• Home
 • »
 • News
 • »
 • lifestyle
 • »
 • ರಾತ್ರಿ ವೇಳೆ ಎಚ್ಚರವಾದ ನಂತರ ಮತ್ತೆ ನಿದ್ರಿಸಲು 8 ಉಪಯುಕ್ತ ಸಲಹೆಗಳು

ರಾತ್ರಿ ವೇಳೆ ಎಚ್ಚರವಾದ ನಂತರ ಮತ್ತೆ ನಿದ್ರಿಸಲು 8 ಉಪಯುಕ್ತ ಸಲಹೆಗಳು

Photo:google

Photo:google

Fall Back Asleep: ಆಳವಾಗಿ ಉಸಿರಾಡಿದರೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಇದರಿಂದ ಸಾಕಷ್ಟು ವಿಶ್ರಾಂತಿ ಪಡೆಯಬಹುದು. ನಿಮ್ಮ ಹೊಟ್ಟೆಯ ಮೇಲೆ ಕೈ ಇಟ್ಟು, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಮೂಗಿನ ಮೂಲಕ ನಿಧಾನವಾಗಿ ಆಳವಾಗಿ ಉಸಿರು ತೆಗೆದುಕೊಳ್ಳಿ. ನಿಮ್ಮ ಹೊಟ್ಟೆಯ ಏರಿಳಿತದ ಅನುಭವವನ್ನು ಖಚಿತಪಡಿಸಿಕೊಳ್ಳಿ.

ಮುಂದೆ ಓದಿ ...
 • Share this:

  ದಿನನಿತ್ಯ ಸಮಯಕ್ಕೆ ಸರಿಯಾಗಿ ಏಳುವವರು ಇತ್ತೀಚಿನ ದಿನಗಳಲ್ಲಿ ನಿದ್ರೆ ಮಾಡಿದರೂ ಕೂಡ ಏಳುವುದಕ್ಕೆ ಆಲಸ್ಯ ತೋರುತ್ತಿದ್ದರೆ ಅದರ ಹಿಂದೆ ಅನೇಕ ಕಾರಣಗಳಿವೆ. ನೀವಿದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿದರೆ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಬಹುದು. ನಿದ್ರೆ ನಮಗೆ ಪ್ರಕೃತಿದತ್ತವಾಗಿ ಬಂದಿರುವ ವರ. ಸ್ವಲ್ಪ ಗದ್ದಲ, ಶಬ್ಧವಾದrರೂ ಕೂಡ ನೀವು ಕೂಡಲೇ ಎಚ್ಚರವಾಗಿಬಿಡುತ್ತಿರಿ. ಬಳಿಕ ಮತ್ತೆ ನಿದ್ರೆ ಮಾಡಲು ಹೋದರೆ ನಿಮಗೆ ನಿದ್ರೆಯೇ ಬರುವುದಿಲ್ಲ. ಇದು ನಿಮಗೆ ಕಿರಿಕಿಯನ್ನುಂಟು ಮಾಡಬಹುದು.


  ಮಾಡಲು ಮರೆತ ವಿಷಯಗಳು, ಹಣಕಾಸಿನ ಬಗ್ಗೆ ಚಿಂತೆ ಅಥವಾ ಮರೆಯಲಾಗದ ಅಹಿತಕರ ಅನುಭವವನ್ನು ಮೆಲುಕು ಹಾಕುವುದರ ಬಗ್ಗೆಯೇ ನಿಮ್ಮ ಮನಸ್ಸು ತುಂಬಿಹೋಗಿತ್ತದೆ. ಇದು ಕೂಡ ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಬಹುದು. ಮೆದುಳಿನಲ್ಲಿ ಉಂಟಾಗುವ ಈ ಸುಂಟರಗಾಳಿಯನ್ನು ಹೇಗೆ ಬಗೆಹರಿಸುವುದು. ನಿಮ್ಮ ದೇಹವನ್ನು ಅಗತ್ಯವಿರುವ ನಿದ್ರೆಗೆ ಮತ್ತೆ ಮರಳಿಸುವುದು ಹೇಗೆ? ಎಚ್ಚರವಾದ ಬಳಿಕವೂ ಮತ್ತೆ ಸರಿಯಾಗಿ ನಿದ್ರೆ ಮಾಡಲು ತಜ್ಞರು ನೀಡಿರುವ 8 ಸಲಹೆಗಳು ಇಲ್ಲಿವೆ ನೋಡಿ.


  ಆಳವಾಗಿ ಉಸಿರಾಡುವುದನ್ನು ರೂಢಿಸಿಕೊಳ್ಳಿ


  ಆಳವಾಗಿ ಉಸಿರಾಡಿದರೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಇದರಿಂದ ಸಾಕಷ್ಟು ವಿಶ್ರಾಂತಿ ಪಡೆಯಬಹುದು. ನಿಮ್ಮ ಹೊಟ್ಟೆಯ ಮೇಲೆ ಕೈ ಇಟ್ಟು, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಮೂಗಿನ ಮೂಲಕ ನಿಧಾನವಾಗಿ ಆಳವಾಗಿ ಉಸಿರು ತೆಗೆದುಕೊಳ್ಳಿ. ನಿಮ್ಮ ಹೊಟ್ಟೆಯ ಏರಿಳಿತದ ಅನುಭವವನ್ನು ಖಚಿತಪಡಿಸಿಕೊಳ್ಳಿ. ನಿಧಾನವಾಗಿ ಉಸಿರಾಡಲು ಪ್ರಯತ್ನಿಸಿ. ಈಗ ಆ ಉಸಿರನ್ನು ಬಹಳ ನಿಧಾನವಾಗಿ ಹೊರಗೆಬಿಡಿ. ನಿಧಾನವಾಗಿ ಉಸಿರಾಡುವಾಗ ಮೂಗು ಮತ್ತು ಬಾಯಿಯ ಮೂಲಕ ಮುಖ್ಯ ಉಸಿರಾಟದ ಸ್ನಾಯುಗಳನ್ನು ಬಳಸಿ. ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಇದು ಸಹಾಯ ಮಾಡುತ್ತದೆ.


  ಧ್ಯಾನ ಮತ್ತು ಸ್ನಾಯುಗಳ ವಿಶ್ರಾಂತಿಗೆ ಪ್ರಯತ್ನಿಸಿ


  ಮನಸ್ಸನ್ನು ಶಾಂತಗೊಳಿಸಲು ಧ್ಯಾನವು ಒಂದು ಉತ್ತಮ ಮಾರ್ಗವಾಗಿದೆ. ಅಲ್ಪಕಾಲದ ನಿದ್ರೆ ಇಲ್ಲದಿರುವಿಕೆಗೆ ಅಥವಾ ನಿದ್ರಾಹೀನತೆಯ ವ್ಯಾಧಿಗೆ ಧ್ಯಾನವು ಸಹಾಯವಾಗುತ್ತದೆ. ಪ್ರತಿನಿತ್ಯ ಬಿಡದೇ ಮಾಡುವ ಧ್ಯಾನದ ಅಭ್ಯಾಸದಿಂದ ನಿದ್ರೆಯ ಗತಿಯು ಸುಧಾರಿಸುತ್ತದೆ ಎಂಬುದಕ್ಕೆ ಹೇರಳ ಸಾಕ್ಷಿಗಳಿವೆ. ಧ್ಯಾನ ಮುಂತಾದ ಅಭ್ಯಾಸಗಳು ನಿದ್ರಾಹೀನತೆಯ ವ್ಯಾಧಿಯನ್ನು ಪರಿಹರಿಸಲು ಪರಿಣಾಮಕಾರಿ ಔಷಧಿಯಾಗಿದೆ. ನಿದ್ರೆಯ ಧ್ಯಾನ ಮತ್ತು ಸ್ನಾಯುಗಳ ವಿಶ್ರಾಂತಿಗೆ ಪ್ರಯತ್ನಿಸಬೇಕು. ನಿಮ್ಮ ಉಸಿರಾಟ ಮತ್ತು ಮನಸ್ಸನ್ನು ಸರಿಯಾಗಿ ಕೇಂದ್ರಿಕರಿಸಿದರೆ ನೀವು ಉತ್ತಮ ನಿದ್ರೆ ಪಡೆಯಬಹುದು.


  ನೀವು ಮಾಡುವ ತಪ್ಪಿಗೆ ದೂರುವುದನ್ನು ತಪ್ಪಿಸಿ


  ನಿಮ್ಮ ಮೆದುಳಿನಲ್ಲಿ ನಿಮ್ಮ ನಿದ್ರೆಯ ಅಸಮರ್ಥತೆಯನ್ನು ನಿರ್ಣಯಿಸಲು ಮೀಸಲಾಗಿರುವ ಸಂಪೂರ್ಣ ಚಾನಲ್ ಇದೆ. ದಿನನಿತ್ಯದ ಜೀವನದಲ್ಲಿ ನಾವು ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆ ಕ್ರಮವನ್ನು ಅನುಸರಿಸುತ್ತಿರುತ್ತೇವೆ. ಇದು ಕೂಡ ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸರಿಯಾದ ಜೀವನಶೈಲಿ ರೂಢಿಸಿಕೊಳ್ಳುವುದು ಕೂಡ ಉತ್ತಮ. ನೀವು ಮಾಡಿರುವ ತಪ್ಪಿಗೆ ದೂರು ಹೇಳದೆ ಸರಿಯಾದ ಮಾರ್ಗದಲ್ಲಿ ಬದುಕಿದರೆ ಉತ್ತಮ ಜೀವನ ನಿಮ್ಮದಾಗುತ್ತದೆ.


  ಗಡಿಯಾರ ನೋಡುವುದನ್ನು ನಿಲ್ಲಿಸಿ


  ನಿದ್ದೆ ಮಾಡದಿರುವ ಬಗ್ಗೆ ಇನ್ನಷ್ಟು ಆತಂಕ ಮತ್ತು ಅಪರಾಧಿ ಭಾವನೆ ನಿಮಗಿದೆಯಾ? ಹಾಗಾದರೆ ನೀವು ಗಡಿಯಾರ ನೋಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಒಂದು ಕೆಟ್ಟ ರಾತ್ರಿಯ ನಿದ್ರೆಯ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಬಹಳ ಮುಖ್ಯ. ಏಕೆಂದರೆ ಆ ಆತಂಕವು ನಿದ್ರೆಗೆ ಮರಳಲು ಕಷ್ಟವಾಗುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ರಿಸುವುದನ್ನು ರೂಢಿಸಿಕೊಳ್ಳಿ. ನಿದ್ರಿಸಲು ಎಷ್ಟು ಗಂಟೆ ಮೀಸಲಿಟ್ಟಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಪ್ರತಿದಿನವೂ ಇದನ್ನು ಪಾಲಿಸಿದರೆ ನಿಮಗೆ ಎಂದಿಗೂ ನಿದ್ರಾಭಂಗವಾಗುವುದಿಲ್ಲ.


  ಮಲಗುವ ಮುಂಚೆ ಆಲ್ಕೊಹಾಲ್ ಸೇವಿಸಬೇಡಿ


  ಆಹಾರ ಸೇವಿಸಿದ ತಕ್ಷಣ ಮಲಗುವುದು ಅಥವಾ ಮದ್ಯ ಸೇವನೆ ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಆಲ್ಕೊಹಾಲ್ ಕುಡಿಯುವುದರಿಂದ ನೀವು ಬೇಗನೆ ನಿದ್ರಿಸಬಹುದು. ಆದರೆ ನಿಮಗೆ ಗೊತ್ತಾಗದೆ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳಬಹುದು ಅಥವಾ ಭಾಗಶಃ ಎಚ್ಚರಗೊಳ್ಳಬಹುದು ಎಂದು. ಇನ್ನೇನು ಮಲಗಲು 4 ಗಂಟೆ ಸಮಯವಿರುವಾಗ ಆಲ್ಕೋಹಾಲ್ ಸೇವಿಸುವುದರಿಂದ ಸರಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಂಶೋಧನೆಗಳು ಹೇಳಿವೆ.


  ನಿಮಗಿರುವ ಚಿಂತೆಗಳನ್ನು ಬರೆದಿಟ್ಟುಕೊಳ್ಳಿ


  ಹಾಸಿಗೆಗೆ ಹೋಗುವ ಮುನ್ನ ಸಾಧ್ಯವಾದಷ್ಟು ನಿಮ್ಮ ಚಿಂತೆಗಳನ್ನು ತೊಡೆದುಹಾಕಲು ಪ್ರಯತ್ನಿಸುವುದು ಉತ್ತಮವೆಂದು ತಜ್ಞರು ಹೇಳುತ್ತಾರೆ. ಜಂಕ್ ಫುಡ್ ಸೇವನೆ, ಅತಿಯಾಗಿ ಚಿಂತೆ ಮಾಡುವುದು, ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮೆಲಕು ಹಾಕುವುದು ಹೀಗೆ ಹಲವಾರು ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಅವುಗಳನ್ನು ಅಲ್ಲಿಗೆ ಬಿಟ್ಟುಬಿಡುವುದು ಒಳ್ಳೆಯದು. ನಿಮಗಿರುವ ಚಿಂತೆಗಳು ಏನು ಎಂಬುದನ್ನು ಬರೆದಿಟ್ಟುಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು.


  ನೀಲಿ ಬೆಳಕು ಮತ್ತು ಪ್ರಚೋದನೆಯ ಬಗ್ಗೆ ಎಚ್ಚರವಹಿಸಿ


  ನಿಮ್ಮ ಚಿಂತೆಗಳನ್ನು ನಿವಾರಿಸಲು ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಹೆಚ್ಚಾಗಿ ಬಳಸಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಲಗುವ 1 ಗಂಟೆ ಮುಂಚೆ ಕಂಪ್ಯೂಟರ್, ಸೆಲ್ ಫೋನ್ ಬಳಸದಿರುವುದೇ ಉತ್ತಮ.ಗ್ಯಾಜೆಟ್ ಗಳ ಅತಿಯಾದ ಬಳಕೆ ಹದಿಹರೆಯದವರ ನಿದ್ರೆಯನ್ನು ಹಾಳು ಮಾಡುತ್ತದೆ ಮತ್ತು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನ ಹೇಳುತ್ತದೆ. ಹೀಗಾಗಿ ಈ ಬಗ್ಗೆ ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ.


  20 ನಿಮಿಷಗಳ ನಂತರ ಎದ್ದೇಳಿ


  ಸೀಲಿಂಗ್ ಅನ್ನು ನೋಡುತ್ತಾ ಸುಮ್ಮನೆ ಮಲಗಬಾರದು ಎಂದು ತಜ್ಞರು ಹೇಳುತ್ತಾರೆ. ನೀವು 15 ಅಥವಾ 20 ನಿಮಿಷಗಳ ನಂತರ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಹಾಸಿಗೆಯಿಂದ ಎದ್ದು ಮಂದ ಬೆಳಕು ಇರುವ ಮತ್ತೊಂದು ಕೋಣೆಗೆ ಹೋಗಿ ಮತ್ತು ನೀವು ಮತ್ತೆ ನಿದ್ರಾವಸ್ಥೆ ಅನುಭವಿಸುವವರೆಗೆ ಏನಾದರೂ ಚಟುವಟಿಕೆ ಮಾಡಿ. ನಿದ್ರೆಯ ಮಂಪರು ಇದೆಯೇ ಎಂಬುದನ್ನು ಖಚಿತಪಡಿಸಿಕೊಂಡು ನೀವು ದಿನನಿತ್ಯದ ಚಟುವಟಿಕೆ ಪ್ರಾರಂಭಿಸಿ.

  Published by:Harshith AS
  First published: