• Home
  • »
  • News
  • »
  • lifestyle
  • »
  • Winter Earache: ಚಳಿಗಾಲದಲ್ಲಿ ಕಾಡುವ ಕಿವಿ ನೋವಿಗೆ ಕಾರಣ ಇದಂತೆ, ಇಲ್ಲಿದೆ ನೋಡಿ ಪರಿಹಾರ

Winter Earache: ಚಳಿಗಾಲದಲ್ಲಿ ಕಾಡುವ ಕಿವಿ ನೋವಿಗೆ ಕಾರಣ ಇದಂತೆ, ಇಲ್ಲಿದೆ ನೋಡಿ ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Get Rid of Winter Earache: ಶೀತವು ನಿಮ್ಮ ಕಿವಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಕಿವಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

  • Share this:

ಚಳಿಗಾಲದಲ್ಲಿ (Winter) ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಈ ಸಮಯದಲ್ಲಿ ಕಿವಿ ನೋವು (Earache) ಬರುವುದು ಸಹಜವೇ ಆಗಿದೆ. ನೋವು ಸಾಮಾನ್ಯವಾಗಿ ಕಿವಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿರುತ್ತದೆ. ಆದರೆ ಈ ಸಮಸ್ಯೆ ಕೊನೆಯದಾಗಿ ಮೆದುಳಿಗೆ ಸಹ ಹರಡಬಹುದು. ಶೀತ ಹವಾಮಾನ ಮತ್ತು ಗಾಳಿಯಿಂದ ಕಿವಿನೋವು ಉಂಟಾಗುತ್ತದೆ ಎಂದು ನಾವೆಲ್ಲರೂ ಭಾವಿಸುತ್ತೇವೆ, ಆದರೆ ಅದಕ್ಕೆ ನಿಜವಾದ ಕಾರಣಗಳು ಬಹಳಷ್ಟಿವೆ. ಶೀತವು ನಿಮ್ಮ ಕಿವಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಕಿವಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಚಳಿಗಾಲದಲ್ಲಿ ಕಿವಿ ನೋವಿನ ಕಾರಣಗಳು ಮತ್ತು ಅದಕ್ಕೆ ಬಗ್ಗೆ ನೀವು ಏನು ಮಾಡಬಹುದು ಎಂಬುದನ್ನು ಸನಾರ್ ಇಂಟರ್‌ನ್ಯಾಶನಲ್ ಹಾಸ್ಪಿಟಲ್‌ನ ಇಎನ್‌ಟಿ ಮತ್ತು ಕಾಕ್ಲಿಯರ್ ಇಂಪ್ಲಾಂಟ್‌ನ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರ ಡಾ ಕುನಾಲ್ ನಿಗಮ್  ಸಲಹೆ ನೀಡಿದ್ದು, ಚಳಿಗಾಲದಲ್ಲಿ ಈ ಬಗ್ಗೆ ಕಾಳಜಿವಹಿಸಿ.  


ಚಳಿಗಾಲದಲ್ಲಿ ಮಾತ್ರ ಹೆಚ್ಚಿನ ಜನರು ಕಿವಿ ನೋವಿಗೆ ಏಕೆ ತುತ್ತಾಗುತ್ತಾರೆ?


ಚಳಿಗಾಲದಲ್ಲಿ ನಿಮ್ಮ ಕಿವಿಗಳು ನೋಯುತ್ತಿರುವುದಕ್ಕೆ ಹಲವಾರು ಕಾರಣಗಳಿರಬಹುದು. ನಮ್ಮ ಕಿವಿಗಳ ಆಂತರಿಕ ರಚನೆಯು ಸೂಕ್ಷ್ಮವಾದ ಅಂಗಾಂಶಗಳು, ನರ ತುದಿಗಳು ಮತ್ತು ಮೆದುಳು ಮತ್ತು ಗಂಟಲಿಗೆ ಸಂಪರ್ಕಿಸುವ ಸಿರೆಗಳಿಂದ ಮಾಡಲ್ಪಟ್ಟಿರುತ್ತದೆ. ಈ ಪ್ರದೇಶವು ಹೊರಗಿನ ಪರಿಸರಕ್ಕೆ ಭಾಗಶಃ ತೆರೆದುಕೊಳ್ಳುತ್ತದೆ, ಹೀಗಾದಾಗ ಶೀತ ಮತ್ತು ತಂಪಾದ ಗಾಳಿಯಿಂದ ಸಮಸ್ಯೆ ಉಂಟಾಗಬಹುದು. ಇದು ಒಳಗಿರುವ ಸೋಂಕುಗಳಿಗೆ ಸಣ್ಣ ಕಿರಿಕಿರಿಯನ್ನು ಉಂಟುಮಾಡುವುದರಿಂದ ನೋವು ಬರುತ್ತದೆ


ಚಳಿಗಾಲದಲ್ಲಿ ಕಿವಿ ನೋವಿಗೆ ಕಾರಣಗಳು


 ಸೋಂಕು


ನೆಗಡಿ ಇರುವ ಕೆಲವರಿಗೆ ಕಿವಿನೋವು ಕೂಡ ಕಾಣಿಸಿಕೊಳ್ಳುತ್ತದೆ. ಕಿವಿಗೆ ಸಂಪರ್ಕಿಸುವ ಯುಸ್ಟಾಚಿಯನ್ ಟ್ಯೂಬ್, ಬ್ಯಾಕ್ಟೀರಿಯಾವನ್ನು ಗಂಟಲಿನಿಂದ ಮಧ್ಯದ ಕಿವಿಗೆ ಹೋಗಲು ಅನುವು ಮಾಡಿಕೊಡುತ್ತದೆ. ಈ ಕಿವಿಯ ಸೋಂಕು ಮಧ್ಯಮ ಕಿವಿಯಲ್ಲಿ ಲಿಕ್ವಿಡ್​ ಶೇಖರಣೆಗೆ ಕಾರಣವಾಗಬಹುದು. ಹೀಗಾದರೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು.


winter ear pain here is experts recommended some home remedies
ಸಾಂದರ್ಭಿಕ ಚಿತ್ರ


ಕಟ್ಟಿದ ಮೂಗು


ಕೆಲವೊಮ್ಮೆ, ನಮ್ಮ ಗಂಟಲನ್ನು ಕಿವಿಗೆ ಸಂಪರ್ಕಿಸುವ ಯುಸ್ಟಾಚಿಯನ್ ಟ್ಯೂಬ್‌ನಲ್ಲಿ ಯಾವುದೇ ರೀತಿಯ ದಟ್ಟಣೆ ಇದ್ದರೆ, ಅಂದರೆ ಶೀತದಿಂದ ನಿಮ್ಮ ಮೂಗು ಕಟ್ಟಿದ್ದಾರೆ ಇದು ನೋವನ್ನು ಉಂಟುಮಾಡುತ್ತದೆ. ಇದರಿಂದ ಸಹ ಕಿವಿ ನೋವು ಬರುತ್ತದೆ. ಆದರೆ ಇದು ಮುಖ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.


ಕೆಮ್ಮು ಮತ್ತು ಶೀತ ಪದೇ ಪದೇ ಬರುವುದರಿಂದ


ಪ್ರತಿ ಬಾರಿ ನೀವು ಕೆಮ್ಮುವಾಗ ಅಥವಾ ಸೀನುವಾಗ, ನಿಮ್ಮ ಕಿವಿಯೊಳಗೆ ಸ್ವಲ್ಪ ಒತ್ತಡ ಹಾಕಿದಂತೆ ಅನಿಸುತ್ತದೆ. ಕೆಲವರಿಗೆ ಪದೇ ಪದೇ ಶೀತ ಹಾಗೂ ಕೆಮ್ಮು ಉಂಟಾಗುತ್ತದೆ. ಈ ಹೆಚ್ಚುವರಿ ಒತ್ತಡವು ಕಿವಿಯಲ್ಲಿ ಕಿರಿಕಿರಿ ಅಥವಾ ನೋವನ್ನು ಉಂಟುಮಾಡುತ್ತದೆ.




ಸೈನಸ್


ಸೈನಸ್ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಆಗಾಗ್ ಕಿವಿನೋವು ಉಂಟಾಗುತ್ತದೆ ಏಕೆಂದರೆ ನಿರಂತರ ಸೀನುವಿಕೆ ಮತ್ತು ಕೆಮ್ಮು ಕಿವಿಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ.


ಇದನ್ನೂ ಓದಿ: ಚಳಿಗಾಲದಲ್ಲಿ ಗರ್ಭಿಣಿಯರ ಆರೋಗ್ಯಕ್ಕೆ ಈ ಆಹಾರಗಳು ಬೇಕೇ ಬೇಕು


ತಣ್ಣನೆಯ ಗಾಳಿ


ತಣ್ಣನೆಯ ವಾತಾವರಣದಲ್ಲಿ ಹೊರಗೆ ಹೋದ ನಂತರ ನೀವು ಎಂದಾದರೂ ನಿಮ್ಮ ಕಿವಿಯಲ್ಲಿ ನೋವನ್ನು ಅನುಭವಿಸಿದ್ದರೆ, ಕಿವಿ ಕಾಲುವೆಯ ನರಗಳು ಸಹ ತಂಪಾದ ಗಾಳಿಗೆ ಒಡ್ಡಿಕೊಳ್ಳುತ್ತವೆ ಮತ್ತು ಕಿವಿಯಲ್ಲಿ ಅಥವಾ ಅದರ ಸುತ್ತಲೂ ನೋವಿಗೆ ಕಾರಣವಾಗುತ್ತದೆ.


Here are some home remedies for reducing earache
ಸಾಂದರ್ಭಿಕ ಚಿತ್ರ


ಚಳಿಗಾಲದಲ್ಲಿ ಕಿವಿ ನೋವನ್ನು ತಪ್ಪಿಸಲು ಸಲಹೆಗಳು ಇಲ್ಲಿವೆ:


ನಿಮ್ಮ ಕಿವಿಗಳ ಮೂಲಭೂತ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮೊದಲ ಮತ್ತು ಅಗ್ರಗಣ್ಯ ಹಂತವಾಗಿದೆ. ಸ್ವಚ್ಛವಿಲ್ಲದ ಕಿವಿಗಳು ಸೋಂಕುಗಳು ಮತ್ತು ಸಮಸ್ಯೆಗಳನ್ನು  ಹೆಚ್ಚು ಮಾಡುತ್ತದೆ. ಹಾಗಾದ್ರೆ ಕಿವಿ ನೋವು ಬರದಂತೆ ತಡೆಯಲು ಏನು ಮಾಡಬೇಕು ಎಂಬುದು ಇಲ್ಲಿದೆ.


ನಿಮ್ಮ ಕಿವಿಗಳನ್ನು ಮುಚ್ಚಿಕೊಳ್ಳಿ ಮತ್ತು ಶೀತ ಗಾಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ವಿಶೇಷವಾಗಿ ನೀವು ತಂಪಾದ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಎಚ್ಚರಿಕೆಯಿಂದಿರಿ.


ಸೈನಸ್ ಸಮಸ್ಯೆ, ಕೆಮ್ಮು ಮತ್ತು ಶೀತ ಇರುವವರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅವರ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದನ್ನ ಮರೆಯಬಾರದು.


ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಹೀಗೆ ಮಸಾಜ್ ಮಾಡಿ, ಆಮೇಲ್ ಮ್ಯಾಜಿಕ್ ನೋಡಿ


ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಹೇರ್‌ಪಿನ್‌ಗಳು ಅಥವಾ ಬೆಂಕಿಕಡ್ಡಿಗಳಂತಹ ಯಾವುದನ್ನೂ ಬಳಸಬೇಡಿ. ಬಹಳ ಎಚ್ಚರಿಕೆಯಿಂದ ನಿರ್ವಹಿಸುವ ಶುದ್ಧ ಹತ್ತಿ ಸ್ವೇಬ್ಗಳನ್ನು ಮಾತ್ರ ಬಳಸಿ.

Published by:Sandhya M
First published: