ಚಳಿಗಾಲ (Winter) ಬಂತು ಎಂದರೆ ಅದರ ಹಿಂದೆ ಆರೋಗ್ಯ ಸಮಸ್ಯೆಗಳು (Health Problem) ಸಹ ಬರುತ್ತದೆ. ಶೀತ, ಕೆಮ್ಮು, ಜ್ವರ ಹೀಗೆ ಒಂದರ ನಂತರ ಒಂದು ಬೆನ್ನು ಬೀಳುತ್ತವೆ. ಅದರಲ್ಲೂ ಶೀತವಾದಾಗ (Cold) ಮಾತ್ರ ಮೂಗು ಕಟ್ಟುವುದು (Stuffy Nose) ದೊಡ್ಡ ಸಮಸ್ಯೆ ಎನ್ನಬಹುದು. ಇದು ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರನ್ನೂ ಕಾಡುತ್ತದೆ. ಈ ಸಮಸ್ಯೆ ಹೆಚ್ಚಾಗಿ ರಾತ್ರಿ ಮಲಗಲು ಬಿಡುವುದಿಲ್ಲ, ಮೂಗು ಕಟ್ಟಿ ಉಸಿರಾಡಲು ಸಹ ಕಷ್ಟವಾಗುತ್ತದೆ. ಈ ರೀತಿ ಚಿಕ್ಕಮಕ್ಕಳಿಗೆ ಆದರೆ ಬಹಳ ಕಷ್ಟವಾಗುತ್ತದೆ. ಉಸಿರಾಟದ ತೊಂದರೆ ಮಾತ್ರವಲ್ಲದೇ, ತಲೆನೋವು, ಮೂಗು ಸೋರುವುದು ಹೀಗೆ ಇತರ ಸಮಸ್ಯೆಗಳು ಸಹ ಕಾಡುತ್ತದೆ. ಇದರಿಂದ ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಮೂಗಿನೊಳಗೆ ಲೋಳೆಯು ಸಂಗ್ರಹವಾದಾಗ ಮೂಗು ಕಟ್ಟುತ್ತದೆ. ಕೆಲವು ಅಲರ್ಜಿಗಳು, ಜ್ವರ, ಸೈನಸ್ ಕಾರಣದಿಂದ ಸಹ ಉಂಟಾಗುತ್ತದೆ. ಈ ಸಮಸ್ಯೆಗೆ ಕೆಲ ಪರಿಹಾರಗಳು ಸಹ ಇದೆ. ಆದರೆ ಇಲ್ಲೊಬ್ಬ ವೈದ್ಯರು ಸಾಮಾಜಿಕ ಜಾಲಾತಾಣದಲ್ಲಿ (Social Media) ಟ್ರಿಕ್ ಒಂದನ್ನು ತೋರಿಸಿದ್ದು, ಇದು ಕಟ್ಟಿರುವ ಮೂಗನ್ನು ಸರಿ ಮಾಡುತ್ತದೆ.
ನಾವು ಮೂಗು ಕಟ್ಟಿದಾಗ ಉಸಿರನ್ನು ಎಳೆಯಲು ಪ್ರಯತ್ನ ಮಾಡುತ್ತೇವೆ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಅದರ ಬದಲು ನೀವು ಈ ಸುಲಭ ಟ್ರಿಕ್ಸ್ ಬಳಕೆ ಮಾಡಬಹುದು. ನೀವು ಮಾಡಬೇಕಿರುವುದು ಇಷ್ಟೇ, ಯಾವಾಗ ನಿಮಗೆ ಮೂಗು ಕಟ್ಟಿದ ಅನುಭವ ಆಗುತ್ತದೆಯೋ, ಆಗ ನಿಮ್ಮ ಒಂದು ಕೈನ 2 ಬೆರಳುಗಳನ್ನು ಮೂಗಿನ ಮೇಲೆ ಎರಡು ಬದಿ ಹಿಡಿದುಕೊಳ್ಳಿ.
ಹೆಬ್ಬೆರಳು ಹಾಗೂ ತೋರು ಬೆರಳನ್ನು ಆ ಕಡೆ , ಈ ಕಡೆ ಇಟ್ಟು ಪ್ರೆಸ್ ಮಾಡಬೇಕು. ಈ ರೀತಿ ಪ್ರೆಸ್ ಮಾಡುವಾಗ, ಇನ್ನೊಂದು ಕೈನ ತೋರು ಬೆರಳನ್ನು ಬಳಸಿ ಮೂಗಿನ ಮಧ್ಯೆ, ಅಂದರೆ ಹೊಳ್ಳೆಗಳ ಮಧ್ಯೆ ಇರುವ ಜಾಗದಲ್ಲಿ ಪ್ರೆಸ್ ಮಾಡಬೇಕು. ಈ ರೀತಿ ಮಾಡುವುದರಿಂದ ಕಟ್ಟಿದ ಮೂಗಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಈ ರೀತಿ ನೀವು ಸುಮಾರು 60 ಸೆಕೆಂಡ್ ಮಾಡಬೇಕು ಎಂದು ಸಬಾ ಆ್ಯಂಟೋನಿ ಎನ್ನುವ ತಜ್ಞ ತಿಳಿಸಿದ್ದಾರೆ. ಈ ಸರಳ ಹಾಗೂ ಪರಿಣಾಮಕಾರಿ ಟ್ರಿಕ್ ಹೆಸರು ಸಂವೇದನಾ ನ್ಯೂರಾನ್ ಎಂದು. ಅಫೆರೆಂಟ್ ನ್ಯೂರಾನ್ಗಳು ಹೊರಗಿನ ಪ್ರಪಂಚದಿಂದ ಮೆದುಳಿಗೆ ಮಾಹಿತಿಯನ್ನು ನೀಡುವ ನರಗಳಾಗಿವೆ.
ಇದನ್ನೂ ಓದಿ: ಬಿಡುವಿಲ್ಲದ ಕೆಲಸಕ್ಕೆ ಪುಟ್ಟ ಬ್ರೇಕ್ ಹಾಕಿ, ಕೆಮ್ಮಣ್ಣುಗುಂಡಿ ಎಂಬ ಏಕಾಂತ ಬೆಟ್ಟಕ್ಕೆ ಭೇಟಿ ಕೊಡಿ!
ಈ ವಿಡಿಯೋ ನೋಡಿ
View this post on Instagram
ಎಸೆನ್ಶಿಯಲ್ ಆಯಿಲ್ ಪರಿಮಳವನ್ನು ತೆಗೆದುಕೊಳ್ಳಿ
ಸುಮಾರು 10-20 ನಿಮಿಷಗಳ ಕಾಲ ನೀಲಗಿರಿ ತೈಲ ಮತ್ತು ಬೆಚ್ಚಗಿನ ನೀರಿನ ಮಿಶ್ರಣದ ಪರಿಮಳವನ್ನು ಉಸಿರಾಡುವ ಮೂಲಕ ಕಟ್ಟಿದ ಮೂಗಿನ ಸಮಸ್ಯೆಗೆ ಪರಿಹಾರ ಪಡೆಯಬಹುದು. ನೀಲಗಿರಿ ಎಣ್ಣೆ ಮಾತ್ರ ಅಲ್ಲ ಇದಕ್ಕೆ ಪುದೀನಾ ಎಣ್ಣೆ ಸಹ ಬಳಕೆ ಮಾಡಬಹುದು.
ಹೈಡ್ರೇಟೆಡ್ ಆಗಿರಿ:
ಹೆಚ್ಚು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಮೂಗು ಕಟ್ಟಿದ ಸಮಯದಲ್ಲಿ ಬಹುತೇಕ ಎಲ್ಲಾ ದ್ರವಗಳು ನಿಮಗೆ ಸುಲಭವಾಗಿ ಹೊರಬರಲು ಸಹಾಯ ಮಾಡುತ್ತದೆ. ಅಲ್ಲದೇ, ನಿಮ್ಮ ಮೂಗಿನ ಮಾರ್ಗದಲ್ಲಿ ಮುಚ್ಚಿಹೋಗಿರುವ ಲೋಳೆಯನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸೈನಸ್ ಒತ್ತಡವನ್ನು ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ