• Home
  • »
  • News
  • »
  • lifestyle
  • »
  • Skin Care: ತ್ವಚೆಯ ಪ್ರಕಾರ ಕಂಡು ಹಿಡಿಯುವುದು ಹೇಗೆ? ಈ ಟೆಸ್ಟ್ ಮಾಡಿ ನೋಡಿ!

Skin Care: ತ್ವಚೆಯ ಪ್ರಕಾರ ಕಂಡು ಹಿಡಿಯುವುದು ಹೇಗೆ? ಈ ಟೆಸ್ಟ್ ಮಾಡಿ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರು ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಾರೆ. ಆದರೆ ಕೆಲವರು ನೀರು ಸೇವನೆ ಕಡಿಮೆ ಮಾಡ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಕೆಲವರು ನೀರು ಕುಡಿಯುವುದೇ ಇಲ್ಲ. ಬಾಯಾರಿಕೆ ಆಗಲ್ಲವೆಂದು ನೀರು ಕಡಿಮೆ ಕುಡಿಯುತ್ತಾರೆ.

  • Share this:

    ಚಳಿಗಾಲದಲ್ಲಿ (Winter) ಒಣ ತ್ವಚೆ ಸಮಸ್ಯೆ (Dry Skin Problem) ಹೆಚ್ಚು ಕಾಡುತ್ತದೆ. ತಂಪು ಗಾಳಿಗೆ (Cold Wave) ಹಾಗೂ ವಾತಾವರಣದ (Weather) ಬದಲಾವಣೆ ಚಳಿಗಾಲದ ಒಣ ಹವೆಯಿಂದ ತ್ವಚೆ ಹೆಚ್ಚು ಒಣಗುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜನರು (People) ವಿವಿಧ ಮಾಯಿಶ್ಚರೈಸರ್ ಬಳಕೆ ಮಾಡ್ತಾರೆ. ಸ್ಕಿನ್ ಡ್ರೈ ಆಗುವುದನ್ನು ತಪ್ಪಿಸಲು ಮಸಾಜ್, ಎಣ್ಣೆ ಹಚ್ಚುವುದು ಸೇರಿದಂತೆ ಸಾಕಷ್ಟು ಕೇರ್ ತೆಗೆದುಕೊಳ್ತಾರೆ. ಒಣ ತ್ವಚೆಗೆ ಆರೈಕೆ ಮಾಡದೇ ಹೋದ್ರೆ ಅದು ತುರಿಕೆ, ಬಿರುಕು ಬಿಡುವುದು ಸೇರಿದಂತೆ ತ್ವಚೆಯ ಸಮಸ್ಯೆ ಉಂಟು ಮಾಡುತ್ತದೆ. ಅದಾಗ್ಯೂ ಕೆಲವರು ಎಲ್ಲಾ ಋತುಮಾನದಲ್ಲಿ ಒಣ ತ್ವಚೆ ಸಮಸ್ಯೆ ಅನುಭವಿಸುತ್ತಾರೆ.


    ತ್ವಚೆ ಯಾವ ಪ್ರಕಾರದ್ದು ಎಂದು ಗುರುತಿಸುವುದು ಹೇಗೆ?


    ಇನ್ನು ಕೆಲವರಿಗೆ ತಮ್ಮ ತ್ವಚೆ ಯಾವ ಪ್ರಕಾರದ್ದು ಎಂಬುದೇ ಗೊತ್ತಾಗುವುದಿಲ್ಲ. ಕೆಲವರಿಗೆ ತಮ್ಮ ತ್ವಚೆ ಆಯ್ಲಿಯೋ, ಒಣ ತ್ವಚೆಯೋ ಎಂಬುದೇ ಗೊತ್ತಿರುವುದಿಲ್ಲ. ಹಾಗಾದ್ರೆ ಇಂದು ನಾವು ತ್ವಚೆಯ ಪ್ರಕಾರ ಯಾವುದು ಎಂದು ಹೇಗೆ ತಿಳಿಯುವುದು ಎಂಬುದನ್ನು ಇಲ್ಲಿ ನೋಡೋಣ.


    ಕೆಲವರು ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಾರೆ. ಆದರೆ ಕೆಲವರು ನೀರು ಸೇವನೆ ಕಡಿಮೆ ಮಾಡ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಕೆಲವರು ನೀರು ಕುಡಿಯುವುದೇ ಇಲ್ಲ. ಬಾಯಾರಿಕೆ ಆಗಲ್ಲವೆಂದು ನೀರು ಕಡಿಮೆ ಕುಡಿಯುತ್ತಾರೆ. ಇದರಿಂದ ದೇಹದ ಅನೇಕ ಭಾಗಗಳಲ್ಲಿ ಶುಷ್ಕತೆ ಹೆಚ್ಚುತ್ತದೆ.




    ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆಯಿಂದಲೂ ಒಣ ತ್ವಚೆ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಚರ್ಮದ ಶುಷ್ಕತೆ ಹೆಚ್ಚಾಗುತ್ತದೆ. ಅದಾಗ್ಯೂ ನಿಮಗೆ ತ್ವಚೆಯು, ಒಣ ತ್ವಚೆಯೋ ಅಥವಾ ಶುಷ್ಕ ಚರ್ಮವೋ ಗೊತ್ತಾಗದೇ ಹೋಗಿದ್ದರೆ, ಅದನ್ನು ಕಂಡು ಹಿಡಿಯುವ ವಿಧಾನವನ್ನು ಇಲ್ಲಿ ತಿಳಿಯೋಣ.


    ಚರ್ಮ ಒಣಗುವುದು ಯಾವಾಗ?


    ಚರ್ಮದಲ್ಲಿ ನೀರಿನ ಕೊರತೆ ಉಂಟಾದಾಗ ಚರ್ಮವು ಒಣಗುತ್ತದೆ. ಈ ಸಮಸ್ಯೆ ಯಾವುದೇ ರೀತಿಯ ಚರ್ಮ ಹೊಂದಿರುವ ವ್ಯಕ್ತಿಗೆ ಬರಬಹುದು. ಎಣ್ಣೆಯುಕ್ತ ಮತ್ತು ಸಂಯೋಜನೆಯ ಚರ್ಮ ಹೊಂದಿರುವ ಜನರು ಸಹ ನಿರ್ಜಲೀಕರಣ ಅನುಭವಿಸಬಹುದು.


    ಅಂತಹ ಚರ್ಮವು ಸಾಮಾನ್ಯವಾಗಿ ಮಂದ ಮತ್ತು ನಿರ್ಜೀವವಾಗಿ ಕಾಣಿಸುತ್ತದೆ. ಒಣ ಚರ್ಮವು ಸ್ಥಿತಿಸ್ಥಾಪಕತ್ವ ಹೊಂದಿರುವುದಿಲ್ಲ. ಇದಕ್ಕಾಗಿ ನೀವು ಇಲ್ಲಿ ಹೇಳಲಾದ ವಿಧಾನದ ಮೂಲಕ ಪರೀಕ್ಷಿಸಿಕೊಳ್ಳಬಹುದು.


    ಪ್ಯಾಚ್ ಟೆಸ್ಟ್


    ಚರ್ಮವು ನಿರ್ಜಲೀಕರಣ ಅಥವಾ ಒಣಗಿದೆಯೋ, ಇಲ್ಲವೋ ಅಥವಾ ಚರ್ಮಕ್ಕೆ ನೀರಿನ ಕೊರತೆ ಇದೆಯೇ? ಎಂಬುದನ್ನು ಕಂಡು ಹಿಡಿಯಲು ನೀವು ಈ ಪ್ಯಾಚ್ ಟೆಸ್ಟ್ ಮಾಡಿ ನೋಡಬಹುದು.


    ಇದು ಅತ್ಯಂತ ನಿಖರವಾದ ವಿಧಾನ ಹೌದೇ ಅಥವಾ ಅಲ್ಲವೋ ಎಂಬುದರ ಬಗ್ಗೆ ಹೇಳಲಾಗಿಲ್ಲ. ಆದರೂ ಈ ಪರೀಕ್ಷೆ ಪರಿಣಾಮಕಾರಿ ಎನ್ನಲಾಗಿದೆ. ಪಿಂಚ್ ಮಾಡುವ ವಿಧಾನದ ಮೂಲಕ ನೀವು ತ್ವಚೆಯ ಬಗ್ಗೆ ತಿಳಿಯಬಹುದು.


    ಪಿಂಚ್ ಮಾಡಲು ಕೆನ್ನೆ, ಹೊಟ್ಟೆ, ಎದೆ ಅಥವಾ ನಿಮ್ಮ ಕೈಯ ಹಿಂಭಾಗದಲ್ಲಿ ಸ್ವಲ್ಪ ಪ್ರಮಾಣದ ಚರ್ಮವನ್ನು ಪಿಂಚ್ ಮಾಡಿ, ಕೆಲವು ಸೆಕೆಂಡು ಹಾಗೇ ಹಿಡಿದಿಟ್ಟುಕೊಂಡು ನಂತರ ಬಿಡಿ. ಆಗ ಚರ್ಮವು ಮತ್ತೆ ಅದೇ ಆಕಾರಕ್ಕೆ ಮರಳಿದರೆ ತ್ವಚೆ ನಿರ್ಜಲೀಕರಣಗೊಂಡಿಲ್ಲ ಎಂದರ್ಥ.


    ಸಾಂದರ್ಭಿಕ ಚಿತ್ರ


    ಚರ್ಮವನ್ನು ಬಿಟ್ಟಾಗ ಮತ್ತೆ ಅದೇ ಆಕಾರಕ್ಕೆ ಮರಳಲು ಸ್ವಲ್ಪ ಸಮಯ ತೆಗೆದುಕೊಂಡರೆ ನಿಮ್ಮ ದೇಹದಲ್ಲಿ ನೀರಿನ ಕೊರತೆಯಿಲ್ಲ ಎಂದರ್ಥ. ಈ ಪರೀಕ್ಷೆಯನ್ನು ದೇಹದ ಇತರೆ ಭಾಗಗಳಲ್ಲಿ ಮತ್ತೆ ಪ್ರಯತ್ನಿಸಿ ನೋಡಬಹುದು.


    ತ್ವಚೆ ನಿರ್ಜಲೀಕರಣಗೊಂಡಾಗ ಈ ಲಕ್ಷಣಗಳು ಕಾಣಿಸುತ್ತವೆ


    ಕಣ್ಣಿನ ಕೆಳಗೆ ಕಪ್ಪು ವಲಯವಾಗುತ್ತದೆ, ಕಣ್ಣುಗಳ ಕೆಳಗೆ ಆಯಾಸ ಕಾಣಿಸುತ್ತದೆ, ತ್ವಚೆಯಲ್ಲಿ ತುರಿಕೆ ಇರುತ್ತದೆ, ಚರ್ಮದ ಶುಷ್ಕತೆ ಸಮಸ್ಯೆ, ಗೆರೆಗಳು ಕಾಣಿಸುತ್ತವೆ, ಸುಕ್ಕುಗಳು ಉಂಟಾಗುತ್ತವೆ. ಈ ಲಕ್ಷಣಗಳು ನಿಮ್ಮ ತ್ವಚೆ ನಿರ್ಜಲೀಕರಣಗೊಂಡಿದೆ ಎಂದು ತಿಳಿಸುತ್ತದೆ.


    ಒಣ ಚರ್ಮದ ಲಕ್ಷಣಗಳು ಯಾವವು?


    ಒಣ ಚರ್ಮವು, ಎಣ್ಣೆಯಂಶ ಹೊಂದಿರುವುದಿಲ್ಲ. ತ್ವಚೆ ಒಣಗಿ ಬಿರುಕು ಬಿಟ್ಟಂತೆ ಕಾಣಿಸುತ್ತದೆ. ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ತುರಿಸಿದಾಗ ಹಿಟ್ಟಿನ ತರ ಪೌಡರ್ ಉದುರುತ್ತದೆ. ಚರ್ಮದಲ್ಲಿ ಅಸ್ವಸ್ಥತೆ ಮತ್ತು ಶುಷ್ಕತೆ ಭಾವನೆಯು ಒಣ ತ್ವಚೆಯ ಲಕ್ಷಣವಾಗಿದೆ. ಹುಬ್ಬು, ಮೂಗು ಮತ್ತು ಬಾಯಿಯ ಮೂಲೆಯಲ್ಲಿ ಲಕ್ಷಣಗಳು ಕಾಣಿಸುತ್ತವೆ.


    ಇದನ್ನೂ ಓದಿ: ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!


    ಒಣ ಚರ್ಮದ ಆರೋಗ್ಯ ಸಮಸ್ಯೆಗಳಿವು!


    ಚರ್ಮವು ಚಪ್ಪಟೆಯಾಗಿ ಕಾಣಿಸುತ್ತದೆ. ಅಲ್ಲಲ್ಲಿ ಬಿಳಿ ತೇಪೆ ಹಾಗೂ ನೆರಿಗೆಗಳು ಕಾಣಿಸುತ್ತವೆ. ತ್ವಚೆಯಲ್ಲಿ ಕಿರಿಕಿರಿ ಹಾಗೂ ತುರಿಕೆ, ದದ್ದು, ರಕ್ತಸ್ರಾವ ಆಗುತ್ತದೆ. ಸೋರಿಯಾಸಿಸ್, ಎಸ್ಜಿಮಾ ಸಮಸ್ಯೆ ಕಾಣಿಸುತ್ತವೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು