Grey Hair Care: ಕೂದಲು ಬೆಳ್ಳಗಾಗಿದೆ ಅಂತ ಚಿಂತೆ ಬೇಡ ಇಷ್ಟು ಮಾಡಿ ಸಾಕು

Grey Hairs: ಒತ್ತಡದಿಂದ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಲು ಪ್ರಾರಂಭಿಸುತ್ತದೆ. ಕೆಲವು ಜನರು ತಮ್ಮ ಅನುವಂಶಿಕತೆ ಅಥವಾ ಡಿಎನ್ಎ ಅಂಶಗಳ ಕಾರಣದಿಂದಾಗಿ ಬೂದು ಕೂದಲು ಹೊಂದಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಯಸ್ಸಾದ ಮೊದಲ ಚಿಹ್ನೆ ಕೂದಲು ಉದುರುವಿಕೆ (Hair Loss) ಹೆಚ್ಚಾಗುವುದು. ಬೂದು ಕೂದಲು ನೈಸರ್ಗಿಕವಾಗಿ ಮತ್ತೆ ಕಪ್ಪು (Black) ಬಣ್ಣಕ್ಕೆ ತಿರುಗಲು ಹಲವಾರು ಪರಿಹಾರಗಳಿವೆ ಎಂದು ನೀವು ಕೇಳಿರಬಹುದು. ಕೂದಲಿನ ಬಣ್ಣವನ್ನು ಬದಲಾಯಿಸಲು ಮತ್ತು ಬೂದು ಕೂದಲನ್ನು ಮುಚ್ಚಲು ವಿಗ್ಸ್ ಸೇರಿದಂತೆ ವಿವಿಧ ಉತ್ಪನ್ನಗಳು ಬಳಕೆಯಲ್ಲಿವೆ. ಆದರೆ ಈ ಬೂದು ಕೂದಲಿಗೆ ಕಾರಣವೇನು? ಇದಕ್ಕೆ ಪರಿಹಾರವೇನು ಎಂಬುದು ಇಲ್ಲಿದೆ.  ಒಬ್ಬ ವ್ಯಕ್ತಿಯು ತನ್ನ ಮುಖದಲ್ಲಿ ಬದಲಾವಣೆಗಳನ್ನು ಗಮನಿಸುವ ಮೂಲಕ ವಯಸ್ಸಾಗುತ್ತಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬಹುದು. ಸುಕ್ಕುಗಳು, ಚರ್ಮವು ಕುಗ್ಗುವುದು ಮತ್ತು ಕೂದಲು ತೆಳುವಾಗುವುದು ಇವೆಲ್ಲವೂ ವಯಸ್ಸಾದ ಮೂರು ಚಿಹ್ನೆಗಳು. ಈ ಬದಲಾವಣೆಗಳು ಪ್ರತಿಯೊಬ್ಬರ ಮೇಲೆ ಎಲ್ಲಾ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಜೊತೆಗೆ ಕೆಲವರಲ್ಲಿ ಒತ್ತಡದಿಂದ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಲು ಪ್ರಾರಂಭಿಸುತ್ತದೆ. ಕೆಲವು ಜನರು ತಮ್ಮ ಅನುವಂಶಿಕತೆ ಅಥವಾ ಡಿಎನ್ಎ ಅಂಶಗಳ ಕಾರಣದಿಂದಾಗಿ ಬೂದು ಕೂದಲು ಹೊಂದಿರುತ್ತಾರೆ. ಇವುಗಳಲ್ಲದೆ, ವಯಸ್ಸಾದ ಲಕ್ಷಣಗಳು ಸರಿಯಾಗಿ ವ್ಯಾಯಾಮ ಇಲ್ಲದೇ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಕೂಡ ಉಂಟಾಗಬಹುದು. 

ಚಿಕ್ಕ ವಯಸ್ಸಿನಲ್ಲಿ ಕೂದಲು ಏಕೆ ಉದುರಲು ಪ್ರಾರಂಭಿಸುತ್ತದೆ?ಚಿಕ್ಕ ವಯಸ್ಸಿನಲ್ಲಿ ಬೂದು ಕೂದಲು ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. 

ಅನುವಂಶಿಕ ಸಮಸ್ಯೆಗಳು

ಕೆಲವು ಜನರು ಚಿಕ್ಕ ವಯಸ್ಸಿನಲ್ಲಿ ಅಥವಾ ಶಾಲೆಯಲ್ಲಿಯೂ ಸಹ ಬೂದು ಕೂದಲು ಹೊಂದಿರುವುದನ್ನು ನೀವು ಗಮನಿಸಿರಬಹುದು. ಇದು ಅವರ ಸಂತತಿಯಲ್ಲಿ ಇರಬಹುದಾದ ವಂಶವಾಹಿಯ ಸ್ವಭಾವ.  ಅನುವಂಶಿಕ ಕೂದಲು ಉದುರುವುದಕ್ಕೆ ಹಾಗೂ ಬೂದು ಕೂದಲಿಗೆ ಯಾವುದೇ ಚಿಕಿತ್ಸೆ ಇಲ್ಲ.

ಮೆಲನಿನ್ ಉತ್ಪಾದನೆಯಲ್ಲಿ ಕೊರತೆ 

ಮೆಲನಿನ್ ನಮ್ಮ ಕೂದಲಿಗೆ ಬೇಕಾದ ವರ್ಣದ್ರವ್ಯವಾಗಿದೆ. ಇದು ಕೂದಲಿಗೆ ಬಣ್ಣವನ್ನು ನೀಡುವ ಎರಡು ಘಟಕಗಳನ್ನು ಹೊಂದಿದೆ. ಇವೆರಡರ ಸಂಯೋಜನೆಯು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. ಮೆಲನಿನ್ ಉತ್ಪಾದನೆಯು ನಿಮ್ಮ ವಯಸ್ಸಾದಂತೆ ಅಥವಾ ಜೀವನಶೈಲಿಯ ಅಂಶಗಳಿಂದ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹೀಗಾಗಿ ಕೂದಲು ತನ್ನ ಸಹಜ ಬಣ್ಣವನ್ನು ಕಳೆದುಕೊಂಡು ಬೆಳ್ಳಗಾಗುತ್ತದೆ. ನೀವು ಸರಿಯಾಗಿ ನಿದ್ದೆ ಮಾಡದಿದ್ದರೂ ಮೆಲನಿನ್ ಕೊರತೆ ಉಂಟಾಗಬಹುದು.

ಇದನ್ನೂ ಓದಿ: ದಿನಕ್ಕೊಂದು ಸೇಬು ಆರೋಗ್ಯಕ್ಕೆ ಉತ್ತಮ ಆದ್ರೆ ಅದಕ್ಕಿಂತ ಹೆಚ್ಚು ತಿನ್ನೋದು ಈ ಸಮಸ್ಯೆಗೆ ಕಾರಣವಾಗುತ್ತಂತೆ

 ಖಿನ್ನತೆ ಹೊಂದಿದ್ದರೆ 

ಖಿನ್ನತೆ ಇಲ್ಲದವರಿಲ್ಲ  ಎನ್ನುವಷ್ಟರ ಮಟ್ಟಿಗೆ ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿದೆ. ಇದು ಸಹ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವು ನೀವು ಹೇಗೆ ಭಾವಿಸುತ್ತೀರಿ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಜನರಿಗೆ, ಚಿಕ್ಕ ವಯಸ್ಸಿನಲ್ಲಿ ಬೂದು ಕೂದಲು ಕಾಣಿಸಿಕೊಳ್ಳಲು ಒತ್ತಡವು ಒಂದು ಪ್ರಮುಖ ಕಾರಣವಾಗಿದೆ. ವಿಟಮಿನ್ ಬಿ 12

ಅಪೌಷ್ಟಿಕತೆಯಾದರೆ

ವಿಟಮಿನ್ ಬಿ 12 ದೇಹವು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ಪ್ರಮುಖ ವಿಟಮಿನ್ ಆಗಿದೆ. ವಿಟಮಿನ್ ಕೊರತೆಯಿದ್ದರೆ, ಕೂದಲು ಮತ್ತು ಬೇರುಗಳಿಗೆ ರಕ್ತವು ಸರಿಯಾಗಿ ಹರಿಯದಿದ್ದರೂ ಕೂದಲು ಉದುರಲು ಪ್ರಾರಂಭಿಸುತ್ತದೆ ಮತ್ತು ಬೂದು ಬಣ್ಣಕ್ಕೆ ತಿರುಗುತ್ತದೆ.  ಕೂದಲು ಉದುರಲು ಪ್ರಾರಂಭಿಸಿದಾಗ ಅಥವಾ ಬೂದು ಬಣ್ಣಕ್ಕೆ ತಿರುಗಿದಾಗ ಆರಂಭಿಕ ಚಿಕಿತ್ಸೆ ಮಾಡಿದರೆ, ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ.

ನೈಸರ್ಗಿಕ ಪದಾರ್ಥಗಳೊಂದಿಗೆ ಮನೆಯಲ್ಲಿಯೇ ಮಾಡಬಹುದಾದ ಸರಳ ಕೂದಲಿನ ಸಲಹೆಗಳು ಇಲ್ಲಿವೆ. 

ತೆಂಗಿನ ಎಣ್ಣೆ 

ಕೊಬ್ಬರಿ ಎಣ್ಣೆಯನ್ನು ಜೀರಿಗೆಯೊಂದಿಗೆ ಬೆರೆಸಿ ಪ್ರತಿದಿನ ತಲೆಗೆಹಚ್ಚಬಹುದು. ತೆಂಗಿನೆಣ್ಣೆಯು ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ಜೀರಿಗೆಯು ಕೂದಲಿನ ಬಣ್ಣವನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.

ಗೋರಂಟಿ ಮತ್ತು ಮೊಟ್ಟೆ 

ಗೋರಂಟಿ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ಆರೋಗ್ಯಕ್ಕಾಗಿಯೂ ಬಳಸುವ ನೈಸರ್ಗಿಕ ವಸ್ತುವಾಗಿದೆ. ಇದನ್ನು ಹಲವು ವರ್ಷಗಳಿಂದ ನೈಸರ್ಗಿಕ ಕೂದಲು ಬಣ್ಣವಾಗಿ ಬಳಸಲಾಗುತ್ತದೆ. ಮೆಹೆಂದಿ ಕೂದಲು ಉದುರುವಿಕೆಗೆ ಮಾತ್ರವಲ್ಲದೆ ಆರೋಗ್ಯಕರ ಕೂದಲಿಗೆ ಸಹ ಒಳ್ಳೆಯದು. ನೀವು ಮೊಟ್ಟೆಯನ್ನು ಗೋರಂಟಿಯೊಂದಿಗೆ ಮಿಶ್ರಣ ಮಾಡಿ ಹಚ್ಚಿದಾಗ ಬೂದು ಬಣ್ಣ ಕಪ್ಪಾಗುತ್ತದೆ.

ಈರುಳ್ಳಿ ಮತ್ತು ನಿಂಬೆ ರಸ 

ಇದನ್ನೂ ಓದಿ: ತರಕಾರಿಯಿಂದ ಮಾಡೋ ಈ ಕಾಫಿ ಕುಡಿದರೆ ಬಹಳ ಬೇಗ ಸಣ್ಣಗಾಗ್ತಾರಂತೆ, ಟ್ರೈ ಮಾಡಿ!

ಈರುಳ್ಳಿಯನ್ನು ಹಲವು ವರ್ಷಗಳಿಂದ ಬೂದು ಕೂದಲಿಗೆ ಅತ್ಯುತ್ತಮ ಪರಿಹಾರವಾಗಿ ಬಳಸಲಾಗುತ್ತದೆ. ಆದರೆ, ಕೂದಲಿನ ಆರೋಗ್ಯ ಮತ್ತು ಕೂದಲಿನ ಬಣ್ಣಕ್ಕೆ ಈರುಳ್ಳಿಯ ಬಳಕೆಯು ಇತ್ತೀಚೆಗೆ ಜನಪ್ರಿಯವಾಗಿದೆ. ಈರುಳ್ಳಿಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಕೂದಲಿಗೆ ಪೋಷಣೆ ನೀಡುವುದು ಮಾತ್ರವಲ್ಲದೆ ಬೂದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.
Published by:Sandhya M
First published: