ಇತ್ತೀಚಿನ ದಿನಗಳಲ್ಲಿ ತುಂಬಾ ಜನರು (People) ಅನೇಕ ರೀತಿಯ ಕಾಯಿಲೆಗಳಿಗೆ (Disease) ತುತ್ತಾಗುತ್ತಿದ್ದಾರೆ. ಮೂವತ್ತರ ಹರೆಯದಲ್ಲೇ ಜನರು ಮೊಣಕಾಲು ನೋವು (Knee Pain), ಜಂಟಿ ನೋವು, ಪಾದ ನೋವಿನಂತಹ ಸಮಸ್ಯೆಯಿಂದ (Problem) ಬಳಲುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ನಿಮ್ಮ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿ (Bad Lifestyle) ಆಗಿದೆ. ಹಾಗಾಗಿ ನೀವು ನಿಮ್ಮ ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಿಕೊಳ್ಳಿ. ಅದಾಗ್ಯೂ ಮೊಣಕಾಲು ನೋವಿಗೆ ಅಥವಾ ಜಂಟಿ ನೋವಿಗೆ ಹಲವು ಕಾರಣಗಳು ಇರಬಹುದು. ಕೆಲವೊಮ್ಮೆ ಮೊಣಕಾಲಿನಲ್ಲಿ ನೋವು ಇರಲ್ಲ. ಆದರೆ ಮೂಳೆಯಿಂದ ಕರ್ ಕರ್, ಕಿರ್ ಕಿರ್ ಎಂಬ ಶಬ್ದ ಬರುತ್ತದೆ.
ಮೂಳೆಯಿಂದ ಬರುವ ಕರ್ ಕರ್ ಎಂಬ ಶಬ್ದವನ್ನು ನಿರ್ಲಕ್ಷ್ಯ ಮಾಡಬೇಡಿ
ಇದನ್ನು ತುಂಬಾ ಜನರು ನಿರ್ಲಕ್ಷ್ಯ ಮಾಡ್ತಾರೆ. ಆದರೆ ಮೂಳೆಯಲ್ಲಿ ಬರುವ ಈ ಶಬ್ಧವು ನಿಮಗೆ ಎಚ್ಚರಿಕೆಯ ಕರೆಗಂಟೆ ಎಂಬುದನ್ನು ನೆನಪಿಡಿ. ದುರ್ಬಲ ಮೊಣಕಾಲು ಸಮಸ್ಯೆ ಇಂದಿನ ದಿನಗಳಲ್ಲಿ ಬಹುತೇಕರಿಗೆ ಇರುವ ಸಾಮಾನ್ಯ ಸಮಸ್ಯೆ ಆಗಿದೆ.
ವಯಸ್ಸು ಹೆಚ್ಚಾದಂತೆ ಮೊಣಕಾಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆ ಯುವ ಜನಾಂಗದವರನ್ನೂ ಬಾಧಿಸುತ್ತಿದೆ. ಸ್ನಾಯುಗಳ ದೌರ್ಬಲ್ಯ, ಮೊಣಕಾಲು ಸೋಂಕು ಮತ್ತು ಗಾಯವು ಅನೇಕ ಬಾರಿ ಮಂಡಿಗಳು ದುರ್ಬಲವಾಗುವಂತೆ ಮಾಡುತ್ತವೆ.
ಅನೇಕ ಬಾರಿ ಮೂಳೆಗಳ ಸಮಸ್ಯೆ ಇದ್ದಾಗ ಯಾವುದೇ ರೀತಿಯ ನೋವು ಉಂಟಾಗುವುದಿಲ್ಲ. ಜೊತೆಗೆ ಮೊಣಕಾಲಿನ ಯಾವುದೇ ಊತ ಸಹ ಇರುವುದಿಲ್ಲ.
ಆದರೆ ನೀವು ವಾಕಿಂಗ್ ಮಾಡುವಾಗ, ನಡೆಯುವಾಗ, ಕುಳಿತುಕೊಳ್ಳುವಾಗ ನಿಮ್ಮ ಮೊಣಕಾಲಿನಿಂದ ಆಗಾಗ್ಗೆ ಶಬ್ದ ಬರುತ್ತದೆ. ಕರ್ ಕರ್ ಎಂಬ ಶಬ್ಧ ಕೇಳಿಸುತ್ತದೆ. ಈ ರೀತಿಯ ಶಬ್ದ ಯಾಕೆ ಉಂಟಾಗುತ್ತದೆ ಎಂದು ನೋಡೋಣ.
ಮೊಣಕಾಲಿನಿಂದ ಬರುವ ಶಬ್ದ
ಮೊಣಕಾಲಿನಿಂದ ಉಂಟಾಗುವ ನೋವನ್ನು ವೈದ್ಯಕೀಯ ಭಾಷೆಯಲ್ಲಿ ಪಂಪ್, ಸ್ನ್ಯಾಪಿಂಗ್, ಕ್ಯಾಚಿಂಗ್, ಕ್ಲಿಕ್, ಕ್ರ್ಯಾಕಿಂಗ್, ಗ್ರೈಂಡಿಂಗ್ ಮತ್ತು ಗ್ರುಂಟಿಂಗ್ ಎಂದು ಕರೆಯುತ್ತಾರೆ. ಈ ಸಮಸ್ಯೆ ಇರುವವರು ಬಲದಿಂದ ಮೊಣಕಾಲು ತಿರುಗಿಸಿದರೆ
ಅಥವಾ ಬಾಗಿಸಿದರೆ ಚಂದ್ರಾಕೃತಿ ಹೋಗುತ್ತದೆ. ಆಗ ನೋವು ಮತ್ತು ಶಬ್ಧ ಬರುತ್ತದೆ. ಇದು ಕೆಲವೊಮ್ಮೆ ನೋವು ಉಂಟು ಮಾಡುತ್ತದೆ. ಹಾಗೂ ಊತ ಉಂಟು ಮಾಡುತ್ತದೆ.
ಮೊಣಕಾಲಿನಲ್ಲಿ ಬರುವ ಈ ಶಬ್ಧದಿಂದ ಆಗುವ ಅನಾನುಕೂಲಗಳು ಯಾವುವು?
ಮೊಣಕಾಲಿನಲ್ಲಿ ಬರುವ ಈ ಶಬ್ದವು ಮೊಣಕಾಲು ಸಂಪೂರ್ಣವಾಗಿ ಚಲಿಸಲು ಸಾಧ್ಯವಾಗದಂತೆ ಮಾಡುತ್ತದೆ. ಲ್ಯಾಟರಲ್ ಮೇಲಾಧಾರದ ಅಸ್ಥಿರಜ್ಜು ಉಳುಕುತ್ತದೆ. ಆಗ ಮೊಣಕಾಲಿನ ಶಬ್ದ, ನೋವು, ಬಿಗಿತ ಮತ್ತು ದೌರ್ಬಲ್ಯ ಉಂಟಾಗುತ್ತದೆ. ಹಿಂಭಾಗದ ಕ್ರೂಸಿಯೇಟ್ ಲಿಗಮೆಂಟ್ (ಪಿಸಿಎಲ್) ಗಾಯವು ನೋವು ಮತ್ತು ಊತ ಹಾಗೂ ಪಾಪಿಂಗ್ ಧ್ವನಿ ಉಂಟು ಮಾಡುತ್ತದೆ.
ಮೊಣಕಾಲಿನಲ್ಲಿ ಶಬ್ಧ ಬರಲು ಕಾರಣಗಳು ಯಾವುವು?
ಬೊಜ್ಜು ಕೂಡ ಮೊಣಕಾಲು ನೋವು ಉಂಟು ಮಾಡುತ್ತದೆ. ಭಾರೀ ವ್ಯಾಯಾಮಗಳು ಸಹ ಒತ್ತಡ ಉಂಟು ಮಾಡುತ್ತವೆ. ಹಾಗಾಗಿ ವ್ಯಾಯಾಮದ ಮೊದಲು ಮತ್ತು ನಂತರ ಸ್ಟ್ರೆಚಿಂಗ್ ವ್ಯಾಯಾಮ ಮಾಡಿ.
ಜಿಮ್‌ನಲ್ಲಿ ಕಠಿಣ ಪರಿಶ್ರಮದ ಜೊತೆಗೆ, ನಿಮ್ಮ ದೇಹವು ಚೇತರಿಸಿಕೊಳ್ಳಲು ಲಘು ವ್ಯಾಯಾಮ ಮಾಡಿ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಮೊಣಕಾಲುಗಳಲ್ಲಿ ಕ್ರ್ಯಾಕಿಂಗ್ ಶಬ್ದ ಬಂದಾಗ ಏನು ಮಾಡಬೇಕು?
ನೋವು ಮತ್ತು ಊತವಿದ್ದರೆ, ಮೊಣಕಾಲು ಸುಲಭವಾಗಿ ಚಲಿಸಲು ಸಾಧ್ಯವಾಗದಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ಸಕಾಲದಲ್ಲಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ