ನಮಗೆ ಬಿಕ್ಕಳಿಗೆ(Hiccups)ಬಂದಾಗಲೆಲ್ಲ ಯಾರೋ ನಿನ್ನ ನೆನಪು ಮಾಡಿಕೊಳ್ತಿದ್ದಾರೆ ಅಂತಾ ಅಮ್ಮ(Mother)ಅಜ್ಜಿ(Grand Mother)ಹೇಳಿದ್ದನ್ನ ಹಾಗೂ ಹಲವಾರು ಹೇಳಿದ್ದನ್ನ ಕೇಳಿರುತ್ತೇವೆ, ನಾವು ಈಗಲೂ ಅದನ್ನೇ ಪಾಲಿಸುತ್ತ ಇದ್ದೇವೆ, ಆದರೆ ಅಸಲಿಗೆ ಕಾರಣವೆ ಬೇರೆ ಇದೆ ಎಂಬುದು ಹಲವರಿಗೆ ತಿಳಿದಿಲ್ಲ.
ಇನ್ನು ಬಿಕ್ಕಳಿಕೆ ಎಲ್ಲರಿಗೂ ಬರುತ್ತದೆ. ಕೆಲವರಿಗೆ ಹೆಚ್ಚು ಖಾರ(Spices)ತಿಂದಾಗ, ಇನ್ನು ಕೆಲವರಿಗೆ ನೀರು(Water)ಗುಟುಕಿಸಿದ ಸಂದರ್ಭದಲ್ಲಿ, ಮತ್ತು ಕೆಲವರಿಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬರಬಹುದು. ಕೆಲವರು ಸುಮ್ಮನೆ ತಮ್ಮ ಪಾಡಿಗೆ ತಾವು ಕುಳಿತಿದ್ದಾಗಲೂ ಸಹ ಬಿಕ್ಕಳಿಕೆ ಬರಬಹುದು.ಆದರೆ ಸಾಧಾರಣವಾಗಿ ಬಿಕ್ಕಳಿಕೆ ಬಂದಾಗ ಎಲ್ಲರೂ ಒಂದು ಲೋಟ ನೀರು ಕುಡಿದು ಸುಮ್ಮನಾಗುತ್ತಾರೆ. ಪ್ರತಿಯೊಬ್ಬರಿಗೂ ಇದೊಂದು ವಿಚಾರ ಚೆನ್ನಾಗಿ ಗೊತ್ತು. ನಮ್ಮ ಮನೆಯಲ್ಲಿ ನಮ್ಮ ಹಿರಿಯರೂ ನಮಗೆ ಅದನ್ನೇ ಹೇಳಿಕೊಟ್ಟಿರುತ್ತಾರೆ. ಹೀಗಾಗಿ ಬಿಕ್ಕಳಿಕೆ ಬಂದಾಗ ಮನೆಯಲ್ಲಿಯೇ ಕೆಲವೊಂದು ಮನೆಯ ಮದ್ದುಗಳನ್ನ ಮಾಡಿಕೊಳ್ಳುವ ಬಿಕ್ಕಳಿಕೆ ನಿವಾರಣೆ ಮಾಡಿಕೊಳ್ಳಬಹುದು..
1)ತಣ್ಣನೆಯ ನೀರು ಸೇವನೆ: ಬಿಕ್ಕಳಿಕೆ ಎದುರಾದ ಬಳಿಕ ನೀವು ಮಾಡಬಹುದಾದ ಅತ್ಯಂತ ಸೂಕ್ತ ಮತ್ತು ತಕ್ಷಣವೇ ಫಲ ನೀಡುವ ವಿಧಾನವೆಂದರೆ ತಣ್ಣೀರು ಕುಡಿಯುವುದು ತಣ್ಣೀರು ಎಂದರೆ ಫ್ರಿಜ್ಜಿನ ನೀರಲ್ಲ, ಬದಲಿಗೆ ಮಡಕೆಯಲ್ಟಿಟ್ಟಾಗ ಆಗುವಷ್ಟು ಮಾತ್ರ ತಣ್ಣೀರಿದ್ದರೆ ಸಾಕು. ಬಿಕ್ಕಳಿಕೆ ಎದುರಾದಾಗ ಆದಷ್ಟೂ ದೊಡ್ಡ ಗುಟುಕುಗಳಲ್ಲಿ ತಣ್ಣೀರನ್ನು ನಿಧಾನವಾಗಿ ಕುಡಿಯಬೇಕು. ಹೀಗೆ ಕುಡಿಯುವಾಗ ನೀರಿನ ತಾಪಮಾನ ಗಂಟಲಿನ ಮೂಲಕ ವಪೆಗೂ ದಾಟಿಕೊಂಡು ವಪೆಯ ಸ್ನಾಯುಗಳನ್ನು ಶಾಂತಗೊಳಿಸುತ್ತದೆ. ಈ ಮೂಲಕ ಬಿಕ್ಕಳಿಕೆ ನಿಧಾನವಾಗಿ ನಿಲ್ಲುತ್ತದೆ.
ಇದನ್ನೂ ಓದಿ: ದೇಹದ ತೂಕ ಜಾಸ್ತಿ ಇರೋದ್ರಿಂದ ಮಕ್ಕಳಾಗ್ತಿಲ್ವಾ? ಆಯುರ್ವೇದದಲ್ಲಿ ಇದಕ್ಕಿದೆ ಪರಿಹಾರ, ತಜ್ಞರು ವಿವರಿಸಿದ್ದಾರೆ
2)ಸಕ್ಕರೆ ನೀರು: ಸಕ್ಕರೆಯಲ್ಲಿ ಕ್ಯಾಲೋರಿಗಳು ಹೆಚ್ಚಾಗಿ ಕಂಡುಬರುತ್ತವೆ. ಬಿಕ್ಕಳಿಕೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಲು ಇದೊಂದು ಅತ್ಯದ್ಭುತ ಮಾರ್ಗ.1 ಟೀ ಚಮಚ ಸಕ್ಕರೆ ತೆಗೆದುಕೊಂಡು ಅದನ್ನು ಚೆನ್ನಾಗಿ ಜಿಗಿದು ಅರ್ಧ ಲೋಟ ನೀರು ಕುಡಿಯಿರಿ. ಬಿಕ್ಕಳಿಕೆ ತಟ್ಟಂತ ನಿಂತುಹೋಗುತ್ತದೆ.
3)ಮಸಾಜ್ ಮಾಡಿ: ಬಿಕ್ಕಳಿಕೆ ಬಂದ ಕೂಡಲೇ ಹಿಂಬದಿಯಿಂದ ಕುತ್ತಿಗೆಯ ಸಮೀಪವಿರುವ ಪ್ರದೇಶವನ್ನು ಮಸಾಜ್ ಮಾಡಬೇಕು. ಇದು ಗಂಟಲು-ಕುತ್ತಿಗೆಯ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಬಿಕ್ಕಳಿಸುವಿಕೆಯನ್ನು ನಿಲ್ಲಿಸುತ್ತದೆ.
4)ನಿಂಬೆ ನೀರು: ಅರ್ಧ ನಿಂಬೆ ಹಣ್ಣಿನ ಹೋಳನ್ನು ಹಿಂಡಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಬಹುದು. ಇಲ್ಲವೆಂದರೆ ನಿಂಬೆಹಣ್ಣಿನ ಸಣ್ಣ ಪ್ರಮಾಣವನ್ನು ಕತ್ತರಿಸಿಕೊಂಡು ಅದಕ್ಕೆ ಸ್ವಲ್ಪ ಪುಡಿ ಉಪ್ಪು ಉದುರಿಸಿ ಅದನ್ನು ಬಾಯಿಯಲ್ಲಿ ಇಟ್ಟುಕೊಂಡು ಉಪ್ಪು ಹುಳಿ ರಸ ಹೀರಬಹುದು.ಹೀಗೆ ಮಾಡುವುದರಿಂದ ಬಿಕ್ಕಳಿಕೆ ನಿಂತು ಹೋಗಲಿದೆ. ಆದರೆ ನೀವು ನಿಮ್ಮ ಹಲ್ಲುಗಳನ್ನು ಸಿಟ್ರಿಕ್ ಆಸಿಡ್ ಪ್ರಭಾವದಿಂದ ರಕ್ಷಣೆ ಮಾಡಿಕೊಳ್ಳಲು ತಕ್ಷಣವೇ ಶುದ್ಧವಾದ ನೀರಿನಿಂದ ಬಾಯಿ ಮುಕ್ಕಳಿಸಿ
5)ಜೇನು ತುಪ್ಪ: ಜೇನುತುಪ್ಪದ ಸೇವನೆ ಸಹ ಬಿಕ್ಕಳಿಕೆ ನಿಲ್ಲಲು ನೆರವಾಗುತ್ತದೆ. ಅರ್ಧ ಗ್ಲಾಸ್ ನೀರಿಗೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಜೇನುತುಪ್ಪವು ವಾಗಾಸ್ ನರವನ್ನು ತಂಪುಗೊಳಿಸುತ್ತದೆ. ಇದರಿಂದ ನಿರಂತರ ಬಿಕ್ಕಳಿಕೆಗೆ ಪರಿಹಾರ ಸಿಗುತ್ತದೆ.
6)ವಿನೆಗರ್ ಬಳಕೆ: ವಿನೆಗರ್ ಸಹ ಬಿಕ್ಕಳಿಕೆಯನ್ನು ನಿವಾರಿಸಲು ಸಹಾಯಮಾಡುತ್ತದೆ. ಆದರೆ ನೀರು, ಜೇನುತುಪ್ಪ ,ಸಕ್ಕರೆ ರೀತಿ ವಿನೇಗರ್ ಅನ್ನು ನೀವು ನೇರವಾಗಿ ಸೇವಿಸಬಾರದು. ನಿಮ್ಮ ನಾಲಿಗೆ ಮೇಲೆ ಕೆಲವೊಂದು ವಿನೆಗರ್ ಡ್ರಾಪ್ ಗಳನ್ನು ಹಾಕಿ ಅದು ಬಿಕ್ಕಳಿಕೆ ನಿಲ್ಲಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಸದಾ ಬೆಚ್ಚಗೆ ಇರಲು ಕಾಫಿಯ ಜೊತೆಗೆ ಈ ವಸ್ತುಗಳನ್ನ ಸೇರಿಸಿ ಕುಡಿಯಿರಿ
7)ನಾಲಿಗೆ ಹೊರಗೆ ಹಾಕಿ: ನೀರು ಕುಡಿದ ನಂತರ ಬಿಕ್ಕಳಿಕೆ ನಿಲ್ಲದಿದ್ದರೆ, ನಾಲಗೆ ಯನ್ನು ಹೊರ ಹಾಕಿ ಸ್ಪಲ್ಪ ಹೊತ್ತು ಹಾಗೆಯೇ ಇರಿ. ಈ ರೀತಿ ಮಾಡುವುದರಿಂದ ಗಂಟಲಿನ ಸ್ನಾಯುಗಳಲ್ಲಿ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ