Brake Fail: ಕಾರಿನ ಬ್ರೇಕ್ ಫೇಲ್ ಆದಾಗ ಅಪಾಯದಿಂದ ಪಾರಾಗುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್​​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಬಂದ ಕಾರುಗಳಲ್ಲಿ ಬ್ರೇಕ್ ಫೇಲ್ ನಂತಹ ಪರಿಸ್ಥಿತಿಗಳನ್ನು ನಿಭಾಯಿಸುವ ಸೂಕ್ತವಾದ ಸಾಧನಗಳನ್ನು ಅಳವಡಿಸಿದ್ದಾರೆ. ಅಂತಹ ಪರಿಸ್ಥಿತಿಗಳಲ್ಲಿ ಚಾಲಕರು ತೆಗೆದುಕೊಳ್ಳುವ ಬುದ್ದಿವಂತಿಕೆಯ ನಡೆಗಳು ಕೆಲವೊಮ್ಮೆ ಪ್ರಾಣವನ್ನೇ ಉಳಿಸುತ್ತವೆ. ಹೀಗೆ ಕಾರಿನ ಬ್ರೇಕ್ ಫೇಲ್ ಆದರೆ ಪ್ರಯಾಣಿಕರ ಪ್ರಾಣವನ್ನು ಮತ್ತು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಏನು ಮಾಡಬೇಕು ನೋಡಿಕೊಳ್ಳಿರಿ.

ಮುಂದೆ ಓದಿ ...
  • Share this:

ನಾವು ಅನೇಕ ಬಾರಿ ಈ ವೇಗವಾಗಿ ಚಲಿಸುತ್ತಿರುವ ಕಾರುಗಳಲ್ಲಿ (Car) ಕೆಲವೊಮ್ಮೆ ಹಠಾತ್ತನೆ ಬ್ರೇಕ್ ಫೇಲ್ (Brake Fail) ಆಗಿ ಅಪಘಾತಕ್ಕಿಡಾಗಿದ್ದ ಸುದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಈ ಬ್ರೇಕ್ ಫೇಲ್ ಆಗಿ ಅಪಘಾತಗಳಾಗುವುದು (Accident) ತುಂಬಾನೇ ಒಂದು ಕೆಟ್ಟ ಸಂದರ್ಭ ಎಂದು. ಅನೇಕ ಜನ ಚಾಲಕರಿಗೆ ಕಾರು ಓಡಿಸುವಾಗ ‘ಎಲ್ಲಿ ಕಾರಿನ ಬ್ರೇಕ್ ಫೇಲ್ ಆಗಿ ಬಿಡುತ್ತದೆಯೋ’ ಅನ್ನೋ ಭಯ ಇದ್ದೇ ಇರುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಚಾಲಕರು (Driver) ತೆಗೆದುಕೊಳ್ಳುವ ಬುದ್ದಿವಂತಿಕೆಯ ನಡೆಗಳು ಕೆಲವೊಮ್ಮೆ ಪ್ರಾಣವನ್ನೇ ಉಳಿಸುತ್ತವೆ. ಹೀಗೆ ಕಾರಿನ ಬ್ರೇಕ್ ಫೇಲ್ ಆದರೆ ಪ್ರಯಾಣಿಕರ ಪ್ರಾಣವನ್ನು (Life) ಮತ್ತು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಏನು ಮಾಡಬೇಕು ನೋಡಿಕೊಳ್ಳಿರಿ.


1. ಕೂಡಲೇ ನಿಮ್ಮ ಹ್ಯಾಂಡ್ ಬ್ರೇಕ್ (ಪಾರ್ಕಿಂಗ್ ಬ್ರೇಕ್) ಅನ್ನು ಹಾಕಿರಿ
ನಿಮ್ಮ ಕಾರಿನ ಬಹುಮುಖ್ಯವಾದ ಬ್ರೇಕ್ ಫೇಲ್ ಆದ ಕೂಡಲೇ ನೀವು ಭಯ ಪಡುವ ಬದಲು ಸ್ವಲ್ಪ ಸಮಾಧಾನವಾಗಿ ಮೊದಲು ಮಾಡಬೇಕಾದ ಕೆಲಸ ಎಂದರೆ ಹ್ಯಾಂಡ್ ಬ್ರೇಕ್ ಅನ್ನು ಹಾಕುವುದು. ಈ ಹ್ಯಾಂಡ್ ಬ್ರೇಕ್ ಅನ್ನು ಹಾಕುವುದರಿಂದ ಕಾರು ಸ್ವಲ್ಪ ಮಟ್ಟಿಗೆ ನಿಧಾನವಾಗುತ್ತದೆ ಮತ್ತು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ. ಈಗಂತೂ ಕಾರುಗಳಲ್ಲಿ ಬಹುತೇಕವಾಗಿ ಎಲೆಕ್ಟ್ರಾನಿಕ್ ಹ್ಯಾಂಡ್ ಬ್ರೇಕ್ ಗಳು ಬಂದಿವೆ.


2. ಹೈಡ್ರಾಲಿಕ್ ಪ್ರೆಷರ್ ಬರಲು ನಿಮ್ಮ ಕಾರಿನ ಬ್ರೇಕ್ ಗಳನ್ನು ಪಂಪ್ ಮಾಡಿರಿ
ಕಾರಿನ ಬ್ರೇಕ್ ಫೇಲ್ ಆದಲ್ಲಿ ಮೊದಲು ಮಾಡಬೇಕಾಗಿರುವುದು ಎಂದರೆ ಕಾರಿನ ಬ್ರೇಕ್ ಅನ್ನು ಹಾಗೆಯೇ ಪೂರ್ತಿಯಾಗಿ ಪಂಪ್ ಮಾಡಬೇಕು ಮತ್ತು ನಿಧಾನವಾಗಿ ಬಿಡಬೇಕು. ಹೀಗೆ ಅನೇಕ ಬಾರಿ ಪಂಪ್ ಮಾಡಿದಾಗ ಸ್ವಲ್ಪ ಪ್ರೇಷರ್ ಅನ್ನು ಬ್ರೇಕ್ ಗಳಲ್ಲಿ ಶೇಖರಣೆ ಆಗಿ ಕಾರಿನ ವೇಗ ಕಡಿಮೆ ಆಗುತ್ತದೆ. ಹಾಗೆಯೇ ನಿಮಗೆ ಬ್ರೇಕ್ ನಲ್ಲಿ ಸ್ವಲ್ಪ ಮಟ್ಟಿಗೆ ಪ್ರೆಷರ್ ಬರುವುದು ಅನುಭವಕ್ಕೆ ಬಂದರೆ ಕಾರು ಪೂರ್ತಿಯಾಗಿ ನಿಲ್ಲುವವರೆಗೆ ಹಾಗೆಯೇ ಬ್ರೇಕ್ ಅನ್ನು ಪಂಪ್ ಮಾಡುತ್ತಲೇ ಇರಿ.


ಇದನ್ನೂ ಓದಿ: Domino's Compensation: ವಯಸ್ಸು ಕೇಳಿದ್ದಕ್ಕೆ ಕೇಸ್! ಭಾರಿ ಮೊತ್ತದ ಪರಿಹಾರ ಪಡೆದ ಮಹಿಳೆ


3. ಟಾಪ್ ಗೇರ್ ಗಳಿಂದ ಲೋ ಗೇರ್ ಗಳಿಗೆ ಹಾಕಿಕೊಳ್ಳಿರಿ
ಕೆಲವೊಮ್ಮೆ ನಾವು ಕಾರು ಓಡಿಸುವಾಗ ಟಾಪ್ ಗೇರ್ ನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಹಠಾತ್ತನೆ ಗೇರ್ ಗಳನ್ನು ಕೆಳಕ್ಕೆ ಹಾಕಿಕೊಂಡಾಗ ಕಾರು ಹಾಗೆಯೇ ಸ್ವಲ್ಪ ಜಟಕಾ ಬಂಡಿಯಂತೆ ಆಗಲು ಶುರು ಮಾಡುತ್ತದೆ. ಕಾರಿನ ಬ್ರೇಕ್ ಫೇಲ್ ಆದಾಗಲೂ ಸಹ ಇದೇ ರೀತಿಯಾಗಿ ಟಾಪ್ ಗೇರ್ ನಲ್ಲಿದ್ದ ಕಾರನ್ನು ಕೆಳಗಿನ ಗೇರ್ ಗಳಿಗೆ ಬದಲಾಯಿಸಿಕೊಳ್ಳಿರಿ, ಇದರಿಂದ ಕಾರಿನ ವೇಗವು ಕಡಿಮೆಯಾಗುತ್ತದೆ.


ಹಾಗೆಯೇ ವೇಗ ಕಳೆದುಕೊಂಡ ಕಾರಿನ ಗೇರ್ ಅನ್ನು ನ್ಯೂಟ್ರಲ್ ಗೆ ಹಾಕಿಕೊಂಡು ಕಾರನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ನಿಲ್ಲಿಸಿಕೊಳ್ಳಿ. ಒಂದು ವೇಳೆ ನೀವು ಆಟೊಮೇಟಿಕ್ ಗೇರ್ ಗಳಿರುವ ವಾಹನ ಚಲಾಯಿಸುತ್ತಿದ್ದರೆ, ಕೂಡಲೇ ಬ್ರೇಕ್ ಮೇಲಿಂದ ಮತ್ತು ಎಕ್ಸಲೆಟರ್ ಮೇಲಿಂದ ಕಾಲನ್ನು ತೆಗೆಯಿರಿ. ಆಗ ಕಾರು ನಿಧಾನವಾಗುತ್ತದೆ ಮತ್ತು ಚಾಲಕರ ನಿಯಂತ್ರಣಕ್ಕೆ ಸಿಗುತ್ತದೆ.


4. ಕಾರಿನ ಬ್ರೇಕ್ ಫೇಲ್ ಆದಾಗ ಎಂಜಿನ್ ಆಫ್ ಮಾಡಬೇಡಿ
ಕಾರಿನ ಬ್ರೇಕ್ ಫೇಲ್ ಆದಾಗ ನಿಮ್ಮ ಕಾರಿನ ಎಂಜಿನ್ ಅನ್ನು ಆಫ್ ಮಾಡಿದರೆ ಕಾರಿನ ವೇಗ ಕಡಿಮೆ ಆಗುತ್ತದೆ ಎಂದು ನೀವು ತಿಳಿದಿದ್ದರೆ, ಅದು ತಪ್ಪು. ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಇನ್ನೂ ಜಾಸ್ತಿಯಾಗುತ್ತದೆ, ಹೊರತು ಕಡಿಮೆ ಆಗುವುದಿಲ್ಲ. ಎಂಜಿನ್ ಆಫ್ ಮಾಡಿದಾಗ ಕಾರಿನ ಸ್ಟೇರಿಂಗ್ ಲಾಕ್ ಆಗುತ್ತದೆ ಮತ್ತು ನಮಗೆ ಕಾರನ್ನು ಆಕಡೆ ಈಕಡೆ ತಿರುಗಿಸುವುದಕ್ಕೆ ಬರುವುದಿಲ್ಲ.


5. ಕೊನೆಯದಾಗಿ ಒಂದು ಸುರಕ್ಷಿತ ಸ್ಥಳದಲ್ಲಿ ಹೋಗಿ ಕಾರನ್ನು ನಿಲ್ಲಿಸಿ
ಮೇಲೆ ಹೇಳಿದ ಯಾವ ಸಲಹೆಗಳು ನಿಮಗೆ ಕೆಲಸಕ್ಕೆ ಬಾರದೇ ಇದ್ದಾಗ ನಿಮಗೆ ಕೊನೆಯದಾಗಿ ಉಳಿದಿರುವಂತಹ ಆಯ್ಕೆ ಎಂದರೆ ನಿಮ್ಮ ಕಾರಿನ ವೇಗವನ್ನು ಕಡಿಮೆ ಮಾಡಲು ಯಾವುದಾದರೊಂದು ಸ್ಥಳದಲ್ಲಿ ಹೋಗಿ ಅಲ್ಲಿ ನಿಲ್ಲಿಸುವುದು ಆಗಿದೆ. ಎಂದರೆ ರಸ್ತೆಯ ಬದಿಯಲ್ಲಿರುವ ಯಾವುದಾದರೂ ಚಿಕ್ಕ ಗಿಡ ಮರಗಳ ಪೊದೆಗಳಲ್ಲಿ ಹೋಗಿ ನಿಲ್ಲಿಸುವುದು ಅಥವಾ ಯಾವುದೋ ಒಂದು ಗೋಡೆಗೆ ಹೋಗಿ ಅಪ್ಪಳಿಸಿ ಕಾರನ್ನು ನಿಲ್ಲಿಸಬೇಕಷ್ಟೆ.


ಇದನ್ನೂ ಓದಿ:  Viral Story: ಹಾರುವ ವಿಮಾನವನ್ನೇ ನೆಲಕ್ಕುರುಳಿಸಿದ ಫುಟ್​ಬಾಲ್​ ಆಟಗಾರ! ಇದು ರೀಲ್​ ಅಲ್ಲ, ರಿಯಲ್​ ಸ್ಟೋರಿ


ಮುಂಜಾಗ್ರತೆ ಕ್ರಮ
ಕಾರು ಹತ್ತಿದ ನಂತರ ಶುರು ಮಾಡಿ ಮೊದಲು ನಿಮ್ಮ ಕಾರಿನ ಬ್ರೇಕ್ ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಪರೀಕ್ಷಿಸಿಕೊಳ್ಳಿರಿ. ಅಲ್ಲದೆ ಬ್ರೇಕ್ ಗಳಲ್ಲಿ ಯಾವುದಾದರೂ ಸೋರಿಕೆ ಮತ್ತು ಕಡಿತಗಳಿದ್ದರೆ, ಮೊದಲು ಅದನ್ನು ಸರಿಪಡಿಸಿಕೊಂಡೇ ಮುಂದೆ ಹೋಗಿ.

First published: