Mental Health: ನಿಮ್ಮ ಜೊತೆಯಿರುವವರು ಹೀಗೆಲ್ಲಾ ಮಾತಾಡ್ತಿದ್ದಾರಾ? ಒಂದ್ಸಲ ಮನೋವೈದ್ಯರ ಹತ್ರ ಕರ್ಕೊಂಡು ಹೋಗಿ!

Depression: ನಮ್ಮಲ್ಲಿ ಹೆಚ್ಚಿನವರು, ಓಹ್, ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ.ಎಂದು ಹೇಳುತ್ತಾರೆ. ಆದರೆ ಅದು ಸಾಮಾನ್ಯ ದುಃಖವಾಗಿರಬಹುದು. ಇದು ಕೆಲ ದಿನಗಳ ಕಾಲ ನಮ್ಮನ್ನು ಕಾಡಿ ಹೋಗುತ್ತದೆ. ಆದರೆ ಈ ಖಿನ್ನತೆ ಹೆಚ್ಚು ದಿನಗಳ ಇರುತ್ತದೆ. ಅದಕ್ಕೆ ಸರಿಯಾದ ವೈದ್ಯಕೀಯ ಸಲಹೆ ಆಗತ್ಯವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಖಿನ್ನತೆ(Depression) ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ ಎಂದರೆ ತಪ್ಪಲ್ಲ. ಹೆಚ್ಚಿನ ಜನರು ಖಿನ್ನತೆಯ ಲಕ್ಷಣ ಎಂದರೆ ಯಾವಾಗಲೂ ಬೇಸರದಲ್ಲಿರುವುದು, ತಮ್ಮವರಿಂದ ದೂರವಾಗಲು ಬಯಸುವುದು ಮಾತ್ರ ಎಂದು ತಿಳಿದುಕೊಂಡಿದ್ದಾರೆ. ಈ ರೀತಿಯಾಗಿ ಆದಾಗ ಮಾತ್ರ ಖಿನ್ನತೆ ಉಂಟಾಗುತ್ತದೆ ಎಂದು ಭಾವಿಸಿದ್ದಾರೆ, ಆದರೆ ಇವು ಖಿನ್ನತೆಯ ಲಕ್ಷಣಗಳಾಗಿದ್ದರೂ, ಅದು ಹಲವು ವಿಧಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇತರ ಮಾನಸಿಕ ಸಮಸ್ಯೆಗಳು(Mental Problem), ವಿಶೇಷವಾಗಿ ಆತಂಕ ಹೆಚ್ಚಾಗುವುದು ಹೀಗೆ. ಹಲವಾರು ರೀತಿಯನ್ನು ಖಿನ್ನತೆ ಆರಂಭವಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ಯಾರಾದರೂ ಹೆಚ್ಚು ದುಃಖವನ್ನು ಅನುಭವಿಸುತ್ತಿದ್ದರೂ ಸಹ ದುಃಖಕ್ಕಿಂತ ಹೆಚ್ಚು ಕಿರಿಕಿರಿ ಆಗುತ್ತಿರಬಹುದು ಅಥವಾ ಆತಂಕಕ್ಕೊಳಗಾಗಬಹುದು.

ಹದಿಹರೆಯದವರು ಯಾವುದರಲ್ಲಿ ಆಸಕ್ತಿ ತೋರಿಸದಿರುವುದು, ಯಾರೊಂದಿಗೂ ಬೆರೆಯದಿರುವುದು, ಎಲ್ಲದಕ್ಕೂ ಕೋಪ ಮಾಡಿಕೊಳ್ಳುವುದು ಹೀಗೆ ಈ ರೀತಿ ವರ್ತಿಸಿದ್ದಲ್ಲಿ ಅವರನ್ನು ಖಿನ್ನತೆ ಕಾಡುತ್ತಿರಬಹುದು.  ಆದರೆ ಖಿನ್ನತೆಯ ಸುತ್ತ ರೋಗಲಕ್ಷಣಗಳ ಬಗ್ಗೆ ತಪ್ಪು  ತಿಳಿವಳಿಕೆಗಳು ಬಹಳಷ್ಟಿದೆ. ಹಾಗಾಗಿ ಸರಿಯಾದ ವಿಚಾರಗಳನ್ನು ತಿಳಿದುಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡಿ.

ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ ತಿಳಿಯುವುದು ಹೇಗೆ?

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಇದ್ರೆ ಬಾದಾಮಿಯಿಂದ ದೂರ ಇರಿ

ಸಾಮಾನ್ಯವಾಗಿ ಖಿನ್ನತೆ ಹೊಂದಿರುವ ಬಗ್ಗೆ ತಿಳಿಯಬಹುದು ಎಂದು ಹೇಳಲಾಗುತ್ತದೆ. ಆದರೆ ಅನೇಕ ರೋಗಿಗಳು ಶಾಲೆಗೆ ಅಥವಾ ಕೆಲಸಕ್ಕೆ ಹೋಗುತ್ತಾರೆ ನೋವಿಗಿಂತ ಕಿರಿಕಿರಿ ಅಥವಾ ಆತಂಕವನ್ನು  ಅನುಭವಿಸುತ್ತಿರುತ್ತಾರೆ. ಅವರು ನಿಧಾನವಾಗಿ ನಡೆಯುವುದು ಅಥವಾ ಮಾತನಾಡುವುದನ್ನ ಮಾಡುವ ಸಾಧ್ಯತೆ ಇರುತ್ತದೆ. ಏಕೆಂದರೆ ಮೆದುಳಿನ ಮೇಲೆ ಖಿನ್ನತೆಯ ಪರಿಣಾಮ ಬೀರುವುದರಿಂದ ಅದರ ಕಾರ್ಯ ನಿಧಾನವಾಗುತ್ತದೆ. ಹಾಗೆಯೆ ನಾವು ನಮ್ಮ ಸುತ್ತಲಿನವರು ಖಿನ್ನತೆಯಿಂದ ಬಳಲುತ್ತಿರುವುದನ್ನ ಗಮನಿಸುವುದು ಸುಲಭವಲ್ಲ. ಆದರೂ ಅವರಲ್ಲಿನ ಬದಲಾವಣೆಗಳನ್ನು ಗಮನಿಸಿ. ಅವರು ಹೆಚ್ಚು ಕುಡಿಯಲು ಆರಂಭಿಸುತ್ತಾರೆ.ಅಲ್ಲದೇಊಟ ತಿಂಡಿಯನ್ನು ಸರಿಯಾಗಿ ಮಾಡುವುದಿಲ್ಲ.

ಪ್ರತಿಯೊಬ್ಬರೂ ಕೆಲವೊಮ್ಮೆ ಖಿನ್ನತೆಗೆ ಒಳಗಾಗುತ್ತಾರೆ

ನಮ್ಮಲ್ಲಿ ಹೆಚ್ಚಿನವರು, ಓಹ್, ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ.ಎಂದು ಹೇಳುತ್ತಾರೆ. ಆದರೆ ಅದು ಸಾಮಾನ್ಯ ದುಃಖವಾಗಿರಬಹುದು. ಇದು ಕೆಲ ದಿನಗಳ ಕಾಲ ನಮ್ಮನ್ನು ಕಾಡಿ ಹೋಗುತ್ತದೆ. ಆದರೆ ಈ ಖಿನ್ನತೆ ಹೆಚ್ಚು ದಿನಗಳ ಇರುತ್ತದೆ. ಅದಕ್ಕೆ ಸರಿಯಾದ ವೈದ್ಯಕೀಯ ಸಲಹೆ ಆಗತ್ಯವಾಗಿರುತ್ತದೆ.  ಕ್ಲಿನಿಕಲ್ ಡಿಪ್ರೆಶನ್ ಹಲವಾರು ರೋಗಲಕ್ಷಣಗಳನ್ನು ಒಳಗೊಂಡಿದೆ.  ನಿಷ್ಪ್ರಯೋಜಕತೆಯ ಭಾವನೆಗಳು, ನೀವು ಒಮ್ಮೆ ಇಷ್ಟಪಟ್ಟ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೆ. ಆತ್ಮಹತ್ಯೆ ಆಲೋಚನೆ ಬರಬಹುದು. ಹೌದು, ಹೆಚ್ಚು ದಿನಗಳ ಕಾಲ ಈ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಮಾನಸಿಕ ಆರೋಗ್ಯ ಸಲಹೆಗಾರರನ್ನು ಭೇಟಿ ಮಾಡಿ.

ಖಿನ್ನತೆಯು ಮನಸ್ಥಿತಿಯ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.ಖಿನ್ನತೆಯು ಜನರ ಶಕ್ತಿಯನ್ನು ಮತ್ತು ಹಸಿವನ್ನು ಹಾಳುಮಾಡುತ್ತದೆ ಮತ್ತು ನಿದ್ರೆಯ ಸಮಸ್ಯೆಯನ್ನ ಉಂಟು ಮಾಡುತ್ತದೆ. ಇದು ಮೈಗ್ರೇನ್​ನಿಂದ ಹಿಡಿದು ಉಸಿರಾಟ, ಹೃದಯ ಮತ್ತು ಜಠರಗರುಳಿನ ಸಮಸ್ಯೆಗಳವರೆಗೆ ಹಲವಾರು ದೈಹಿಕ ಸಮಸ್ಯೆಗಳನ್ನು ಸಹ ಸೃಷ್ಟಿ ಮಾಡುತ್ತದೆ. ಉರಿಯೂತ, ಆಟೋಇಮ್ಯೂನ್ ಕಾಯಿಲೆ ಮತ್ತು ಖಿನ್ನತೆಯ ನಡುವೆ ಬಲವಾದ ಸಂಪರ್ಕವಿದೆ ಎಂದು  ಹೇಳಲಾಗುತ್ತದೆ.

ಖಿನ್ನತೆಗೆ ಚಿಕಿತ್ಸೆ ನೀಡುವುದು ನಿಜವಾಗಿಯೂ ಕಷ್ಟವಾ?

ಇದನ್ನೂ ಓದಿ: ಸಣ್ಣಗಾಗ್ಬೇಕು ಅಂತ ಅನ್ನ ತಿನ್ನೋದು ಬಿಡ್ಬೇಡಿ, ಇನ್ನೂ ದಪ್ಪಗಾಗ್ತೀರಾ ಅಷ್ಟೇ

ಇದು ವಾಸ್ತವವಾಗಿ ಚಿಕಿತ್ಸೆ ನೀಡಲು ಸರಳವಾದ ಮಾನಸಿಕ ಕಾಯಿಲೆಗಳಲ್ಲಿ ಒಂದಾಗಿದೆ. ಆದರೆ ಅದಕ್ಕೆ ರೋಗಿ ಹೇಗೆ ಸ್ಪಂಧಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಯಾವುದೇ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಇಲ್ಲ ಎಂಬುದು ಸುಳ್ಳು. ಸರಿಯಾದ ಸಮಯದಲ್ಲಿ ರೋಗವನ್ನು ಪತ್ತೆ ಹಚ್ಚಿ ವೈದ್ಯರನ್ನು ಸಂಪರ್ಕ ಮಾಡಿದರೆ ಯಾವುದೇ ರೋಗಕ್ಕೂ ಚಿಕಿತ್ಸೆ ನೀಡಬಹುದು.
Published by:Sandhya M
First published: