Clothes Stain: ಬಟ್ಟೆಯಿಂದ ಎಣ್ಣೆ ಕಲೆ ತೆಗೆಯಲು ಸುಲಭ ಮಾರ್ಗ ಇಲ್ಲಿದೆ..

Home Remedies: ಇನ್ನು ಸಾಮಾನ್ಯವಾಗಿ ಬಟ್ಟೆ ಕಲೆಯಾದಾಗ ಡ್ರೈ ಕ್ಲೀನರ್ ಬಳಿ ಕೊಡುತ್ತೇವೆ. ಆದರೆ ಅಲ್ಲಿ ಬಟ್ಟೆ ಕಲೆ ತೆಗೆಯಲು ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಇದು ಬಟ್ಟೆಗೂ ಹಾನಿಕಾರಕ ನಮ್ಮ ಆರೋಗ್ಯಕ್ಕೂ ಸಹ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Oil Stain: ಬಟ್ಟೆಗಳ ಮೇಲೆ ಸಾಮಾನ್ಯವಾಗಿ ಕಲೆಯಾಗುತ್ತದೆ. ನೀವು ಒಂದು ಕಾರ್ಯಕ್ರಮಕ್ಕೆ ಹೋದರೆ ಅಲ್ಲಿ ಊಟದ ಸಮಯದಲ್ಲಿ ಏನಾದರೂ ಬಿದ್ದು ಕಲೆಯಾಗುತ್ತದೆ. ಇಲ್ಲ ಯಾವುದೋ ಸ್ಥಳದಲ್ಲಿ ಗ್ರೀಸ್  ತಗುಲಬಹುದು. ಬಟ್ಟೆಗೆ ಕಲೆ ತಾಗಲು ಹಲವಾರು ಕಾರಣಗಳಿವೆ. ಬಟ್ಟೆ ಕಲೆಯಾದಾಗ ಸಹಜವಾಗಿ ಬೇಸರವಾಗುತ್ತದೆ. ಆದರೆ ಅದನ್ನು ಮನೆಯಲ್ಲಿ ಸುಲಭವಾಗಿ ತೆಗೆಯಬಹುದು ಎಂಬುದು ತಿಳಿದಾಗ ನಿಜಕ್ಕೂ ಸಂತೋಷವಾಗುತ್ತದೆ.

ಇನ್ನು ಸಾಮಾನ್ಯವಾಗಿ ಬಟ್ಟೆ ಕಲೆಯಾದಾಗ ಡ್ರೈ ಕ್ಲೀನರ್ ಬಳಿ ಕೊಡುತ್ತೇವೆ. ಆದರೆ ಅಲ್ಲಿ ಬಟ್ಟೆ ಕಲೆ ತೆಗೆಯಲು ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಇದು ಬಟ್ಟೆಗೂ ಹಾನಿಕಾರಕ ನಮ್ಮ ಆರೋಗ್ಯಕ್ಕೂ ಸಹ. ರಾಸಾಯನಿಕಗಳನ್ನು ಬಳಸದೆ ಮನೆಯಲ್ಲಿ ಹೇಗೆ ಕಲೆಯನ್ನು ನಿವಾರಣೆ ಮಾಡಬಹುದು ಎಂಬುದು ಇಲ್ಲಿದೆ.

ನಿಮ್ಮ ಬಟ್ಟೆ ಮೇಲೆ ಎಣ್ಣೆ ತೆಗೆಯಲು, ಅಡಿಗೆ ಸೋಡಾ ನಿಮ್ಮ ಮೊದಲ ಪರಿಹಾರ. ಏಕೆಂದರೆ ಅಡಿಗೆ ಸೋಡಾ ಬಟ್ಟೆಯಿಂದ ಕಲೆ ತೆಗೆಯಲು ಉತ್ತಮ ಆಯ್ಕೆ. ಹಾಗಾಗಿ ಬೇರೆ ಯಾವುದೇ ವಿಧಾನಗಳನ್ನು ಪ್ರಯತ್ನಿಸುವ ಮೊದಲು, ನಿಮ್ಮ ಅಡಿಗೆ ಸೋಡಾ ಇದ್ದರೆ, ಮೊದಲು ಅದನ್ನು  ಪ್ರಯತ್ನಿಸಿ.

ಕಲೆಯಾಗಿರುವ ಜಾಗದ ಹಿಂದೆ ಬಟ್ಟೆಯ ಕೆಳಗೆ ಹಲಗೆಯ ತುಂಡನ್ನು ಇರಿಸಿ. ಅಡಿಗೆ ಸೋಡಾವನ್ನು ಆ ಕಲೆಯ ಮೇಲೆ ಸರಿಯಾಗಿ ಹಾಕಿ.  ಅಡಿಗೆ ಸೋಡಾ ಕಲೆಗಳಿಗೆ ಇಳಿಯುವ ತನಕ ಹಾಗೆಯೇ ಬಿಡಿ ಸುಮಾರು 1 ಗಂಟೆಗಳ ನಂತರ  ಸೋಡಾವನ್ನು ತೆಗೆಯಿರಿ ಆಕಸ್ಮಿಕವಾಗಿ ಕಲೆ ಉಳಿದಿದ್ದರೆ ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾ ಹಾಕಿ ಅದಕ್ಕೆ ಬಿಳಿ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ.ನಂತರ ಒಂದು ಟೂತ್ ಬ್ರಷ್ ತೆಗೆದುಕೊಂಡು ಆ ಮಿಶ್ರಣದಿಂದ ಉಜ್ಜಿ.

ಇದನ್ನೂ ಓದಿ: ಮಳೆಗಾಲದಲ್ಲಿ ಗರ್ಭಿಣಿಯರು ಈ ಕ್ರಮಗಳನ್ನು ಅನುಸರಿಸಿ

ಬಟ್ಟೆಯಲ್ಲಿ ತುಂಬಾ ಸಣ್ಣ ಕಲೆಗಳಿದ್ದರೆ ನೀವು ತ್ವರಿತ ಪರಿಹಾರವಾಗಿ ಸೀಮೆಸುಣ್ಣವನ್ನು ಬಳಸಬಹುದು. ಇದು ಸುಲಭವಾಗಿ ನಿಮ್ಮ ಬಟ್ಟೆಯ ಮೇಲಿನ ಕಲೆಯನ್ನು ನಿವಾರಣೆ ಮಾಡುತ್ತದೆ.  ಮೊದಲು ಸೀಮೆಸುಣ್ಣ ತೆಗೆದುಕೊಂಡು ಅದನ್ನು ಕಲೆಗಳ  ಉಜ್ಜಿ. ಸೀಮೆಸುಣ್ಣವು ಎಲ್ಲಾ ಕಲೆಗಳನ್ನು ಹೀರಿಕೊಳ್ಳುವವರೆಗೆ ಅದನ್ನು 5-10 ನಿಮಿಷ ಹಾಗೆಯೇ ಬಿಡಿ ಕೆಲವೊಮ್ಮೆ ಗಟ್ಟಿ ಕಲೆಯಾಗಿದ್ದರೆ ಒಂದು ಬಾರಿಗೆ ಕಲೆ ಹೋಗುವುದಿಲ್ಲ. 2 ರಿಂದ 3 ಬಾರಿ ಪ್ರಯತ್ನಿಸಿ ನಂತರ ಯಾವಾಗಲೂ ಬಟ್ಟೆ ತೊಳೆಯುವಂತೆ ತೊಳೆಯಿರಿ.

ಡ್ರೈ ಕ್ಲೀನ್ ಬಟ್ಟೆಯ ಗ್ರೀಸ್ ಕಲೆಗಳನ್ನು ತೆಗೆಯುತ್ತದೆನಿಮ್ಮ ಬಟ್ಟೆಯ ಮೇಲೆ ಲಾಂಡ್ರಿ ಲೇಬಲ್ ಡ್ರೈ ಕ್ಲೀನ್ ಎಂದು ಇದ್ದರೆ ಯಾವುದೇ ಪ್ರಯತ್ನಗಳನ್ನು ಮಾಡಬಾರದು. ಆದರೂ ಅತಿ ಚಿಕ್ಕ ಕಲೆ ಅದನ್ನು ನೀವೇ ತೆಗೆದುಹಾಕಲು ಪ್ರಯತ್ನಿಸಬಹುದು. ಕೇವಲ ಒಣಗಿದ ಬಟ್ಟೆಗಳನ್ನು ಮಾತ್ರ ಎಂಬುದನ್ನ  ನೆನಪಿಡಿ.

ಒಮ್ಮೆ ಬಟ್ಟೆಯಿಂದ ಉಜ್ಜಿಕೊಳ್ಳಿ ನಂತರ ಕಲೆಯ ಮೇಲೆ ಅಡಿಗೆ ಸೋಡಾ  ಹಾಕಿ ಹಲ್ಲುಜ್ಜುವ ಬ್ರಷ್‌ನಲ್ಲಿ ನಿಧಾನವಾಗಿ ಉಜ್ಜಿ ಎಣ್ಣೆ ಹೀರಿಕೊಳ್ಳುಲು  5-25 ನಿಮಿಷಗಳ ಕಾಲ ಹಾಗೆಯೇ ಬಿಡಿ.ನಂತರ ಅದನ್ನ ತೊಳೆಯಿರಿ.  ಕಲೆ ಇನ್ನು ಇದ್ದಲ್ಲಿ ಒಂದು ಬಟ್ಟೆಯನ್ನು ಒದ್ದೆ ಮಾಡಿ ಮತ್ತು ಅದಕ್ಕೆ ಒಂದು ಹನಿ ಡಾನ್ ಹಾಕಿ ಕಲೆಯ ಮೇಲೆ ಉಜ್ಜಿ. ನಂತರ ಇದನ್ನು 5-10 ನಿಮಿಷಗಳ ಬಿಡಿ. ಸುಮಾರು 10 ನಿಮಿಷಗಳ ನಂತರ ನೀರಿನಿಂದ ಮಾತ್ರ ಒರೆಸಿ ಒಣಗಲು ಬಿಡಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: