Dry Skin: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು, ನಿಮ್ಮದು ಒಣ ತ್ವಚೆಯಲ್ಲ ಹೊಳೆಯುವ ತ್ವಚೆಯಾಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾರ ತ್ವಚೆ ಹೆಚ್ಚು ಶುಷ್ಕವಾಗಿರುತ್ತದೆಯೋ ಅವರು ತ್ವಚೆಯಲ್ಲಿ ತುರಿಕೆ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಾರೆ. ಜೊತೆಗೆ ಚರ್ಮವು ಬಿರಿಯುತ್ತದೆ. ಒಣ ಚರ್ಮ ಸಮಸ್ಯೆ ದೇಹದ ಯಾವುದೇ ಭಾಗದಲ್ಲಿ ಬೇಕಾದ್ರೂ ಉಂಟಾಗಬಹುದು. ಹಾಗಿದ್ರೆ ಇದಕ್ಕೆ ಪರಿಹಾರವೇನು?

  • Share this:

    ತುಂಬಾ ಜನರು (People) ಒಣ ಚರ್ಮ ಸಮಸ್ಯೆ (Dry Skin Problem) ಹೊಂದಿದ್ದಾರೆ. ಯಾವ ಉತ್ಪನ್ನ (Product) ಬಳಕೆ ಮಾಡಿದ್ರೂ ಒಣ ಚರ್ಮ ಸಮಸ್ಯೆ ಕಾಡುತ್ತಲೇ ಇರುತ್ತದೆ. ಜೊತೆ ಚಳಿಗಾಲದಲ್ಲಿ ಮಾತ್ರವಲ್ಲದೇ ಎಲ್ಲಾ ಕಾಲದಲ್ಲಿಯೂ ಒಣ ತ್ವಚೆ ಸಮಸ್ಯೆ ಎದುರಿಸುತ್ತಾರೆ. ಕೆಲವರು ತುಂಬಾ ಎಣ್ಣೆಯುಕ್ತ ಚರ್ಮ ಹೊಂದಿದ್ದರೆ, ಇನ್ನು ಕೆಲವರು ಒಣ ತ್ವಚೆ ಹೊಂದಿರುತ್ತಾರೆ. ಇವೆರಡೂ ಕೆಟಗರಿಯವರು ಪ್ರತ್ಯೇಕವಾಗಿ ಚರ್ಮದ ಆರೈಕೆ (Skin Care) ಮಾಡಿಕೊಳ್ಳಬೇಕಾಗುತ್ತದೆ. ಯಾರ ತ್ವಚೆ ಹೆಚ್ಚು ಶುಷ್ಕವಾಗಿರುತ್ತದೆಯೋ ಅವರು ತ್ವಚೆಯಲ್ಲಿ ತುರಿಕೆ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಾರೆ. ಜೊತೆಗೆ ಚರ್ಮವು ಬಿರಿಯುತ್ತದೆ. ಒಣ ಚರ್ಮ ಸಮಸ್ಯೆ ದೇಹದ ಯಾವುದೇ ಭಾಗದಲ್ಲಿ ಬೇಕಾದ್ರೂ ಉಂಟಾಗಬಹುದು.


    ಒಣ ತ್ವಚೆ ಸಮಸ್ಯೆ


    ಮತ್ತು ಇದು ಯಾವುದೇ ವಯಸ್ಸಿನ ವ್ಯಕ್ತಿಯ ಮೇಲೆ ಬೇಕಾದ್ರೂ ಪರಿಣಾಮ ಬೀರಬಹುದು. ಒಣ ಚರ್ಮವು ಯಾವುದೇ ಕಾರಣದಿಂದ ಬೇಕಾದ್ರೂ ಉಂಟಾಗಬಹುದು. ಇದು ಶೀತ ಅಥವಾ ಶುಷ್ಕ ವಾತಾವರಣದಿಂದಲೂ ಆಗಿರುತ್ತದೆ.


    ಬಲವಾದ ಸೂರ್ಯನ ಬೆಳಕು, ರಾಸಾಯನಿಕ ಯುಕ್ತ ಸೋಪು, ಅತಿಯಾದ ಸ್ನಾನ ಮತ್ತು ಅತಿಯಾದ ಬಿಸಿ ನೀರಿನ ಬಳಕೆಯಿಂದ ಬೇಕಾದ್ರೂ ಉಂಟಾಗಬಹುದು. ಇದನ್ನು ಡ್ರೈ ಸ್ಕಿನ್ ಕ್ಸೆರೋಸಿಸ್ ಅಥವಾ ಕ್ಸೆರೋಡರ್ಮಾ ಎಂದೂ ಕರೆಯುತ್ತಾರೆ.




    ಒಣ ಚರ್ಮ ಸಮಸ್ಯೆ ತೊಡೆದು ಹಾಕಲು ಚರ್ಮವನ್ನು ಸರಿಯಾಗಿ ತೇವಗೊಳಿಸಬೇಕು. ಪ್ರಖರ ಸೂರ್ಯನ ಬೆಳಕಿನಲ್ಲಿ ಹೋಗುವುದನ್ನು ತಪ್ಪಿಸಿ. ಚರ್ಮಕ್ಕೆ ಉತ್ತಮವಾದ ಉತ್ಪನ್ನಗಳನ್ನು ಬಳಸಿ.


    ಡ್ರೈ ಸ್ಕಿನ್ ಸಮಸ್ಯೆಗೆ ಕಾರಣಗಳು


    ಅತಿಯಾದ ಸ್ನಾನ ಹಾಗೂ ಸ್ಕ್ರಬ್ಬಿಂಗ್


    ದೀರ್ಘಕಾಲ ಬಿಸಿ ನೀರಿನ ಸ್ನಾನ ಮಾಡುವುದು, ಸ್ನಾನ ಮಾಡುವಾಗ ಚರ್ಮವನ್ನು ಅತಿಯಾಗಿ ಸ್ಕ್ರಬ್ ಮಾಡುವುದು. ಚರ್ಮವನ್ನು ಒಣಗಿಸಬಹುದು. ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡುವುದರಿಂದ ಚರ್ಮದ ನೈಸರ್ಗಿಕ ತೈಲಗಳು ಅಥವಾ ತೇವಾಂಶ ಕಡಿಮೆಯಾಗುತ್ತದೆ.


    ಕಠಿಣ ಸೋಪ್ ಅಥವಾ ಡಿಟರ್ಜೆಂಟ್ ಬಳಕೆ


    ಅನೇಕ ಸಾಬೂನು, ಮಾರ್ಜಕ ಮತ್ತು ಶ್ಯಾಂಪೂಗಳು ಚರ್ಮದಿಂದ ತೇವಾಂಶ ತೆಗೆದು ಹಾಕುತ್ತವೆ. ಗಟ್ಟಿಯಾದ ಸಾಬೂನುಗಳ ಬಳಕೆ ಚರ್ಮ ಒಣಗಲು ಕಾರಣವಾಗಿದೆ. ತ್ವಚೆಗೆ ಅನುಗುಣವಾಗಿ ಸೋಪನ್ನು ಆಯ್ಕೆ ಮಾಡಿ.


    ಶಾಖ ಕೊಡುವುದು


    ತಾಪ, ಮರದ ಸುಡುವ ಸ್ಟೌವ್‌, ಸ್ಪೇಸ್ ಹೀಟರ್‌ ಮತ್ತು ಬೆಂಕಿಗೂಡಿಗೆ ಮೈ ಒಡ್ಡುವುದರಿಂದ ತೇವಾಂಶ ಕಡಿಮೆಯಾಗುತ್ತದೆ. ಚರ್ಮವು ಒಣಗುತ್ತದೆ.


    ಸಾಂದರ್ಭಿಕ ಚಿತ್ರ


    ಚರ್ಮದ ಸಮಸ್ಯೆ


    ಅಟೊಪಿಕ್ ಡರ್ಮಟೈಟಿಸ್ ಅಂದ್ರೆ ಎಸ್ಜಿಮಾ ಹಾಗೂ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಯಿದ್ದಾಗ ಒಣ ಚರ್ಮ ಸಮಸ್ಯೆ ಉಂಟಾಗುತ್ತದೆ. ಡರ್ಮಟೈಟಿಸ್ ಚರ್ಮದ ಸಮಸ್ಯೆ. ಇದು ಚರ್ಮದ ಕೆಲವು ಭಾಗದಲ್ಲಿ ಉರಿ, ದದ್ದು, ಒಣ ಚರ್ಮ, ಕೆಂಪು ಗುರುತು, ತುರಿಕೆ, ಊತ ಸಮಸ್ಯೆ ಉಂಟು ಮಾಡುತ್ತದೆ.


    ಕ್ಯಾನ್ಸರ್ ಚಿಕಿತ್ಸೆ ನಂತರ ಡಯಾಲಿಸಿಸ್, ಔಷಧಿ ಸೇವನೆ ಚರ್ಮವು ಶುಷ್ಕ ಮತ್ತು ದಪ್ಪವಾಗಿಸುತ್ತದೆ. ಔಷಧಿಗಳು ಒಣ ಚರ್ಮಕ್ಕೆ ಕಾರಣವಾಗಬಹುದು.


    ಚರ್ಮದ ಶುಷ್ಕತೆ ಹೋಗಲಾಡಿಸುವುದು ಹೇಗೆ?


    ತೇವಗೊಳಿಸುವುದು


    ಚರ್ಮದಲ್ಲಿ ತೇವಾಂಶ ಉಳಿಸಿ. ಮಾಯಿಶ್ಚರೈಸರ್ ಬಳಕೆ ಮಾಡಿ. ಬಿಸಿಲಿಗೆ ಹೋಗುವ ಮೊದಲು ಮಾಯಿಶ್ಚರೈಸರ್ ಬಳಸಿ. ಕೈಗಳಿಗೆ ಅನ್ವಯಿಸಿ.


    ಸೌಮ್ಯವಾದ ಕ್ಲೆನ್ಸರ್, ಅಲರ್ಜಿ-ಮುಕ್ತ ಸೋಪ್ ಬಳಸಿ


    ಗಟ್ಟಿಯಾದ ಸೋಪ್ ಬಳಕೆ ನಿಲ್ಲಿಸಿ. ಕ್ಲೆನ್ಸಿಂಗ್ ಕ್ರೀಮ್ ಅಥವಾ ಶವರ್ ಜೆಲ್ ಅನ್ನು ಪ್ರಯತ್ನಿಸಿ. ಆಲ್ಕೋಹಾಲ್ ಅಥವಾ ಅಲರ್ಜಿ ಉಂಟು ಮಾಡುವ ಪದಾರ್ಥ ಸೇವನೆ ತಪ್ಪಿಸಿ.


    ಸುಗಂಧ-ಮುಕ್ತ ಆರ್ಧ್ರಕ ಸೋಪ್ ಬಳಸಿ. ಆಗಾಗ್ಗೆ ನಿಮ್ಮ ಕೈಗಳನ್ನು ತೊಳೆಯುತ್ತಿದ್ದರೆ, ಹೈಪೋಲಾರ್ಜನಿಕ್ ಸೋಪ್ ಬಳಸಿ. ಕೈಗಳನ್ನು ತೊಳೆದ ನಂತರ ಒಣಗಿಸಿ ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಅನ್ವಯಿಸಿ.


    ಇದನ್ನೂ ಓದಿ: ಹೊಟ್ಟೆಯಲ್ಲಿ ಇಲಿ ಓಡಾಡಿದಂತೆ ಅನಿಸುತ್ತಾ? ಹಾಗಾದ್ರೆ ಈ ಹೆಲ್ದೀ ಡ್ರಿಂಕ್ ಕುಡಿಯಿರಿ


    ಚರ್ಮವನ್ನು ಹೈಡ್ರೀಕರಿಸಿ


    ತ್ವಚೆಯನ್ನು ಸಾಧ್ಯವಾದಷ್ಟು ಹೈಡ್ರೀಕರಿಸಿ. ನೀರು ಕುಡಿಯಿರಿ. ಪ್ರತಿದಿನ ಕೆಫೀನ್ ಇಲ್ಲದ ಪಾನೀಯ ಸೇವಿಸಿ.

    Published by:renukadariyannavar
    First published: