ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಪತ್ನಿಯಾಗಿರೋ ನೀತಾ ಅಂಬಾನಿ ಅವರು ತಮ್ಮ ಸೌಂದರ್ಯ (Beauty), ಸ್ಟೈಲ್ ಮತ್ತು ಗ್ಲೊಯಿಂಗ್ ಸ್ಕಿನ್‌ಗೆ ಫೇಮಸ್ ಆಗಿರೋ ಮಹಿಳೆ. ಇವರ ಈ ಹೊಳೆಯುವ ಗ್ಲೊಯಿಂಗ್ ಸ್ಕಿನ್ (Glowing Skin) ಪಡೆಯಲು ನೀತಾ ಅಂಬಾನಿ ರೀತಿ ಹೊಳೆಯುವ ಚರ್ಮ ಪಡೆಯಲು ನಿಮಗೆ ಹೆಲ್ಪ್ ಮಾಡಲು ಇಲ್ಲಿವೆ ಹತ್ತು ಅಂಶಗಳು:
ನೀತಾ ಅಂಬಾನಿ ರೀತಿ ಹೊಳೆಯುವ ಚರ್ಮ ಪಡೆಯಲು ನಿಮಗೆ ಹೆಲ್ಪ್ ಮಾಡಲು ಇಲ್ಲಿವೆ 10 ಸಿಂಪಲ್ ಟಿಪ್ಸ್:
- ಹೈಡ್ರೆಟ್ ಆಗಿರೋದು ಮುಖ್ಯ: ಹೌದು, ಮನುಷ್ಯನ ದೇಹದಲ್ಲಿ ಆಲ್‌ಮೋಸ್ಟ್ ನೀರು ಇರುವುದರಿಂದ ಹೆಚ್ಚು ಕುಡಿಯುವುದು ಆರೋಗ್ಯಕ್ಕೂ ಒಳ್ಳೆಯದು. ಹಾಗೆಯೇ ನಮ್ಮ ಚರ್ಮಕ್ಕೂ ಒಳ್ಳೆಯದು. ದಿನವೀಡಿ ಸಾಕಷ್ಟು ನೀರನ್ನು ಕುಡಿಯುವುದು ಎಲ್ಲರಿಗೂ ಉತ್ತಮ. ಹೆಚ್ಚು ನೀರಿನ ಸೇವನೆಯಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೋಗಿ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
- ಸಮತೋಲಿತ ಆಹಾರ ಸೇವನೆ: ದಿನನಿತ್ಯದ ನಿಮ್ಮ ಆಹಾರ ಸೇವನೆ ಸಮತೋಲಿತವಾಗಿರುವಂತೆ ನೋಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬೆಸ್ಟ್. ಹಾಗಿದ್ರೆ ಸಮತೋಲಿತ ಆಹಾರವೆಂದ್ರೆ ಏನು? ಎಂಬ ಪ್ರಶ್ನೆ ನಿಮ್ಮದಾಗಿದ್ರೆ ಅದಕ್ಕೆ ಉತ್ತರ ಇಲ್ಲಿದೆ.ಸಮತೋಲಿತ ಆಹಾರವೆಂದ್ರೆ ನೀವು ಸೇವಿಸುವ ಆಹಾರದಲ್ಲಿ ವಿಟಮಿನ್‌ಗಳು, ಮಿನರಲ್ಸ್‌ಗಳು, ಆಂಟಿಆಕ್ಸಿಡೆಂಟ್‌ಗಳು ಸರಿಯಾಗಿ ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತರಕಾರಿಗಳು, ಹಣ್ಣುಗಳು, ಸೊಪ್ಪುಗಳು, ಟ್ರೈಪ್ರೂಟ್ಸ್‌ಗಳ ನಿಯಮಿತ ಸೇವನೆಯಿಂದ ಆರೋಗ್ಯ ಸುಧಾರಣೆ ಅಷ್ಟೆ ಅಲ್ಲದೇ, ಸೌಂದರ್ಯವೃದ್ದಿಗೂ ಇವು ಕಾರಣವಾಗುತ್ತವೆ.
ಇದನ್ನೂ ಓದಿ: Shaking Legs: ಕೂತಲ್ಲೇ ಕಾಲು ಅಲುಗಿಸೋ ಅಭ್ಯಾಸ ನಿಮಗಿದೆಯೇ? ಹಾಗಾದ್ರೆ ಇದು ಗಂಭೀರ ಸಮಸ್ಯೆ ಇರಬಹುದು ಹುಷಾರ್!
- ಸಾಕಷ್ಟು ನಿದ್ರೆ ಮಾಡುವುದು: ಹೌದು, ದಿನಕ್ಕೆ 7-8 ತಾಸುಗಳ ಉತ್ತಮ ನಿದ್ರೆ ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಹೊಳೆಯುವ ತ್ವಚೆ ನಿಮ್ಮದಾಗಬೇಕಿದ್ದರೆ ಉತ್ತಮ ನಿದ್ರೆ ಮಾಡಿ.
- ಒತ್ತಡ ನಿರ್ವಹಣೆ ತಂತ್ರಗಳನ್ನು ಅಭ್ಯಾಸ ಮಾಡಿ: ಜೀವನದಲ್ಲಿ ಹೆಚ್ಚಿನ ಒತ್ತಡ ಉಂಟುಮಾಡುವ ಸಮಸ್ಯೆ ಒಂದೇರಡಲ್ಲ. ಇದು ಚರ್ಮದ ಸಮಸ್ಯೆಗಳಿಗೂ ನೇರ ಕಾರಣವಾಗುತ್ತದೆ. ಆದ್ದರಿಂದ ಯೋಗ, ಧ್ಯಾನ ಅಥವಾ ವ್ಯಾಯಾಮದಂತಹ ಒತ್ತಡ-ಕಡಿಮೆಗೊಳಿಸುವ ಚಟುವಟಿಕೆಗಳನ್ನು ಮಾಡುವುದು ಹೊಳೆಯುವ ತ್ವಚೆ ಹೊಂದಲು ಸಹಾಯ ಮಾಡುತ್ತದೆ.
- ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸಿ: ಸ್ನಾನಕ್ಕೆ ಹಾರ್ಶ್ ಸೋಪ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ. ಅದರೊಂದಿಗೆ ಸೌಮ್ಯವಾದ ಕ್ಲೆನ್ಸರ್ ಅನ್ನು ಆರಿಸಿಕೊಳ್ಳಿ ಅದು ನಿಮ್ಮ ಚರ್ಮದ ನೈಸರ್ಗಿಕ ತೈಲವನ್ನು ದೂರ ಮಾಡದೇ ಹೊಳೆಯುವ ಸ್ಕೀನ್ ಅನ್ನು ನಿಮಗೆ ನೀಡುತ್ತದೆ.
- ನಿಯಮಿತವಾಗಿ ಎಫ್ಫೋಲಿಯೇಟ್ ಮಾಡಿ:ನಿಯಮಿತವಾದ ಎಫ್ಫೋಲಿಯೇಶನ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಜೀವಕೋಶಗಳ ಬೆಳವಣಿಗೆಯನ್ನುಉತ್ತೇಜಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ದೇಹದ ಚರ್ಮ ಹೊಳೆಯುವ ಮತ್ತು ನಯವಾದ ಮೈಬಣ್ಣಕ್ಕೆ ಕಾರಣವಾಗುತ್ತದೆ.
- ಟೋನರ್ ಬಳಸಿ:
ಟೋನರ್ ನಿಮ್ಮ ಚರ್ಮದ pH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಟೋನರ್‌ನಿಂದ ದೇಹವನ್ನು ಸ್ವಚ್ಛಗೊಳಿಸಿದ ನಂತರ ಉಳಿದಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ.
- ಸೀರಮ್ ಅನ್ನು ಅಪ್ಲೈ ಮಾಡಿ:
ವಿಟಮಿನ್ ಸಿ ಮತ್ತು ಇ, ಹೈಲುರಾನಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುವ ಸೀರಮ್‌ಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
- ಉತ್ತಮ ಮಾಯಿಶ್ಚರೈಸರ್ ಬಳಸಿ:
ಹೌದು, ಉತ್ತಮ ಮಾಯಿಶ್ಚರೈಸರ್ ಬಳಸುವುದರಿಂದ, ನಿಮ್ಮ ದೇಹದ ತೇವಾಂಶವನ್ನು ಉಳಿಸಲು ಮತ್ತು ದೇಹದ ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.
- ಚರ್ಮದ ರಕ್ಷಣೆ ಮಾಡಿಕೊಳ್ಳಿ:ನಿಮ್ಮ ಚರ್ಮವನ್ನು ಹಾನಿಕಾರಕ UV ಕಿರಣಗಳಿಂದ ರಕ್ಷಿಸಿಕೊಳ್ಳಲು ನೀವು ಯಾವಾಗಲೂ ಕನಿಷ್ಠ SPF 30 ನೊಂದಿಗೆ ಸನ್‌ಸ್ಕ್ರೀನ್ ಅನ್ನು ಬಳಸಿ. ಇದು ನಿಮ್ಮ ಚರ್ಮಕ್ಕೆ ಅಕಾಲಿಕ ವಯಸ್ಸಾಗುವಿಕೆ ಮತ್ತು ಹಾನಿಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ ಪ್ರತಿಯೊಬ್ಬರ ಚರ್ಮವು ಯುನಿಕ್ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ನಿಮಗೆ ಯಾವುದು ಉತ್ತಮ ಎನಿಸುತ್ತದೆಯೋ ಅದನ್ನು ನೀವು ನಿಮ್ಮ ಚರ್ಮಕ್ಕೆ ಅಪ್ಲೈ ಮಾಡಿಕೊಳ್ಳಬೇಕು.
ಒಂದೇ ದಿನಕ್ಕೆ ಯಾವುದು ಬೆಸ್ಟ್ ರಿಸಲ್ಟ್ ಕೊಡುವುದಿಲ್ಲ. ಆದ್ದರಿಂದ ದಿನಾಲು ಸ್ವಲ್ಪ ಸಮಯ ನಿಮಗೆ ಮತ್ತು ನಿಮ್ಮ ಚರ್ಮದ ಹೊಳಪಿಗೆ ಮೀಸಲಿಡುವುದು ಬೆಸ್ಟ್ ರಿಸಲ್ಟ್ ಬರಲು ಕಾರಣವಾಗಬಹುದು. ಆಗ ನಿಮ್ಮ ಸ್ಕೀನ್ ಸಹ ಗ್ಲೋ ಆಗುತ್ತದೆ.