• Home
  • »
  • News
  • »
  • lifestyle
  • »
  • Pregnancy Care: ಗರ್ಭಿಣಿಯರು ಮೊಟ್ಟೆಯನ್ನು ತಿನ್ನೋಕೂ ಒಂದು ವಿಧಾನವಿದೆ

Pregnancy Care: ಗರ್ಭಿಣಿಯರು ಮೊಟ್ಟೆಯನ್ನು ತಿನ್ನೋಕೂ ಒಂದು ವಿಧಾನವಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hoe To Eat Eggs In Pregnancy: ಗರ್ಭಿಣಿಯರು ಮೊಟ್ಟೆಗಳನ್ನು ತಿನ್ನುವುದು ಒಳ್ಳೆಯದು ಎಂದು ಹೇಳಿದರೂ ಸಹ, ಅದನ್ನು ತಿನ್ನುವ ರೀತಿ ಸಹ ಮುಖ್ಯವಾಗುತ್ತದೆ. ಹಾಗಾದ್ರೆ ಗರ್ಭಾವಸ್ಥೆಯಲ್ಲಿ ಮೊಟ್ಟೆಯನ್ನು ಹೀಗೆ ತಿನ್ನಬೇಕು ಮತ್ತು ಅದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ. 

ಮುಂದೆ ಓದಿ ...
  • Share this:

ಗರ್ಭಿಣಿ (Pregnancy) ಮಹಿಳೆಯರು (Women) ಆರೋಗ್ಯದ ಬಗ್ಗೆ ಬಹಳ ಕಾಲಜಿವಹಿಸುವುದು ಮುಖ್ಯವಾಗುತ್ತದೆ. ಆಹಾರ (Food) ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ವಹಿಸಬೇಕಾಗುತ್ತದೆ. ಈ ಸಮಯದಲ್ಲಿ ಮಹಿಳೆಯರು ಏನು ತಿನ್ನುತ್ತಾರೆ ಎಂಬುದು ಅವರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ (Child) ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದನ್ನ ಮರೆಯಬಾರದು. ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸುವ ಅನೇಕ ಆಹಾರಗಳನ್ನು ಗರ್ಭಿಣಿಯರು ತಿನ್ನಬಾರದು ಎಂದು ಹೇಳುತ್ತಾರೆ. ಅದರಲ್ಲಿ ಒಂದು ಮೊಟ್ಟೆ . ಗರ್ಭಿಣಿಯರು ಮೊಟ್ಟೆಗಳನ್ನು ತಿನ್ನುವುದು ಒಳ್ಳೆಯದು ಎಂದು ಹೇಳಿದರೂ ಸಹ, ಅದನ್ನು ತಿನ್ನುವ ರೀತಿ ಸಹ ಮುಖ್ಯವಾಗುತ್ತದೆ. ಹಾಗಾದ್ರೆ ಗರ್ಭಾವಸ್ಥೆಯಲ್ಲಿ ಮೊಟ್ಟೆಯನ್ನು (Egg) ಹೀಗೆ ತಿನ್ನಬೇಕು ಮತ್ತು ಅದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ. 


ಮೊಟ್ಟೆಯಲ್ಲಿ ಪ್ರೊಟೀನ್ ಸಮೃದ್ಧವಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಪ್ರೋಟೀನ್ ಹೊರತಾಗಿ ವಿಟಮಿನ್ ಬಿ12, ಒಮೆಗಾ-3, ತಾಮ್ರ, ಮೆಗ್ನೀಸಿಯಮ್ ಮತ್ತು ಸೆಲೆನಿಯಮ್ ನಂತಹ ಹಲವು ಪೋಷಕಾಂಶಗಳೂ ಸಹ ಇದೆ. ಈ ಕಾರಣದಿಂದಾಗಿ, ಗರ್ಭಿಣಿಯರು ಮೊಟ್ಟೆ ತಿನ್ನುವುದು ಅವರಿಗೆ ಮತ್ತು ಅವರ ಹೊಟ್ಟೆಯಲ್ಲಿರುವ ಮಗುವಿಗೆ ಬಹಳ ಉತ್ತಮ.  ಆದರೆ ಗರ್ಭಿಣಿಯರು ಮೊಟ್ಟೆಗಳನ್ನು ತಿನ್ನುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹ ಡಯೆಟಿಷಿಯನ್ ರಿತು ಪುರಿ ಅವರು ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ತಿನ್ನುವಾಗ ಯಾವ ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು  ಎಂಬುದರ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.


ಹಸಿ ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸಿ


ಗರ್ಭಿಣಿಯರು ಎಂದಿಗೂ ಹಸಿ ಮೊಟ್ಟೆಯನ್ನು ತಿನ್ನಬೇಡಿ. ಮೊಟ್ಟೆಗಳಿಂದ ನೀವು ವಿವಿಧ ಆಹಾರಗಳನ್ನು ತಯಾರಿಸಬಹುದು. ಈ ಸಮಯದಲ್ಲಿ ಆಕಸ್ಮಿಕವಾಗಿ ಸಹ ಹಸಿ ಮೊಟ್ಟೆಗಳನ್ನು ತಿನ್ನಬೇಡಿ. ಹಸಿ ಮೊಟ್ಟೆ ತಿಂದರೆ ಗರ್ಭಪಾತವಾಗುವ ಅಪಾಯ ಹೆಚ್ಚಿದೆ. ಅಲ್ಲದೇ ಇದರ ಜೊತೆ ಹಸಿ ಮೊಟ್ಟೆಯ ಸೇವನೆ  ಸೋಂಕಿನ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.


ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ


ಗರ್ಭೀಣಿಯರು ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಟ್ಟೆಯ ಆಹಾರಗಳನ್ನು ತಿನ್ನಬೇಡಿ. ಮನೆಯಲ್ಲಿ ಮೊಟ್ಟೆಯಿಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ. ಮಾರುಕಟ್ಟೆಯಲ್ಲಿ ಸಿಗುವ ಕೆಲ ವಸ್ತುಗಳು ನಿಮ್ಮ ಹೊಟ್ಟೆಯಲ್ಲಿರುವ ಮಗು ಮತ್ತು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು. ಆದ್ದರಿಂದ, ಮನೆಯಲ್ಲಿ ಮೊಟ್ಟೆಯಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ನೀವು ಮತ್ತು ನಿಮ್ಮ ಮಗು ಆರೋಗ್ಯವಾಗಿರುತ್ತೀರಿ ಎಂಬುದು ನೆನಪಿರಲಿ.


ಇದನ್ನೂ ಓದಿ: ಮನೆಯಲ್ಲಿ ಈ ಗಿಡಗಳಿದ್ರೆ ಹಣದ ಸಮಸ್ಯೆ ಬರಲ್ವಂತೆ


ಬೆಳಗ್ಗೆ ಮೊಟ್ಟೆ ತಿನ್ನಿ


ಗರ್ಭಿಣಿಯರು ಈ ಸಮಯದಲ್ಲಿ ಮೊಟ್ಟೆ ತಿನ್ನುವಾಗ ನೆನಪಿರಬೇಕಾದ ಮತ್ತೊಂದು ವಿಚಾರ ಎಂದರೆ ಬೆಳಗಿನ ತಿಂಡಿಗೆ ಮೊಟ್ಟೆಗಳನ್ನು ಸೇರಿಸಿ ತಿನ್ನಲು ಪ್ರಯತ್ನಿಸಿ. ಏಕೆಂದರೆ ಈ ಅವಧಿಯಲ್ಲಿ ದೇಹದ ಚಯಾಪಚಯವು ತುಂಬಾ ವೇಗವಾಗಿರುತ್ತದೆ. ಆದ್ದರಿಂದ, ಬೆಳಗ್ಗೆ ಮೊಟ್ಟೆಗಳನ್ನು ತಿನ್ನುವುದು ಅಜೀರ್ಣ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಅಲ್ಲದೇ ಬೆಳಗ್ಗೆ ಮೊಟ್ಟೆ ತಿನ್ನುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಸಹ ಸಹಾಯ ಮಾಡುತ್ತದೆ.




ಮೊಟ್ಟೆಗಳನ್ನು ಮಿತವಾಗಿ ಸೇವಿಸಿ


ಗರ್ಭಿಣಿಯರು ಮೊಟ್ಟೆಯನ್ನು ತಿನ್ನುವಾಗ ಮಿತವಾಗಿ ಸೇವನೆ ಮಾಡುವುದು ಬಹಳ ಮುಖ್ಯ. ಮೊಟ್ಟೆಗಳನ್ನು ತಿನ್ನುವುದು ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.


ಇದನ್ನೂ ಓದಿ: ಹೊಸ ವರ್ಷಕ್ಕೆ ಈ ಸ್ಥಳಗಳಿಗೆ ಭೇಟಿ ನೀಡಿ, ಅದ್ಧೂರಿಯಾಗಿ ಆಚರಿಸಿ


ನೀವು ದಿನಕ್ಕೆ ಎರಡರಿಂದ ಮೂರು ಮೊಟ್ಟೆಗಳನ್ನು ತಿನ್ನಬಹುದು, ಆದರೆ ಅದಕ್ಕಿಂತ ಹೆಚ್ಚು ತಿನ್ನುವುದು  ಒಳ್ಳೆಯದಲ್ಲ. ಹೆಚ್ಚು ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಹಾನಿ ಎನ್ನುತ್ತಾರೆ ತಜ್ಞರು. ಹಾಗೆಯೇ, ನಿಮ್ಮ ಆಹಾರದ ವಿಚಾರವಾಗಿ ನೀವು ವೈದ್ಯರ ಸಲಹೆ ಪಡೆಯುವುದು ಮುಖ್ಯ.

Published by:Sandhya M
First published: