ಸಂಗಾತಿಯ ಚಾಟಿಂಗ್ ಸಂದೇಹ ನಿವಾರಿಸಲು ಬಂದಿದೆ ಹೊಸ ಆ್ಯಪ್

news18
Updated:June 25, 2018, 8:48 AM IST
ಸಂಗಾತಿಯ ಚಾಟಿಂಗ್ ಸಂದೇಹ ನಿವಾರಿಸಲು ಬಂದಿದೆ ಹೊಸ ಆ್ಯಪ್
news18
Updated: June 25, 2018, 8:48 AM IST

    ಡಿಜಿಟಲ್ ಯುಗದಲ್ಲಿ ಎಲ್ಲವೂ ಬದಲಾಗುತ್ತಿದೆ. ಪ್ರೇಮಿಗಳ ನಡುವೆ ಮೊಬೈಲ್ ಸಂಭಾಷಣೆ ಕಡಿಮೆಯಾಗಿದ್ದು, ಫೇಸ್​​ಬುಕ್​ ಚಾಟ್​ ಮತ್ತು ವಾಟ್ಸಾಪ್ ಮೂಲಕವೇ ಮೌನ ಮಾತಾಗುತ್ತಿದೆ. ಇದುವೇ ಡಿಜಿಟಲ್ ಯುಗದ ಹದಿಹರೆಯದ ಗೆಳೆಯ-ಗೆಳೆತಿಯರ ವೈಮನಸ್ಯಕ್ಕೂ ಕಾರಣವಾಗುತ್ತಿದೆ. ಮೊಬೈಲ್​ನಲ್ಲಿ ಸದಾ ಕಾಲ ಆನ್​ಲೈನ್​​ನಲ್ಲಿದ್ದರೂ, ನಿಮ್ಮೊಂದಿಗೆ  ಚಾಟ್​ ಮಾಡದೇ ನಿರ್ಲಕ್ಷಿಸುತ್ತಿದ್ದಾರೆ  ಎಂಬ ಭಾವನೆ ನಿಮ್ಮದಾಗಿದ್ದರೆ ಬಗೆಹರಿಸಿಕೊಳ್ಳಲು ಬಂದಿದೆ ಹೊಸ ಆ್ಯಪ್.ಈ ಹೊಸ ಅಪ್ಲಿಕೇಶನ್ ಹೆಸರು Mspy. ಮೊಬೈಲ್ ಅಪ್ಲಿಕೇಶನ್​ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ಕರೆಯಲಾಗುವ ಈ ಆ್ಯಪ್​ ಬಳಸಿ ನಿಮಗೆ ಬೇಕಾದವರ ಕರೆಗಳ ಇತಿಹಾಸವನ್ನು, ವಾಟ್ಸಾಪ್, ಟ್ವಿಟ್ಟರ್, ಇನ್​ಸ್ಟಾಗ್ರಾಂ, ಫೇಸ್​ಬುಕ್​ ಸಂದೇಶಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.


ಇದನ್ನು ಬಳಸಲು ಮೊಬೈಲ್​ನಲ್ಲಿ Mspy ಅಪ್ಲಿಕೇಶನ್ ಡೌನ್​ಲೋಡ್​ ಮಾಡಿ, ಖಾತೆಯನ್ನು ರಚಿಸಬೇಕು.


ಬಳಿಕ ನಿಮಗೆ ಯಾರ ಮೊಬೈಲ್​ನ ಮಾಹಿತಿ ಬೇಕಾಗಿದೆ, ಅವರ ಫೋನ್​ನಲ್ಲೂ Mspy ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಸಿ.


ಮಾಹಿತಿ ಬೇಕಿರುವ ಅವರ ಮೊಬೈಲ್​ನಲ್ಲೂ ನಿಮ್ಮ ಖಾತೆಯಿಂದಲೇ ಲಾಗಿನ್ ಮಾಡಬೇಕು.

Loading...

ಹೀಗೆ ಮಾಡುವುದರಿಂದ Mspy ಆ್ಯಪ್​ ಮೂಲಕ ಗೆಳೆಯರ-ಗೆಳೆತಿಯರ ಕರೆ, ಚಾಟಿಂಗ್ ಇತ್ಯಾದಿ ಮಾಹಿತಿಗಳನ್ನು ನಿಮ್ಮ ಮೊಬೈಲ್​ನಲ್ಲಿ ಪಡೆಯಬಹುದಾಗಿದೆ.


ವಾಟ್ಸಾಪ್, ಫೇಸ್​ಬುಕ್​, ಟ್ವಿಟ್ಟರ್ ಮತ್ತು ಇನ್​ಸ್ಟಾಗ್ರಾಂ ಮೇಲೆ ಹಿಡಿತ ಸಾಧಿಸುವ ಈ ಆ್ಯಪ್​ನ್ನು ಡೌನ್​ಲೋಡ್​ ಮಾಡಲು ಹಣ ಪಾವತಿಸಬೇಕಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...