ಪ್ರೇಮ ವೈಫಲ್ಯದಿಂದ ಹೊರಬರುವುದು ಹೇಗೆ? ಒಮ್ಮೆ ಈ ಸ್ಟೋರಿ ಓದಿ

ಅನೇಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಉಳಿದುಕೊಂಡಿರುವ ಹಳೇಯ ಫೋಟೊವನ್ನು ಡಿಲೀಟ್​ ಮಾಡುವುದಿಲ್ಲ. ಬ್ರೇಕ್​ಅಪ್​ ಆದ ನಂತರವೂ ಹಳೇಯ ಫೋಟೋವನ್ನು ನೋಡಿ ದುಖಿ:ಸುತ್ತಿರುತ್ತಾರೆ. ಮನಸ್ಸಿಗೆ ನೋವು ನೀಡುವ ಮತ್ತು ಹಳೇಯ ಪ್ರೀತಿಯನ್ನು ನೆನಪಿಸುವ ವಸ್ತುಗಳನ್ನು ದೂರವಿಡಲು ಪ್ರಯತ್ನಿಸಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಪ್ರೀತಿ ಅನ್ನೋದು ನಂಬಿಕೆಯ ಮೇಲೆ ಹುಟ್ಟಿಕೊಳ್ಳುವ ಒಂದು ಸಂಭಂದ. ಪ್ರೀತಿ ಯಾರ ಮೇಲೆ ಯಾವಾಗ  ಹುಟ್ಟಿಕೊಳ್ಳುತ್ತದೆ ಎಂದು ಹೇಳಲು ಅಸಾಧ್ಯ. ಇದ್ದಕ್ಕಿದ್ದಂತೆ ಯಾರೋ ಇಷ್ಟವಾಗಿ ಬಿಡುತ್ತಾರೆ, ಬಹುವಾಗಿ ಆಕರ್ಷಿಸಿ ಬಿಡುತ್ತಾರೆ. ಅವಳೇ ನನ್ನ ಪ್ರಿಯತಮೆ, ಅವನೇ ನನ್ನ ಪ್ರಿಯಕರ ಅನ್ನೊ ಮಟ್ಟಿಗೆ ಆಯ್ಕೆ ಮಾಡಿಕೊಂಡು ಓಡಾಡುತ್ತಿರುತ್ತಾರೆ. ಆಮೇಲೆ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಮನಸ್ಥಿತಿ ಬದಲಾಗಿ ಬ್ರೇಕ್​ ಆಪ್​ ಮಾಡಿಕೊಳ್ಳುತ್ತಾರೆ.

  ಪ್ರೀತಿ ಎಂಬ ಸಂಭಂದ ಅಚಾನಕ್ಕಾಗಿ ಮುರಿದು ಬಿದ್ದರೆ ಆಗುವ ನೋವು ಅಷ್ಟಿಷ್ಟಲ್ಲ. ಆ ಹ್ಯಾಂಗೋವರ್​ನಿಂದ ಹೊರ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಸಾಕಷ್ಟು ಜನರು ಕಳೆದುಕೊಂಡ ಪ್ರೀತಿಯನ್ನು ಮತ್ತೆ  ಪಡೆಯಲು ಹಾತೊರೆಯುತ್ತಾರೆ. ಹಾಗಾಗಿ ಪ್ರೀತಿ ಕಳೆದುಕೊಂಡ ಯುವಕ-ಯುವತಿಯರು ಬ್ರೇಕ್​ ಅಪ್​ ನಂತರ ಕೆಲ ತಪ್ಪುಗಳನ್ನು ಮಾಡದೇ ಇದ್ದರೆ ಕಳೆದುಕೊಂಡಿರುವ ಪ್ರೀತಿಯನ್ನು ಮತ್ತೆ ಪಡೆಯಬಹುದು.

  ಸಾಕಷ್ಟು ಪ್ರೇಮಿಗಳು ಬ್ರೇಕ್​ ಅಪ್​ ಮಾಡಿಕೊಂಡ ನಂತರ ತಮ್ಮ ಕಾಂಟ್ಯಾಕ್ಟ್​ ಲೀಸ್ಟ್​ನಲ್ಲಿರುವ ಹೆಸರನ್ನು ಡಿಲೀಟ್​ ಮಾಡುತ್ತಾರೆ. ಇಂತಹ ನಿರ್ಧಾರದಿಂದ ನಿಮ್ಮ ಪ್ರೀತಿ ಮತ್ತು ಪ್ರೀತಿಸುವವರು ಇನಷ್ಟು ದೂರವಾಗುತ್ತಾರೆ.

  ನೀವು ಪೇಸ್ಬುಕ್​ ಮೆಸೆಂಜರ್​, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ ಬಳಕೆ ಮಾಡುವಾಗ ಲಾಸ್ಟ್​​ ಸೀನ್​ ಹೈಡ್​ ಮಾಡದಿರಿ. ಯಾವುದೋ ಒಂದು ಸಂದೇಶದಿಂದ ನಿಮ್ಮ ಪ್ರೀತಿ ಮತ್ತೆ ಚಿಗುರೊಡೆಯಬಹುದು. ಆ ಕಾರಣಕ್ಕಾಗಿ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುತ್ತಿರಿ,

  ಅನೇಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಉಳಿದುಕೊಂಡಿರುವ ಹಳೇಯ ಫೋಟೊವನ್ನು ಡಿಲೀಟ್​ ಮಾಡುವುದಿಲ್ಲ. ಬ್ರೇಕ್​ಅಪ್​ ಆದ ನಂತರವೂ ಹಳೇಯ ಫೋಟೋವನ್ನು ನೋಡಿ ದುಖಿ:ಸುತ್ತಿರುತ್ತಾರೆ. ಮನಸ್ಸಿಗೆ ನೋವು ನೀಡುವ ಮತ್ತು ಹಳೇಯ ಪ್ರೀತಿಯನ್ನು ನೆನಪಿಸುವ ವಸ್ತುಗಳನ್ನು ದೂರವಿಡಲು ಪ್ರಯತ್ನಿಸಿ.
  Published by:HR Ramesh
  First published: