Drinking Water: ನೀರನ್ನು ಕುಳಿತು ಕುಡಿಯಬೇಕೆ ಅಥವಾ ನಿಂತು ಕುಡಿಯಬೇಕೆ? ಆಯುರ್ವೇದ ಏನು ಹೇಳುತ್ತೆ?

ನಮ್ಮ ದೇಹಕ್ಕೆ ನೀರು ಎಷ್ಟು ಅಗತ್ಯ ಎಂಬುವುದು ನಾವೆಲ್ಲರೂ ಬಲ್ಲೆವು. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಆರೋಗ್ಯಕರ ಅಭ್ಯಾಸ. ನೀರು ನಮ್ಮ ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಕೂಡ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ದೇಹಕ್ಕೆ (Body) ನೀರು ಎಷ್ಟು ಅಗತ್ಯ ಎಂಬುವುದು ನಾವೆಲ್ಲರೂ ಬಲ್ಲೆವು. ಸಾಕಷ್ಟು ಪ್ರಮಾಣದಲ್ಲಿ ನೀರನ್ನು (Water) ಕುಡಿಯುವುದು ಆರೋಗ್ಯಕರ (Heallthy) ಅಭ್ಯಾಸ. ನೀರು ನಮ್ಮ ದೇಹವನ್ನು ಹೈಡ್ರೇಟ್ (Hydrate) ಮಾಡುವುದು ಮಾತ್ರವಲ್ಲ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಕೂಡ. ಜೊತೆಗೆ, ಮೂತ್ರ ಪಿಂಡಗಳಿಂದ ತ್ಯಾಜ್ಯವನ್ನು ಹೊರ ಹಾಕುವುದು, ಸಲೈವಾವನ್ನು ಸೃಷ್ಟಿಸುವುದು ಮತ್ತು ದೇಹದ ವಿವಿಧ ಭಾಗಗಳಿಗೆ ಪೋಷಕಾಂಶಗಳು (Nutrition) ಸಿಗುವಂತೆ ಮಾಡುವುದು ಮುಂತಾದ ಕಾರ್ಯಗಳ ನಿರ್ವಹಣೆಗೆ ನೀರು ಬೇಕೇ ಬೇಕು. ಆದರೆ, ನೀರನ್ನು ಕುಡಿಯಲು ನಿರ್ದಿಷ್ಟ ಸಮಯ ಎಂಬುವುದು ಇದೆಯೇ? ಹೌದು, ಫಿಟ್‍ನೆಟ್ ತಜ್ಞೆ ಸೋನಿಯಾ ಭಕ್ಷಿ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ನೀರನ್ನು ಯಾವಾಗ ಕುಡಿಯಬೇಕು?
• ಊಟದ ಜೊತೆ ನೀರು ಕುಡಿಯಬಾರದು. “ ಊಟದೊಂದಿಗೆ ಒಂದು ಲೋಟ ಅಥವಾ ಅದಕ್ಕಿಂತ ಹೆಚ್ಚಿನ ನೀರು ಕುಡಿಯುವುದರಿಂದ, ನಿಮ್ಮ ಹೊಟ್ಟೆಯ ಜೀರ್ಣಕಾರಿ ಶಕ್ತಿಗೆ ತೀವ್ರ ಅಡ್ಡಿ ಉಂಟಾಗುತ್ತದೆ ಮತ್ತು ಇನ್ಸುಲಿನ್ ಮಟ್ಟದಲ್ಲಿ ಗಮನಾರ್ಹ ಏರಿಳಿತ ಉಂಟಾಗುತ್ತದೆ. ಅಗತ್ಯ ಬಿದ್ದರೆ, ಊಟದ ಜೊತೆ ಒಂದು ಗುಟುಕು ನೀರನ್ನು ಕುಡಿಯಬಹುದು” ಎನ್ನುತ್ತಾರೆ ಭಕ್ಷಿ.
• ಯಾವಾಗಲೂ ಊಟ ಮಾಡಿದ ಒಂದು ಗಂಟೆಯ ನಂತರ ನೀರು ಕುಡಿಯಿರಿ. ಹಾಗೆ ಮಾಡುವುದರಿಂದ ದೇಹಕ್ಕೆ ಆಹಾರದಲ್ಲಿನ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ.

ಇದನ್ನೂ ಓದಿ: Dry Fruits For Uric Acid: ದಿನ ಡ್ರೈ ಫ್ರುಟ್ಸ್​ ತಿನ್ನಿರಿ, ಯೂರಿಕ್​ ಆ್ಯಸಿಡ್​​ ಸಮಸ್ಯೆ ಹೋಗಲಾಡಿಸಿ

 • ನೀವು ಬೆಳಗ್ಗೆ ಎದ್ದ ಕೂಡಲೇ ಕನಿಷ್ಟ ಒಂದು ಲೋಟ ನೀರನ್ನಾದರೂ ಕುಡಿಯಿರಿ. ಅದು ನಿಮಗೆ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಆಯಾಸವನ್ನು ಕಡಿಮೆ ಮಾಡಿಕೊಳ್ಳಲು, ಮಧ್ಯಾಹ್ನ ಕನಿಷ್ಟ ಒಂದು ಲೋಟ ನೀರನ್ನು ಕುಡಿಯಿರಿ. ಮಧ್ಯಾಹ್ನದ ವೇಳೆ ಉಂಟಾಗುವ ಆಯಾಸಕ್ಕೆ ನಿರ್ಜಲೀಕರಣ ಕೂಡ ಮೂಲ ಕಾರಣವಾಗಿರಬಹುದು. ಹಾಗಾಗಿ ನೀರು ಕುಡಿಯುವುದರಿಂದ, ಆಯಾಸ ಮತ್ತು ಇತರ ಅನಗತ್ಯ ರೋಗ ಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಆಗಬಹುದು.

ಆಯುರ್ವೇದದಲ್ಲಿ ನೀರನ್ನು ಹೇಗೆ ಕುಡಿಯಬೇಕು ಮತ್ತು ಕುಡಿಯಬಾರದು ಎಂದು ತಿಳಿಸಲಾಗಿದೆ ಎಂಬ ಕುರಿತು ಡಾ. ದಿಕ್ಸಾ ಭಾವ್‍ಸರ್ ಇಲ್ಲಿ ಮಾಹಿತಿ ನೀಡಿದ್ದಾರೆ.

ಕುಳಿತುಕೊಂಡು ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು
ಕೂತುಕೊಂಡಿದ್ದಾಗ ಮಾತ್ರ ನೀರು ಕುಡಿಯಬೇಕು. “ನಿಂತು ನೀರು ಕುಡಿಯುವುದನ್ನು ತಪ್ಪಿಸಿಕೊಳ್ಳಿ, ಏಕೆಂದರೆ ಅದು ನಿಮ್ಮ ಕಿಡ್ನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಸಂಧಿವಾತಕ್ಕೂ ಕಾರಣವಾಗಬಹುದು. ಕುಳಿತುಕೊಂಡು ನೀರು ಕುಡಿಯುವುದರಿಂದ, ದೇಹವು ಪೋಷಕಾಂಶಗಳನ್ನು ಸರಿಯಾಗಿ ಫಿಲ್ಟರ್ ಮಾಡಲು ಮತ್ತು ಪೋಷಣೆಯ ಅಗತ್ಯವಿರುವ ಭಾಗಗಳಿಗೆ ತಲುಪಿಸಲು ಸಹಾಯವಾಗುತ್ತದೆ.

ನಿಂತು ನೀರು ಕುಡಿದಾಗ ಏನಾಗುತ್ತದೆ?
ನಿಂತು ನೀರು ಕುಡಿದಾಗ ಒಂದು ಫೋರ್ಸ್ ಮೂಲಕ ನೀರು ನೇರವಾಗಿ ಹೊಟ್ಟೆಗೆ ಹೋಗುತ್ತದೆ. ಅಲ್ಲದೇ, ನಿಂತು ನೀರು ಕುಡಿಯುವಾಗ ಸಾಮಾನ್ಯವಾಗಿ ನಾವು ಅಧಿಕ ವೇಗದಲ್ಲಿ ಕುಡಿಯುತ್ತೇವೆ. ಅದು ನಮ್ಮ ನರಗಳ ಉದ್ವೇಗದ ಸ್ಥಿತಿಗೆ ಕಾರಣವಾಗುತ್ತದೆ” ಎಂದು ವಿವರಿಸುತ್ತಾರೆ ಅವರು.

ನಾವು ಎಷ್ಟು ನೀರನ್ನು ಕುಡಿಯಬೇಕು?
ಅತಿಯಾಗಿ ನೀರು ಕುಡಿಯುವುದು ಉಬ್ಬರಿಕೆಗೆ ಕಾರಣ ಆಗಬಹುದು. ಹಾಗಾಗಿ ದೇಹದ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಕುಡಿಯಿರಿ. “ಉತ್ತಮ ಚರ್ಮ, ರೋಗ ನಿರೋಧಕ ಶಕ್ತಿ ಮತ್ತು ಜೀರ್ಣ ಕ್ರಿಯೆಗಾಗಿ ಅತ್ಯಧಿಕ ನೀರನ್ನು ಕುಡಿಯುವ ಅಗತ್ಯವಿದೆ ಎಂದು ನಾನು ಕೂಡ ಭಾವಿಸಿದ್ದೆ. ಆದರೆ ಅದು ಸರಿಯಲ್ಲ. ನೀವು ಅತಿಯಾದ ಪ್ರಮಾಣದಲ್ಲಿ ನೀರನ್ನು ಕುಡಿದರೆ ನಿಮಗೆ ಉಬ್ಬರಿಕೆ ಉಂಟಾಗಬಹುದು. ಅಲ್ಲದೇ ಅದು ನಿಮ್ಮ ಜೀರ್ಣಾಗ್ನಿಯನ್ನು ಕುಗ್ಗಿಸಬಹುದು ಮತ್ತು ಕಫ ದೋಷವನ್ನು ಹೆಚ್ಚಿಸಬಹುದು.

ಇದನ್ನೂ ಓದಿ:   Monsoon Food System: ಮಳೆಗಾಲದಲ್ಲಿ ನಿಮ್ಮ ಆಹಾರ ಪದ್ಧತಿ ಹೀಗಿದ್ದರೆ ಅನಾರೋಗ್ಯದ ಬಗ್ಗೆ ಚಿಂತೆಯೇ ಬೇಡ

ನೀರು ತುಂಬಾ ಮುಖ್ಯ, ಆದರೆ ಅಗತ್ಯ ಇರುವಷ್ಟು ನೀರನ್ನು ಕುಡಿಯಬೇಕೇ ಹೊರತು ಅತಿಯಾಗಿ ಅಲ್ಲ. ನಿಮ್ಮ ದೇಹವನ್ನು ಆಲಿಸಲು ಪ್ರಯತ್ನಿಸಿ. ನಿಮ್ಮ ದೇಹಕ್ಕೆ ಯಾವಾಗ ನೀರು ಬೇಕು ಮತ್ತು ಯಾವಾಗ ಆಹಾರ ಬೇಕು ಎಂಬುವುದು ನಿಮಗೆ ತಿಳಿಯುತ್ತದೆ. ಸ್ವಲ್ಪ ಅಭ್ಯಾಸ ಆದರೆ ಸಾಕು, ನಿಮ್ಮ ದೇಹದ ಅಗತ್ಯವನ್ನು ಆಲಿಸಲು ಕಲಿಯುವಿರಿ ಮತ್ತು ಅದಕ್ಕೆ ಅನುಗುಣವಾಗಿ ಆಹಾರ ನೀಡಿರಿ” ಎನ್ನುತ್ತಾರೆ ಡಾ. ಭಾವ್‍ಸರ್.
Published by:Ashwini Prabhu
First published: