Beauty Tips: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೊಡವೆಗಳೆಲ್ಲಾ ಮಾಯ! ಇಲ್ಲಿದೆ ಸೂಪರ್ ಟಿಪ್ಸ್

ಮೊಡವೆ ಉಂಟಾಗಲು ಅನೇಕ ಕಾರಣಗಳಿವೆ. ಹಾರ್ಮೋನುಗಳ ಬದಲಾವಣೆ, ವೈದ್ಯಕೀಯ ಕಾರಣಗಳು ಮತ್ತು ಜೀವನಶೈಲಿಯ ಅಂಶಗಳು ಸಾಮಾನ್ಯವಾಗಿ ಮೊಡವೆ ಉಂಟಾಗಲು ಕಾರಣವಾಗಿರುತ್ತವೆ.

ಮೊಡವೆ ಕಲೆಗಳು

ಮೊಡವೆ ಕಲೆಗಳು

 • Share this:

  ನಿಮ್ಮದು ಯಾವುದೇ ರೀತಿಯ ಚರ್ಮವಿರಿ ಅಥವಾ ವಯಸ್ಸಿರಲಿ , ಒಮ್ಮೆಯೂ ಮೊಡವೆ ಆಗಿಲ್ಲ ಎಂಬವರು ಇರಲು ಸಾಧ್ಯವಿಲ್ಲ. ಆದರೆ ಮೊಡವೆ ಆಗುವುದನ್ನು ಯಾರೂ ಬಯಸುವುದಿಲ್ಲ. ಅದೊಂಥರ ಕರೆಯದೆ ಬರುವ ಅತಿಥಿ. ಪ್ರತಿಯೊ ಬ್ಬರೂ ಆದಷ್ಟು ಬೇಗ ತಮ್ಮ ಚರ್ಮದಲ್ಲಿನ ಮೊಡವೆ ನಿವಾರಣೆ ಆಗಲಿ ಎಂದು ಬಯಸುತ್ತಾರೆ. ಹದಿಹರೆಯದ ಹೆಣ್ಣುಮಕ್ಕಳಂತೂ ಮೊಡವೆಯನ್ನು ತಮ್ಮ ಶತ್ರುವಿನಂತೆ ಪರಿಗಣಿಸುವುದುಂಟು. ಆ ಮೊಡವೆಗಳ ಗಾತ್ರವನ್ನು ಕೆಲವೇ ಗಂಟೆಗಳಲ್ಲಿ ಕಡಿಮೆ ಮಾಡುವ ಅಥವಾ ಕೆಲವೇ ದಿನಗಳಲ್ಲಿ ನಿವಾರಿಸುವ ಕೆಲವೊಂದು ಪರಿಹಾರೋಪಾಯಗಳು ಇಲ್ಲಿವೆ.


  ಮೊಡವೆ ಉಂಟಾಗಲು ಕಾರಣಗಳು?


  ಮೊಡವೆ ಉಂಟಾಗಲು ಅನೇಕ ಕಾರಣಗಳಿವೆ. ಹಾರ್ಮೋನುಗಳ ಬದಲಾವಣೆ, ವೈದ್ಯಕೀಯ ಕಾರಣಗಳು ಮತ್ತು ಜೀವನಶೈಲಿಯ ಅಂಶಗಳು ಸಾಮಾನ್ಯವಾಗಿ ಮೊಡವೆ ಉಂಟಾಗಲು ಕಾರಣವಾಗಿರುತ್ತವೆ.


  ಕೆಲವೊಂದು ರೀತಿಯ ಔಷಧಿಗಳು ಮೊಡವೆಗೆ ಕಾರಣ ಆಗುತ್ತವೆ. ನಿಮ್ಮ ಚರ್ಮಕ್ಕೆ ಹೊಂದಿಕೆಯಾಗದ ಚರ್ಮ ಮತ್ತು ಮೇಕಪ್ ಉತ್ಪನ್ನಗಳನ್ನು ಬಳಸಿದಾಗ. ಮುಖದಲ್ಲಿ ಬೆವರನ್ನು ಪದೇ ಪದೇ ಅಥವಾ ಸರಿಯಾಗಿ ತೊಳೆದುಕೊಳ್ಳದಿರುವುದು ಮತ್ತು ದಿನದ ಅಂತ್ಯದಲ್ಲಿ ಮೇಕಪ್ ತೆಗೆಯದಿರುವುದು. ಪಿಸಿಓಡಿ ಸಮಸ್ಯೆಯಿದ್ದರೂ ಮೊಡವೆ ಉಂಟಾಗುತ್ತದೆ. ಮೈನೆರೆಯುವಿಕೆ ಅಥವಾ ಗರ್ಭಾವಸ್ಥೆಯಂತಹ , ಹಾರ್ಮೋನು ಬದಲಾವಣೆಯ ಸಂದರ್ಭಗಳು. ರಿಫೈನ್‍ಡ್ ಸಕ್ಕರೆ , ಉಪ್ಪು ಮತ್ತು ಕಾರ್ಬೋಹೈಡ್ರೇಟ್‍ ಗಳನ್ನು ಹೊಂದಿರುವ ಆಹಾರ ಕ್ರಮ ಕೂಡ ಮೊಡವೆಗಳಿಗೆ ಕಾರಣವಾಗಬಹುದು.


  ಮೊಡವೆ ಉಂಟಾದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು


  ಹೆಚ್ಚಿನವರು ಮೊಡವೆ ಆದಾಗ ಮಾಡುವ ಕೆಲಸವೆಂದರೆ, ಅದನ್ನು ಹಿಚುಕುವುದು ಮತ್ತು ಅದರಿಂದ ಕೀವನ್ನು ತೆಗೆಯುವುದು. ನಿಮಗೆ ಹಾಗೆ ಮಾಡಬೇಕು ಎನಿಸಿದಾಗ, ಅದನ್ನು ಮಾಡದಂತೆ ನಿಯಂತ್ರಿಸಿಕೊಳ್ಳಿ. ಮೊಡವೆ ಆದಾಗ ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.


  ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು, ಕೈಗಳನ್ನು ಮುಖದಿಂದ ದೂರವಿಡಿ. ಚರ್ಮದ ನಿತ್ಯದ ಆರೈಕೆಯ ಕ್ರಮಗಳನ್ನು ಮುಂದುವರೆಸಿ, ಕ್ಲೆನ್ಲಿಂಗ್ ಮತ್ತು ಮಾಯಿಶ್ಚರೈಸಿಂಗ್ ಸರಿಯಾಗಿ ಮಾಡಿ ಮತ್ತು ಚರ್ಮವನ್ನು ಸೂರ್ಯನಿಂದ ರಕ್ಷಿಸಿ.


  ಆದಷ್ಟು ಬೇಗ ಮನೆ ಮದ್ದು, ಉತ್ಪನ್ನಗಳು ಅಥವಾ ವೈದ್ಯರ ಸಹಾಯದಿಂದ ಅದನ್ನು ಗುಣ ಪಡಿಸಿಕೊಳ್ಳಿ. ಮೊಡವೆಯನ್ನು ಅತಿಯಾಗಿ ಒಣಗಲು ಬಿಡಬೇಡಿ, ಅದು ಕಲೆ ಉಂಟು ಮಾಡಬಹುದು. ತೈಲ ಆಧಾರಿತ ಉತ್ಪನ್ನಗಳನ್ನು ಬಳಸಬೇಡಿ.


  ಬಹುಬೇಗನೆ ಮೊಡವೆ ನಿವಾರಿಸುವ ವಿಧಾನ


  ಮೊಡವೆಗಳ ಗಾತ್ರವನ್ನು ಕೆಲವೇ ಗಂಟೆಗಳಲ್ಲಿ ಕಡಿಮೆ ಮಾಡುವ ಅಥವಾ ಕೆಲವೇ ದಿನಗಳಲ್ಲಿ ನಿವಾರಿಸುವ ಕೆಲವೊಂದು ಪರಿಹಾರೋಪಾಯಗಳು ಇಲ್ಲಿವೆ. ಅವು ಸಂಪೂರ್ಣವಾಗಿ ಮಾಯವಾಗದಿದ್ದರೂ, ಮೇಕಪ್ ಮೂಲಕ ಅದನ್ನು ಮರೆ ಮಾಡಬಹುದು.


  1. ಟೀ ಟ್ರೀ ತೈಲ


  ಟೀ ಟ್ರೀ ತೈಲಗಳು ತಮ್ಮ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳಿಗೆ ಹೆಸರುವಾಸಿ. ಎರಡು ಹನಿ ಟೀ ಟ್ರೀ ತೈಲವನ್ನು ತೆಂಗಿನ ಎಣ್ಣೆ ಅಥವಾ ಇನ್ನಾವುದೇ ಚರ್ಮಕ್ಕೆ ಉಪಯೋಗಕಾರಿಯಾದ ತೈಲದೊಂದಿಗೆ ಮಿಶ್ರ ಮಾಡಿರಿ. ಅದನ್ನು ಮೊಡವೆಗೆ ಲೇಪಿಸಿ, ಕೆಲವು ಸಮಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ.


  2. ಲೋಳೆಸರ


  ಇಡೀ ವಿಶ್ವದಲ್ಲಿ ಚರ್ಮದ ಆರೈಕೆಯ ಪ್ರಮುಖ ಸಾಮಾಗ್ರಿಯಾಗಿ ಲೋಳೆಸರ (ಅಲೋವೇರಾ) ಹೆಸರುವಾಸಿ. ತಾಜಾ ಅಲೋವೇರಾ ಜೆಲ್ ರಾತ್ರಿ ಬೆಳಗಾಗುವುದರ ಒಳಗೆ ಮೊಡವೆ ಸಮಸ್ಯೆಯನ್ನು ಪರಿಹರಿಸಬಲ್ಲದು.


  ಇದನ್ನೂ ಓದಿ: TamilNadu| ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ; ಯೂಟ್ಯೂಬ್​ನಲ್ಲಿ ವಿಡಿಯೋ ವೈರಲ್!

  3. ಜೇನು ತುಪ್ಪ


  ಮೊಡವೆಯಿಂದ ಹಾನಿಗೊಂಡ ಚರ್ಮಕ್ಕೆ ಜೇನು ತುಪ್ಪ ಲೇಪಿಸುವುದರಿಂದ ಬಹಳ ಪ್ರಯೋಜನ ಇದೆ. ಅದರಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳು ಉರಿಯೂತನ್ನು ತಗ್ಗಿಸಿ, ಬೇಗ ಗುಣಮುಖವಾಗಲು ಸಹಕರಿಸುತ್ತದೆ. ಹಾನಿಗೊಂಡ ಜಾಗಕ್ಕೆ ರಾತ್ರಿ ಒಂದು ಅಥವಾ ಎರಡು ಹನಿ ಜೇನು ತುಪ್ಪ ಲೇಪಿಸಿ ಮತ್ತು ಅದನ್ನು ಬೆಳಗ್ಗೆ ತೊಳೆದು ತೆಗೆಯಿರಿ.


  4. ಪುಡಿ ಮಾಡಿದ ಆಸ್ಪಿರಿನ್


  ಮೊಡವೆಗಳು ನಿಮಗೆ ತಲೆನೋವು ನೀಡಲು ಬಿಡಬೇಡಿ! ಬದಲಿಗೆ ನೀವೇ ಅಸ್ಪಿರಿನ್ ಗುಳಿಗೆಯನ್ನು ನುಣ್ಣಗೆ ಪುಡಿ ಮಾಡಿ, ಅದಕ್ಕೆ ಒಂದೆರಡು ಹನಿ ನೀರು ಸೇರಿಸಿ, ಪೇಸ್ಟ್ ತಯಾರಿಸಿ, ಮೊಡವೆಗಳಿಗೆ ಲೇಪಿಸಿಕೊಳ್ಳಿ. ಅದರಲ್ಲಿರುವ ಉರಿಯೂತ ನಿವಾರಕ ಅಂಶಗಳು, ಚರ್ಮ ಸಮಸ್ಯೆಯನ್ನು ಕಡಿಮೆ ಮಾಡಬಲ್ಲವು.


  ಇದನ್ನೂ ಓದಿ: Basanagouda Patil Yatnal| ಶಾಸಕರ ಭವನದ ಯತ್ನಾಳ್ ಕೊಠಡಿ ಬಾಗಿಲಿಗೆ ಅಶ್ಲೀಲ ಭಿತ್ತಿಪತ್ರ; ಆರೋಪಿಗಾಗಿ ಪೊಲೀಸರ ಶೋಧ

  5. ಮಂಜುಗಡ್ಡೆ


  ಮಂಜುಗಡ್ಡೆಯ ತುಂಡನ್ನು ಒಂದು ಒಳ್ಳೆಯ ಬಟ್ಟೆಯಲ್ಲಿ ಸುತ್ತಿ, ಮೊಡವೆ ಇರುವ ಜಾಗಕ್ಕೆ ಇಡಿ. ಮಂಜುಗಡ್ಡೆಯನ್ನು ನೇರವಾಗಿ ಚರ್ಮಕ್ಕೆ ಇಡಬೇಡಿ ಅಥವಾ ಒಂದೇ ಜಾಗದಲ್ಲಿ 20 ನಿಮಿಷಗಳ ಕಾಲ ಇಡಬೇಡಿ. ನೀವು ಎರಡು ದಿನಕ್ಕೊಮ್ಮೆ ಇದನ್ನು ಮಾಡಬಹುದು.
  6. ಹಸಿರು ಚಹಾ


  ಹಸಿರು ಚಹಾದ ಬ್ಯಾಗನ್ನು ಬಿಸಿ ನೀರಲ್ಲಿ ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ತೆಗೆದು , ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಅದನ್ನು ಮೊಡವೆಗಳ ಮೇಲೆ ಇಡಿ. ರಾತ್ರಿ ಮಲಗುವ ಮೊದಲು ಹಸಿರು ಚಹಾದ ಬ್ಯಾಗನ್ನು ಮೊಡವೆ ಮೇಲೆ ಇಟ್ಟುಕೊಳ್ಳಿ. ಅದರಲ್ಲಿರುವ ಉರಿಯೂತ ನಿವಾರಕ ಅಂಶಗಳು , ಊರಿಯೂತ ಮತ್ತು ಕೆಂಪಾದ ಚರ್ಮವನ್ನು ಕಡಿಮೆ ಮಾಡಬಹುದು.

  First published: