Skin Care Tips: ಚರ್ಮದ ಆರೈಕೆಗೆ ಹೇಗೆ ಮಾಡಬೇಕು? ನಿರ್ದೇಶಕಿ ದಿವ್ಯಾ ಖೋಸ್ಲಾ ಬ್ಯೂಟಿ ಟಿಪ್ಸ್ ಹೀಗಿದೆ

ನಿರ್ದೇಶಕಿ ದಿವ್ಯಾ ಖೋಸ್ಲಾ ಅವರ ಸೌಂದರ್ಯ ನೋಡಿದರೆ ಅವರು 11 ವರ್ಷದ ಮಗನ ತಾಯಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅವರ ಚರ್ಮವು ಹಾಲಿನಂತೆ ಬಿಳಿಯಾಗಿದೆ.

ನಿರ್ದೇಶಕಿ ದಿವ್ಯಾ ಖೋಸ್ಲಾ

ನಿರ್ದೇಶಕಿ ದಿವ್ಯಾ ಖೋಸ್ಲಾ

  • Share this:
    ನಟಿಯರಂತೆ (Actress) ಸುಂದರವಾಗಿ (Beautiful) ಮತ್ತು ಯಂಗ್ (Young) ಆಗಿ ಕಾಣಲು ಮಹಿಳೆಯರು ತಮ್ಮ ಚರ್ಮದ ಆರೈಕೆ (Skin Care) ಮತ್ತು ಬ್ಯೂಟಿ ಟಿಪ್ಸ್ (Beauty Tips) ನ್ನು ನಟಿಯರನ್ನು ನೋಡಿ ಅನುಸರಿಸಲು ಪ್ರಾರಂಭಿಸುತ್ತಾರೆ. ಅದು ಅವರ ತ್ವಚೆಗೆ ಸರಿಯೋ ಇಲ್ಲವೋ ಎಂದು ತಿಳಿಯದೆ ಪ್ರಯತ್ನ ಮಾಡುತ್ತಾರೆ. ಸೌಂದರ್ಯವು ಕೇವಲ ತ್ವಚೆಯ ಆರೈಕೆಯಿಂದ ಬರುವುದಿಲ್ಲ. ಆದರೆ ಅದರೊಂದಿಗೆ ಪ್ರಯತ್ನಿಸಬೇಕಾದ ಇನ್ನೂ ಹಲವು ವಿಷಯಗಳಿವೆ ಗುಲ್ಶನ್ ಕುಮಾರ್ ಸೊಸೆ ಕೂಡ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರ ಸೌಂದರ್ಯದ ದಿನಚರಿ ತುಂಬಾ ವಿಶೇಷವಾಗಿದೆ. ನಿರ್ದೇಶಕಿ ದಿವ್ಯಾ ಖೋಸ್ಲಾ ಅವರ ಸೌಂದರ್ಯ ನೋಡಿದರೆ ಅವರು 11 ವರ್ಷದ ಮಗನ ತಾಯಿ ಎಂದು ಹೇಳಲು ಸಾಧ್ಯವಾಗುವುದಿಲ್ಲ.

    ನಿರ್ದೇಶಕಿ ದಿವ್ಯಾ ಖೋಸ್ಲಾ ಸೌಂದರ್ಯದ ಗುಟ್ಟು

    ನಿರ್ದೇಶಕಿ ದಿವ್ಯಾ ಖೋಸ್ಲಾ ಚರ್ಮವು ಹಾಲಿನಂತೆ ಬಿಳಿಯಾಗಿದೆ. ಅದನ್ನು ನೋಡಿದ ನಂತರ ಜನರು ಅವಳನ್ನು ಹೊಗಳಲು ಮರೆಯುವುದಿಲ್ಲ. ದಿವ್ಯಾ ಅವರು ತುಂಬಾ ಒಳ್ಳೆಯ ಚರ್ಮ ಹೊಂದಿದ್ದಾರೆ. ನಟಿ ನಿರ್ದೇಶಕಿ ದಿವ್ಯಾ ಖೋಸ್ಲಾ ಪ್ರಕಾರ, ತ್ವಚೆಯ ದಿನಚರಿಯ ಹೊರತಾಗಿ ಅನೇಕ ವಿಷಯಗಳತ್ತ ತುಂಬಾ ಗಮನ ಕೊಡುತ್ತಾಳೆ. ಅಂತ ಕೆಲಸವನ್ನು ಮಾಡುವುದಿಲ್ಲ.

    ತ್ವಚೆಯ ಆರೈಕೆಯ ದಿನಚರಿಯ ಹೊರತಾಗಿ ಹಲವು ವಿಷಯಗಳಿವೆ. ಇದು ಚರ್ಮದಲ್ಲಿ ಅದ್ಭುತ ಬದಲಾವಣೆ ತಂದು ಕೊಡುತ್ತದೆ. ಇದನ್ನು ಪ್ರತಿದಿನ ಮಾಡುವುದು ನೀವು ಸುಂದರವಾಗಿ ಕಾಣುತ್ತೀರಿ. ಇದು ಒಳಗಿನಿಂದ ಚರ್ಮವನ್ನು ಆರೋಗ್ಯಕರವಾಗಿ ಮಾಡುತ್ತದೆ.

    ಇದನ್ನೂ ಓದಿ: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್​​ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ

    ಆರೋಗ್ಯಕರ ಚರ್ಮಕ್ಕೆ ಹೆಚ್ಚಿನ ಶ್ರಮ ಪಡುವ ಅಗತ್ಯವಿಲ್ಲ. ಹಾಗಾದರೆ ನಟಿ, ನಿರ್ದೇಶಕಿ ದಿವ್ಯಾ ಖೋಸ್ಲಾ ತ್ವಚೆಯ ಆರೈಕೆಗಿಂತ ಬೇರೆ ಏನು ಮಾಡುತ್ತಾರೆ ಎಂದು ತಿಳಿಯೋಣ.

    ಮುಖಕ್ಕೆ ಎಂದಿಗೂ ಬ್ಲೀಚ್ ಹಚ್ಚಬೇಡಿ

    ಮಹಿಳೆಯರು ತ್ವರಿತ ಗ್ಲೋಗಾಗಿ ಬ್ಲೀಚ್ ಅನ್ವಯಿಸುತ್ತಾರೆ. ಆದರೆ ದಿವ್ಯಾ ಬ್ಲೀಚ್ ಹಚ್ಚುವುದಿಲ್ಲ. ಈ ಉತ್ಪನ್ನಗಳ ಬಳಕೆಗೆ ಚರ್ಮ ಒಗ್ಗಿಕೊಳ್ಳುತ್ತದೆ. ನಂತರ ಬಳಸದಿದ್ದರೆ, ಚರ್ಮವು ನಿರ್ಜೀವವಾಗುತ್ತದೆ. ನೀವು ಮಗುವಿನಂತ , ಮೃದುವಾದ ಚರ್ಮ ಹೊಂದಲು ಬಯಸಿದರೆ ಫೇಶಿಯಲ್ ಮತ್ತು ಬ್ಲೀಚ್‌ನಂತಹ ವಸ್ತುಗಳಿಂದ ದೂರವಿರಿ.

    ದಿವ್ಯಾ ರಿಯಲ್ ಲೈಫ್ ನಲ್ಲಿ ಪಾರ್ಲರ್ ಗೆ ಹೋಗೋಕೆ ಇಷ್ಟ ಪಡಲ್ಲ. ತ್ವಚೆಯ ಆರೈಕೆಗೆ ಏನು ಮಾಡಿದ್ರೂ ಬರೀ ಮನೆಯಲ್ಲಿ ನೈಸರ್ಗಿಕ ವಿಧಾನ ಬಳಕೆ ಮಾಡುತ್ತಾರೆ. ಸ್ಟಾರ್ ಆಗಿದ್ದರೂ ದಿವ್ಯಾಗೆ ಈ ವಿಷಯ ಇಷ್ಟವಿಲ್ಲ. ನಟಿಯರ ಜೀವನದಲ್ಲಿ ಮೇಕಪ್ ಪ್ರಮುಖ ವಿಷಯ. ನಿತ್ಯವೂ ಇದನ್ನು ಮಾಡಬೇಕಾಗುತ್ತದೆ.

    ಮೇಕಪ್ ತೆಗೆಯದೇ ರಾತ್ರಿ ಮಲಗಬೇಡಿ

    ಆದರೆ, ದಿವ್ಯಾಗೆ ಇದು ಇಷ್ಟವಿಲ್ಲ. ಈವೆಂಟ್ ಅಥವಾ ಶೂಟಿಂಗ್‌ಗೆ ಹೋದಾಗಲೆಲ್ಲಾ ಆಕೆ ಆದಷ್ಟು ಕಡಿಮೆ ಮೇಕಪ್ ಮಾಡುತ್ತಾಳೆ. ಕೆಲವು ಮೇಕಪ್ ಉತ್ಪನ್ನಗಳು ಮಾತ್ರ ನೋಟವನ್ನು ಪೂರ್ಣಗೊಳಿಸುತ್ತವೆ. ಇದಲ್ಲದೇ ರಾತ್ರಿ ಮಲಗುವ ಮೊದಲು ಮುಖದಿಂದ ಮೇಕಪ್ ತೆಗೆದು ಮಲಗುತ್ತಾಳೆ.

    ನಟಿಯ ಪ್ರಕಾರ, ಮೇಕಪ್ ಸೌಂದರ್ಯ ಹೆಚ್ಚಿಸುತ್ತದೆ. ಜೊತೆಗೆ ಹಾಳು ಮಾಡುತ್ತದೆ. ಅದಕ್ಕಾಗಿಯೇ ಅದನ್ನು ತೆಗೆಯುವುದು ಮತ್ತು ಹಾಕುವುದು ಮುಖ್ಯ. ನಟಿ ಕೆಲವು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ.

    ಆರೋಗ್ಯಕರ ತ್ವಚೆಗಾಗಿ ಧ್ಯಾನ ಮಾಡಿ

    ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ದಿವ್ಯಾ ಖೋಸ್ಲಾ, ಕೆಲವು ವರ್ಷಗಳಿಂದ ಧ್ಯಾನ ಮಾಡುತ್ತಿದ್ದಾಗಿ ಹೇಳಿದ್ದಾರೆ. ಇದು ಅವರ ತ್ವಚೆಯನ್ನು ಬಹಳ ಮಟ್ಟಿಗೆ ಆರೋಗ್ಯಕರವಾಗಿಡಲು ಸಹಾಯ ಮಾಡಿದೆ. ಧ್ಯಾನ ಒತ್ತಡ ನಿವಾರಿಸುತ್ತದೆ. ಹೆಚ್ಚು ಒತ್ತಡವಿದ್ದರೆ ಅಕಾಲಿಕ ವಯಸ್ಸಾಗುವಿಕೆ ಕಾಡುತ್ತದೆ ಎನ್ನುತ್ತಾರೆ.

    ಗ್ಲುಟನ್ ಮುಕ್ತ ಆಹಾರ ಸೇವನೆ ಮಾಡಿ

    ಗ್ಲೋಯಿಂಗ್ ಸ್ಕಿನ್‌ಗಾಗಿ ಕಟ್ಟುನಿಟ್ಟಿನ ಡಯಟ್ ಮಾಡುವುದು ಬೇಕಿಲ್ಲ ಅಂತಾರೆ ದಿವ್ಯಾ. ಅವರು ಡಯಟ್ ಮಾಡುವುದನ್ನು ಇಷ್ಟ ಪಡುವುದಿಲ್ಲ. ಡಯಟ್ ನ ನೇರ ಪರಿಣಾಮ ಚರ್ಮದ ಮೇಲೆ ಕಂಡು ಬರುತ್ತದೆ. ಮನಸ್ಸು ಏನನ್ನಾದರೂ ತಿನ್ನಲು ಬಯಸಿದರೆ ಖಂಡಿತವಾಗಿ ತಿನ್ನುತ್ತಾರೆ. ಕೆಲವೊಮ್ಮೆ ಅವಳು ಗ್ಲುಟನ್ ಮುಕ್ತ ಆಹಾರ ಸೇಸಿಸುತ್ತಾರೆ.

    ಇದನ್ನೂ ಓದಿ: ಮದುವೆ ಸಮಾರಂಭಕ್ಕೆ ಹೋಗುವ ಮೊದಲು ಗ್ಲಾಸಿ ಮೇಕಪ್ ಮತ್ತು ಗೋಲ್ಡನ್ ಮೇಕಪ್ ಹೀಗೆ ಮಾಡಿಕೊಳ್ಳಿ

    ನೈಸರ್ಗಿಕ ವಸ್ತುಗಳೊಂದಿಗೆ ಚರ್ಮದ ಆರೈಕೆ

    ನೈಸರ್ಗಿಕ ವಸ್ತುಗಳ ಮಹತ್ವವನ್ನು ದಿವ್ಯಾ ಚೆನ್ನಾಗಿ ವಿವರಿಸಿದ್ದಾರೆ. ಸೌಂದರ್ಯದ ದಿನಚರಿಯಲ್ಲಿ ನೈಸರ್ಗಿಕ ವಸ್ತುಗಳನ್ನು ಸೇರಿಸಬೇಕು. ಫೇಶಿಯಲ್ ಮಾಡಬೇಕೋ ಅಥವಾ ಇನ್‌ಸ್ಟಂಟ್ ಗ್ಲೋ ಆಗಬೇಕೋ ಎಲ್ಲದಕ್ಕೂ ನೈಸರ್ಗಿಕ ವಸ್ತುಗಳು ಬೇಕು.
    Published by:renukadariyannavar
    First published: