Skin Allergy: ಚರ್ಮದ ಅಲರ್ಜಿ ತೊಡೆದು ಹಾಕಲು ಸರಳ ಮನೆಮದ್ದು ಬಳಸುವುದು ಹೇಗೆ?

ಸ್ಕಿನ್ ಅಲರ್ಜಿ ಕೆಲವೊಮ್ಮೆ ಮುಖ ಮತ್ತು ದೇಹದ ಮೇಲೆ ಅನೇಕ ಕಲೆಗಳನ್ನುಂಟು ಮಾಡುತ್ತದೆ. ಚರ್ಮದ ಅಲರ್ಜಿಯು ಆಹಾರದ ಅಲರ್ಜಿಗಿಂತ ಭಿನ್ನ. ಇದು ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ಚರ್ಮದ ಅಲರ್ಜಿ, ದೇಹದಲ್ಲಿ ಅನೇಕ ಬಾರಿ ದದ್ದು ಅಥವಾ ತಿಳಿ ಕೆಂಪು ಕಲೆ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನೆಮದ್ದುಗಳನ್ನು (Home Remedies) ಯಾವಾಗಲೂ ಭಾರತೀಯರು (Indians) ಬಳಕೆ ಮಾಡುತ್ತಾ ಬಂದಿದ್ದಾರೆ. ಹೊಟ್ಟೆ ನೋವು (Stomach Pain), ಗಾಯವಾದರೆ, ದೇಹದ ಸಣ್ಣಪುಟ್ಟ ನೋವುಗಳು ಆದಾಗ ವೈದ್ಯರ ಬಳಿ ಹೋಗುವ ಮೊದಲು ಮನೆಮದ್ದು ಮಾಡಲು ಪ್ರಯತ್ನಿಸುತ್ತಾರೆ. ಈ ಮನೆಮದ್ದುಗಳು ಹೆಚ್ಚಿನ ಶಕ್ತಿ ಹಾಗೂ ದೇಹದ ನೋವನ್ನು ರಿಲೀಫ್ ಮಾಡುವ ಹಾಗೂ ವಾಸಿ ಮಾಡುವ ಶಕ್ತಿ ಹೊಂದಿವೆ. ಹಾಗಾಗಿ ಅವು ಸಣ್ಣ ಚರ್ಮದ ಅಲರ್ಜಿ ಸಹ ಗುಣಪಡಿಸುವ ಸಾಮರ್ಥ್ಯ ಹೊಂದಿವೆ. ಸ್ಕಿನ್ ಅಲರ್ಜಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಸಮಸ್ಯೆ ಆಗಿದೆ. ಕೆಲವೊಮ್ಮೆ ಕೆಲವು ಆಹಾರ, ಕೆಲವು ಕ್ರೀಮ್ ಅಥವಾ ಸೌಂದರ್ಯವರ್ಧಕ ಬಳಕೆ, ಚರ್ಮದ ಮೇಲೆ ದದ್ದು, ಮೊಡವೆ ಮತ್ತು ತುರಿಕೆ ಸಮಸ್ಯೆ ಉಂಟಾಗುತ್ತದೆ.

    ಕಿರಿಕಿರಿ ಉಂಟು ಮಾಡುವ ಅಲರ್ಜಿ

    ಇದು ಕೆಲವೊಮ್ಮೆ ಮುಖ ಮತ್ತು ದೇಹದ ಮೇಲೆ ಅನೇಕ ಕಲೆಗಳನ್ನುಂಟು ಮಾಡುತ್ತದೆ. ಚರ್ಮದ ಅಲರ್ಜಿಯು ಆಹಾರದ ಅಲರ್ಜಿಗಿಂತ ಭಿನ್ನ. ಇದು ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ಚರ್ಮದ ಅಲರ್ಜಿ, ದೇಹದಲ್ಲಿ ಅನೇಕ ಬಾರಿ ದದ್ದು ಅಥವಾ ತಿಳಿ ಕೆಂಪು ಕಲೆ ಉಂಟು ಮಾಡುತ್ತದೆ.

    ಕಿರಿಕಿರಿ ಉಂಟು ಮಾಡುವ ಅಥವಾ ಅಲರ್ಜಿನ್ ನಿಮ್ಮ ಚರ್ಮದ ಸಂಪರ್ಕಕ್ಕೆ ಬಂದಾಗ ಚರ್ಮದ ಅಲರ್ಜಿ ಸಾಮಾನ್ಯವಾಗಿ ಸಂಭವಿಸುತ್ತವೆ. ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಅವುಗಳನ್ನು ಎದುರಿಸಲು ಪ್ರತಿಕಾಯ ಬಿಡುಗಡೆ ಮಾಡುತ್ತದೆ. ಚರ್ಮದ ಅಲರ್ಜಿಗೆ ತ್ವರಿತ ಪರಿಹಾರ ಪಡೆಯಲು ಮನೆಮದ್ದು ಬಳಸಿ.

    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

    ಟಿ ಟ್ರೀ ಎಣ್ಣೆ

    ಮೊಡವೆ ತೊಡೆದು ಹಾಕಲು ಟೀ ಟ್ರೀ ಆಯಿಲ್ ಉತ್ತಮ ಮಾರ್ಗ. ಟೀ ಟ್ರೀ ಆಯಿಲ್ ತ್ವಚೆಯ ಅಲರ್ಜಿ ಕಡಿಮೆ ಮಾಡುತ್ತದೆ. ಇದು ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ಗುಣಲಕ್ಷಣ ಹೊಂದಿದೆ. ಇದು ಅನೇಕ ರೀತಿಯ ಚರ್ಮದ ಅಲರ್ಜಿ ನಿವಾರಿಸುತ್ತದೆ. ಚರ್ಮದ ಕೆಂಪು ಮತ್ತು ತುರಿಕೆ ತೊಡೆದು ಹಾಕುತ್ತದೆ.

    ಆಪಲ್ ಸೈಡರ್ ವಿನೆಗರ್

    ಆಪಲ್ ಸೈಡರ್ ವಿನೆಗರ್ ಇದರಲ್ಲಿ ಅಸಿಟಿಕ್ ಆಮ್ಲವಿದ್ದು ಚರ್ಮದಲ್ಲಿ ತುರಿಕೆ ಮತ್ತು ಅಲರ್ಜಿಯ ಪರಿಣಾಮ ಕಡಿಮೆ ಮಾಡುತ್ತದೆ.

    ಬಳಸುವುದು ಹೇಗೆ

    ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ. ಈಗ ಹತ್ತಿಯ ಸಹಾಯದಿಂದ ಈ ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ಈಗ ಅದನ್ನು ಒಣಗಲು ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ. ಚರ್ಮದ ಅಲರ್ಜಿ ನಿವಾರಿಸಲು ದಿನಕ್ಕೆ ಕನಿಷ್ಠ ಎರಡು ಬಾರಿ ಇದನ್ನು ಮಾಡಿ.

    ತೆಂಗಿನ ಎಣ್ಣೆ

    ತೆಂಗಿನ ಎಣ್ಣೆ ಚರ್ಮದ ಆರೈಕೆಗೆ ಅತ್ಯುತ್ತಮ. ಇದು ಅಲರ್ಜಿಯನ್ನು ತೆಗೆದು ಹಾಕಲು ಚರ್ಮವನ್ನು ರಕ್ಷಿಸುವ ಆರ್ಧ್ರಕ ಗುಣ ಹೊಂದಿದೆ. ಅಲರ್ಜಿಯಿಂದ ಉಂಟಾಗುವ ತುರಿಕೆ ತೆಂಗಿನೆಣ್ಣೆ ಕಡಿಮೆ ಮಾಡುತ್ತದೆ.

    ಬಳಸುವುದು ಹೇಗೆ

    ಒಂದು ಬಟ್ಟಲಿನಲ್ಲಿ ಸ್ವಲ್ಪ ತೆಂಗಿನ ಎಣ್ಣೆ ತೆಗೆದುಕೊಂಡು 5 ಸೆಕೆಂಡುಗಳ ಕಾಲ ಸ್ವಲ್ಪ ಬಿಸಿ ಮಾಡಿ. ಅಲರ್ಜಿಯಿರುವ ಜಾಗದಲ್ಲಿ ಬಿಸಿ ಎಣ್ಣೆಯನ್ನು ಅನ್ವಯಿಸಿ. ಅಲರ್ಜಿ ಪ್ರದೇಶದಲ್ಲಿ ಬಿಡಿ, ಮಸಾಜ್ ಮಾಡಬೇಡಿ. ಒಂದು ಗಂಟೆ ಹಾಗೆ ಬಿಡಿ. 3-4 ಗಂಟೆಗಳ ನಂತರ ನೀವು ತೆಂಗಿನ ಎಣ್ಣೆಯನ್ನು ಮತ್ತೆ ಬಳಸಬಹುದು. ಚರ್ಮದ ಅಲರ್ಜಿ ದೂರವಾಗುತ್ತದೆ.

    ಅಲೋವೆರಾ ಜೆಲ್

    ಅಲೋವೆರಾ ಔಷಧೀಯ ಗುಣ ಹೊಂದಿದೆ. ಅಲೋವೆರಾವನ್ನು ಚರ್ಮದ ಅಲರ್ಜಿ ತೊಡೆದು ಹಾಕಲು ಇದು ಅತ್ಯುತ್ತಮ ಮಾರ್ಗ. ಅಲರ್ಜಿಯಿಂದ ಚರ್ಮದ ತುರಿಕೆ ಮತ್ತು ಶುಷ್ಕತೆ ತೆಗೆದು ಹಾಕಲು ಅಲೋವೆರಾ ಔಷಧೀಯ ಗುಣಗಳು ಉರಿ ಮತ್ತು ತುರಿಕೆಯಿಂದ ತ್ವರಿತ ಪರಿಹಾರ ನೀಡುತ್ತದೆ.

    ಬಳಸುವುದು ಹೇಗೆ

    ತುರಿಕೆ ಹೋಗಲಾಡಿಸಲು ತಾಜಾ ಅಲೋವೆರಾ ತೆಗೆದುಕೊಂಡು ಚರ್ಮಕ್ಕೆ ಅನ್ವಯಿಸಿ. ಅಲೋವೆರಾ ಜೆಲ್ ಹಚ್ಚಿ 30 ರಿಂದ 40 ನಿಮಿಷ ಬಿಡಿ, ತುರಿಕೆ ಮತ್ತು ಉರಿ ಸಮಸ್ಯೆಯು ಕೆಲವೇ ದಿನಗಳಲ್ಲಿ ನಿವಾರಣೆಯಾಗುತ್ತದೆ.

    ಅಡಿಗೆ ಸೋಡಾ

    ಚರ್ಮದ ಅಲರ್ಜಿ ತೊಡೆದು ಹಾಕಲು ನೀವು ಅಡಿಗೆ ಸೋಡಾ ಬಳಸಬಹುದು. ಅಡಿಗೆ ಸೋಡಾವು ಅಡುಗೆ ಮನೆಯಲ್ಲಿ ಕಂಡು ಬರುತ್ತದೆ. ಇದು ಅನೇಕ ಚರ್ಮದ ಸಮಸ್ಯೆ ತೆಗೆದು ಹಾಕುತ್ತದೆ.

    ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

    ಬಳಸುವುದು ಹೇಗೆ-

    ತ್ವಚೆಯ ಮೇಲೆ ಅಡಿಗೆ ಸೋಡಾ ಬಳಸಲು, ಟೀ ಚಮಚ ಅಡಿಗೆ ಸೋಡಾ ತೆಗೆದುಕೊಂಡು ಸ್ವಲ್ಪ ನೀರು ಮಿಶ್ರಣ ಮಾಡಿ. ಈಗ ಅದನ್ನು ನಯವಾದ ಪೇಸ್ಟ್ ಮಾಡಿ ಮತ್ತು ಅಲರ್ಜಿ ಇರುವ ಜಾಗಕ್ಕೆ ಹಚ್ಚಿ. 10 ನಿಮಿಷಗಳ ನಂತರ ಅದನ್ನು ತೊಳೆಯಿರಿ.
    Published by:renukadariyannavar
    First published: