ನಿಮ್ಮ ಹಲ್ಲು ಹಳದಿಗಟ್ಟಿದೆಯೇ? ಇಲ್ಲಿದೆ ಸುಲಭ ಪರಿಹಾರ!
ಹಲ್ಲು ಸದಾ ಬಿಳಿಯಾಗಿರಲು ವೈದ್ಯ ಲೋಕದಲ್ಲಿ ಅನೇಕ ಕ್ರಮಗಳಿವೆ. ಇದನ್ನು ಹೊರತುಪಡಿಸಿ, ಕೆಲ ಸುಲಭ ಉಪಾಯಗಳನ್ನು ಅಳವಡಿಕೆ ಮಾಡಿಕೊಂಡು ಹಲ್ಲನ್ನು ಬಿಳಿಯಾಗಿಟ್ಟುಕೊಳ್ಳಬಹುದು. ಅದಕ್ಕೆ ಇಲ್ಲಿದೆ ಕೆಲ ಸುಲಭ ತಂತ್ರಗಳು
ಸಭೆಯಲ್ಲಿ ಅಥವಾ ನಾಲ್ಕು ಜನ ಸೇರಿದಾಗ ಎದುರಿದ್ದವರ ಜೊತೆ ನಗುತ್ತಾ ಮಾತನಾಡುವಾಗ ಮುಖ್ಯವಾಗಿ ಕಾಣುವುದು ನಮ್ಮ ಹಲ್ಲು. ಬೆಳಿಗ್ಗೆ ಎದ್ದು ಬ್ರಶ್ ಮಾಡಿದ್ದರೂ ಕೆಲವೊಮ್ಮೆ ಹಲ್ಲು ಹಳದಿ ಬಣ್ಣಕ್ಕೆ ತಿರುಗಿಬಿಡುತ್ತದೆ. ಇದಕ್ಕೆ ನಾವು ತಿನ್ನುವ ಆಹಾರವೂ ಕಾರಣ.
ಹಲ್ಲಿನ ಬಣ್ಣ ಬದಲಾದರೆ ಎದುರಿದ್ದವರ ಜೊತೆ ಮಾತನಾಡಲು ಹಿಂಸೆಯಾಗುತ್ತದೆ. ನಮ್ಮ ಹಲ್ಲಿನ ಬಗ್ಗೆ ಅವರು ಟೀಕೆ ಮಾಡಿಬಿಟ್ಟರೆ ಎನ್ನುವ ಭಯ. ಇನ್ನು, ಪಾನ್ ಮಸಾಲ ತಿನ್ನುವವರಿಗಂತೂ ಹಲ್ಲನ್ನು ಶುಚಿಯಾಗಿಟ್ಟುಕೊಳ್ಳುವುದು ದೊಡ್ಡ ಸವಾಲಿನ ಸಂಗತಿ.
ಹಲ್ಲು ಸದಾ ಬಿಳಿಯಾಗಿರಲು ವೈದ್ಯ ಲೋಕದಲ್ಲಿ ಅನೇಕ ಕ್ರಮಗಳಿವೆ. ಇದನ್ನು ಹೊರತುಪಡಿಸಿ, ಕೆಲ ಸುಲಭ ಉಪಾಯಗಳನ್ನು ಅಳವಡಿಕೆ ಮಾಡಿಕೊಂಡು ಹಲ್ಲನ್ನು ಬಿಳಿಯಾಗಿಟ್ಟುಕೊಳ್ಳಬಹುದು. ಅದಕ್ಕೆ ಇಲ್ಲಿದೆ ಕೆಲ ಸುಲಭ ತಂತ್ರಗಳು.
ಅಡುಗೆ ಸೋಡಾ ಬ್ರಶ್ಗೆ ಹಾಕಿ ಉಜ್ಜುವುದರಿಂದ ಹಲ್ಲು ಬೆಳ್ಳಗಾಗುತ್ತದೆ. ಇದು ಪುರಾತನ ಮಾದರಿ. ಅಷ್ಟೇ ಅಲ್ಲ, ಸೇಬು, ಪೇರಳೆ, ಕ್ಯಾರೇಟ್ ತಿನ್ನುವುದರಿಂದಲೂ ಹಲ್ಳು ಬೆಳ್ಳಗಾಗುತ್ತದೆ. ಹಲ್ಲಿನ ಬಣ್ಣ ಬದಲಾಗದಂತೆ ಕಾಯ್ದುಕೊಳ್ಳಬೇಕು ಎಂದಾದರೆ ಸಿಗರೇಟ್ ತ್ಯಜಿಸಲೇ ಬೇಕು ಎನ್ನುತ್ತಾರೆ ವೈದ್ಯರು. ಸಿಗರೇಟು ಸೇದುವುದು ಕೇವಲ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಹಲ್ಲಿನ ಆರೋಗ್ಯಕ್ಕೂ ಅಪಾಯವಂತೆ. ಇದರಿಂದ ದಂತಗಳ ಬಣ್ಣ ಬದಲಾಗುತ್ತದೆಯಂತೆ.ಇದನ್ನೂ ಓದಿ: ಬಂಪರ್ ಆಫರ್: ಹಳೆ ಬಿಯರ್ ಬಾಟಲ್ ಮುಚ್ಚಳ ಕೊಟ್ಟು ಚಿಲ್ಡ್ ಬಿಯರ್ ಬಾಟಲ್ ಪಡೆಯಿರಿ
ಟೀ, ಕಾಫೀ ಹಾಗೂ ವೈನ್ ನಿಮ್ಮ ಹಲ್ಲಿನ ಅಂದವನ್ನು ಹಾಳು ಮಾಡಬಹುದು ಎಂದರೆ ನೀವು ನಂಬಲೇ ಬೇಕು! ಇವುಗಳನ್ನು ಕುಡಿಯುವ ಸಂದರ್ಭದಲ್ಲಿ ಸ್ಟ್ರಾ ಬಳಕೆ ಮಾಡಿದರೆ, ಹಲ್ಲನ್ನು ಶುಚಿಯಾಗಿ ಇಟ್ಟುಕೊಳ್ಳಬಹುದಂತೆ. ಇದು ಸಾಧ್ಯವಾಗದ ಪಕ್ಷದಲ್ಲಿ ಅವುಗಳನ್ನು ಕುಡಿದಾದ ನಂತರ ಒಮ್ಮೆ ಹಲ್ಲುಜ್ಜಿದ್ದರೆ ಒಳಿತು ಎಂಬುದು ತಜ್ಞರ ಸಲಹೆ.
ದಾಳಿಂಬೆ ಸೇರಿದಂತೆ ಕೆಲ ಹಣ್ಣುಗಳನ್ನು ಹಲ್ಲಿನ ಅಂದವನ್ನು ಹಾಳುಗೆಡವಬಹುದು. ಇದನ್ನು ತಿನ್ನದೇ ಇರದಿರಲು ಸಾಧ್ಯವಿಲ್ಲ. ಹಾಗಾಗಿ, ಅವುಗಳನ್ನು ತಿಂದಾದ ನಂತರ ಒಮ್ಮೆ ಬ್ರಶ್ ಮಾಡಿದರೆ ಹಲ್ಲಿನ ಹೊಳಪನ್ನು ಉಳಿಸಿಕೊಳ್ಳಬಹುದಂತೆ.ಇದರ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಲ್ಲಿನ ಆರೋಗ್ಯ ತಪಾಸಣೆ, ದಂತ ಪಂಕ್ತಿಗಳ ನಡುವೆ ಆಹಾರದ ಕೊಳೆ ಸಿಲುಕದಂತೆ ನೋಡಿಕೊಂಡರೆ ಒಳಿತು ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಪ್ರೇಮಿಗಳ ವಾರ ಆರಂಭ, ಪ್ರೇಮ ನಿವೇದನೆಗೆ ನೀವು ತಯಾರಾಗಿದ್ದೀರಾ?
ಹಲ್ಲಿನ ಬಣ್ಣ ಬದಲಾದರೆ ಎದುರಿದ್ದವರ ಜೊತೆ ಮಾತನಾಡಲು ಹಿಂಸೆಯಾಗುತ್ತದೆ. ನಮ್ಮ ಹಲ್ಲಿನ ಬಗ್ಗೆ ಅವರು ಟೀಕೆ ಮಾಡಿಬಿಟ್ಟರೆ ಎನ್ನುವ ಭಯ. ಇನ್ನು, ಪಾನ್ ಮಸಾಲ ತಿನ್ನುವವರಿಗಂತೂ ಹಲ್ಲನ್ನು ಶುಚಿಯಾಗಿಟ್ಟುಕೊಳ್ಳುವುದು ದೊಡ್ಡ ಸವಾಲಿನ ಸಂಗತಿ.
ಹಲ್ಲು ಸದಾ ಬಿಳಿಯಾಗಿರಲು ವೈದ್ಯ ಲೋಕದಲ್ಲಿ ಅನೇಕ ಕ್ರಮಗಳಿವೆ. ಇದನ್ನು ಹೊರತುಪಡಿಸಿ, ಕೆಲ ಸುಲಭ ಉಪಾಯಗಳನ್ನು ಅಳವಡಿಕೆ ಮಾಡಿಕೊಂಡು ಹಲ್ಲನ್ನು ಬಿಳಿಯಾಗಿಟ್ಟುಕೊಳ್ಳಬಹುದು. ಅದಕ್ಕೆ ಇಲ್ಲಿದೆ ಕೆಲ ಸುಲಭ ತಂತ್ರಗಳು.
ಅಡುಗೆ ಸೋಡಾ ಬ್ರಶ್ಗೆ ಹಾಕಿ ಉಜ್ಜುವುದರಿಂದ ಹಲ್ಲು ಬೆಳ್ಳಗಾಗುತ್ತದೆ. ಇದು ಪುರಾತನ ಮಾದರಿ. ಅಷ್ಟೇ ಅಲ್ಲ, ಸೇಬು, ಪೇರಳೆ, ಕ್ಯಾರೇಟ್ ತಿನ್ನುವುದರಿಂದಲೂ ಹಲ್ಳು ಬೆಳ್ಳಗಾಗುತ್ತದೆ. ಹಲ್ಲಿನ ಬಣ್ಣ ಬದಲಾಗದಂತೆ ಕಾಯ್ದುಕೊಳ್ಳಬೇಕು ಎಂದಾದರೆ ಸಿಗರೇಟ್ ತ್ಯಜಿಸಲೇ ಬೇಕು ಎನ್ನುತ್ತಾರೆ ವೈದ್ಯರು. ಸಿಗರೇಟು ಸೇದುವುದು ಕೇವಲ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಹಲ್ಲಿನ ಆರೋಗ್ಯಕ್ಕೂ ಅಪಾಯವಂತೆ. ಇದರಿಂದ ದಂತಗಳ ಬಣ್ಣ ಬದಲಾಗುತ್ತದೆಯಂತೆ.ಇದನ್ನೂ ಓದಿ: ಬಂಪರ್ ಆಫರ್: ಹಳೆ ಬಿಯರ್ ಬಾಟಲ್ ಮುಚ್ಚಳ ಕೊಟ್ಟು ಚಿಲ್ಡ್ ಬಿಯರ್ ಬಾಟಲ್ ಪಡೆಯಿರಿ
ಟೀ, ಕಾಫೀ ಹಾಗೂ ವೈನ್ ನಿಮ್ಮ ಹಲ್ಲಿನ ಅಂದವನ್ನು ಹಾಳು ಮಾಡಬಹುದು ಎಂದರೆ ನೀವು ನಂಬಲೇ ಬೇಕು! ಇವುಗಳನ್ನು ಕುಡಿಯುವ ಸಂದರ್ಭದಲ್ಲಿ ಸ್ಟ್ರಾ ಬಳಕೆ ಮಾಡಿದರೆ, ಹಲ್ಲನ್ನು ಶುಚಿಯಾಗಿ ಇಟ್ಟುಕೊಳ್ಳಬಹುದಂತೆ. ಇದು ಸಾಧ್ಯವಾಗದ ಪಕ್ಷದಲ್ಲಿ ಅವುಗಳನ್ನು ಕುಡಿದಾದ ನಂತರ ಒಮ್ಮೆ ಹಲ್ಲುಜ್ಜಿದ್ದರೆ ಒಳಿತು ಎಂಬುದು ತಜ್ಞರ ಸಲಹೆ.
ದಾಳಿಂಬೆ ಸೇರಿದಂತೆ ಕೆಲ ಹಣ್ಣುಗಳನ್ನು ಹಲ್ಲಿನ ಅಂದವನ್ನು ಹಾಳುಗೆಡವಬಹುದು. ಇದನ್ನು ತಿನ್ನದೇ ಇರದಿರಲು ಸಾಧ್ಯವಿಲ್ಲ. ಹಾಗಾಗಿ, ಅವುಗಳನ್ನು ತಿಂದಾದ ನಂತರ ಒಮ್ಮೆ ಬ್ರಶ್ ಮಾಡಿದರೆ ಹಲ್ಲಿನ ಹೊಳಪನ್ನು ಉಳಿಸಿಕೊಳ್ಳಬಹುದಂತೆ.
Loading...