Nail Care Tips: ಅಂದದ ಉಗುರಿನ ಪಾಲನೆಗೆ ಇಲ್ಲಿದೆ ಚೆಂದದ ಟಿಪ್ಸ್ ಫಾಲೋ‌ ಮಾಡಿ ನೋಡಿ

ಉಗುರುಗಳ ಆರೋಗ್ಯಕರ ತಾಜಾತನ ಮತ್ತು ಸೌಂದರ್ಯವನ್ನು ಹೆಚ್ಚು ಕಾಲ ಹಾಗೆ ಇರಿಸಿಕೊಳ್ಳಲು ಕೆಲವೊಂದು ಟಿಪ್ಸ್ ನೀಡಲಾಗಿದೆ. ನಮ್ಮ ಉಗುರುಗಳ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಉಗುರುಗಳು (Nails) ಒರಟಾಗಿರದೇ ನಯವಾಗಿ ಮತ್ತು ದೃಢವಾಗಿರಬೇಕು. ಬಣ್ಣದಲ್ಲೂ ಯಾವ ವ್ಯತ್ಯಾಸಗಳಿರಬಾರದು. ಇವು ಆರೋಗ್ಯಕರ (Healthy) ಉಗುರಿನ ಲಕ್ಷಣವಾಗಿದೆ. ನಮ್ಮ ದೇಹ ಸೌಂದರ್ಯದ (Beauty) ವಿಚಾರದಲ್ಲಿ ನಮ್ಮ ಬೆರಳುಗಳಲ್ಲಿರುವ ಉಗುರುಗಳಿಗೂ ಒಂದು ಮಹತ್ತರ ಪಾತ್ರವಿದೆ. ನಮ್ಮ ಅಂದವನ್ನು ಹೆಚ್ಚಿಸುವ ಉಗುರುಗಳನ್ನು ನಾವು ಹಾಕಿಕೊಳ್ಳುವ ಬಟ್ಟೆಗಳಿಗೆ ಅನುಸಾರವಾಗಿ ನೈಲ್ ಪಾಲಿಶ್ (Nail Polish) ಮೂಲಕ ಸಿಂಗರಿಸಿ ಹೊರಗಡೆ ಹೋದಂತಹ ಸಂದರ್ಭದಲ್ಲಿ ಇತರರು ನಮ್ಮತ್ತ ಆಕರ್ಷಿತ ರಾಗುವಂತೆ ಮತ್ತು ನಮ್ಮನ್ನು ಹೊಗಳುವಂತೆ ಮಾಡಿಕೊಳ್ಳುವ ಕಲೆ ನಮಗೆ ಚೆನ್ನಾಗಿ ಗೊತ್ತಿದೆ. ಉಗುರುಗಳ ಆರೋಗ್ಯಕರ ತಾಜಾತನ ಮತ್ತು ಸೌಂದರ್ಯವನ್ನು ಹೆಚ್ಚು ಕಾಲ ಹಾಗೆ ಇರಿಸಿಕೊಳ್ಳಲು ಕೆಲವೊಂದು ಟಿಪ್ಸ್ ನೀಡಲಾಗಿದೆ.

    ಆದರೆ ಇದರ ಜೊತೆಗೆ ನಮ್ಮ ಉಗುರುಗಳ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ. ನಾವು ಯಾವುದಾದರೂ ಕೆಲಸವನ್ನು ಮಾಡುವ ಸಂದರ್ಭದಲ್ಲಿ ನಮ್ಮ ಉಗುರುಗಳು ಬೇರೆಯವರಿಗೆ ಎದ್ದು ಕಾಣುತ್ತವೆ. ಹಾಗಾಗಿ ಅವುಗಳ ಸೌಂದರ್ಯ ಬಹಳ ಮುಖ್ಯವಾಗುತ್ತದೆ.

    ಇದನ್ನೂ ಓದಿ: Face Care: ಮುಖದ ಮೇಲಿನ ನಸುಕಂದು ಮಚ್ಚೆ ತೆಗೆದು ಹಾಕಲು ಈ ಸಲಹೆ ಫಾಲೋ ಮಾಡಿ

    ನೈಲ್ ಪಾಲಿಶ್ ಹಚ್ಚಿಕೊಳ್ಳಿ

    ರೋಗ್ಯಕರವಾದ ಉಗುರುಗಳನ್ನು ಅಚ್ಚುಕಟ್ಟಾಗಿ ಬಹಳ ದಿನಗಳ ಕಾಲ ಸುಂದರವಾಗಿ ಕಾಪಾಡಬಲ್ಲ ಗುಣ ನೈಲ್ ಪಾಲಿಶ್ ನಲ್ಲಿ ಕಂಡು ಬರುತ್ತದೆ. ನಿಮಗೆ ಇಷ್ಟವಾದ ಬಣ್ಣದ ನೈಲ್ ಪಾಲಿಶ್ ನೀವು ನಿಮ್ಮ ಉಗುರುಗಳಿಗೆ ಹಚ್ಚಬಹುದು. ಬೇರೊಂದು ಬಣ್ಣದ ನೈಲ್ ಪಾಲಿಶ್ ಹಚ್ಚುವ ಸಂದರ್ಭದಲ್ಲಿ ಮೊದಲಿದ್ದ ಬಣ್ಣವನ್ನು ಅಸಿಟೋನ್ ರಹಿತ ನೈಲ್ ಪಾಲಿಷ್ ರಿಮೊವರ್ ಬಳಸಿ ತೆಗೆಯಬಹುದು. ನೀವು ಕೈಗಳಿಂದ ಕೆಲಸ ಮಾಡುತ್ತಿರುವ ಸಮಯದಲ್ಲಿ ಅಂದರೆ ಕೈ ತೋಟದ ಕೆಲಸ ಮಾಡುವಾಗ ಅಥವಾ ಮನೆ ಸ್ವಚ್ಛ ಮಾಡುವ ಸಂದರ್ಭದಲ್ಲಿ ಕೈಗಳಿಗೆ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದರಿಂದ ಉಗುರುಗಳ ಸಂದುಗಳಲ್ಲಿ ಧೂಳು ಅಥವಾ ಕೊಳೆ ಸೇರಿಕೊಳ್ಳುವುದು ತಪ್ಪುತ್ತದೆ.

    ಕಲ್ಮಶವನ್ನು ತೆಗೆಯಲು  ನೈಲ್ ಬ್ರಷ್ ನಿಂದ ಸ್ವಚ್ಛ ಮಾಡಿ

    ಕೆಲವು ಮಹಿಳೆಯರಿಗೆ ಉಗುರುಗಳು ಹಾಗೂ ಬೆರಳುಗಳ ಮಧ್ಯೆ ಹೆಚ್ಚು ಸಂದು ಉಂಟಾಗಿರುವ ಸಾಧ್ಯತೆ ಇರುತ್ತದೆ. ಇದು ಖಂಡಿತ ಆರೋಗ್ಯಕ್ಕೆ ಅನಾರೋಗ್ಯಕರ ಜೊತೆಗೆ ಉಗುರುಗಳ ಆರೋಗ್ಯವೂ ಕೂಡ ಮುಂಬರುವ ದಿನಗಳಲ್ಲಿ ಇದರ ಕಾರಣದಿಂದ ಹಾಳಾಗುತ್ತದೆ. ಸಾಕಷ್ಟು ಬ್ಯಾಕ್ಟೀರಿಯಾಗಳು ಮತ್ತು ಫಂಗಲ್ ಸೋಂಕುಗಳು ಇಲ್ಲಿ ಉಂಟಾಗುತ್ತವೆ ಎಂದು ಹೇಳುತ್ತಾರೆ. ಒಂದು ವೇಳೆ ಉಗುರುಗಳು ಉದ್ದವಾಗಿದ್ದರೆ ಉಗುರಿನ ಸಂದುಗಳಲ್ಲಿ ಇರುವ ಕಲ್ಮಶವನ್ನು ತೆಗೆಯಲು ಸಾಧ್ಯ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಸಹಾಯಕ್ಕೆ ನೈಲ್ ಬ್ರಷ್ ಉಪಯೋಗಿಸಿ.

    ಗ್ರೀನ್ ಟೀ ಉಗುರಿನ ದೃಢತೆ ಹೆಚ್ಚಿಸುತ್ತದೆ

    ಗ್ರೀನ್​ ಟೀ ಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಇದು ಉಗುರು ಕೀಳುವುದನ್ನು ತಡೆಯುವುದಲ್ಲದೇ ಉಗುರಿನ ದೃಢತೆ ಹೆಚ್ಚಿಸುತ್ತದೆ. ವಾರಕ್ಕೊಮ್ಮೆ ಗ್ರೀನ್ ಟೀಯಿಂದ ಉಗುರುಗಳಿಗೆ ಮಸಾಜ್ ನೀಡುವುದು ಪ್ರಯೋಜನಕಾರಿ.

    ಇದನ್ನೂ ಓದಿ: Betel Leaves Benefits: ಬಾಯಿ ಕೆಂಪು ಮಾಡುವ ವೀಳ್ಯದೆಲೆಯಲ್ಲಿ ಇಷ್ಟೆಲ್ಲಾ ಔಷಧೀಯ ಗುಣಗಳಿವೆಯೇ?

    ಉದ್ದವಿರುವ ಉಗುರುಗಳನ್ನು ಕತ್ತರಿಸಿ

    ಕೆಲವರಿಗೆ ಉಗುರುಗಳನ್ನು ಉದ್ದವಾಗಿ ಬಿಡುವ ಶೋಕಿ ಇರುತ್ತದೆ. ಆದರೆ ಇದು ಎಷ್ಟು ಅನಾರೋಗ್ಯಕರ ಎಂದು ಅವರಿಗೆ ಅರಿವಿರುವುದಿಲ್ಲ. ಜೊತೆಗೆ ಉಗುರುಗಳು ಯಾವುದಾದರೂ ಸಂದರ್ಭದಲ್ಲಿ ಸಂಪೂರ್ಣವಾಗಿ ಅರ್ಧಕ್ಕೆ ಸೀಳಿ ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಉಗುರುಗಳು ಉದ್ದವಾಗಿದ್ದರೆ ಸೂಕ್ಷ್ಮಾಣು ಗಳಿಗೆ ಉಗುರುಗಳ ಸಂದುಗಳಲ್ಲಿ ಬೆಳವಣಿಗೆ ಹೊಂದಲು ಇದು ಒಳ್ಳೆಯ ವಾತಾವರಣ ನಿರ್ಮಿಸಿ ಕೊಟ್ಟಂತೆ ಆಗುತ್ತದೆ. ಹಾಗಾಗಿ ಆಗಾಗ ಉಗುರು ಬೆಳವಣಿಗೆ ಹೊಂದಿದ ಸಂದರ್ಭದಲ್ಲಿ ನಮ್ಮ ಬೆರಳುಗಳ ಮುಂಭಾಗದ ಸಮನಾಗಿ ಉಗುರುಗಳನ್ನು ಕತ್ತರಿಸುವುದು ಒಳ್ಳೆಯದು.
    Published by:Swathi Nayak
    First published: