ಕೆಲವರಿಗೆ ಉದ್ದ ಕೂದಲು (Long Hair) ಇರಬೇಕೆಂಬ ಆಸೆ, ಇನ್ನು ಕೆಲವರಿಗೆ ಚಿಕ್ಕ ಕೂದಲು (Short hair) ಶೈನಿಯಾಗಿರಬೇಕೆಂಬ ಬಯಕೆ, ಹೀಗೆ ಪ್ರತಿಯೊಬ್ಬರೂ ತಮ್ಮ ಕೂದಲು ಹೀಗಿದ್ದರೆ ತಮಗೆ ಹೆಚ್ಚು ಸೂಟ್ ಆಗುತ್ತೆ ಅಂದುಕೊಳ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ (Hair Loss Problem) ಹೆಚ್ಚಿದೆ. ಇದು ಕೂದಲ ವಿನ್ಯಾಸದ ಜೊತೆಗೆ ಅಂದವನ್ನು ಕೆಡಿಸುತ್ತದೆ. ಕೂದಲಿನ ಉದ್ದಕ್ಕೆ ತಕ್ಕಂತೆ ಪ್ರತಿಯೊಬ್ಬರ ಕೂದಲಿನ ವಿನ್ಯಾಸ ಪರಸ್ಪರ ಭಿನ್ನವಾಗಿರುತ್ತೆ. ಅದಾಗ್ಯೂ ಕೂದಲು ಉದುರುವ ಸಮಸ್ಯೆ ಸಾಕಷ್ಟು ಕಾಡುತ್ತದೆ. ಕೂದಲ ಆರೈಕೆ (Hair Care) ವಿಚಾರದಲ್ಲಿ ಕೂದಲನ್ನು ನಿಭಾಯಿಸುವುದರ ಜೊತೆಗೆ ತೊಳೆಯುವ ಮತ್ತು ಒಣಗಿಸುವ ವಿಧಾನ ಸಹ ತುಂಬಾ ಮುಖ್ಯ ಅಂತಾರೆ ಸೌಂದರ್ಯ ತಜ್ಞೆ ರೇಖಾ ಕುಮಾರಿ.
ಕೂದಲು ಉದುರಲು ಅತಿಯಾದ ಬಿಸಿ ನೀರು ಕಾರಣ
ಕೆಲವೊಮ್ಮೆ ಬಿಸಿ ನೀರಿನಿಂದ ಕೂದಲು ತೊಳೆದರೆ ಅದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದರ ಹೊರತಾಗಿ, ರೀಬಾಂಡಿಂಗ್, ಮೃದುಗೊಳಿಸುವಿಕೆ ಮತ್ತು ಹೇರ್ ಬ್ಲೋವರ್‌ಗಳ ಅತಿಯಾದ ಬಳಕೆಯಿಂದ ಕೂದಲು ತೆಳ್ಳಗಾಗುತ್ತದೆ. ಮತ್ತು ಒರಟಾಗುತ್ತದೆ.
ಕೂದಲ ಆರೋಗ್ಯದ ಕೇರ್ ತೆಗೆದುಕೊಳ್ಳುವುದು ಹೇಗೆ?
ಸ್ಕಾರ್ಫ್ನಲ್ಲಿ ಕೂದಲು ಕಟ್ಟಿರಿ
ರಾತ್ರಿ ಮಲಗುವ ಮುನ್ನ ಕೂದಲನ್ನು ತೆರೆದು ಬಿಡುವ ಬದಲು ಬ್ಯಾಂಡ್ ಸಹಾಯದಿಂದ ಕಟ್ಟಿ. ಕೂದಲನ್ನು ಗಟ್ಟಿಯಾಗಿ ಜಗ್ಗಿ ಕಟ್ಟಬೇಡಿ. ಸ್ವಲ್ಪ ಸಡಿಲವಾಗಿ ಉಳಿಯಲು ಬಿಡಿ. ಇದು ಕೂದಲು ಸಿಕ್ಕು ಒಡೆಯುವ ಭಯ ಇರದಂತೆ ನೋಡಿಕೊಳ್ಳುತ್ತದೆ. ಕೂದಲು ಒಡೆಯುವಿಕೆ ಮತ್ತು ಸಿಕ್ಕುಗಳಿಂದ ರಕ್ಷಿಸಲು ನಿಮ್ಮ ಕೂದಲನ್ನು ರೇಷ್ಮೆ ಸ್ಕಾರ್ಫ್‌ನಲ್ಲಿ ಕಟ್ಟಿ.
ಬ್ರೇಡ್ ಕೂದಲು
ಮಲಗುವ ಮುನ್ನ ನಿಮ್ಮ ಕೂದಲನ್ನು ಕಟ್ಟಲು ನಿಯಮ ಮಾಡಿ. ನೀವು ಉದ್ದ ಮತ್ತು ದಪ್ಪ ಕೂದಲು ಹೊಂದಿದ್ದರೆ, ಪೋನಿಟೇಲ್ ಹಾಕಿ. ಇದು ಕೂದಲಿಗೆ ಕಡಿಮೆ ಹಾನಿ ಮಾಡುತ್ತದೆ. ಬೆಳಿಗ್ಗೆ ಎದ್ದ ನಂತರ ಬ್ರೇಡ್ ತೆರೆಯಿರಿ ಮತ್ತು ನಿಮ್ಮ ಕೂದಲನ್ನು ಬಾಚಿರಿ.
ಇತ್ತೀಚಿನ ದಿನಗಳಲ್ಲಿ ಜನರು ಬ್ರೇಡ್ ಅನ್ನು ಫ್ಯಾಷನ್ಗೆ ಮಾಡ್ತಿದ್ದಾರೆ. ವಿವಿಧ ರೀತಿಯ ಬ್ರೆಡ್ ಮಾಡುವ ಪ್ರವೃತ್ತಿಯು ಇದೆ. ಕೂದಲಿನ ಬಲಕ್ಕೆ ಕರ್ಲಿಂಗ್ ಮಾಡಿ.
ಕೂದಲು ಸೀರಮ್ ಬಳಕೆ ಮಾಡುವುದು
ಕೂದಲಿಗೆ ಪೋಷಕಾಂಶ ಒದಗಿಸಲು ವಿಶೇಷವಾಗಿ ಪ್ರೋಟೀನ್ ಒದಗಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸೀರಮ್ ಇದೆ. ಕೂದಲಿನ ಸೀರಮ್ ಅನ್ನು ಅನ್ವಯಿಸಿ. ಇದು ಕೂದಲು ಸ್ಟ್ರಾಂಗ್ ಆಗುತ್ತದೆ.
ಎಣ್ಣೆ ಹಚ್ಚಿರಿ
ಕೂದಲನ್ನು ಸರಿಪಡಿಸಲು ಜೊಜೊಬಾ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ ಹಚ್ಚಿರಿ. ಹೇರ್ ಮಸಾಜ್ ಮಾಡಿ. ಇದು ಕೂದಲನ್ನು ಒಡೆಯದಂತೆ ರಕ್ಷಿಸುತ್ತದೆ.
ಜೊತೆಗೆ ಸ್ನಾಯುಗಳಿಗೆ ತಾಜಾತನ ನೀಡುತ್ತದೆ. ಎಣ್ಣೆಯಲ್ಲಿರುವ ಪೌಷ್ಟಿಕಾಂಶವು ಕೂದಲನ್ನು ತಲುಪುತ್ತದೆ ಮತ್ತು ಪ್ರಯೋಜನ ನೀಡುತ್ತದೆ.
ಸ್ಯಾಟಿನ್ ಮೆತ್ತೆ ಕವರ್ ಬಳಸಿ
ಕೆಲವೊಮ್ಮೆ ದಿಂಬಿನ ಕವರ್ ಕೂಡ ಕೂದಲು ಹಾನಿ ಮಾಡುತ್ತದೆ. ಕೆಲವು ಕಸೂತಿ ಕವರ ಗಳು ಕೂದಲನ್ನು ಹಿಡಿಯುತ್ತದೆ. ಇದರಿಂದ ಕೂದಲು ಗಂಟಾಗುತ್ತದೆ. ತುಂಡಾಗುತ್ತದೆ. ಹಾಗಾಗಿ ಕಸೂತಿ ಕವರ್ ಬಳಸುವ ಬದಲು ಸಾಫ್ಟ್ ಆಗಿರುವ ಕವರ್ ಬಳಸಿ. ಹತ್ತಿ ಅಥವಾ ಸ್ಯಾಟಿನ್ ಮಾಡಿದ ಕವರ್ಗಳನ್ನು ಮಾತ್ರ ಬಳಸಲು ಪ್ರಯತ್ನಿಸಿ. ಇದು ಕೂದಲು ಉದುರುವುದು ತಡೆಯಬಹುದು.
ಇದನ್ನೂ ಓದಿ: ಪರಂಗಿ ಹಣ್ಣಿನ ಬೀಜದಿಂದ ಸಿಗೋ ಲಾಭ ಕೇಳಿದ್ರೆ ನೀವು ಎಸೆಯೋದೇ ಇಲ್ಲ
ಒದ್ದೆಯಾದ ಕೂದಲಿನ ಜೊತೆ ಮಲಗುವುದು ತಪ್ಪಿಸಿ
ರಾತ್ರಿ ಕೂದಲು ತೊಳೆದ ನಂತರ ಮಲಗುವ ಅಭ್ಯಾಸ ತಪ್ಪಿಸಿ. ಮಲಗುವ ಎರಡರಿಂದ ಮೂರು ಗಂಟೆಗಳ ಮೊದಲು ಕೂದಲು ತೊಳೆಯಿರಿ ನಂತರ ಒಣಗಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ