• Home
  • »
  • News
  • »
  • lifestyle
  • »
  • Foot Care: ಬಿರುಕು ಬಿಟ್ಟ ಪಾದಗಳ ಸಮಸ್ಯೆ ಹೋಗಲಾಡಿಸಲು ಇಲ್ಲಿದೆ ಕೆಲವು ಸುಲಭ ಟಿಪ್ಸ್!

Foot Care: ಬಿರುಕು ಬಿಟ್ಟ ಪಾದಗಳ ಸಮಸ್ಯೆ ಹೋಗಲಾಡಿಸಲು ಇಲ್ಲಿದೆ ಕೆಲವು ಸುಲಭ ಟಿಪ್ಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾಸ್ತವದಲ್ಲಿ ಹಾರ್ಮೋನುಗಳ ಬದಲಾವಣೆ ಮತ್ತು ವಿಟಮಿನ್ ಕೊರತೆಯಿಂದಾಗಿ ಬಿರುಕು ಹಿಮ್ಮಡಿಯ ಸಮಸ್ಯೆ ಪ್ರಾರಂಭವಾಗುತ್ತದೆ. ಕೆಲವು ಜನರು ಪ್ರತಿ ಋತುವಿನಲ್ಲಿ ಈ ಸಮಸ್ಯೆ ಎದುರಿಸುತ್ತಾರೆ. ಇದು ದೇಹದಲ್ಲಿ ಕೆಲವು ಜೀವಸತ್ವಗಳ ಕೊರತೆಯಿದೆ ಎಂದು ಸೂಚಿಸುತ್ತದೆ. ಚರ್ಮದ ತೇವಾಂಶದ ಕೊರತೆಯಿದ್ದರೆ ಅದು ಒಣಗುತ್ತದೆ.

ಮುಂದೆ ಓದಿ ...
  • Share this:

    ಬದಲಾಗುತ್ತಿರುವ ಋತುವಿನಲ್ಲಿ (Changing Season) ಜನರು (People) ಮುಖದ (Face) ವಿಶೇಷ ಕಾಳಜಿ (Care) ತೆಗೆದುಕೊಳ್ಳುತ್ತಾರೆ. ಆದರೆ ತಮ್ಮ ಪಾದಗಳನ್ನು (Foot) ಮರೆತು ಬಿಡುತ್ತಾರೆ. ಆದರೆ ಪಾದಗಳ ಕಡೆ ನಿರ್ಲಕ್ಷ್ಯ ವಹಿಸುವುದು ಅವುಗಳನ್ನು ಅಸಹ್ಯ ಆಗಿಸುತ್ತದೆ. ಆದರೆ ಅನೇಕ ಸಮಸ್ಯೆ ಹೆಚ್ಚುವಂತೆ ಮಾಡುತ್ತದೆ. ಇವುಗಳಲ್ಲಿ ಹಿಮ್ಮಡಿಗಳು ಒಡೆಯುವುದು, ಇದು ನಂತರ ತುಂಬಾ ನೋವು ಉಂಟು ಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚು ಹಿಮ್ಮಡಿ ಬಿರುಕು ಸಮಸ್ಯೆ ಇರುತ್ತದೆ. ಹಾಗಾಗಿ ನೀವು ಸಮಯಕ್ಕೆ ಸರಿಯಾಗಿ ಕೆಲವು ಮನೆಮ್ದು ಫಾಲೋ ಮಾಡುವ ಮೂಲಕ ಹಿಮ್ಮಡಿಗಳ ಆರೋಗ್ಯ ಕಾಪಾಡಿ. ಈ ವಿಧಾನಗಳು ಹಿಮ್ಮಡಿಗಳ ಆರೋಗ್ಯ ಕಾಪಾಡುತ್ತದೆ.


    ಕ್ರ್ಯಾಕ್ ಹೀಲ್ಸ್ ಗೆ ಕಾರಣಗಳು ಯಾವವು?


    ವಾಸ್ತವದಲ್ಲಿ ಹಾರ್ಮೋನುಗಳ ಬದಲಾವಣೆ ಮತ್ತು ವಿಟಮಿನ್ ಕೊರತೆಯಿಂದಾಗಿ ಬಿರುಕು ಹಿಮ್ಮಡಿಯ ಸಮಸ್ಯೆ ಪ್ರಾರಂಭವಾಗುತ್ತದೆ. ಕೆಲವು ಜನರು ಪ್ರತಿ ಋತುವಿನಲ್ಲಿ ಈ ಸಮಸ್ಯೆ ಎದುರಿಸುತ್ತಾರೆ. ಇದು ದೇಹದಲ್ಲಿ ಕೆಲವು ಜೀವಸತ್ವಗಳ ಕೊರತೆಯಿದೆ ಎಂದು ಸೂಚಿಸುತ್ತದೆ.


    ಚರ್ಮದ ತೇವಾಂಶದ ಕೊರತೆಯಿದ್ದರೆ ಅದು ಒಣಗುತ್ತದೆ. ಶುಷ್ಕತೆ ಸಮಸ್ಯೆಯಿಂದ ಕೆಲವೊಮ್ಮೆ ರಕ್ತವು ಕಣಕಾಲುಗಳಿಂದ ಹೊರ ಬರುತ್ತದೆ. ಅದು ವಿಟಮಿನ್ ಬಿ 3, ಇ ಮತ್ತು ಸಿ ಕೊರತೆ ಹೊಂದಿರುವ ಸಾಧ್ಯತೆ ತಿಳಿಸುತ್ತದೆ. ಅವುಗಳ ಕೊರತೆಯಿಂದ ದೇಹವು ಶುಷ್ಕ ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಬಿರುಕು ಬಿಟ್ಟ ಪಾದಗಳ ಸಮಸ್ಯೆ ಹೋಗಲಾಡಿಸುವುದು ಹೇಗೆ?


    ನಿಮ್ಮ ಪಾದಗಳು ಸುಂದರವಾಗಿ ಮತ್ತು ಮೃದುವಾಗಿರಲು ಅವುಗಳನ್ನು ಆರ್ಧ್ರಕಗೊಳಿಸಿ. ವಾರಕ್ಕೊಮ್ಮೆ ನಿಮ್ಮ ಪಾದಗಳನ್ನು 25 ನಿಮಿಷ ಉಗುರು ಬೆಚ್ಚಗಿನ ನೀರಿನಲ್ಲಿ ಇರಿಸಿ. ಮತ್ತು ಅದರ ನಂತರ ಸ್ಕ್ರಬ್ ಮಾಡಿ ಮತ್ತು ಮಾಯಿಶ್ಚರೈಸ್ ಮಾಡಿ.


    ಸ್ನಾನ ಮಾಡುವಾಗ ಕಣಕಾಲುಗಳನ್ನು ಸ್ಕ್ರಬ್ಬರ್‌ನಿಂದ ಉಜ್ಜಿ. ಅವುಗಳಲ್ಲಿ ಸಂಗ್ರಹವಾಗಿರುವ ಎಲ್ಲಾ ಕೊಳೆ ಸುಲಭವಾಗಿ ತೆಗೆಯಬಹುದು. ರಾತ್ರಿ ಮಲಗುವ ಮುನ್ನ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಪಾದಗಳನ್ನು ಸ್ವಚ್ಛಗೊಳಿಸಿ. ಸಾಕ್ಸ್ಗಳನ್ನು ಧರಿಸಿ.


    ಹಿಮ್ಮಡಿ ಬಿರುಕು ಸರಿಪಡಿಸಲು ಮನೆ ಮದ್ದು ಪ್ರಯತ್ನಿಸಿ


    ವಿಟಮಿನ್-ಇ ತೈಲ ಮತ್ತು ಕ್ಯಾಪ್ಸುಲ್


    ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ನಲ್ಲಿ ಪ್ರಕಟವಾದ ಪಬ್ ಮೆಡ್ ಸಂಶೋಧನೆ ಪ್ರಕಾರ, ವಿಟಮಿನ್ ಇ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಗಾಯವನ್ನು ಗುಣಪಡಿಸುವ ಗುಣ ಹೊಂದಿದೆ. ಇದು ಸೌಮ್ಯವಾದ ಗಾಯ ಗುಣಪಡಿಸಲು ಸಹಾಯ ಮಾಡುತ್ತದೆ.


    ಇದು ಉರಿಯೂತ ಮತ್ತು ಜಲಸಂಚಯನ ಗುಣಲಕ್ಷಣ ಹೊಂದಿದೆ. ಇದು ಚರ್ಮದ ಉರಿಯೂತ ಕಡಿಮೆ ಮಾಡುತ್ತದೆ. ಮತ್ತು ಒಣ ಚರ್ಮ ಹೈಡ್ರೇಟ್ ಮಾಡುತ್ತದೆ. ಮೂರರಿಂದ ನಾಲ್ಕು ವಿಟಮಿನ್-ಇ ಕ್ಯಾಪ್ಸೂಲ್ ಗಳ ಎಣ್ಣೆ ತೆಗೆದು ಒಡೆದ ಕಣಕಾಲುಗಳ ಮೇಲೆ ಹಚ್ಚಿ. ಸ್ವಲ್ಪ ಹೊತ್ತು ಮಸಾಜ್ ಮಾಡಿ.


    ಅಕ್ಕಿ ಹಿಟ್ಟು


    ಪಬ್‌ಮೆಡ್‌ ನ ಸಂಶೋಧನೆ ಪ್ರಕಾರ, ಅಕ್ಕಿ ಹಿಟ್ಟು ಚರ್ಮದ ಬಿರುಕು ಗುಣಪಡಿಸುತ್ತದೆ. ಅದೇ ವೇಳೆ ನಿಂಬೆಯ ಬಳಕೆ ಚರ್ಮ ಮೃದುಗೊಳಿಸುತ್ತದೆ. ಜೇನುತುಪ್ಪವು ಚರ್ಮ ಆರ್ಧ್ರಕಗೊಳಿಸುವ ಮತ್ತು ಗುಣಪಡಿಸುವಲ್ಲಿ ಪ್ರಯೋಜನಕಾರಿ ಆಗಿದೆ.


    ಬಳಸುವುದು ಹೇಗೆ


    ಒಂದು ಚಮಚ ಅಕ್ಕಿ ಹಿಟ್ಟಿನಲ್ಲಿ ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸ ಮಿಶ್ರಣ ಮಾಡಿ. 15 ನಿಮಿಷ ನಿಮ್ಮ ಪಾದಗಳನ್ನು ನೀರಿನಲ್ಲಿ ಇರಿಸಿ. ನಂತರ ಈ ಮಿಶ್ರಣದಿಂದ ಸ್ಕ್ರಬ್ ಮಾಡಿ. ಈ ಪಾಕವಿಧಾನ ವಾರಕ್ಕೆ 2 ಬಾರಿ ಮಾಡಿ.


    ಎಳ್ಳಿನ ಎಣ್ಣೆ


    ಎಳ್ಳಿನ ಎಣ್ಣೆ ಅನೇಕ ಪೋಷಕಾಂಶ ಹೇರಳವಾಗಿ ಹೊಂದಿದೆ. ಇದು ಗಾಯಗಳನ್ನು ಗುಣಪಡಿಸುವ ಗುಣ ಹೊಂದಿದೆ. ಅನೇಕ ಬಾರಿ ಬಿರುಕು ಬಿಟ್ಟ ಸ್ಥಿತಿಯಲ್ಲಿ ಸೋಂಕಿನ ಸಮಸ್ಯೆ ಇರುತ್ತದೆ. ಎಳ್ಳೆಣ್ಣೆ ಬಳಕೆ ಪ್ರಯೋಜನಕಾರಿ ಆಗಿದೆ.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಬಳಸುವುದು ಹೇಗೆ


    ಒಂದು ಚಮಚ ಎಳ್ಳಿನ ಎಣ್ಣೆಯನ್ನು ಬೆಚ್ಚಗಾಗಿಸಿ. ಹಿಮ್ಮಡಿ ಮೇಲೆ ಲಘುವಾಗಿ ಮಸಾಜ್ ಮಾಡಿ. ಪ್ರತಿ ರಾತ್ರಿ ಮಲಗುವಾಗ ಹೀಗೆ ಮಾಡಿದರೆ ಒಡೆದ ಹಿಮ್ಮಡಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

    Published by:renukadariyannavar
    First published: