• Home
  • »
  • News
  • »
  • lifestyle
  • »
  • Life Hacks: ಶೂನಿಂದ ಬರುವ ಕೆಟ್ಟ ವಾಸನೆ ಮುಜುಗರ ಉಂಟು ಮಾಡ್ತಿದ್ರೆ, ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ

Life Hacks: ಶೂನಿಂದ ಬರುವ ಕೆಟ್ಟ ವಾಸನೆ ಮುಜುಗರ ಉಂಟು ಮಾಡ್ತಿದ್ರೆ, ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Life Hcaks: ಬೂಟುಗಳನ್ನು ಬಹಳ ಹೆಚ್ಚು ಸಮಯ ಧರಿಸುವ ಕಾರಣದಿಂದಾಗಿ,ಪಾದಗಳು ಬೆವರಲು ಮತ್ತು ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತವೆ. ನೀವು ಪದೇ ಪದೇ ಒಂದೇ ಸಾಕ್ಸ್ ಅಥವಾ ಬೂಟುಗಳನ್ನು ಧರಿಸಿದರೆ ಅಥವಾ ನಿಮಗೆ ಇತರ ಪಾದದ ಕಾಯಿಲೆಗಳಿದ್ದರೆ ಪಾದದ ವಾಸನೆಯು ಹೆಚ್ಚು ಸಾಮಾನ್ಯವಾಗಿದೆ ಎನ್ನಬಹುದು.

ಮುಂದೆ ಓದಿ ...
  • Share this:

ಕೆಲಸದ ನಿಮಿತ್ತ ಸಂಬಂಧಿಕರ ಮನೆಗೆ (Home) ಅಥವಾ ಕಚೇರಿಗೆ ಹೋದರೆ ಬೂಟು, ಚಪ್ಪಲಿ ಬಿಚ್ಚಿಟ್ಟು ಸಾಕ್ಸ್ ಧರಿಸಿ ಒಳಗೆ ಹೋಗಬೇಕು. ಅಂತಹ ಸಮಯದಲ್ಲಿ, ಸಾಕ್ಸ್ ನಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಇದು ನಿಮಗೆ ಮುಜುಗರವನ್ನು ಉಂಟುಮಾಡುತ್ತದೆ. ಏನೇ ಮಾಡಿದರೂ ಈ ದುರ್ವಾಸನೆ ಹೋಗಲಾಡಿಸಲು ಸಾಧ್ಯವಿಲ್ಲ. ಆದರೆ ಈ ಸಮಸ್ಯೆಯನ್ನು ನೈಸರ್ಗಿಕ (Natural ) ಪರಿಹಾರಗಳಿಂದ ನಿವಾರಿಸಬಹುದು. ಹೇಗೆ ಎಂಬುದು ಇಲ್ಲಿದೆ.


ಪಾದಗಳು ವಾಸನೆ ಬರಲು ಕಾರಣವೇನು?:


ಬೂಟುಗಳನ್ನು ಬಹಳ ಹೆಚ್ಚು ಸಮಯ ಧರಿಸುವ ಕಾರಣದಿಂದಾಗಿ,ಪಾದಗಳು ಬೆವರಲು ಮತ್ತು ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತವೆ. ನೀವು ಪದೇ ಪದೇ ಒಂದೇ ಸಾಕ್ಸ್ ಅಥವಾ ಬೂಟುಗಳನ್ನು ಧರಿಸಿದರೆ ಅಥವಾ ನಿಮಗೆ ಇತರ ಪಾದದ ಕಾಯಿಲೆಗಳಿದ್ದರೆ ಪಾದದ ವಾಸನೆಯು ಹೆಚ್ಚು ಸಾಮಾನ್ಯವಾಗಿದೆ ಎನ್ನಬಹುದು. ಈ ನೈಸರ್ಗಿಕ ಪರಿಹಾರಗಳು ನಿಮ್ಮ ಬೂಟುಗಳು ಅಥವಾ ಸಾಕ್ಸ್ಗಳಿಂದ ವಾಸನೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿರುತ್ತವೆ.


ಪಾದಗಳಲ್ಲಿ ಅನೇಕ ಬೆವರು ಗ್ರಂಥಿಗಳಿರುತ್ತದೆ, ಆದ್ದರಿಂದ ಹೆಚ್ಚು ಸಮಯ ನಡೆದ ನಂತರ ಅಥವಾ ವ್ಯಾಯಾಮ ಮಾಡಿದ ನಂತರ, ಪಾದಗಳಲ್ಲಿ ಬಹಳಷ್ಟು ಬೆವರು ಉಂಟಾಗುತ್ತದೆ. ಸಾಕ್ಸ್ ಅಥವಾ ಬೂಟುಗಳನ್ನು ದಿನವಿಡೀ ಧರಿಸಿದಾಗ ಬೆವರುವ ಪಾದಗಳು ವಾಸನೆಯನ್ನು ಉಂಟುಮಾಡಬಹುದು. ಶಿಲೀಂಧ್ರಗಳ ಸಂತಾನೋತ್ಪತ್ತಿಗೆ ಬೂಟುಗಳು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಪಾದಗಳ ಮೇಲೆ ಬೆವರುವಿಕೆಯಿಂದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯಿಂದಾಗಿ ಸೋಂಕಿನ ಅಪಾಯವು ಹೆಚ್ಚಾಗುತ್ತದೆ.


ಇದನ್ನೂ ಓದಿ: Coffee Benefits: ದಿನಕ್ಕೆ ಒಂದು ಕಪ್ ಕಾಫಿ ಹಸಿವನ್ನು ನಿಗ್ರಹಿಸುತ್ತಂತೆ, ತೂಕ ಇಳಿಸಲು ಹೆಲ್ಪ್​ ಮಾಡುವ ಕೆಫೀನ್ ಸಪ್ಲಿಮೆಂಟ್‌ಗಳಿವು


ಅಡಿಗೆ ಸೋಡಾ
ಪಾದದ ದುರ್ವಾಸನೆ ತಡೆಯಲು ಅಡಿಗೆ ಸೋಡಾ ತುಂಬಾ ಉಪಯುಕ್ತ. ಬೆವರಿನಿಂದಾಗಿ ಶೂನಲ್ಲಿ ಉಂಟಾಗುವ ವಾಸನೆ ಅಥವಾ ತೇವಾಂಶವನ್ನು ನಿವಾರಿಸಬಹುದು. ರಾತ್ರಿ ಬೂಟುಗಳಲ್ಲಿ ಅಡಿಗೆ ಸೋಡಾವನ್ನು ಹಾಕಿ. ಅಡಿಗೆ ಸೋಡಾವನ್ನು ಸಣ್ಣ ಕವರ್ನಲ್ಲಿ ಇಟ್ಟು ರಬ್ಬರ್ ಬ್ಯಾಂಡ್ ಹಾಕಿ ಕಟ್ಟಿ ಪ್ಯಾಕೆಟ್ ಮಾಡಿ. ಈ ಪ್ಯಾಕೆಟ್ ಅನ್ನು ಪ್ರತಿ ಶೂನಲ್ಲಿ ಇಡಬೇಕು. ಈ ಪ್ರಯೋಗವನ್ನು ವಾರಕ್ಕೊಮ್ಮೆಯಾದರೂ ಮಾಡಬೇಕು.


ಬಿಳಿ ವಿನೆಗರ್
ಶೂಗಳ ವಾಸನೆಯನ್ನು ತಡೆಯಲು ಬಿಳಿ ವಿನೆಗರ್ ಉಪಯುಕ್ತವಾಗಿದೆ. ನೀರು ಮತ್ತು ಬಿಳಿ ವಿನೆಗರ್ 50-50 ರಂತೆ ತೆಗೆದುಕೊಳ್ಳಿ. ಈ ಮಿಶ್ರಣವನ್ನು ಶೂನ ಲೈನಿಂಗ್ ಮತ್ತು ಅಡಿಭಾಗದ ಮೇಲೆ ಸಿಂಪಡಿಸಿ ಮತ್ತು ನೈಸರ್ಗಿಕವಾಗಿ ಒಣಗಲು ಬಿಡಿ. ಈ ಪ್ರಯೋಗವನ್ನು ವಾರಕ್ಕೊಮ್ಮೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.


ಬೂಟುಗಳಲ್ಲಿ ಹುಳಿ ಹಣ್ಣಿನ ಸಿಪ್ಪೆಗಳನ್ನು ಹಾಕಿ
ಹುಳಿ ಇರುವ ಹಣ್ಣಿನ ಸಿಪ್ಪೆಯನ್ನು ತೆಗೆದು ಶೂನಲ್ಲಿ ಇಡಬೇಕು. ಅದರಲ್ಲಿರುವ ಎಣ್ಣೆಯಿಂದಾಗಿ, ಅದರ ಪರಿಮಳ ಹೊರಸೂಸುತ್ತವೆ. ಇದು ವಾಸನೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಕಿತ್ತಳೆ, ದ್ರಾಕ್ಷಿ, ನಿಂಬೆ ಮುಂತಾದ ಹಣ್ಣಿನ ಸಿಪ್ಪೆಗಳನ್ನು ಶೂಗಳಲ್ಲಿ ಇಡಬೇಕು. ಇದನ್ನು ದಿನಕ್ಕೆ ಒಮ್ಮೆ ಮಾಡಬೇಕು.


ಇದನ್ನೂ ಓದಿ: Belly Button: ಹೊಕ್ಕುಳನ್ನು ಇದೇ ಕಾರಣಕ್ಕೆ ನಮ್ಮ ಆರೋಗ್ಯದ ಡಿಟೆಕ್ಟರ್‌ ಅಂತ ಕರೆಯೋದು


ಉಪ್ಪು ಸಹ ಉಪಯುಕ್ತವಾಗಿದೆ
ಪಾದರಕ್ಷೆಯಲ್ಲಿನ ತೇವಾಂಶವನ್ನು ತೆಗೆದುಹಾಕಲು ಮತ್ತು ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಉಪ್ಪನ್ನು ಚೆನ್ನಾಗಿ ಬಳಸಬಹುದು. ಕ್ಯಾನ್ವಾಸ್ ಶೂನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಮತ್ತು ರಾತ್ರಿಯಿಡೀ ಇಡಿ. ಬೆಳಗ್ಗೆ ಸರಿಯಾಗಿ ಬೂಟುಗಳನ್ನು ತೊಳೆಯಿರಿ. ಶೂಗಳಿಂದ ತೇವಾಂಶವನ್ನು ತೆಗೆದು ಹಾಕಲು ಈ ಚಟುವಟಿಕೆಯನ್ನು ಪ್ರತಿ ರಾತ್ರಿಯೂ ಮಾಡಬಹುದು.


ಪೇಪರ್ಗಳನ್ನು ಶೂನಲ್ಲಿ ಸಂಗ್ರಹಿಸಿ ಇಡಿ
ಪ್ರತಿದಿನ ಸಂಜೆ ಮನೆಗೆ ಬಂದ ನಂತರ ಬೂಟುಗಳನ್ನು ತೆಗೆದು ಅದರಲ್ಲಿ ನ್ಯೂಸ್ ಪೇಪರ್ ವೇಸ್ಟ್ ಹಾಕಿ ಶೂಗಳನ್ನು ಗಾಳಿ ಇರುವ ಜಾಗದಲ್ಲಿ ಇಡಿ. ಈ ಕ್ರಿಯೆಯಿಂದಾಗಿ, ಶೂನಲ್ಲಿನ ತೇವಾಂಶವು ಹೀರಲ್ಪಡುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ.

Published by:shrikrishna bhat
First published: