• Home
  • »
  • News
  • »
  • lifestyle
  • »
  • Winter Tanning: ಚಳಿಗಾಲದಲ್ಲಿ ಕಾಡುವ ಟ್ಯಾನಿಂಗ್ ಸಮಸ್ಯೆಗೆ ಇಲ್ಲಿದೆ ನೋಡಿ ಸೂಪರ್ ಹ್ಯಾಕ್ಸ್

Winter Tanning: ಚಳಿಗಾಲದಲ್ಲಿ ಕಾಡುವ ಟ್ಯಾನಿಂಗ್ ಸಮಸ್ಯೆಗೆ ಇಲ್ಲಿದೆ ನೋಡಿ ಸೂಪರ್ ಹ್ಯಾಕ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Get Rid of Winter Tanning: ಈ ಮನೆಮದ್ದುಗಳು ನಿಮ್ಮ ಹಣವನ್ನು ಮತ್ತು ನಿಮ್ಮ ಆರೋಗ್ಯವನ್ನು ಸಹ ಉಳಿಸುತ್ತವೆ. ಅಲ್ಲದೇ,  ಚರ್ಮಕ್ಕೆ ಯಾವುದೇ ರೀತಿಯ ತೊಂದರೆಯನ್ನು ಉಂಟುಮಾಡುವುದಿಲ್ಲ.

  • Share this:

ಚಳಿಗಾಲದಲ್ಲಿ (Winter) ಸಹ   ಹಲವರು ಟ್ಯಾನಿಂಗ್ ಸಮಸ್ಯೆ (Tanning Problem)  ಹೊಂದಿದ್ದಾರೆ. ಇದಲ್ಲದೆ, ಈಗ ಅನೇಕರು ಬೀಚ್‌ನಂತಹ (Beach) ಸ್ಥಳಗಳಲ್ಲಿ ಟ್ರಿಪ್​ ಹೋಗುತ್ತಾರೆ. ಅಂತಹ ಕಡೆಯಿಂದ ಬಂದರೂ ಟ್ಯಾನಿಂಗ್ ಸಮಸ್ಯೆ  ಎಲ್ಲರನ್ನೂ ಕಾಡುತ್ತಿದೆ. ಈ ಟ್ಯಾನಿಂಗ್ ನಮಗೆ ತೊಂದರೆ ಉಂಟುಮಾಡುತ್ತದೆ. ಆದರೆ ಪ್ರತಿ ಬಾರಿ ಬ್ಯೂಟಿ ಪಾರ್ಲರ್‌ಗೆ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ನಿಮಗೆ ಮನೆಯಲ್ಲಿರುವ ಮನೆಮದ್ದುಗಳು ಉಪಯೋಗಕ್ಕೆ ಬರುತ್ತವೆ. ಈ ಮನೆಮದ್ದುಗಳು (Home Remedies)  ನಿಮ್ಮ ಹಣವನ್ನು ಮತ್ತು ನಿಮ್ಮ ಆರೋಗ್ಯವನ್ನು ಸಹ ಉಳಿಸುತ್ತವೆ. ಅಲ್ಲದೇ,  ಚರ್ಮಕ್ಕೆ ಯಾವುದೇ ರೀತಿಯ ತೊಂದರೆಯನ್ನು ಉಂಟುಮಾಡುವುದಿಲ್ಲ. ಆ ಮನೆಮದ್ದುಗಳು ಯಾವುವು ಇಲ್ಲಿದೆ.


ಚರ್ಮದ ಮೇಲೆ ಕಪ್ಪು ಕಲೆಗಳು ಅಥವಾ ಈ ಟ್ಯಾನಿಂಗ್ ಉಂಟಾದರೆ ಅದು ನಿಮ್ಮ ಸೌಂದರ್ಯಕ್ಕೆ  ಅಡ್ಡಿಯಾಗುತ್ತದೆ. ಆಗಾಗ ನಾವು ವಾಕಿಂಗ್‌ಗೆ ಹೋಗುವಾಗ, ನಮ್ಮ ತ್ವಚೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕಾಗಿ ಸನ್ ಸ್ಕ್ರೀನ್ ಬಳಸುವುದು, ಮಾಯಿಶ್ಚರೈಸರ್ ಬಳಸುವುದು ಅಗತ್ಯ. ಇಲ್ಲದಿದ್ದರೆ ಟ್ಯಾನಿಂಗ್ ಆಗುವ ಸಾಧ್ಯತೆ ಇದೆ. ಇಂದು ನಾವು ನಿಮಗೆ ಪಾದದ ಟ್ಯಾನಿಂಗ್ ಅನ್ನು ತೆಗೆದುಹಾಕಲು ಸುಲಭವಾದ ಮನೆಮದ್ದುಗಳನ್ನು ಹೇಳಲಿದ್ದೇವೆ.


ಟ್ಯಾನಿಂಗ್ ಪರಿಹಾರಗಳು


ಈ ಯಾವುದೇ ಪರಿಹಾರಗಳನ್ನು ಹಚ್ಚುವ ಮೊದಲು ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯಿರಿ. ಇದು ಪಾದಗಳ ಮೇಲೆ ಯಾವುದೇ ಉತ್ಪನ್ನವನ್ನು ಹಚ್ಚಲು ಸುಲಭವಾಗುತ್ತದೆ ಮತ್ತು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಪಾದಗಳ ಕಪ್ಪು ಕಲೆ ಹೋಗುವವರೆಗೆ ಈ ಪರಿಹಾರವನ್ನು ಮಾಡಿ.


ಇದನ್ನೂ ಓದಿ: ಜ್ಯೇಷ್ಠಮಧುವಿಲ್ಲದೇ ಚಳಿಗಾಲವಿಲ್ಲ, ಸುಳ್ಳಲ್ಲ ಹಿರಿಯರ ಈ ಮಾತು: ಪ್ರಯೋಜನಗಳು ಒಂದೆರೆಡಲ್ಲ


ಕೆಲ ಟ್ಯಾನ್​ ಪ್ಯಾಕ್​ಗಳು ಇಲ್ಲಿದ್ದು ಟ್ರೈ ಮಾಡಿ 


ಮೊದಲ ಪ್ಯಾಕ್​ ಮಾಡಲು ನಿಮಗೆ ಹಾಲು ಮತ್ತು ಕೆನೆ ಬೇಕಾಗುತ್ತದೆ. ಒಂದು ಬಟ್ಟಲಿನಲ್ಲಿ ಐದು ಚಮಚ ಹಾಲು ಮತ್ತು ಒಂದು ದೊಡ್ಡ ಚಮಚ ಕೆನೆ ಅಥವಾ ಚೀಸ್ ತೆಗೆದುಕೊಳ್ಳಿ.  ಅದನ್ನು ಮಿಶ್ರಣವನ್ನು ಮಾಡಿ ಮತ್ತು ಅದನ್ನು ನಿಮ್ಮ ಪಾದಗಳಿಗೆ ಹಚ್ಚಿ.  ನಂತರ ಮೃದುವಾಗಿ ಮಸಾಜ್ ಮಾಡಿ ಮತ್ತು 2-3 ಗಂಟೆಗಳ ಕಾಲ ಪಾದಗಳ ಮೇಲೆ ಬಿಡಿ. ನಂತರ ನಿಮ್ಮ ಪಾದಗಳನ್ನು ತೊಳೆಯಿರಿ.




ಎರಡನೇ ಪ್ಯಾಕ್​ ಮಾಡಲು ನಿಮಗೆ ಅರಿಶಿನ ಮತ್ತು ಕಡಲೆ ಹಿಟ್ಟು ಬೇಕು. ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು ಮತ್ತು ಅರ್ಧ ಚಮಚ ಅರಿಶಿನವನ್ನು ತೆಗೆದುಕೊಳ್ಳಿ. ಈ ಮಿಶ್ರಣವನ್ನು ತಯಾರಿಸಿ ಮತ್ತು ಅದನ್ನು ನಿಮ್ಮ ಪಾದಗಳಿಗೆ ಹಚ್ಚಿ ಮತ್ತು ಕನಿಷ್ಠ 2-3 ಗಂಟೆಗಳ ಕಾಲ ಇರಿಸಿ. ಇದರ ನಂತರ, ನಿಮ್ಮ ಪಾದಗಳನ್ನು ತೊಳೆದು ಸ್ವಚ್ಛಗೊಳಿಸಿ.


ಈ ಪ್ಯಾಕ್​ ಮಾಡಲು ನಿಮಗೆ ಓಟ್ಸ್ ಮತ್ತು ಮೊಸರು ಬೇಕಾಗುತ್ತದೆ. ಓಟ್ಸ್ ಮತ್ತು ಮೊಸರಿನ ಮಿಶ್ರಣವನ್ನು ಮಾಡಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಮತ್ತು ಪಾದಗಳನ್ನು ನಿಧಾನವಾಗಿ ಮಸಾಜ್ ಮಾಡಿ. ಈ ಮಿಶ್ರಣವನ್ನು ಪಾದಗಳ ಮೇಲೆ 2-3 ಗಂಟೆಗಳ ಕಾಲ ಹಚ್ಚಿದ ನಂತರ, ಪಾದಗಳನ್ನು ತೊಳೆಯಿರಿ.


ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಪಿರಿಯಡ್ಸ್​ ಆಗ್ತಿಲ್ಲ ಅಂತ ಚಿಂತೆ ಬಿಡಿ, ಇಲ್ಲಿದೆ ಸರಳ ಪರಿಹಾರ


ಕಾಲುಗಳ ಮೇಲೆ ಉಂಟಾಗಿರುವ ಟ್ಯಾನಿಂಗ್ ತೆಗೆದುಹಾಕಲು ನೀವು ಮೊಸರು ಮತ್ತು ಟೊಮೆಟೊವನ್ನು ಸಹ ಬಳಸಬಹುದು. ಒಂದು ಕಪ್ ಟೊಮೆಟೊ ರಸವನ್ನು ತೆಗೆದುಕೊಂಡು ಅದನ್ನು ಒಂದು ಚಮಚ ಮೊಸರಿನೊಂದಿಗೆ ಬೆರೆಸಿ ಮತ್ತು ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ. 2-3 ಗಂಟೆಗಳ ನಂತರ ನಿಮ್ಮ ಪಾದಗಳನ್ನು ತೊಳೆಯಿರಿ.

Published by:Sandhya M
First published: