ಹೊಸ ವರ್ಷಕ್ಕೆ (New Year) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷದ ಪಾರ್ಟಿಗಾಗಿ (Party) ನೀವು ಸಾಕಷ್ಟು ಪ್ಲಾನ್ ಮಾಡಿರಬಹುದು. ಡ್ರೆಸ್, ಶೂಸ್, ಹೇರ್ ಸ್ಟೈಲ್, ಮೇಕಪ್. ಇಷ್ಟೆಲ್ಲಾ ತಯಾರಿ ನಡೆಸಿ, ಕೊನೆಗೆ ನಿಮ್ಮ ಔಟ್ ಫಿಟ್ ನಲ್ಲಿ ಹೊಂದಾಣಿಕೆಯಾಗದೇ, ಕೊರಗುತ್ತಾ ಕೂರುವ ಸ್ಥಿತಿ ಬರುತ್ತದೆ. ಅದಕ್ಕೆ ಕಾರಣ ಕೆಲವೇ ದಿನಗಳಲ್ಲಿ ಹೆಚ್ಚಿದ ತೂಕ (Weight). ಹೌದು, ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ (Weight Gain) ದೊಡ್ಡ ಸಮಸ್ಯೆಯಾಗಿದೆ. ಇದು ನಿಮ್ಮ ಸೌಂದರ್ಯದ (Beauty) ಜೊತೆಗೆ ನಿಮ್ಮ ವ್ಯಕ್ತಿತ್ವವನ್ನೂ ಕಡಿಮೆ ಮಾಡುತ್ತದೆ. ಈಗಾಗಲೇ ನೀವು ನ್ಯೂ ಇಯರ್ ಪ್ಲಾನ್ ಮಾಡ್ತಿದ್ರೆ ತೂಕದ ಹೆಚ್ಚಳದ ಬಗ್ಗೆಯೂ ಗಮನ ಹರಿಸಿ.
ತ್ವರಿತವಾಗಿ ಬೆಲ್ಲಿ ಫ್ಯಾಟ್ ಕರಗಿಸುವುದು ಹೇಗೆ?
ಕೆಲವೇ ದಿನಗಳಲ್ಲಿ ನೀವು ತೂಕ ಇಳಿಸಬಹುದಾದ ಹಲವು ಟಿಪ್ಸ್ ಗಳಿವೆ. ಅವುಗಳನ್ನು ಫಾಲೋ ಮಾಡಿದ್ರೆ ಬೆಲ್ಲಿ ಫ್ಯಾಟ್ ಕಡಿಮೆ ಮಾಡಬಹುದು. ಹೆಚ್ಚಿನ ತೂಕ ಹೊಂದಿದ್ದರೆ, ಅಧಿಕ ಸ್ಥೂಲಕಾಯ ಸಮಸ್ಯೆ ಕಾಡುತ್ತಿದ್ದರೆ ಮೊದಲು ತೂಕ ಇಳಿಕೆ ಹಾಗೂ ಆರೋಗ್ಯದ ರೆಸ್ಯೂಲ್ಯೂಷನ್ ಹಾಕಿಕೊಳ್ಳಿ.
ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತೊಡೆದು ಹಾಕುವ ನಿರ್ಧಾರ ಮಾಡಿ. ಅದಕ್ಕಾಗಿ ನೀವು ಕೆಲ ಡ್ರಿಂಕ್ ಕುಡಿಯಬಹುದು. ಇದು ತೂಕ ಇಳಿಕೆಗೆ ಸಹಕಾರಿ.
ಬೆಲ್ಲಿ ಫ್ಯಾಟ್ ಬರ್ನರ್ ಡ್ರಿಂಕ್ ಹೀಗಿದೆ
ತೂಕ ನಷ್ಟಕ್ಕೆ ಕೆಲವು ಪಾನೀಯಗಳ ಸೇವನೆ ಸಹಕಾರಿ ಆಗಿದೆ. ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಪಾನೀಯಗಳ ಸೇವನೆ ಪರಿಣಾಮಕಾರಿ ಮಾರ್ಗ ಅಂತಾರೆ ತಜ್ಞರು. ಇದು ನಿಮ್ಮ ಹೊಟ್ಟೆ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.
ಜೊತೆಗೆ ನಿಮ್ಮ ಸೊಂಟದ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ಇರುವ ಈ ಬೀಜಗಳಿಂದ ವೇಟ್ ಲಾಸ್ ಪಾನೀಯ ತಯಾರಿಸಿ ಸೇವನೆ ಮಾಡಿ. ಇದು ನಿಮ್ಮ ತೂಕ ನಷ್ಟಕ್ಕೆ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ.
ಚಿಯಾ ಬೀಜಗಳು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಸೀಡ್ಸ್ ಆಗಿವೆ. ತುಂಬಾ ಜನರು ಚಿಯಾ ಬೀಜಗಳನ್ನು ತೂಕ ಇಳಿಕೆ ಪ್ರಯಾಣದಲ್ಲಿ ದಿನದ ಆಹಾರದಲ್ಲಿ ಸೇರಿಸುತ್ತಾರೆ. ಮಸಾಲೆ ಅಂಗಡಿಗಳಲ್ಲಿ ಚಿಯಾ ಬೀಜಗಳು ಸುಲಭವಾಗಿ ಸಿಗುತ್ತವೆ.
ಚಿಯಾ ಬೀಜದ ವೇಟ್ ಲಾಸ್ ಪಾನೀಯ
ಚಿಯಾ ಬೀಜಗಳ ನೀರನ್ನು ತೂಕ ಇಳಿಕೆಗೆ ಸೇವನೆ ಮಾಡಿ. ಎರಡು ಟೀ ಸ್ಪೂನ್ ಚಿಯಾ ಬೀಜಗಳನ್ನು ಅರ್ಧ ಲೀಟರ್ ನೀರಿಗೆ ಹಾಕಿ ಒಂದು ರಾತ್ರಿಯಿಡೀ ನೆನೆಯಲು ಬಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯಿರಿ. ಇದು ಹೆಚ್ಚು ಪ್ರಯೋಜನ ತಂದು ಕೊಡುತ್ತದೆ.
ಚಿಯಾ ಬೀಜಗಳು ಹೇಗೆ ತೂಕ ಕಡಿಮೆ ಮಾಡುತ್ತವೆ?
ಚಿಯಾ ಬೀಜಗಳು ಹೆಚ್ಚು ಪ್ರೋಟೀನ್ ಮತ್ತು ಫೈಬರ್ ಹೊಂದಿವೆ. ನೀವು ಪ್ರೋಟೀನ್, ಫೈಬರ್ ಸೇವನೆ ಮಾಡಿದಾಗ ಹೊಟ್ಟೆಯು ನಿಧಾನವಾಗಿ ಖಾಲಿ ಆಗುತ್ತದೆ. ಹಾಗೂ ಹಸಿವು ದೀರ್ಘಕಾಲ ನಿಯಂತ್ರಣದಲ್ಲಿ ಉಳಿಯುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಹೊಟ್ಟೆಯ ಕೊಬ್ಬು ಕರಗಿಸಲು ಪರಿಣಾಮಕಾರಿ ಆಯ್ಕೆ
ಕಡಿಮೆ ಕ್ಯಾಲೊರಿ ಸೇವಿಸಿದ್ರೆ ದೇಹವು ಕ್ಯಾಲೋರಿ ಕೊರತೆ ಉಂಟಾಗುತ್ತದೆ. ಇದು ಹೊಟ್ಟೆ ಅಥವಾ ದೇಹದ ಇತರೆ ಭಾಗಗಳಲ್ಲಿ ಸಂಗ್ರಹವಾದ ಬೊಜ್ಜನ್ನು ಸುಡುತ್ತದೆ. ಹಾಗೂ ಶಕ್ತಿ ಉತ್ಪಾದಿಸುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಎಲೆಕೋಸು ತಿಂದ್ರೆ ಕ್ಯಾನ್ಸರ್ ಹತ್ತಿರವೂ ಸುಳಿಯಲ್ಲ
ಆದರೆ ಈ ಸಮಯದಲ್ಲಿ ಕ್ಯಾಲೋರಿ ಜೊತೆ ಪ್ರೋಟೀನ್, ವಿಟಮಿನ್, ಇತರೆ ಖನಿಜ ಪದಾರ್ಥ ಸೇವನೆ ಕಡಿಮೆ ಮಾಡ್ಬೇಡಿ. ಚಿಯಾ ಬೀಜಗಳನ್ನು ಸ್ಮೂಥಿಗಳು, ಸಲಾಡ್, ಮೊಸರು, ಸೂಪ್ ಇತ್ಯಾದಿಗಳಲ್ಲಿಯೂ ಸೇವನೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ