• Home
  • »
  • News
  • »
  • lifestyle
  • »
  • Constipation Yoga: ಮಲಬದ್ಧತೆ ಸಮಸ್ಯೆ ಹೊಡೆದೋಡಿಸಲು ಈ ಯೋಗಾಸನ ಮಾಡಿ!

Constipation Yoga: ಮಲಬದ್ಧತೆ ಸಮಸ್ಯೆ ಹೊಡೆದೋಡಿಸಲು ಈ ಯೋಗಾಸನ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚು ಕಾಡುತ್ತದೆ. ಹಾಗಾದ್ರೆ ಮಲಬದ್ಧತೆ ಸಮಸ್ಯೆ ತೊಡೆದು ಹಾಕುವುದು ಹೇಗೆ ಅಂತಾ ನೀವು ಯೋಚಿಸಿರಬಹುದು. ಮಲಬದ್ಧತೆ ಸಮಸ್ಯೆಗೆ ಕೇವಲ ಔಷಧ ಸೇವನೆ ಪರಿಣಾಮಕಾರಿಯಲ್ಲ. ಈ ಸಮಸ್ಯೆಯನ್ನು ಯೋಗ ಮಾಡುವ ಮೂಲಕ ಗುಣಪಡಿಸಿಕೊಳ್ಳಬಹುದು.

  • Share this:

    ಇತ್ತೀಚಿನ ದಿನಗಳಲ್ಲಿ ಜನರು (People) ಹೆಚ್ಚಾಗಿ ಹೊಟ್ಟೆ ಸಂಬಂಧಿ ಅಸ್ವಸ್ಥತೆಗಳಿಂದ (Stomach Related Unhealth) ಬಳಲುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಆಸಿಡಿಟಿ, ಗ್ಯಾಸ್ಟ್ರಿಕ್ (Gastric), ಮೂಲವ್ಯಾಧಿ ಮತ್ತು ಮಲಬದ್ಧತೆ (Constipation), ಪಿತ್ತಕೋಶ ಸಮಸ್ಯೆ, ಕರುಳು ಚಲನೆಯಲ್ಲಿ ತೊಂದರೆ ಹೀಗೆ ಹಲವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಅಂತಾರೆ ತಜ್ಞರು. ಜಡ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯು ಮಲಬದ್ಧತೆ ಸಮಸ್ಯೆ ಉಂಟು ಮಾಡುತ್ತದೆ. ಹೆಚ್ಚಿನ ಜನರು ಮಲಗೋದು ತಡ, ಬೆಳಗ್ಗೆ ಏಳೋದು ತಡ, ಜಂಕ್ ಫುಡ್ ತಿನ್ನೋದು, ದೈಹಿಕ ಚಟುವಟಿಕೆ ಕೊರತೆ, ಯೋಗ, ವ್ಯಾಯಾಮ ಮಾಡದೇ ಇರುವುದು ಹಲವು ಸಮಸ್ಯೆಗೆ ಕಾರಣವಾಗ್ತಿದೆ.


    ಮಲಬದ್ಧತೆ ಆರೋಗ್ಯ ಸಮಸ್ಯೆ ನಿವಾರಣೆಗೆ ಕೆಲವು ಸಲಹೆ


    ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಮಲಬದ್ಧತೆ ಸಮಸ್ಯೆ ಬಗ್ಗೆ ವೈದ್ಯರ ಬಳಿ ಚಿಕಿತ್ಸೆಗೆ ಬರ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚು ಕಾಡುತ್ತದೆ. ಹಾಗಾದ್ರೆ ಮಲಬದ್ಧತೆ ಸಮಸ್ಯೆ ತೊಡೆದು ಹಾಕುವುದು ಹೇಗೆ? ಅಂತಾ ನೀವು ಯೋಚಿಸಿರಬಹುದು.


    ಮಲಬದ್ಧತೆ ಸಮಸ್ಯೆಗೆ ಕೇವಲ ಔಷಧ ಸೇವನೆ ಪರಿಣಾಮಕಾರಿಯಲ್ಲ. ಈ ಸಮಸ್ಯೆಯನ್ನು ಮನೆಮದ್ದುಗಳ ಮೂಲಕ, ನೈಸರ್ಗಿಕವಾಗಿ ಗುಣಪಡಿಸಿಕೊಳ್ಳುವುದು ರೋಗಿಯ ಕೈಯಲ್ಲೇ ಇದೆ. ಇದಕ್ಕಾಗಿ ನೀವು ಯೋಗ ಮಾಡಿ. ಬೆಳಗ್ಗೆ ಬೇಗ ಏಳುವುದು, ಬೇಗ ಮಲಗುವ ಅಭ್ಯಾಸ ಮಾಡಿ.




    ಜೊತೆಗೆ ಆಹಾರ ಪದ್ಧತಿಯಲ್ಲಿ ಮುಖ್ಯವಾಗಿ ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಜೀವನಶೈಲಿಯಲ್ಲಿ ಸುಧಾರಣೆ ತನ್ನಿರಿ. ಅದಾಗ್ಯೂ ಕೆಲವು ಯೋಗಾಸನ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆಯನ್ನು ತೊಡೆದು ಹಾಕಬಹುದು. ನಿಯಮಿತವಾಗಿ ಈ ಯೋಗಾಸನ ಮಾಡಿ.


    ಮಲಬದ್ಧತೆ ಸಮಸ್ಯೆ ನಿವಾರಣೆಗೆ ಯೋಗ ಮಾಡಿ


    ಮಲಬದ್ಧತೆ ಸಮಸ್ಯೆ ತೊಡೆದು ಹಾಕಲು ಯೋಗ ಮಾಡಿ ಅಂತಾರೆ ತಜ್ಞರು. ಅದಾಗ್ಯೂ ಮಲಬದ್ಧತೆ ತೊಡೆದು ಹಾಕೋಕೆ ಯೋಗಾ ಮಾಡ್ಬೇಕಾ ಅಂತಾ ಕೇಳ್ಬೇಡಿ. ಯೋಗ ಮಾಡಿದವನು ನಿರೋಗಿ ಎಂಬ ಮಾತಿದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಓಡಿಸೋಕೆ ನಿಯಮಿತವಾಗಿ ಯೋಗ ಮಾಡಿ, ಪರಿಹಾರ ಕಂಡುಕೊಳ್ಳಿ.


    ಕೆಲವು ಯೋಗಾಸನ ಭಂಗಿಗಳು ಮಲಬದ್ಧತೆ ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿ ಮತ್ತು ಬಲವಾಗಿ ಮಾಡಲು ಸಹಾಯ ಮಾಡುತ್ತದೆ. ಮತ್ತು ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆ ತೊಡೆದು ಹಾಕುತ್ತದೆ.


    ಯೋಗ ಪ್ರೋಟೋಕಾಲ್ ಬೋಧಕ ತರಬೇತುದಾರ ಗೌರವ್ ಚೌಹಾನ್ ಅವರು, ಮಲಬದ್ಧತೆ ನಿವಾರಣೆಗೆ ಕೆಲವು ಯೋಗಾಸನಗಳ ಬಗ್ಗೆ ಹೇಳಿದ್ದಾರೆ. ನಿಯಮಿತವಾಗಿ ಈ ಯೋಗಾಸನ ಮಾಡಿದ್ರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಹಾಗೂ ಮಲ ಅಥವಾ ಅನಿಲ ಹೊರ ಹೋಗಲು ಸಹಕಾರಿ ಆಗುತ್ತದೆ. ಆಗ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.


    ಸಾಂದರ್ಭಿಕ ಚಿತ್ರ


    ವಜ್ರಾಸನ ಮಾಡಿ


    ವಜ್ರಾಸನ ಮಾಡಿದ್ರೆ ಜೀರ್ಣಾಂಗ ವ್ಯವಸ್ಥೆಯು ಚೆನ್ನಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸಿದ್ರೆ ಕಾಲು ಮತ್ತು ತೊಡೆಗಳಿಗೆ ರಕ್ತದ ಹರಿವು ಚೆನ್ನಾಗಿ ಆಗುತ್ತದೆ. ಕಿಬ್ಬೊಟ್ಟೆಯ ಪ್ರದೇಶ ಹಾಗೂ ಕರುಳಿನ ಚಲನೆ ಸುಧಾರಿಸುತ್ತದೆ. ಆಗ ಮಲಬದ್ಧತೆ ನಿವಾರಣೆಯಾಗುತ್ತದೆ.


    ಉಷ್ಟ್ರಾಸನ ಮಾಡಿ


    ಇದು ಯೋಗ ಭಂಗಿ ಒತ್ತಡ ನಿವಾರಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ತೊಡೆಯ ಪ್ರದೇಶದಿಂದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಮತ್ತು ಸ್ನಾಯು ಬಲಪಡಿಸುತ್ತದೆ. ಕಾಲ್ಬೆರಳುಗಳ ನೋವು ಮತ್ತು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ನಿವಾರಿಸುತ್ತದೆ.


    ಇದನ್ನೂ ಓದಿ: ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುತ್ತೆ ಈ ಅದ್ಭುತ ಹಣ್ಣು..!


    ಪವನಮುಕ್ತಾಸನ ಮಾಡಿ


    ಮಲಬದ್ಧತೆ ಸಮಸ್ಯೆ ನಿವಾರಿಸಲು ಕರುಳನ್ನು ಉತ್ತೇಜಿಸುವ ಕರುಳಿನ ಚಲನೆಗೆ ಇದು ಪರಿಣಾಮಕಾರಿ ಯೋಗ ಭಂಗಿ ಆಗಿದೆ. ಪ್ರತಿದಿನ ಇದನ್ನು ಅಭ್ಯಾಸ ಮಾಡಿದ್ರೆ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗುತ್ತದೆ.

    Published by:renukadariyannavar
    First published: