• Home
 • »
 • News
 • »
 • lifestyle
 • »
 • Skin Care Tips: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ

Skin Care Tips: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರಿಶಿನದಲ್ಲಿರುವ ಕರ್ಕ್ಯುಮಿನಾಯ್ಡ್ಸ್ ಎಂಬ ಸಕ್ರಿಯ ಸಂಯುಕ್ತಗಳು ಚರ್ಮದ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಗುಣಲಕ್ಷಣಳಿದ್ದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹೈಪರ್ ಪಿಗ್ಮೆಂಟೇಶನ್ ಮತ್ತು ಕಲೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಮುಂದೆ ಓದಿ ...
 • Share this:

  ಬದಲಾಗುತ್ತಿರುವ ಋತುಮಾನದಲ್ಲಿ ತ್ವಚೆಯ ಕಾಳಜಿ (Skin Care) ವಹಿಸುವುದು ಒಂದು ರೀತಿಯ ಸವಾಲಿನ ಸಂಗತಿ ಆಗಿದೆ. ಚಳಿಗಾಲದಲ್ಲಿ (Winter) ತ್ವಚೆಯ ಸಮಸ್ಯೆಗಳು (Problems) ಹೆಚ್ಚು ಕಾಣಿಸಿಕೊಳ್ಳುತ್ತವೆ. ತ್ವಚೆ ಒಣಗುವುದು (Dry Skin), ಬಿರಿಯುವುದು, ತೇವಾಂಶ ಕಳೆದುಕೊಳ್ಳುವುದು, ತ್ವಚೆಯಲ್ಲಿ ಗುಳ್ಳೆ, ಟ್ಯಾನ್ ಹಾಗೂ ಕಪ್ಪಾಗುವಿಕೆ ಸಮಸ್ಯೆ ಕಾಡುತ್ತದೆ. ಈ ಜಂಜಾಟದ ಬದುಕಿನಲ್ಲಿ ಮನೆ, ಕಛೇರಿ ಕೆಲಸ ನಿಭಾಯಿಸುವಾಗ ತ್ವಚೆಯ ಆರೈಕೆ ಮಾಡುವುದು ಕಷ್ಟಕರವಾಗಿದೆ. ಇದಿಷ್ಟೇ ಅಲ್ಲ, ಪರಿಸರದಲ್ಲಿ ಹೆಚ್ಚುತ್ತಿರುವ ಕೊಳೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳೂ ಸಹ ತ್ವಚೆಯ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತಿವೆ. ಹಾಗಾಗಿ ನೀವು ನಿಮ್ಮ ಚರ್ಮದ ಆರೋಗ್ಯಕ್ಕಾಗಿ ಪರಿಣಾಮಕಾರಿ ಮನೆ ಮದ್ದು ಟ್ರೈ ಮಾಡಬಹುದು.


  ಅರಿಶಿನದ ಫೇಸ್ ಪ್ಯಾಕ್ ಹೇಗೆ ಮಾಡುವುದು?


  ಚರ್ಮದ ಆರೋಗ್ಯಕ್ಕಾಗಿ ಪರಿಣಾಮಕಾರಿ ಮನೆ ಮದ್ದು ಹುಡುಕಾಡುತ್ತಿದ್ದರೆ ಅದಕ್ಕೆ ಉತ್ತಮ ಉತ್ತರ ಅರಿಶಿನ ಆಗಿದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವು ನಿಮ್ಮ ಚರ್ಮಕ್ಕೆ ಉಲ್ಲಾಸಕರ ಹೊಳಪು ತರುತ್ತದೆ. ಇದು ಮೊಡವೆ ಮತ್ತು ತ್ವಚೆಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಹಾಗಾಗಿ ಅರಿಶಿನದ ಉತ್ತಮ ಪ್ರಯೋಜನಗಳಿಗಾಗಿ ಅರಿಶಿನದ ಫೇಸ್ ಪ್ಯಾಕ್ ಹೇಗೆ ಮಾಡುವುದು ಎನ್ನುವುದು ಇಲ್ಲಿದೆ.


  ಅರಿಶಿನವು ಚರ್ಮಕ್ಕೆ ಹೇಗೆ ಪ್ರಯೋಜನಕಾರಿ ?


  ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಹೊಂದಿದೆ


  ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಬ್ಯಾಕ್ಟೀರಿಯಾ ಮತ್ತು ಇತರ ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ಚರ್ಮಕ್ಕೆ ಹಾನಿ ಮಾಡದಂತೆ ತಡೆಯುತ್ತದೆ. ಇದು ಮೊಡವೆ, ಇತರೆ ಚರ್ಮದ ಸೋಂಕು ನಿವಾರಿಸುತ್ತದೆ.


  ಇದನ್ನೂ ಓದಿ: ಚಳಿಗಾಲ ಆರಂಭವಾಗ್ತಾ ಇದೆ, ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ


  ಚರ್ಮದ ಉರಿಯೂತ ತಡೆಯುತ್ತದೆ


  ಅರಿಶಿನದಲ್ಲಿರುವ ಕರ್ಕ್ಯುಮಿನಾಯ್ಡ್ಸ್ ಎಂಬ ಸಕ್ರಿಯ ಸಂಯುಕ್ತಗಳು ಚರ್ಮದ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಗುಣಲಕ್ಷಣಳಿದ್ದು, ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.


  ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ


  ಅರಿಶಿನವು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹೈಪರ್ ಪಿಗ್ಮೆಂಟೇಶನ್ ಮತ್ತು ಕಲೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಅದೇ ವೇಳೆ ಅರಿಶಿನವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಅದು ಚರ್ಮದ ಕ್ಯಾನ್ಸರ ಸಾಧ್ಯತೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.


  ಅರಿಶಿನವು ವಯಸ್ಸಾಗುವಿಕೆ ತಡೆಯುತ್ತದೆ


  ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಅರಿಶಿನವು ಅಕಾಲಿಕ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ಸಮಸ್ಯೆ ನಿಯಂತ್ರಿಸುತ್ತದೆ.


  ಒಣ ಚರ್ಮ ತೇವಗೊಳಿಸಿ


  ಚರ್ಮವು ಮಂದ ಮತ್ತು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಿ. ಅರಿಶಿನದ ಬಳಕೆಯು ನಿಮ್ಮ ಚರ್ಮಕ್ಕೆ ನೈಸರ್ಗಿಕವಾಗಿ ತೇವಾಂಶ ನೀಡುತ್ತದೆ ಮತ್ತು ಅದನ್ನು ಮೃದು ಮತ್ತು ನಿರ್ಮಲವಾಗಿಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ.


  ಕಾಂತಿಯುತ ತ್ವಚೆಗಾಗಿ ಮಾಡಿ ಅರಿಶಿನ ಫೇಸ್ ಪ್ಯಾಕ್


  ಅರಿಶಿನ, ಜೇನುತುಪ್ಪ ಮತ್ತು ಹಾಲು


  ಬೇಕಾದಷ್ಟು ಅರಿಶಿನ ತೆಗೆದುಕೊಳ್ಳಿ. ಜೇನುತುಪ್ಪ ಮತ್ತು ಹಾಲು ತೆಗೆದುಕೊಳ್ಳಿ. ಜೇನುತುಪ್ಪವು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಸಾಕಷ್ಟು ತೇವಾಂಶ ಒದಗಿಸುತ್ತದೆ. ಪಿಗ್ಮೆಂಟೇಶನ್ ಮತ್ತು ಟ್ಯಾನಿಂಗ್ ಕಡಿಮೆ ಮಾಡುತ್ತದೆ. ಚರ್ಮಕ್ಕೆ ಆರೋಗ್ಯಕರ ಹೊಳಪು ನೀಡುತ್ತದೆ.


  ಅರಿಶಿನ, ಜೇನುತುಪ್ಪ ಮತ್ತು ಹಾಲನ್ನು ಚೆನ್ನಾಗಿ ಮಿಶ್ರಣ ಮಾಡಿ. ಮುಖ ಮತ್ತು ಕುತ್ತಿಗೆಯ ಸುತ್ತಲೂ ಚೆನ್ನಾಗಿ ಹಚ್ಚಿ. 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.


  ಅರಿಶಿನ, ನಿಂಬೆ ಮತ್ತು ಓಟ್ಸ್ ಫೇಸ್ ಪ್ಯಾಕ್


  ಈ ಸಂಯೋಜನೆ ಚರ್ಮಕ್ಕೆ ಹಲವು ಲಾಭ ತಂದು ಕೊಡುತ್ತದೆ. ಓಟ್ಸ್‌ನಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಚರ್ಮಕ್ಕೆ ಸಾಕಷ್ಟು ತೇವಾಂಶ ಒದಗಿಸುತ್ತದೆ. ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಚರ್ಮವು ಸುಂದರ, ನಿರ್ಮಲ ಮತ್ತು ಕಾಂತಿಯುತವಾಗಿ ಹೊಳೆಯುವಂತೆ ಕಾಣುತ್ತದೆ.


  ಇದನ್ನೂ ಓದಿ: ಸಾಯಂಕಾಲ ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣವಂತೆ, ಇಲ್ಲಿದೆ ಮನೆಮದ್ದುಗಳು


  ಒಂದು ಬಟ್ಟಲಿನಲ್ಲಿ ಒಂದು ಚಮಚ ಓಟ್ ಮೀಲ್, ಅರ್ಧ ಚಮಚ ಅರಿಶಿನ ಪುಡಿ, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚರ್ಮ ಮತ್ತು ಕುತ್ತಿಗೆಗೆ ಹಚ್ಚಿ. ಇಪ್ಪತ್ತು ನಿಮಿಷ ಬಿಡಿ. ನಂತರ ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ನಂತರ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.

  Published by:renukadariyannavar
  First published: