Fatty Liver: ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಹೋಗಲಾಡಿಸಲು ಈ ರೀತಿ ಮಾಡಿ, ಇಲ್ಲಿದೆ ಸುಲಭ ಉಪಾಯ

ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆಯು ಜೀವಕ್ಕೆ ಅಪಾಯಕಾರಿ ಆಗಿದೆ. ಈ ರೋಗದ ಅಪಾಯಕಾರಿ ಅಂಶಗಳನ್ನು ನಿಯಂತ್ರಣ ಮಾಡುವುದು ಮುಖ್ಯ. ಈ ಅಂಶಗಳಲ್ಲಿ ಬೊಜ್ಜು ಆರೋಗ್ಯ ಸ್ಥಿತಿ ಮತ್ತು ಅನಾರೋಗ್ಯಕರ ಜೀವನಶೈಲಿ ಸೇರಿವೆ. ನಿಮ್ಮ ನಿದ್ರೆಯ ಅಭ್ಯಾಸವು ಇದರಲ್ಲಿ ಸೇರಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ವ್ಯಕ್ತಿಯ (Person) ಯಕೃತ್ತಿನಲ್ಲಿ (Liver) ಹೆಚ್ಚುವರಿ ಕೊಬ್ಬು ಸಂಗ್ರಹವಾಗುವ ಸ್ಥಿತಿಯನ್ನು ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ (Disease) ಎಂದು ಕರೆಯುತ್ತಾರೆ. ಇದನ್ನು ಹೆಪಾಟಿಕ್ ಸ್ಟೀಟೋಸಿಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಕಾಯಿಲೆ ಇರುವವರು ಯಾವುದೇ ರೋಗ ಲಕ್ಷಣ (Symptoms) ಹೊಂದಿರುವುದಿಲ್ಲ. ಹೀಗಾಗಿ ರೋಗ ನಿರ್ಣಯ ಮಾಡುವುದು ವಿಳಂಬವಾಗುತ್ತದೆ. ಮತ್ತು ಅದನ್ನು ಪತ್ತೆ ಹಚ್ಚುವ ಹೊತ್ತಿಗೆ ಯಕೃತ್ತು ಹೆಚ್ಚಿನ ಮಟ್ಟದಲ್ಲಿ ಹಾನಿಗೊಳಗಾಗುತ್ತದೆ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು. ಮದ್ಯಪಾನ ಸೇವನೆ ಮಾಡುವವರು ಮತ್ತು ಸೇವನೆ ಮಾಡದವರಲ್ಲಿಯೂ ಕಂಡು ಬರುತ್ತದೆ. ಆಲ್ಕೊಹಾಲ್ಯುಕ್ತ ಕೊಬ್ಬಿನ ಪಿತ್ತಜನಕಾಂಗವು ಹೆಚ್ಚು ಮದ್ಯ ಸೇವಿಸುವವರಲ್ಲಿ ಕಂಡು ಬರುತ್ತದೆ.  

  ಎರಡೂ ವಿಧದ ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆ ಅಪಾಯಕಾರಿ

  ಅದೇ ವೇಳೆ ಆಲ್ಕೊಹಾಲ್ ಸೇವಿಸದ ಜನರು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹೊಂದಿರುವ ಸಾಧ್ಯತೆ ಇದೆ. ಎರಡೂ ವಿಧದ ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆಯು ಜೀವಕ್ಕೆ ಅಪಾಯಕಾರಿ ಆಗಿದೆ. ಈ ರೋಗದ ಅಪಾಯಕಾರಿ ಅಂಶಗಳನ್ನು ನಿಯಂತ್ರಣ ಮಾಡುವುದು ಮುಖ್ಯ.

  ಈ ಅಂಶಗಳಲ್ಲಿ ಬೊಜ್ಜು, ಆರೋಗ್ಯ ಸ್ಥಿತಿ, ಅನಾರೋಗ್ಯಕರ ಜೀವನಶೈಲಿ, ಅನಾರೋಗ್ಯಕರ ಜೀವನಶೈಲಿ ಸೇರಿವೆ. ಇತ್ತೀಚಿನ ಸಂಶೋಧನೆ ನಿಮ್ಮ ನಿದ್ರೆಯ ಅಭ್ಯಾಸವು ನೀವು ಹೆಚ್ಚಿನ ಅಪಾಯದಲ್ಲಿದ್ದೀರಾ ಎಂದು ನಿರ್ಧರಿಸುತ್ತದೆ ಎಂದು ತೋರಿಸಿದೆ.

  ಇದನ್ನೂ ಓದಿ: ಕೂದಲ ಸೌಂದರ್ಯಕ್ಕೆ ಶಾಂಪೂ ಬೇಕಾ? ಬೇಡ್ವಾ? ಈ ಬಗ್ಗೆ ತಜ್ಞರ ಸಲಹೆ ಓದಿ

  ನಿದ್ರೆಯ ಅಭ್ಯಾಸಗಳು ಮತ್ತು ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆ ಅಪಾಯ

  ನಿದ್ರೆಯು ಜೀವನದ ಅವಿಭಾಜ್ಯ ಅಂಗ. ಇದು ಆರೋಗ್ಯಕರ ಮತ್ತು ಪೂರ್ಣ ಶಕ್ತಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. NCBI ನಲ್ಲಿ ಪ್ರಕಟವಾದ ವರದಿಯ ಪ್ರಕಾರ ನಿಮ್ಮ ನಿದ್ರೆಯು ಚೆನ್ನಾಗಿಲ್ಲದಿದ್ದರೆ ಕೊಬ್ಬಿನ ಯಕೃತ್ತಿನ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ.

  ಕೆಲವು ಮಲಗುವ ಅಭ್ಯಾಸಗಳು ನಮ್ಮ ದೇಹಗಳು ಮತ್ತು ಕೆಲವು ಅಂಗಗಳ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ಹೇಳಿದೆ.

  ಅಧ್ಯಯನ ಹೇಳೋದೇನು?

  ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಯಕೃತ್ತಿನಲ್ಲಿ ಕೊಬ್ಬಿನ ಹೆಚ್ಚುವರಿ ಸಂಗ್ರಹ ಮಾಡುತ್ತದೆ. ಇದು ಕಳಪೆ ಆಹಾರ ಮತ್ತು ಜಡ ಜೀವನಶೈಲಿಯಿಂದ ಉಂಟಾಗುತ್ತದೆ. ರಾತ್ರಿಯಲ್ಲಿ ಕಳಪೆ ನಿದ್ರೆ ಮತ್ತು ದೀರ್ಘ ಹಗಲಿನ ನಿದ್ರೆ ಮಾಡುವ ಜನರಲ್ಲಿ

  ಕೊಬ್ಬಿನ ಯಕೃತ್ತಿನ ಕಾಯಿಲೆ ಅಭಿವೃದ್ಧಿಪಡಿಸುವ ಅಪಾಯ ಹೆಚ್ಚು ಎಂದು ಸಂಶೋಧಕರು ಹೇಳುತ್ತಾರೆ. ನಿದ್ರೆಯ ಗುಣಮಟ್ಟದಲ್ಲಿ ಸಾಧಾರಣ ಸುಧಾರಣೆ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಅಪಾಯವನ್ನು 29 ಪ್ರತಿಶತ ಕಡಿಮೆ ಮಾಡುತ್ತದೆ.

  ನಿದ್ರೆಯ ಗುಣಮಟ್ಟ ಹೇಗೆ ಸುಧಾರಿಸುವುದು?

  ಮಲಗುವ ಸಮಯದ ದಿನಚರಿ ರೆಡಿ ಮಾಡಿ ಹಾಗೂ ಪ್ರತಿದಿನ ಅದನ್ನು ಫಾಲೋ ಮಾಡಿ

  ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ

  ನಿಕೋಟಿನ್, ಕೆಫೀನ್ ಮತ್ತು ಆಲ್ಕೋಹಾಲ್ ಅಧಿಕ ಸೇವನೆ ತಪ್ಪಿಸಿ

  ಮಲಗುವ ಮೊದಲು ಶಾಂತ ಮತ್ತು ವಿಶ್ರಾಂತಿ ವಾತಾವರಣ ರಚಿಸಿ

  ಹಗಲಿನಲ್ಲಿ ನಿದ್ರೆ ಮಾಡಬೇಡಿ

  ಯಾವ ವಸ್ತುಗಳು ಕೊಬ್ಬಿನ ಯಕೃತ್ತಿನ ಅಪಾಯ ಹೆಚ್ಚಿಸುತ್ತವೆ?

  ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು, ಟೈಪ್ 2 ಡಯಾಬಿಟಿಸ್ ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ಅಥವಾ ಕೆಲವು ಪ್ರಿಸ್ಕ್ರಿಪ್ಷನ್ ಔಷಧಿ ಸೇವನೆ ಕೊಬ್ಬಿನ ಯಕೃತ್ತಿನ ಕಾಯಿಲೆಯ ಸಾಧ್ಯತೆ ಹೆಚ್ಚಿಸುತ್ತದೆ.

  ತಜ್ಞರ ಪ್ರಕಾರ, ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಂಶ ಹೊಂದಿರುವವರು, ಅಧಿಕ ರಕ್ತದೊತ್ತಡ, ಹೆಪಟೈಟಿಸ್ ಸಿ ಯಂತಹ ಸೋಂಕು ಅಥವಾ ಕೆಲವು ವಿಷಗಳಿಗೆ ಒಡ್ಡಿಕೊಂಡವರು ಸಹ ಕೊಬ್ಬಿನ ಯಕೃತ್ತಿನ ಕಾಯಿಲೆಯ ಅಪಾಯ ಹೊಂದಿರುತ್ತಾರೆ.

  ಕೊಬ್ಬಿನ ಪಿತ್ತಜನಕಾಂಗಕ್ಕೆ ಚಿಕಿತ್ಸೆ ನೀಡಲು ಸಾಧ್ಯವೇ?

  ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಔಷಧವಿಲ್ಲ. ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿ. ಯಾವ ರೀತಿಯ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹೊಂದಿದ್ದೀರಿ ಎಂಬ ಆಧಾರದ ಮೇಲೆ, ಅವರು ನಿಮ್ಮನ್ನು ಆಲ್ಕೋಹಾಲ್ ಮತ್ತು ಧೂಮಪಾನ ತ್ಯಜಿಸಲು ವೈದ್ಯರು ಹೇಳ್ತಾರೆ.

  ತೂಕ ಇಳಿಕೆ, ಆರೋಗ್ಯಕರ ಆಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆ ಮಾಡುವುದು ಸಹ ಮುಖ್ಯ. ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ನಿಯಂತ್ರಿಸಲು ನೀವು ಈಗಾಗಲೇ ಕೆಲವು ಔಷಧಿ ತಿನ್ನುತ್ತಿದ್ದರೆ ಜಾಗ್ರತೆ ವಹಿಸಿ.

  ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಾಗಬೇಕು ಅಂದ್ರೆ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಹೊಕ್ಕಳಿಗೆ ಹಾಕಿ

  ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ತಡೆಯುವುದು ಹೇಗೆ?

  ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಚಿಕಿತ್ಸೆ ನೀಡಲು ಮತ್ತು ತಡೆಗಟ್ಟಲು ಕೊಬ್ಬು ಸ್ನೇಹಿ ಆಹಾರ ಸೇವಿಸಿ. ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟ ನಿಯಂತ್ರಿಸಲು, ಆರೋಗ್ಯಕರ ತೂಕ ಕಾಪಾಡಿ.
  Published by:renukadariyannavar
  First published: