Periods Hacks: ಪಿರಿಯಡ್ಸ್​ ಬೇಗ ಆಗ್ಬೇಕು ಅಂದ್ರೆ ಈ ಆಹಾರಗಳನ್ನು ಟ್ರೈ ಮಾಡಿ ನೋಡಿ

How to Get Periods Fast: ಕೆಲ ಮಹಿಳೆಯರು ಬೇಗ ಮುಟ್ಟಾಗುವಂತೆ ಇಚ್ಛೆಪಟ್ಟರೆ ಇನ್ನೂ ಕೆಲ ಮಹಿಳೆಯರು ಯಾವುದಾದರೂ ವಿಶೇಷ ಉದ್ದೇಶ ಅಥವಾ ರಜಾದಿನಗಳನ್ನು ಕಳೆಯಲು ಯೋಜನೆ ಮಾಡಿಕೊಂಡಾಗ ಬೇಗನೆ ಮುಟ್ಟಾಗುವಂತೆ ಬಯಸುತ್ತಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಟ್ಟುವ ಪ್ರತಿ ಹೆಣ್ಣು  (Women) ಮತ್ತೊಂದು ಜೀವನ ರೂಪಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ. ತನ್ನ ಗರ್ಭದ ಮೂಲಕ ಹೊಸ ಜೀವನವೊಂದು ರೂಪಗೊಂಡು ಭೂಮಿಗೆ ಬರುವವರೆಗಿನ ಸಂಪೂರ್ಣ ಪ್ರಕ್ರಿಯೆ ಹೆಣ್ಣಿಗೆ ಮಾತ್ರ ಮುಡಿಪಾಗಿದೆ. ಈ ಪ್ರಕ್ರಿಯೆಗೆ ಹೆಣ್ಣು ಸಜ್ಜಾಗುವಂತೆ ಆಕೆಯ ಶರೀರದಲ್ಲಿ ನಡೆಯುವ ಬದಲಾವಣೆಯೇ ಋತುಚಕ್ರ ಅಥವಾ ಮುಟ್ಟು (Periods). ಮುಟ್ಟು ಎಂಬುದು ಸ್ವಾಭಾವಿಕವಾದ, ಸಹಜವಾದ ಒಂದು ಶಾರೀರಿಕ ಪ್ರಕ್ರಿಯೆಯಾಗಿದೆ. ಪ್ರತಿ ಹೆಣ್ಣು ಇದನ್ನು ಅನುಭವಿಸುತ್ತಾಳೆ. 

ಹಾಗಾದರೆ, ಮುಟ್ಟು ಎಂದರೆ ನಿಜವಾಗಿಯೂ ಏನಾಗುತ್ತದೆ ಎಂಬ ಸಂದೇಹ ಈಗಲೂ ಹಲವರಲ್ಲಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಒಂದು ಹೆಣ್ಣು ಮಗುವಿಗೆ ಮುಟ್ಟಾಯಿತೆಂದರೆ ಆ ಮಗುವಿನ ಗರ್ಭಾಶಯದಿಂದ ಅವಳ ಯೋನಿಯ ಮೂಲಕ ರಕ್ತ ಬಿಡುಗಡೆಯಾಗುತ್ತದೆ. ಇದನ್ನೆ ಮುಟ್ಟು, ಋತುಚಕ್ರ ಅಥವಾ ಪಿರಿಯಡ್ಸ್ ಎಂದು ಕರೆಯುತ್ತಾರೆ. ಇದು ಊಂದು ಹೆಣ್ಣು ತನ್ನ ಪ್ರೌಢಾವಸ್ಥೆಯಿಂದ ಮುಂದಿನ ಹಂತಕ್ಕೆ ಹೋಗುತ್ತಿದ್ದಾಳೆ, ಹೊಸ ಜೀವನ ತನ್ನಲ್ಲಿ ರೂಪಗೊಳ್ಳುವಿಕೆಗೆ ಸಿದ್ದಳಾಗಿದ್ದಾಳೆ ಎಂಬುದನ್ನು ಸಂಕೇತಿಸುತ್ತದೆ.

ಪಿರಿಯಡ್ಸ್ ಬಗ್ಗೆ ಕಲಿಯಲು ಬಹಳಷ್ಟಿದೆ. ಏಕೆಂದರೆ ಮುಟ್ಟಿನ ಬಗ್ಗೆ ಬಹಳಷ್ಟು ಹುಡುಗಿಯರಿಗೆ ಅವಶ್ಯಕವಾದ ಪ್ರಮಾಣದಷ್ಟು ತಿಳುವಳಿಕೆಯಾಗಲಿ ಅವುಗಳಿಂದುಂಟಾಗುವ ಸಮಸ್ಯೆಗಳ ಬಗ್ಗೆಯಾಗಲಿ ತಿಳಿದಿರುವುದಿಲ್ಲ. ಹಾಗಾಗಿ ಇಂದಿಗೂ ಸಾಕಷ್ಟು ಹೆಣ್ಣು ಮಕ್ಕಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಮುಟ್ಟಿನ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. 

ಇದು ಒಂದೆಡೆಯಾದರೆ ಇನ್ನೊಂದೆಡೆ ಕೆಲವರು ಮುಟ್ಟು ಬೇಗನೆ ಆಗುವಂತೆ ಸಾಕಷ್ಟು ಚಡಪಡಿಸುತ್ತಾರೆ. ಅದಕ್ಕಾಗಿ ವಿಧವಿಧವಾದ ಪ್ರಯತ್ನಗಳನ್ನು ಮಾಡುತ್ತಾರೆ. ಔಷಧಿಗಳ ಸೇವನೆ ಮಾಡುತ್ತಾರೆ. ಆದರೆ, ನಿಮಗೆ ಗೊತ್ತೆ ಮುಟ್ಟು ಬೇಗ ಆಗುವಂತೆ ಮಾಡುವಲ್ಲಿ ನೆರವಾಗುವ ಕೆಲವು ಆಹಾರಗಳಿವೆ ಎಂಬುದು. ಹೌದು, ನಿಮ್ಮಲ್ಲಿ ಸಹಜವಾಗಿ ಮುಟ್ಟಾಗುವಂತೆ ಕೆಲವು ಆಹಾರ/ಪದ್ಧತಿಗಳಿದ್ದು ಅವುಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಅದಕ್ಕೂ ಮುಂಚೆ ಮುಟ್ಟು ಹೇಗೆ ಮತ್ತು ಯಾವಾಗ ಆಗುತ್ತದೆ ಎಂಬುದನ್ನು ಚುಟುಕಾಗಿ ತಿಳಿದುಕೊಳ್ಳೂವುದು ಉತ್ತಮ.  

ಮುಟ್ಟು ಆಗುವುದು ಯಾವಾಗ?

ಸರಾಸರಿಯಾಗಿ ಹೇಳಬೇಕೆಂದರೆ ಹೆಣ್ಣು ತನ್ನ 10 ರಿಂದ 15ನೇ ವಯಸ್ಸಿನ ಮಧ್ಯದಲ್ಲಿ ಯಾವುದೇ ಅವಧಿಯಲ್ಲಿ ಮುಟ್ಟಾಗುವುದು ಸಾಮಾನ್ಯ. ಹಾಗಂತ ಈ ವಯಸ್ಸೇ ಕೊನೆಯ ಮಾನದಂಡ ಅಂತೇನಿಲ್ಲ. ಇದಕ್ಕಿಂತ ಕಡಿಮೆ ವಯಸ್ಸಿನಲ್ಲೂ ಹೆಣ್ಣು ಮುಟ್ಟಾದ ಉದಾಹರಣೆಗಳಿವೆ. 

ಮುಟ್ಟಾಗಲು ಕಾರಣವೇನು?

ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ ಮುಟ್ಟು ಸಂಭವಿಸುತ್ತದೆ. ಹಾರ್ಮೋನುಗಳು ರಾಸಾಯನಿಕ ಸಂದೇಶವಾಹಕಗಳಾಗಿವೆ. ಅಂಡಾಶಯಗಳು ಸ್ತ್ರೀ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಅನ್ನು ಬಿಡುಗಡೆ ಮಾಡುತ್ತವೆ. ಈ ಹಾರ್ಮೋನುಗಳು ಗರ್ಭಾಶಯದ (ಅಥವಾ ಗರ್ಭಾಶಯದ) ಒಳಪದರವನ್ನು ನಿರ್ಮಿಸಲು ಕಾರಣವಾಗುತ್ತವೆ. ಇದಕ್ಕೆ ಫಲವತ್ತಾದ ಮೊಟ್ಟೆಯನ್ನು ಲಗತ್ತಿಸಲು ಮತ್ತು ಅದನ್ನು ಅಭಿವೃದ್ಧಿ ಪ್ರಾರಂಭಿಸಲು ಒಂದು ಲೈನಿಂಗ್ ಅನ್ನು ಸಿದ್ಧಪಡಿಸುತ್ತದೆ. ಮೊಟ್ಟೆ ಇಲ್ಲದಿದ್ದಾಗ ಲೈನಿಂಗ್ ಮುರಿದು ರಕ್ತಸ್ರಾವವಾಗುತ್ತದೆ. ಇದೆ ಮುಟ್ಟು. 

ಮುಟ್ಟು ಹೆಣ್ಣಿಗೆ ಅತ್ಯಂತ ಮಹತ್ವವಾಗಿದ್ದು ಈ ಪ್ರಕ್ರಿಯೆಯು ನಿಯಮಿತವಾಗಿ ಸಂಭವಿಸುತ್ತಿರುತ್ತದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಅಡೆ-ತಡೆಗಳಾದರೆ ಅದನ್ನು ಅನಿಯಮಿತ ಮುಟ್ಟು ಎಂದು ಕರೆಯಲಾಗುತ್ತದೆ ಹಾಗೂ ಅದು ಮುಂದೆ ಹೆಣ್ಣಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಕಾರಣದಿಂದಲೂ ಕೆಲ ಮಹಿಳೆಯರು ಬೇಗ ಮುಟ್ಟಾಗುವಂತೆ ಇಚ್ಛೆಪಟ್ಟರೆ ಇನ್ನೂ ಕೆಲ ಮಹಿಳೆಯರು ಯಾವುದಾದರೂ ವಿಶೇಷ ಉದ್ದೇಶ ಅಥವಾ ರಜಾದಿನಗಳನ್ನು ಕಳೆಯಲು ಯೋಜನೆ ಮಾಡಿಕೊಂಡಾಗ ಬೇಗನೆ ಮುಟ್ಟಾಗುವಂತೆ ಬಯಸುತ್ತಾರೆ. 

ಬೇಗನೆ ಮುಟ್ಟಾಗುವಂತೆ ಮಾಡುವ ಆಹಾರಗಳು

ಬೆಲ್ಲ : ಇದು ಮನೆಯಲ್ಲಿ ಅತ್ಯಂತ ಸುಲಭವಾಗಿ ದೊರೆಯುವ ವಸ್ತು. ಇದು ಮೂಲತಃ ತನ್ನ ಉಷ್ಣ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದು ಶರೀರದಲ್ಲಿ ಉಷ್ಣತೆಯನ್ನು ಹರಡುತ್ತದೆ. ಹಾಗಾಗಿ ಬೆಲ್ಲವು ಚಳಿಗಾಲದಲ್ಲಿ ಆದ್ಯತೆಯ ಸಿಹಿಕಾರಕವಾದ ಖಾದ್ಯವಾಗಿ ಪ್ರಸಿದ್ಧ. ಹಲವು ಅಧ್ಯಯನಗಳ ಪ್ರಕಾರ, ಬೆಲ್ಲದ ನಿಯಮಿತ ಸೇವನೆಯಿಂದ ಅನಿಯಮಿತವಾದ ಪ್ರಿಯಡ್ಸ್ ಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ. ಉಷ್ಣಮಯವಾಗಿರುವುದರಿಂದ ಇದು ಬೇಗನೆ ಋತುಸ್ರಾವ ಉಂಟಾಗುವಂತೆ ಮಾಡಲೂ ಸಹ ಸಹಕರಿಸುತ್ತದೆ ಎನ್ನಲಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೆಲ್ಲವು ಮುಟ್ಟಿನ ಸಂದರ್ಭದಲ್ಲಿ ಸೆಳೆತವನ್ನು ಕಡಿಮೆ ಮಾಡಿಸುತ್ತದೆ ಎನ್ನಲಾಗಿದೆ. 

ವಿಟಮಿನ್ ಸಿ : ನಿಂಬೆ, ಕಿತ್ತಳೆ, ಪಾಲಕ್, ಪಪ್ಪಾಯಾ, ಪೈನಾಪಲ್ ಮುಂತಾದವುಗಳಲ್ಲಿರುವ ವಿಟಮಿನ್ ಮನುಷ್ಯನ ಆರೋಗ್ಯಕ್ಕೆ ಬೇಕಾದ ಒಂದು ಉತ್ತಮ ಪೋಷಕಾಂಶವಾಗಿದೆ. ಪ್ರತಿರೋಧಕ ಶಕ್ತಿಯನ್ನು ಉತ್ತೇಜಿಸುವ ಗುಣ ಹೊಂದಿರುವ ವಿಟಮಿನ್ ಸಿ ಮುಟ್ಟನ್ನು ಸಹ ಬೇಗನೆಯಾಗುವಂತೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಈಸ್ಟ್ರೋಜನ್ ಎಂಬ ಹಾರ್ಮೋನನ್ನು ಪ್ರಚೋದಿಸುವ ಮೂಲಕ ಪಿರಿಯಡ್ಸ್ ಅವಧಿಗೆ ಮುಂಚಿತವೇ ಆಗುವಂತೆ ಮಾಡುತ್ತದೆ ಎನ್ನಲಾಗಿದೆ. 

ಶುಂಠಿ : ಹಸಿ ಶುಂಠಿಯ ನಿಯಮಿತ ಸೇವನೆಯು ಅನಿಯಮಿತವಾದ ಮುಟ್ಟಿನ ಚಕ್ರವನ್ನು ಸರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ  ಎನ್ನಲಾಗಿದೆ, ತಡವಾದ ಮುಟ್ಟಿನ ಅಥವಾ ತುಂಬಾ ಪದೇ ಪದೇ ಬರುವ ಋತುಚಕ್ರ ನಿಮ್ಮನ್ನು ಕಾಡುತ್ತಿದ್ದರೆ ಶುಂಠಿಯ ನಿಯಮಿತ ಸೇವನೆ ಮಾಡಲು ಮರೆಯದಿರಿ. ಪ್ರತಿದಿನ ಬೆಳಿಗ್ಗೆ ಸಾವಯವ ಜೇನುತುಪ್ಪದೊಂದಿಗೆ ಸ್ವಲ್ಪ ಹಸಿ ಶುಂಠಿಯನ್ನು ಬೆರೆಸಿ ಸೇವಿಸಲು ಪ್ರಯತ್ನಿಸಿ. ಇದು ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಶೀಘ್ರದಲ್ಲೇ ರಕ್ತದ ಹರಿವನ್ನು ನಿಯಂತ್ರಿಸುತ್ತದೆ, ಈ ಮೂಲಕ ನಿಮಗೆ ಮುಟ್ಟು ನಿಯಮಿತವಾಗಿ ಬರುವಂತೆ ಮಾಡುತ್ತದೆ.

ಅರಿಶಿಣ : ಅರಿಶಿಣವು ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನ ನೀಡುವ ತತ್ವಗಳನ್ನು ಹೊಂದಿದೆ. 

ಅಲ್ಲದೆ ನಿತ್ಯ ನಾವು ಮನೆಯಲ್ಲಿ ಮಾಡುವ ಯಾವುದಾದರೂ ಒಂದು ಖಾದ್ಯವನ್ನು ಅರಿಶಿಣವಿಲ್ಲದೆ ಮಾಡಲು ಸಾಧ್ಯವೆ ಇಲ್ಲ.  ಹಲ್ಲುಗಳನ್ನು ಬಿಳುಪುಗೊಳಿಸುವುದರಿಂದ ಹಿಡಿದು ನಿಮ್ಮ ಗರ್ಭಾಶಯಕ್ಕೆ ರಕ್ತದ ಹರಿವನ್ನು ಉತ್ತೇಜಿಸುವವರೆಗೆ, ಅರಿಶಿಣವು ಒಂದು ಅದ್ಭುತ ಪರಿಹಾರ ಸೂತ್ರವೇ ಆಗಿದೆ. ನಿಮ್ಮ ಮುಟ್ಟನ್ನು ನೈಸರ್ಗಿಕವಾಗಿ ಆಗಲೆಂದು ನೀವು ಬಯಸಿದರೆ, ಬೆಚ್ಚಗಿನ ಹಾಲು ಮತ್ತು ಜೇನುತುಪ್ಪದೊಂದಿಗೆ ಅರಿಶಿನವನ್ನು ಸೇವಿಸಲು ಪ್ರಯತ್ನಿಸಿ.

ಕಾಫಿ: ಹೆಚ್ಚಿನ ಕೆಫೀನ್, ಕಾಫಿ ಅಂಶವು ಶರೀರದಲ್ಲಿರುವ ಈಸ್ಟ್ರೊಜೆನ್ ಅನ್ನು ಉತ್ತೇಜಿಸುತ್ತದೆ ಮತ್ತು ಪೆಲ್ವಿಕ್ ಪ್ರದೇಶದಲ್ಲಿ ರಕ್ತದ ಹರಿವು ಹೆಚ್ಚಾಗುವಂತೆ ಸಹಕರಿಸುತ್ತದೆ. ಹಾಗಾಗಿ ನಿಮಗೆ ಬೇಗನೆ ಮುಟ್ಟು ಆಗಲು ಇದು ಕಾರಣವಾಗಬಹುದು. ಇದಲ್ಲದೆ, ಕೆಫೀನ್ ಮುಟ್ಟಿನ ಸಮಯದಲ್ಲಿ ಹೆಣ್ಣು ಸಾಮಾನ್ಯವಾಗಿ ಅನುಭವಿಸುವ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಪ್ರಸಿದ್ಧ ಟಿವಿ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಸ್ತ್ರೀರೋಗತಜ್ಞೆಯಾದ ವೈದ್ಯೆಯೊಬ್ಬರು ಹೇಳುತ್ತಾರೆ, “ನೋವು ನಿವಾರಿಸಲು ಮುಟ್ಟಿನ ಸಮಯದಲ್ಲಿ ಶಿಫಾರಸು ಮಾಡಲಾದ ಕೆಲವು ಆಹಾರಗಳಿವೆ. ಕೆಫೀನ್ ಮತ್ತು ಮುಟ್ಟಿನ ಸಮಯದಲ್ಲಿನ ತಲೆನೋವು ನಿವಾರಿಸುವ ಗುಣಲಕ್ಷಣಗಳಿಗಾಗಿ ಪ್ರಸಿದ್ಧವಾಗಿದ್ದು ಕಾಫಿ ಅವುಗಳಲ್ಲಿ ಪ್ರಮುಖವಾಗಿದೆ.

ಬೀಟ್ರೂಟ್ : 

ಕೆಲವು ಹೆಣ್ಣುಮಕ್ಕಳು ಮುಟ್ಟೀನ ಸಮಯದಲ್ಲಿ ಬ್ಲಾಟಿಂಗ್ ಅನುಭವಿಸುತ್ತಾರೆ. ಇದು ಸಾಮಾನ್ಯವಾದ ಸಂಗತಿಯಾಗಿದ್ದರೂ ಇದರಿಂದ ವಿಪರೀತವಾದ ಹೊಟ್ಟೆ ನೋವು ಉಂಟಾಗುತ್ತದೆ ಹಲವರಿಗೆ. ಹಾಗಾಗಿ ಈ ಸಮಯದಲ್ಲಿ ಆ ನೋವಿನಿಂದ ಬೇಗ ಉಪಶಮನ ಪಡೆಯಲು ಬೀಟ್ರೂಟ್ ಉಪಯೋಗಿಸಿ ನೋಡಿ. ಇದರಲ್ಲಿರುವ ಕಬ್ಬಿಣ, ಫೋಲಿಕ್ ಆಮ್ಲ ಮತ್ತು ಕ್ಯಾಲ್ಸಿಯಂ ಮುಟ್ಟಿನ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸಾಕಷ್ಟು ಸಹಾಯ ಮಾಡುತ್ತವೆ ಎನ್ನಲಾಗಿದೆ.  ಬೀಟ್ರೂಟ್ ಒಂದು ಎಮ್ಮೆನಾಗೋಗ್ ಅಂದರೆ ಒಂದು ಪ್ರಕಾರದ ಹರ್ಬ್ ಆಗಿದೆ ಹಾಗೂ ಎಮ್ಮೆನಾಗೋಗ್ ಗಿಡಮೂಲಿಕೆಯ ವೈಶಿಷ್ಟ್ಯವೆಂದರೆ ಇದು ಮುಟ್ಟಿನ ರಕ್ತಸ್ರಾವವನ್ನು ಪ್ರಚೋದಿಸುತ್ತದೆ. 

ಕೇರಂ ಬೀಜಗಳು (ಅಜ್ವೈನ್) : ಇದನ್ನು ಪ್ರಯತ್ನಿಸಿ: ಒಂದು ಟೀಚಮಚ ಅಜ್ವೈನ್ ಅನ್ನು 1 ಚಮಚ ಬೆಲ್ಲವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ಮಿಶ್ರಣವನ್ನು ಸೇವಿಸಿ. ಅಜ್ವೈನ್ ನಿಮ್ಮ ಋತುಚಕ್ರವನ್ನು ಪ್ರೇರೇಪಿಸುತ್ತದೆ. ಹಾಗಾಗಿ ಅವಧಿಗೆ ಮುನ್ನವೇ ನಿಮಗೆ ಮುಟ್ಟು ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಅಲ್ಲದೆ, ಇದು ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಸೆಳೆತದ ನೋವನ್ನು ನಿವಾರಿಸುತ್ತದೆ ಎನ್ನಲಾಗಿದೆ.
Published by:Sandhya M
First published: