Beauty Tips: ಎಣ್ಣೆ ಚರ್ಮದಿಂದ ಮುಕ್ತಿ ಬೇಕಾ? ಹಾಗಾದ್ರೆ ಹೀಗೆ ಮಾಡಿ.

Oily Skin Problem: ಎಣ್ಣೆ ಚರ್ಮ ಹೊಂದಿದವರ ಸಮಸ್ಯೆ ಒಂದೆರೆಡಲ್ಲ. ಅವರು ಮುಖಕ್ಕೆ ಕ್ರೀಮ್ , ಪೌಡರ್ ಹಚ್ಚುವಾಗ ಸಾವಿರ ಬಾರಿ ಆಲೋಚನೆ ಮಾಡಬೇಕಾಗುತ್ತದೆ. ಆದರೆ ಎಣ್ಣೆ ಚರ್ಮದ ಸಮಸ್ಯೆಗೂ ಸಹ ಮನೆಯಲ್ಲಿಯೇ ಪರಿಹಾರ ಸಹ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಣ್ಣೆಯುಕ್ತ ಚರ್ಮವು  ಮೊಡವೆಗಳಂತಹ ಹಲವಾರು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.  ಎಣ್ಣೆ ಚರ್ಮ ಇರುವವರಲ್ಲಿ ಮೊಡವೆ ಕಲೆಗಳು ಹಾಗೂ ಕಪ್ಪು ಕಲೆಗಳು ಸಾಮಾನ್ಯ. ಮುಖ್ಯವಾಗಿ ಎಣ್ಣೆ ಚರ್ಮಕ್ಕೆ ಕಾರಣ ಚರ್ಮದ ಮೇಲ್ಮೈ ಅಡಿಯಲ್ಲಿರುವ ಸೆಬಾಸಿಯಸ್ ಗ್ರಂಥಿಗಳ ಅತಿಯಾದ ವಿಸರ್ಜನೆ ಎಂದು ತಜ್ಞರು ಹೇಳುತ್ತಾರೆ. ಇನ್ನು ಎಣ್ಣೆ ಚರ್ಮವಿರುವವರು ಚರ್ಮದ ಆರೋಗ್ಯಕ್ಕಾಗಿ ಹಲವಾರು ಪ್ರಯೋಗಗಳನ್ನು ಮಾಡುತ್ತಾರೆ. ಅಲ್ಲದೇ ಸಿಕ್ಕ ಸಿಕ್ಕ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಅವೆಲ್ಲವನ್ನು ಮಾಡುವ ಮೊದಲು, ಸಣ್ಣ ಸಣ್ಣ ಕೆಲಸದ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೇ, ಎಣ್ಣೆ ಚರ್ಮದ ಸಮಸ್ಯೆ ಇರುವವರು ಮಾಡಬೇಕಾಗಿರುವುದೇನು ಎಂಬುದು ಇಲ್ಲಿದೆ.

ದಿನಕ್ಕೆ ಎರಡು ಬಾರಿ ಮುಖ ತೊಳೆಯಿರಿ

ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಮತ್ತು ನೀವು ದಿನಕ್ಕೆ ಎರಡು ಬಾರಿಯಾದರೂ ನಿಮ್ಮ ಮುಖವನ್ನು ತೊಳೆಯದಿದ್ದರೆ, ಅದು ಚರ್ಮದೊಳಗೆ ಎಣ್ಣೆಯನ್ನು ಸಂಗ್ರಹಿಸುವ ರಂಧ್ರಗಳು ಹೆಚ್ಚಾಗಲು ಕಾರಣವಾಗಬಹುದು. ಚರ್ಮದಲ್ಲಿ ಎಣ್ಣೆ ಸಂಗ್ರಹಣೆ ಹೆಚ್ಚಾದಂತೆ ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳು ಸಹ ಉಲ್ಬಣಗೊಳುತ್ತದೆ. ಆದ್ದರಿಂದ, ಬೆಳಿಗ್ಗೆ ಒಮ್ಮೆ ಮತ್ತು ಮಲಗುವ ಮುನ್ನ ಸಹ ದಿನಕ್ಕೆ ಎರೆಡು ಬಾರಿ ಮುಖ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.

ಕನಿಷ್ಠ ಒಂದು ವಾರಕ್ಕೊಮ್ಮೆ ಆಯಿಲ್ ಕಂಟ್ರೋಲ್ ಡಿ-ಟ್ಯಾನ್ ಫೇಸ್ ಪ್ಯಾಕ್ ಬಳಸಿ

ಸೂರ್ಯನ ಬೆಳಕಿನಿಂದ ಹಾನಿಯನ್ನು ತಡೆಗಟ್ಟಲು ಸನ್ಸ್ ಕ್ರೀಮ್ ಬಳಸುವುದು ಹೇಗೆ ಅಗತ್ಯವೋ, ಹಾಗೆಯೇ, ಡಿ-ಟ್ಯಾನ್ ಫೇಸ್ ಪ್ಯಾಕ್ ಅನ್ನು ಬಳಸುವುದು  ಬಹಳ ಮುಖ್ಯವಾಗುತ್ತದೆ. ಇದು ಸನ್ಟ್ಯಾನ್, ಚರ್ಮದಲ್ಲಿನ ಹೆಚ್ಚುವರಿ ಎಣ್ಣೆ, ಪಿಗ್ಮೆಂಟೇಶನ್ ಇತ್ಯಾದಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಫೆಸ್ ಪ್ಯಾಕ್ಗಳು ನಿಮ್ಮ ನೈಸರ್ಗಿಕ ಹೊಳಪನ್ನು ಮರು ಪಡೆಯಲು ಸಹಕಾರಿ.

ಇದನ್ನೂ ಓದಿ: ದೇಹದ ತೂಕ ಇಳಿಸಲು ಚಿಯಾ ಬೀಜಗಳನ್ನು ಟ್ರೈ ಮಾಡಿ..

ಜೇನು

ಜೇನುತುಪ್ಪದಲ್ಲಿರುವ ಆರೋಗ್ಯಕಾರಿ ಗುಣಗಳು ಒಂದೆರೆಡಲ್ಲ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು ಅದನ್ನು ಮೊಡವೆ ಮತ್ತು ಇತರ ಎಣ್ಣೆಯುಕ್ತ ಚರ್ಮದ ಸಮಸ್ಯೆಗಳನ್ನು ತಡೆಯಲು ಬಳಸಬಹುದು. ನಿಮ್ಮ ಮುಖದ ಮೇಲೆ ತೆಳುವಾಗಿ ಜೇನುತುಪ್ಪವನ್ನು ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ತಣ್ಣನೇಯ ನೀರಿನಿಂದ ತೊಳೆಯಿರಿ. ಇದು ನಿಮ್ಮ ಎಣ್ಣೆ ಚರ್ಮದ ಹೊಳಪನ್ನು ಹೆಚ್ಚಿಸಿ, ಚರ್ಮದಲ್ಲಿ ಎಣ್ಣೆ ಸಂಗ್ರಹವಾಗುದನ್ನು ತಡೆಯುತ್ತದೆ. ಇದನ್ನು ನಿಯಮಿತವಾಗಿ ಬಳಸುವುದು ಒಳ್ಳೆಯದು.

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿಯಲ್ಲಿ ಸತು, ಸಿಲಿಕಾ, ಆಕ್ಸೈಡ್‌ಗಳು, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಿಂದ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಉತ್ತಮ ಪರಿಹಾರ ನೀಡುತ್ತದೆ. ಇದರಲ್ಲಿ ಹೀರಿಕೊಳ್ಳುವ ಗುಣಗಳಿದ್ದು, ಇದು ನಿಮ್ಮ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ನಿವಾರಿಸುತ್ತದೆ. ಅಲ್ಲದೆ ಇದನ್ನು ನೀವು ಪ್ರತಿದಿನ ಬಳಸಬಹುದು.

ಇದನ್ನೂ ಓದಿ: ಹಲ್ಲುಜ್ಜುವಾಗ ಈ ತಪ್ಪುಗಳನ್ನು ಮಾಡಬೇಡಿ..!

ಬೇವು

ಸಾವಿರಾರು ವರ್ಷಗಳಿಂದಲೂ ಬೇವು ಎಣ್ಣೆಯುಕ್ತ ಚರ್ಮದಿಂದ ಉಂಟಾಗುವ ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುವ ಪ್ರಬಲವಾದ ನಂಜುನಿರೋಧಕವಾಗಿದೆ. ವಾರಕ್ಕೆ ಒಮ್ಮೆ ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದು ಒಳ್ಳೆಯ ಪರಿಣಾಮ ನೀಡುತ್ತದೆ.

ಅಲೋವೆರಾ

ಅಲೋವೆರಾದಲ್ಲಿ ಚರ್ಮದ ರಕ್ಷಣೆಗೆ ಬೇಕಾಗುವ ಹಲವು ಆರೋಗ್ಯಕಾರಿ ಪ್ರಯೋಜನಗಳಿವೆ. ದಿನನಿತ್ಯ ಅಥವಾ ವಾರಕ್ಕೆ ಎರೆಡು ಬಾರಿ ಅಲೋವೆರಾವನ್ನು ಮುಖಕ್ಕೆ ಲೇಪಿಸಿಕೊಳ್ಳುವುದು ಎಣ್ಣೆಯುಕ್ತ ಚರ್ಮಕ್ಕೆ ಬಹಳ ಪ್ರಯೋಜನಕಾರಿ. ಅಲೋವೆರಾದಲ್ಲಿ ಹೀರಿಕೊಳ್ಳುವ ಗುಣವಿದ್ದು, ಅದು ಚರ್ಮದಲ್ಲಿನ ಎಣ್ಣೆಯನ್ನು ಹೀರಿಕೊಂಡು, ಚರ್ಮ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.

ಸೌತೆಕಾಯಿ

ಸೌತೆಕಾಯಿಯನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದು ಸಹ ಎಣ್ಣೆ ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಸ್ವಚ್ಛಗೊಳಿಸುತ್ತದೆ. ಅಲ್ಲದೆ ಇದು ಕಪ್ಪು ವರ್ತುಲಗಳು ಮತ್ತು ಸುಕ್ಕುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
Published by:Sandhya M
First published: