Weight Gain: ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬೇಕಾ? ಹಾಗಾದರೆ ಆಯುರ್ವೇದದಲ್ಲಿದೆ ಇದಕ್ಕೆ ಸಲಹೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ಹೆಚ್ಚಳಕ್ಕೆ ನೀವು ಅನಾರೋಗ್ಯಕರ ಪದಾರ್ಥ ಬಳಸುವುದು ಸರಿಯಲ್ಲ. ಇದು ನಿಮ್ಮ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ನೀವು ಅನಾರೋಗ್ಯಕರ ಆಹಾರ ಸೇವಿಸಿದರೆ ಅದು ಹೆಚ್ಚಿನ ಸಮಸ್ಯೆ ಹುಟ್ಟು ಹಾಕುತ್ತದೆ. ಹಲವು ರೋಗಗಳು ಹುಟ್ಟಿಕೊಳ್ಳಲು ಕಾರಣ ಆಗುತ್ತವೆ.

  • Share this:

    ತುಂಬಾ ಜನರು (People) ತೂಕ ಇಳಿಕೆಗೆ (Weight Loss) ಹೆಣಗುತ್ತಾರೆ. ವರ್ಕೌಟ್ (Workout) ಮಾಡ್ತಾರೆ, ಆಹಾರ ಕ್ರಮ ಫಾಲೋ ಮಾಡ್ತಾರೆ. ಆದ್ರೆ ಕೆಲವು ಜನರು ತೂಕ ಹೆಚ್ಚಳಕ್ಕೆ (Weight Gain) ಕಷ್ಟ ಪಡ್ತಾರೆ. ಹೇಗೆ ಸ್ಥೂಲಕಾಯ, ಬೊಜ್ಜು ಹೊಂದಿರುವ ಜನರು ಆರೋಗ್ಯ ಸಮಸ್ಯೆ (Health Problem) ಎದುರಿಸುತ್ತಾರೋ, ಹಾಗೆಯೇ ತೆಳ್ಳಗೆ ಇರುವವರು ಸಹ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಹೇಗೆ ದಪ್ಪ ಇರುವವರನ್ನು ಕಂಡು ಜನರು ಅಪಹಾಸ್ಯ ಮಾಡುತ್ತಾರೋ, ಹಾಗೆಯೇ ತೆಳ್ಳಗೆ ಇರುವವರನ್ನು ಕಂಡು ಜನರು ಅಪಹಾಸ್ಯ ಮಾಡ್ತಾರೆ. ಹೇಗಿದ್ದರೂ ಜನರು ಆಡಿಕೊಳ್ತಾರೆ. ಅದಕ್ಕೆಲ್ಲಾ ಕಿವಿಗೊಡುವುದು ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಆದರೆ ಅದೆಲ್ಲದರ ಬದಲು ನೀವು ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಹೆಚ್ಚು ಗಮನಹರಿಸಿ.


    ಆರೋಗ್ಯಕರವಾಗಿ ತೂಕ ಹೆಚ್ಚಿಸುವುದು ಹೇಗೆ?


    ತೂಕ ಹೆಚ್ಚಳಕ್ಕೆ ನೀವು ಅನಾರೋಗ್ಯಕರ ಪದಾರ್ಥ ಸೇವನೆ ಮಾಡುವುದು ಸರಿಯಲ್ಲ. ಇದು ನಿಮ್ಮ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ನೀವು ಅನಾರೋಗ್ಯಕರ ಆಹಾರ ಸೇವಿಸಿದರೆ ಅದು ಹೆಚ್ಚಿನ ಸಮಸ್ಯೆ ಹುಟ್ಟು ಹಾಕುತ್ತದೆ.


    ತೂಕ ಹೆಚ್ಚಳಕ್ಕೆ ಜನರು ಫಾಸ್ಟ್ ಫುಡ್, ಎಣ್ಣೆಯುಕ್ತ ಆಹಾರ ಅಥವಾ ಸಿಹಿ ಪದಾರ್ಥಗಳ ಸೇವನೆ ಮಾಡ್ತಾರೆ. ಆದರೆ ಇದು ಅನಾರೋಗ್ಯಕರ ತೂಕ ಹೆಚ್ಚಿಸುತ್ತದೆ. ಜೊತೆಗೆ ಹಲವು ರೋಗಗಳು ಹುಟ್ಟಿಕೊಳ್ಳಲು ಕಾರಣ ಆಗುತ್ತವೆ.




    ಯಾವಾಗಲೂ ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿ. ಅದಕ್ಕಾಗಿ ಆರೋಗ್ಯಕರ ಪದಾರ್ಥ ಸೇವನೆ ಮಾಡಿ. ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಅವರು ತೂಕ ಹೆಚ್ಚಳಕ್ಕೆ ಕೆಲವು ಆರೋಗ್ಯಕರ ಆಯುರ್ವೇದ ವಿಧಾನಗಳ ಬಗ್ಗೆ ಹೇಳಿದ್ದಾರೆ.


    ತೂಕ ಹೆಚ್ಚಿಸಲು ಆಯುರ್ವೇದ ವಿಧಾನ


    ಆರೋಗ್ಯಕರ ರೀತಿಯಲ್ಲಿ ಮತ್ತು ತ್ವರಿತವಾಗಿ ತೂಕ ಹೆಚ್ಚಳಕ್ಕೆ ತುಪ್ಪದಿಂದ ಮಾಡಿದ ಪೂರಿ ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ. ಆಯುರ್ವೇದದಲ್ಲಿ ಇದನ್ನು ಘೃತ್ಪುರ ಎಂದು ಕರೆಯುತ್ತಾರೆ. ಘೃತ್ಪುರ ಎಂಬುದು ಸಂಸ್ಕೃತ ಪದವಾಗಿದ್ದು, ತುಪ್ಪದಲ್ಲಿ ಅದ್ದಿದ್ದು ಎಂಬ ಅರ್ಥ ಕೊಡುತ್ತದೆ.


    ಘೃತ್ಪುರ ಸೇವನೆ ಮಾಡಿ


    ಘೃತ್ಪುರ ತೂಕ ಹೆಚ್ಚಿಸುವ ಆಯುರ್ವೇದ ಕ್ರಮ. ಇದು ನಿಮ್ಮ ತೂಕವನ್ನು ಆರೋಗ್ಯಕರ ರೀತಿಯಲ್ಲಿ ಹೆಚ್ಚಿಸುತ್ತದೆ. ನಿಮ್ಮ ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.


    ಘೃತ್ಪುರ ಸೇವನೆಯು ದೇಹವನ್ನು ಪೋಷಿಸುತ್ತದೆ. ತೂಕ ಹೆಚ್ಚಿಸುತ್ತದೆ. ದೇಹವನ್ನು ಬಲಪಡಿಸುತ್ತದೆ. ಸಂತಾನೋತ್ಪತ್ತಿ ಅಂಗಾಂಶದ ಆರೋಗ್ಯ ಸುಧಾರಣೆಗೆ ಸಹಕಾರಿ. ಮೂಳೆಗಳು, ಕೀಲುಗಳು ಮತ್ತು ಸ್ನಾಯುಗಳ ಆರೋಗ್ಯ ಸುಧಾರಿಸುತ್ತದೆ. ರಕ್ತವು ಅಂಗಾಂಶಗಳನ್ನು ಪೋಷಿಸುತ್ತದೆ.


    ಸಾಂದರ್ಭಿಕ ಚಿತ್ರ


    ಘೃತ್ಪುರ ತಯಾರಿಸುವುದು ಹೇಗೆ?


    ಇದಕ್ಕೆ ಗೋಧಿ ಹಿಟ್ಟು, ಹಾಲು, ತೆಂಗಿನಕಾಯಿ, ತುಪ್ಪ ಮುಂತಾದ ಸಾಮಗ್ರಿಗಳಿದ್ದರೆ ಸಾಕು. ಸರಿಯಾದ ಪ್ರಮಾಣದ ಸಕ್ಕರೆ ಮಿಠಾಯಿ ತೆಗೆದುಕೊಳ್ಳಿ. ಇದಕ್ಕೆ ತೆಂಗಿನ ಪುಡಿ ಮತ್ತು ಹಾಲು ಹಾಕಿ. ಒಂದು ಕಪ್ ಗೋಧಿ ಹಿಟ್ಟು ಮಿಶ್ರಣ ಮಾಡಿ ಮತ್ತು ಪುಡಿಯನ್ನು ಹಿಟ್ಟಿನೊಳಗೆ ಬೆರೆಸಿ. ನಾದಿಕೊಳ್ಳಿ. ಹಿಟ್ಟಿನ ಉಂಡೆ ಮಾಡಿ, ವೃತ್ತಾಕಾರಕ್ಕೆ ಲಟ್ಟಿಸಿ.


    ನಂತರ ಪ್ಯಾನ್ ಬಿಸಿ ಮಾಡಿ. ತುಪ್ಪ ಹಾಕಿರಿ. ಪೂರಿಯನ್ನು ಅದರಲ್ಲಿ ಬೇಯಿಸಿ. ತೆಗೆಯಿರಿ. ನಂತರ ತೆಂಗಿನಕಾಯಿ ಚಟ್ನಿ ಅಥವಾ ತರಕಾರಿ ಜೊತೆ ಸೇವಿಸಿ.


    ಈ ಪಾಕವಿಧಾನ ಯಾರು ಪ್ರಯತ್ನಿಸಬೇಕು ಮತ್ತು ಯಾರು ಸೇವಿಸಬೇಕು?


    ತೆಳ್ಳಗಿದ್ದರೆ ಮತ್ತು ತೂಕ ಹೆಚ್ಚಳ ಬಯಸಿದರೆ, ದೇಹದಲ್ಲಿ ಅಪೌಷ್ಟಿಕತೆ ಇದ್ದಾಗ, ದೈಹಿಕವಾಗಿ ದುರ್ಬಲರಾಗಿದ್ದರೆ, ಮೂಳೆ ಮತ್ತು ಕೀಲು ಶಕ್ತಿ ದೌರ್ಬಲ್ಯ, ಮಗುವಾಗಿದ್ದರೆ ಮಾತ್ರ ಸೇವನೆ ಮಾಡಿ.


    ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!


    ಈ ಪರಿಹಾರವು ಭಾರ ಮತ್ತು ಕಫ ಹೆಚ್ಚಿಸುತ್ತದೆ. ಮಧುಮೇಹ, ಪಿಸಿಓಎಸ್, ಹೈಪೋಥೈರಾಯ್ಡಿಸಮ್, ಬೊಜ್ಜು ಅಥವಾ ಕಳಪೆ ಜೀರ್ಣಕ್ರಿಯೆ ಇದ್ದವರು ತಿನ್ನಬೇಡಿ ಅಂತಾರೆ ತಜ್ಞರು.

    Published by:renukadariyannavar
    First published: