಯಾದ ರೀತಿಯಲ್ಲಿ ವಿವರಿಸುವ ವಿಜ್ಞಾನವೇ ನರ ವಿಜ್ಞಾನ ಆಗಿದೆ. ಈ ವಿಜ್ಞಾನವು ಅದನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಮಾನಸಿಕ ತರಬೇತುದಾರ ಫ್ರಾನ್ಸೆಸ್ಕಾ ಅವರು ನಿಮ್ಮ ಜೀವನದಲ್ಲಿ ಯಶಸ್ಸು ಮಂತ್ರ ಜಪಿಸಿ ನೀವು ಸಕ್ಸೀಡ್ ಆಗಲು ಬೇಕಾದ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಯಶಸ್ಸು ಸಾಧಿಸಲು ಅನೇಕ ಕೆಲಸಗಳ ಬದಲು ಒಂದೇ ಕೆಲಸದತ್ತ ಗಮನ ಕೇಂದ್ರೀಕರಿಸಿ.
ಇಂದಿನ ದಿನಗಳಲ್ಲಿ ದುಡ್ಡಿಗಾಗಿ ಜನರು ಒಂದಲ್ಲ, ಮಲ್ಟಿ ಕೆಲಸಗಳನ್ನು ಮಾಡಲು ಇಷ್ಟ ಪಡುತ್ತಾರೆ. ಆದರೆ ಈ ಮಲ್ಟಿ ಕೆಲಸಗಳು ನಿರೀಕ್ಷಿತ ಮಟ್ಟದ ಯಶಸ್ಸು ತಂದು ಕೊಡಲ್ಲ. ಅಲ್ಲದೇ ಈ ಬಹು ಕಾರ್ಯ ಕಾಯಕವು ನಿಮ್ಮ ಎಲ್ಲಾ ರೀತಿಯ ಕೆಲಸವನ್ನು ನಿಧಾನವಾಗಿ ಪೂರ್ಣಗೊಳಿಸಲು ಕಾರಣ ಆಗುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಹಾಗಾಗಿ ನೀವು ಬಹುಕಾರ್ಯ ಕಾಯಕ ಮಾಡುವ ಬದಲು ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿ.
ನೀವು ಮಾಡಬೇಕಾದ ಕೆಲಸದ ಅವಧಿಯನ್ನು ಪಟ್ಟಿ ಮಾಡಿ ಇರಿಸಿ
ಎರಡನೇ ಸಲಹೆ ಅಂದ್ರೆ ಯಶಸ್ಸಿಗೆ ಬೇಕಾದದ್ದು ನೀವು ಉತ್ಸಾಹದಿಂದ ಮತ್ತು ಅವಧಿಗೆ ಮೊದಲೇ ಕೆಲಸ ಮುಗಿಸುವುದು. ನೀವು ಹಿಡಿದ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುವುದು ಮುಖ್ಯ.
ಈ ಫಲಿತಾಂಶಕ್ಕಾಗಿ ನೀವು ಕೆಲಸದ ಅವಧಿಯನ್ನು ನಮೂದಿಸಿ. ನೀವು ಇಡೀ ದಿನ ಮಾಡಬೇಕಾದ ಕೆಲಸದ ಪಟ್ಟಿಯನ್ನು ಇರಿಸಿ. ಯಾವ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸಬೇಕು ಅಥವಾ ಯಾವ ಫಲಿತಾಂಶ ಬೇಕು ಎಂಬುದನ್ನು ನಮೂದಿಸಿ. ಇದು ನಿಮಗೆ ಸಹಕಾರಿ.
ಇದನ್ನೂ ಓದಿ: ಈ ಸ್ಪೆಷಲ್ ಟೀ ಕುಡಿದ್ರೆ ಒಂದು ತಿಂಗಳಿನಲ್ಲಿಯೇ ಸಣ್ಣ ಆಗ್ತೀರಾ; ನೆನಪಿನ ಶಕ್ತಿಯೂ ಹೆಚ್ಚಾಗುತ್ತೆ
ವೇಳಾಪಟ್ಟಿ ಉತ್ತಮವಾಗಿರಲಿ
ನಿಮ್ಮ ಒಂದು ಸಂಪೂರ್ಣ ದಿನದ ವೇಳಾಪಟ್ಟಿಯನ್ನು ವಾಸ್ತವಿಕವಾಗಿ ಇರಿಸಿ. ಹೊಸ ಹೊಸ ವಿಷಯ ತಿಳಿಯುತ್ತಾ ಪ್ರೇರಿತರಾಗಿರಿ. ಸುಲಭ ಕೆಲಸಗಳನ್ನು ಪಟ್ಟಿಯಲ್ಲಿ ನಮೂದಿಸಬೇಡಿ. ಹೀಗೆ ಇದೆಲ್ಲವೂ ನಿಮ್ಮ ಯಶಸ್ಸಿಗೆ ಸಹಕಾರಿ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ