ನಾವಿರುವ ಸಮಾಜದಲ್ಲಿ (Society) ಬೇರೆಯವರೊಂದಿಗೆ ಬೆರೆಯುವುದು ಮಾತನಾಡುವುದು ಮಾಡಲೇಬೇಕಾಗುತ್ತದೆ. ಆದ್ರೆ ಯಾರೊಂದಿಗೆ ಬೆರೆಯುವುದು ಹೇಗೆ ಮಾತನಾಡುವುದು ನಮ್ಮ ಜೊತೆ ಮಾತನಾಡಲು ಅವರಿಗೆ ಇಷ್ಟವಾಗುವಂತೆ ಹೇಗೆ ನಡೆದುಕೊಳ್ಳುವುದು ಅನ್ನೋದು ಕೆಲವೊಮ್ಮೆ (Sometimes) ಕಗ್ಗಂಟಾದಂತಾಗುತ್ತದೆ. ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಮಾಡುವ ತಪ್ಪುಗಳಿಂದ ಜನರು ನಮ್ಮ ಜೊತೆ ಮಾತನಾಡಲು (Talk) ಇಷ್ಟಪಡದೇ ಇರಬಹುದು.
ಅಂದಹಾಗೆ ಜನರು ನಿಮ್ಮೊಂದಿಗೆ ಗಂಭೀರ ವಿಷಯಗಳ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತಾರೆಯೇ? ಅದು ಎಷ್ಟೇ ಮುಖ್ಯವಾಗಿದ್ದರೂ ಮಾತನಾಡುವುದನ್ನು ತಪ್ಪಿಸುತ್ತಿರುವಂತೆ ನಿಮಗೆ ಅನ್ನಿಸುತ್ತದೆಯೇ? ಹಾಗಿದ್ರೆ ಜನರು ತಮ್ಮ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡದಿರುವುದಕ್ಕೆ ಕಾರಣ ಇರಬಹುದು.
ಏನಿದು ಭಾವನಾತ್ಮಕ ಅಪ್ರಭುದ್ಧತೆ ?
ಯಾರೋ ನಿಮ್ಮ ಬಳಿ ಭಾವನಾತ್ಮಕ ವಿಷಯಗಳನ್ನು ಹಂಚಿಕೊಂಡಾಗ ಅಥವಾ ಅಂಥ ಸಂದರ್ಭಗಳಲ್ಲಿ ನೀವು ಪ್ರಬುದ್ಧರಾಗಿ, ಸರಿಯಾಗಿ ನಡೆದುಕೊಳ್ಳದೇ ಇರಬಹುದು. ಸೂಕ್ಷ್ಮ ಅಥವಾ ಮಹತ್ವದ ಸಂದರ್ಭಗಳಿಗೆ ನೀವು ಪ್ರತಿಕ್ರಿಯಿಸುವ ವಿಧಾನವು ಬೇರೆಯವರಿಗೆ ಇಷ್ಟವಾಗದೇ ಇರಬಹುದು. ಇದು ಜನರು ನಿಮ್ಮೊಂದಿಗೆ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವುದನ್ನು ತಪ್ಪಿಸಲು ಕಾರಣವಾಗುತ್ತದೆ.
ಇದನ್ನೂ ಓದಿ: Teacher Training: ತರಬೇತಿಗಾಗಿ 36 ಶಾಲಾ ಪ್ರಾಂಶುಪಾಲರನ್ನು ಸಿಂಗಾಪುರಕ್ಕೆ ಕಳುಹಿಸಲು ಸಜ್ಜಾದ ಪಂಜಾಬ್ ಸರ್ಕಾರ
ಇದು ನೀವು ಕಡಿಮೆ ಭಾವನಾತ್ಮಕ ಪ್ರಬುದ್ಧತೆಯನ್ನು ಹೊಂದಿರುವಿರಿ ಎಂಬುದರ ಸಂಕೇತವಾಗಿದೆ. ಅಂದರೆ ಸೂಕ್ಷ್ಮ ಸಂದರ್ಭಗಳಲ್ಲಿ ಪ್ರಬುದ್ಧವಾಗಿ ಮತ್ತು ತಾರ್ಕಿಕವಾಗಿ ನಡೆದುಕೊಳ್ಳಲು ನೀವು ಸಾಕಷ್ಟು ಸಮರ್ಥರಾಗಿಲ್ಲ ಎಂದು ಹೇಳಬಹುದು. ಹಾಗಿದ್ರೆ ಅಂಥ ಯಾವ ಅಂಶಗಳು ಭಾವನಾತ್ಮಕ ಪ್ರಭುದ್ಧತೆಯನ್ನು ನಿರ್ಧರಿಸುತ್ತವೆ ಅನ್ನೋದನ್ನು ನೋಡೋಣ.
1.ನಿಮ್ಮ ಸಮಸ್ಯೆ ಅಥವಾ ಪರಿಸ್ಥಿತಿಯನ್ನು ನಿಭಾಯಿಸಲು ಇತರರನ್ನು ಕೇಳುವುದು: ಯಾವುದಾದರೂ ವಿಷಯದ ಬಗ್ಗೆ ಭಾವನಾತ್ಮಕವಾಗಿ ನೀವು ಕುಗ್ಗಿ ಹೋದಾಗ ಅಥವಾ ಅಂಥ ಸಂದರ್ಭವನ್ನು ನಿಭಾಯಿಸಲು ತಿಳಿಯದಿದ್ದಾಗ ನೀವು ಸಹಾಯಕ್ಕಾಗಿ ಇತರರನ್ನು ಕೇಳುತ್ತೀರಾ?
ಹಾಗಿದ್ರೆ ಇದರರ್ಥ ನೀವು ಬೇರೊಬ್ಬರನ್ನು ನಿಮಗಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು. ಒಂದು ಅಥವಾ ಎರಡು ಸಲ ಇದು ಸರಿಯಾಗಿದ್ದರೂ, ನಿಮ್ಮ ಭಾವನಾತ್ಮಕ ಕೆಲಸ ಅಥವಾ ಹೊರೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇತರರನ್ನು ಕೇಳುವುದು ಸರಿಯಲ್ಲ.
ಇದು ದೀರ್ಘಾವಧಿಯಲ್ಲಿ ನಕಾರಾತ್ಮಕ ಅಂಶವಾಗಿ ಪರಿಣಮಿಸಬಹುದು. ನಿಮ್ಮ ಭಾವನಾತ್ಮಕ ಹೊರೆಗಳನ್ನು ನೀವೇ ನಿಭಾಯಿಸಬೇಕು. ಸನ್ನಿವೇಶಗಳು ಮತ್ತು ಭಾವನೆಗಳನ್ನು ಬೇರೊಬ್ಬರ ಮೇಲೆ ತಳ್ಳದೆ ಏಕಾಂಗಿಯಾಗಿ ನಿಭಾಯಿಸುವುದನ್ನು ಕಲಿಯಬೇಕು.
2.ಅಣಕಿಸುವುದು ಅಥವಾ ಸೂಕ್ಷ್ಮವಾಗಿ ನಿಂದಿಸುವುದು: ನೀವು ಇತರರಿಗೆ ಅವರ ಬಗ್ಗೆಯೇ ಕೆಟ್ಟ ಭಾವನೆ ಮೂಡಿಸಲು ಯತ್ನಿಸಿದರೆ ಅಥವಾ ಅವರನ್ನು ಅಣಕಿಸಲು ಅಥವಾ ಸೂಕ್ಷ್ಮವಾಗಿ ನಿಂದಿಸುವುದನ್ನು ಮಾಡಿದರೆ ಅದೊಂದು ಕೆಟ್ಟ ರೂಢಿ ಎಂದೇ ಹೇಳಬಹುದು.
ಅದೊಂದು ಕೆಟ್ಟ ವಿಷಯವಾಗಿದೆ. ಇದರಿಂದ ಜನರು ನಿಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸುತ್ತಾರೆ. ಏಕೆಂದರೆ ಜನರು ಅವರಿಗೆ ಸಹಾಯ ಬೇಕಾದಾಗ ಸಾಂತ್ವನ ನೀಡುವವರನ್ನು ಬಯಸುತ್ತಾರೆಯೇ ಹೊರತು ವಿಮರ್ಶಕರಲ್ಲ.
3.ನಿರಂತರವಾಗಿ ಸಲಹೆ ನೀಡುವುದು: ಯಾರಾದರೂ ತಮ್ಮ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರು ನಿಮ್ಮಿಂದ ಸಲಹೆಗಳನ್ನು ಬಯಸದಿರಬಹುದು. ಆದರೆ ನೀವು ಅವರ ಮಾತುಗಳನ್ನು ಕೇಳಲು ಮತ್ತು ಅವರಿಗೆ ಸಾಂತ್ವನ ನೀಡಬೇಕೆಂದು ಬಯಸುತ್ತಾರೆ.
ಆದರೆ ಅವರು ಕೇಳದಿದ್ದರೂ ನೀವು ಯಾವಾಗಲೂ ನಿಮ್ಮ ಅಭಿಪ್ರಾಯಗಳನ್ನು ಅಥವಾ ಸಲಹೆಯನ್ನು ಜನರ ಮೇಲೆ ಹೇರುತ್ತಿದ್ದರೆ, ಅವರು ನಿಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಬಹುದು.
ಆತಂಕಕ್ಕೆ ಸಾಂತ್ವನದ ಮಾತು
ಯಾರಾದರೂ ಆತಂಕದಲ್ಲಿದ್ದರೆ, ಅವರು ನಿಮ್ಮ ಪಕ್ಕದಲ್ಲಿ ಕುಳಿತು ಸಾಂತ್ವನದ ಮಾತುಗಳನ್ನು ಕೇಳಲು ಬಯಸುತ್ತಾರೆ. ಹೊರತಾಗಿ ನಿಮ್ಮ ಸಲಹೆಗಳನ್ನಲ್ಲ. ಇದು ಅವರ ಸಮಸ್ಯೆಯ ಬಗ್ಗೆ ನಿಮಗೆ ನಿಜವಾಗಿಯೂ ಆಸಕ್ತಿಯಿಲ್ಲ ಎಂದು ಭಾವಿಸಲು ಕಾರಣವಾಗಬಹುದು. ಒಟ್ಟಾರೆ ಪ್ರತಿಯೊಬ್ಬರ ಸ್ವಭಾವವೂ ಬೇರೆ ಬೇರೆ. ಆದರೆ ನಾವು ಗಂಭೀರವಾಗಿ ತೆಗೆದುಕೊಳ್ಳದ ಅದೆಷ್ಟೋ ನಮ್ಮ ಸ್ವಭಾವಗಳು ಬೇರೆಯವರಿಗೆ ಬೇಸರವನ್ನು ಉಂಟುಮಾಡಬಹುದು. ಅಂಥ ಸ್ವಭಾವಗಳ ಬಗ್ಗೆ ನಮಗೆ ಗೊತ್ತಾದಾಗ ನಾವು ಅದನ್ನು ಸರಿಪಡಿಸಿಕೊಳ್ಳಬಹುದು. ಆದ್ದರಿಂದ ನೀವು ಇಂಥ ಮನಸ್ಥಿತಿ ಹೊಂದಿದ್ದರೆ ಅದನ್ನು ಇಂದಿನಿಂದಲೇ ಬದಲಾಯಿಸಿಕೊಳ್ಳಲು ಯತ್ನಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ