Weight Gain: ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಸಾಮಾನ್ಯವಾಗಿ ಜನರು ಜಿಮ್‌ಗೆ ಹೋಗಿ ತೂಕ ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಕೆಲವು ಸಿಂಪಲ್ ವಿಧಾನಗಳನ್ನು ಫಾಲೋ ಮಾಡುವ ಮೂಲಕ ನೀವು ಸುಲಭವಾಗಿ ಮತತು ಆರೋಗ್ಯಕರವಾಗಿ ತೂಕ ಹೆಚ್ಚಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಧಿಕ ತೂಕ (More Weight)  ಎಷ್ಟು ಆರೋಗ್ಯ ಸಮಸ್ಯೆ (Health Problem) ಉಂಟು ಮಾಡುತ್ತದೆಯೋ ಅಷ್ಟೇ ಕಡಿಮೆ ತೂಕವು (Low Weight) ಅನೇಕ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಕಡಿಮೆ ತೂಕದ ವ್ಯಕ್ತಿಯ BMI 18.5 ಕ್ಕಿಂತ ಕಡಿಮೆಯಿದ್ದರೆ, ವ್ಯಕ್ತಿಯು ದುರ್ಬಲ ಮತ್ತು ದೌರ್ಬಲ್ಯ ಅನುಭವಿಸುತ್ತಾನೆ. ತೂಕದ ತರಬೇತಿ ಮತ್ತು ಆಹಾರಕ್ರಮ ಆರೋಗ್ಯಕರ ಡಯಟ್ ಪ್ಲಾನ್ ಈ ಸಮಸ್ಯೆ ಹೋಗಲಾಡಿಸುತ್ತದೆ. ಸಾಮಾನ್ಯವಾಗಿ ಜನರು ಜಿಮ್‌ಗೆ ಹೋಗಿ ತೂಕ ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಕೆಲವು ಸಿಂಪಲ್ ವಿಧಾನಗಳನ್ನು ಫಾಲೋ ಮಾಡುವ ಮೂಲಕ ನೀವು ಸುಲಭವಾಗಿ ಮತತು ಆರೋಗ್ಯಕರವಾಗಿ ತೂಕ ಹೆಚ್ಚಿಸಬಹುದು.

    ತೂಕ ಹೆಚ್ಚಳಕ್ಕೆ ಸಿಂಪಲ್ ಸಲಹೆ

    ನೀವು ಮನೆಯಲ್ಲಿ ನಿಮ್ಮ ತೂಕವನ್ನು ಸುಲಭವಾಗಿ ಹೆಚ್ಚಿಸಲು ತಜ್ಞರು ನೀಡಿರುವ ಕೆಲ ಸಿಂಪಲ್ ಸಲಹೆ ಪಾಲಿಸಬೇಕಾಗುತ್ತದೆ. ಪಬ್‌ಮೆಡ್ ಸೆಂಟ್ರಲ್ ವರದಿ ಪ್ರಕಾರ, ಕಡಿಮೆ ತೂಕದಿಂದ ಥೈರಾಯ್ಡ್ ಸಮಸ್ಯೆ, ತಿನ್ನುವ ಅಸ್ವಸ್ಥತೆ, ಮಧುಮೇಹ ಮತ್ತು ಸೋಂಕು ಬಾಧಿಸುತ್ತವೆ. ಇದರ ಜೊತೆ ಅನಾರೋಗ್ಯಕರ ಆಹಾರ ಮತ್ತು

    ಅನಾರೋಗ್ಯಕರ ಜೀವನಶೈಲಿಯು ಅವನ ತೂಕ ಕಡಿಮೆ ಮಾಡುವ ಮೂಲಕ ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ತೂಕ ಹೆಚ್ಚಳಕ್ಕೂ ನಿಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ನೀವು ಗಮನ ಹರಿಸುವುದು ಮುಖ್ಯ. ಇಲ್ಲಿ ಹೇಳಲಾದ ಸಿಂಪಲ್ ಸಲಹೆಗಳು, ಅದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

    ಆಹಾರದಲ್ಲಿ ಹಾಲನ್ನು ಮರೆಯದೇ ಸೇರಿಸಿ

    ಹಾಲು ಸೇವನೆಯು ಸ್ನಾಯುವಿನ ದ್ರವ್ಯರಾಶಿ ಹೆಚ್ಚಿಸಲು ಮತ್ತು ತೂಕ ಹೆಚ್ಚಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಫುಡ್ ಡೇಟಾ ಸೆಂಟ್ರಲ್ ಪ್ರಕಾರ ಇದು ಪ್ರೋಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬಿನ ಉತ್ತಮ ಸಮತೋಲನ ಹೊಂದಿದೆ.

    ಇದು ಇತರ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲ. ದಿನಕ್ಕೆ ಒಂದರಿಂದ ಎರಡು ಲೋಟ ಹಾಲು ಸೇವನೆ ತೂಕ ತ್ವರಿತವಾಗಿ ಹೆಚ್ಚಿಸಬಹುದು. ನಿಮ್ಮ ಯಾವುದೇ ಊಟದೊಂದಿಗೆ ಅಥವಾ ತೂಕದ ತರಬೇತಿಯ ಮೊದಲು ಅಥವಾ ನಂತರ ನೀವು ಇದನ್ನು ಸೇವಿಸಬಹುದು.

    ಪ್ರೋಟೀನ್ ಹಣ್ಣು ಸ್ಮೂಥಿ ಸೇವಿಸಿ

    ಹಣ್ಣುಗಳ ಸೇವನೆಯು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೇಯೊ ಕ್ಲಿನಿಕ್ ಪ್ರಕಾರ, ಪ್ರೋಟೀನ್ ಹಣ್ಣಿನ ಸ್ಮೂಥಿ ಮನೆಯಲ್ಲಿಯೇ ತಯಾರಿಸುವುದು ತೂಕ ಹೆಚ್ಚಿಸಲು ಆರೋಗ್ಯಕರ ಮಾರ್ಗ. ಇದರ ಮೂಲಕ ಆರೋಗ್ಯಕರ ಪೋಷಕಾಂಶಗಳು ದೇಹಕ್ಕೆ ಹೋಗುತ್ತವೆ.

    ಮತ್ತು ಆರೋಗ್ಯಕರ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರೋಟೀನ್ ಹಣ್ಣಿನ ಸ್ಮೂಥಿಗಳಲ್ಲಿ ಇರುವ ಹೆಚ್ಚಿನ ಕ್ಯಾಲೋರಿಗಳು ಮತ್ತು ಪೋಷಕಾಂಶಗಳು ನಿಮ್ಮನ್ನು ಒಳಗಿನಿಂದ ಬಲವಾಗಿಸುತ್ತವೆ.

    ವ್ಯಾಯಾಮ ಅಭ್ಯಾಸ ಮಾಡಿ

    ನಿಮ್ಮ ದೇಹ ಆರೋಗ್ಯವಾಗಿಡಲು ವ್ಯಾಯಾಮ ಮಾಡಿ. ದೇಹವನ್ನು ಸದೃಢವಾಗಿಡಲು ಮತ್ತು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಕಾರಿ. ಮೇಯೊ ಕ್ಲಿನಿಕ್‌ನ ಸಂಶೋಧನೆ ಪ್ರಕಾರ, ವ್ಯಾಯಾಮವು ಸ್ನಾಯುಗಳನ್ನು ನಿರ್ಮಿಸುವ ಮೂಲಕ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

    ವ್ಯಾಯಾಮವು ನಿಮ್ಮ ಹಸಿವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಭಾರವಾದ ತೂಕ ಎತ್ತುವ ವ್ಯಾಯಾಮಗಳು ಕೊಬ್ಬನ್ನು ಹೆಚ್ಚಿಸುವ ಬದಲು ಸ್ನಾಯು ಬಲಪಡಿಸಲು ಸಹಾಯ ಮಾಡುತ್ತದೆ.

    ಕ್ಯಾಲೋರಿ ಸೇವನೆ ಹೆಚ್ಚಿಸಿ

    ಆಹಾರದಲ್ಲಿ ಕ್ಯಾಲೊರಿ ಪ್ರಮಾಣ ಹೆಚ್ಚಿಸಿದರೆ ತೂಕ ಹೆಚ್ಚುತ್ತದೆ. ಆಹಾರವನ್ನು ನೀವು ಎರಡು ರೀತಿಯಲ್ಲಿ ಬದಲಾಯಿಸಬಹುದು. ಆಹಾರದಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಪ್ರಮಾಣ  ಹೆಚ್ಚಿಸಿ. ಊಟಕ್ಕೆ ಹೆಚ್ಚಿನ ಕ್ಯಾಲೋರಿ ಭಕ್ಷ್ಯ ಸೇರಿಸಿ.

    ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

    ಹೆಚ್ಚೆಚ್ಚು ಪದಾರ್ಥಗಳನ್ನು ಸೇವನೆ ಮಾಡಿ

    ಹೆಚ್ಚು ಪದಾರ್ಥಗಳ ಸೇವನೆ ಮಾಡುವುದು ತೂಕ ಹೆಚ್ಚಿಸುತ್ತದೆ. ಕೆಲವು ತೂಕ ಹೆಚ್ಚಿಸುವ ವಸ್ತುಗಳನ್ನು ಸೇವನೆ ಮಾಡಿ. ಹೆಚ್ಚಿನ ಪೋಷಕಾಂಶಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಇದು ನಿಮ್ಮ ದೇಹವನ್ನು ವೇಗವಾಗಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
    Published by:renukadariyannavar
    First published: