• Home
  • »
  • News
  • »
  • lifestyle
  • »
  • Monsoon Foot: ಮಳೆಗಾಲದಲ್ಲಿ ಪಾದಗಳ ಬಗ್ಗೆ ಇರಲಿ ಗಮನ! ಮನೆಯಲ್ಲೇ ಕಾಳಜಿ ಮಾಡೋದು ಹೇಗೆ?

Monsoon Foot: ಮಳೆಗಾಲದಲ್ಲಿ ಪಾದಗಳ ಬಗ್ಗೆ ಇರಲಿ ಗಮನ! ಮನೆಯಲ್ಲೇ ಕಾಳಜಿ ಮಾಡೋದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾದಗಳು ದೀರ್ಘ ಕಾಲ ಒದ್ದೆ ಆಗಿರುವುದು ಮತ್ತು ಪಾದಗಳನ್ನು ಹೆಚ್ಚು ಹೊತ್ತು ಕೊಳಕು ನೀರಲ್ಲಿ ಇಡುವುದು ಓಡಾಡುವುದು. ಅಂತಹ ಸ್ಥಿತಿಯಲ್ಲಿ ನಾವು ನಮ್ಮ ಪಾದಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಳೆಗಾಲದಲ್ಲಿ ಚರ್ಮದ ಫಂಗಲ್ ಸೋಂಕು ತಪ್ಪಿಸಲು ಪಾದೋಪಚಾರ ಮಾಡುವುದು ಮುಖ್ಯ.

  • Share this:

    ದೇಹದ (Body) ಪ್ರಮುಖ ಭಾಗಗಳಲ್ಲಿ (Main Parts) ಪಾದಗಳ (Foot) ಆರೈಕೆ (Care) ತುಂಬಾ ಮುಖ್ಯ. ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಪಾದಗಳ ಆರೈಕೆ ತುಂಬಾ ಮುಖ್ಯ. ಯಾಕೆಂದರೆ ತುಂಬಾ ಮಳೆ ಹಾಗೂ ಕೆಸರಿನಲ್ಲಿ ಹಾಗೂ ತಂಪು ವಾತಾವರಣದಲ್ಲಿ ಪಾದಗಳು ತಂಪಾಗುತ್ತವೆ. ಜೊತೆಗೆ ಅಲರ್ಜಿ ಹೆಚ್ಚುವ ಸಾಧ್ಯತೆ ಇರುತ್ತದೆ. ಅದರಲ್ಲೂ ತಂಪಿನಿಂದಾಗಿ ಬೆರಳುಗಳ ಸಂಧಿಯಲ್ಲಿ ಗುಳ್ಳೆ ಹಾಗೂ ಕೆಸರು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಮಾನ್ಸೂನ್ ನಲ್ಲಿ ಪಾದದ ಆರೈಕೆ ಮಾಡುವುದು ಮತ್ತು ಕಾಳಜ ವಹಿಸುವುದು ತುಂಬಾ ಮುಖ್ಯ. ಮಳೆಗಾಲದಲ್ಲಿ ಪಾದದ ಸೋಂಕು ಹೆಚ್ಚಾಗಿ ಜನರನ್ನು ಕಾಡುತ್ತದೆ. ಪಾದದ ತೊಂದರೆಗಳು ಸಮಸ್ಯೆ ಉಂಟಾಗಲು ಕಾರಣ ಆಗುತ್ತದೆ.


    ಇದಕ್ಕೆ ಕಾರಣ ಪಾದಗಳು ದೀರ್ಘ ಕಾಲ ಒದ್ದೆ ಆಗಿರುವುದು ಮತ್ತು ಪಾದಗಳನ್ನು ಹೆಚ್ಚು ಹೊತ್ತು ಕೊಳಕು ನೀರಲ್ಲಿ ಇಡುವುದು, ಓಡಾಡುವುದು. ಅಂತಹ ಸ್ಥಿತಿಯಲ್ಲಿ, ನಾವು ನಮ್ಮ ಪಾದಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಳೆಗಾಲದಲ್ಲಿ ಚರ್ಮದ ಫಂಗಲ್ ಸೋಂಕು ತಪ್ಪಿಸಲು, ನೀವು ಪಾದೋಪಚಾರ ಮಾಡುವುದು ಮುಖ್ಯ ಮತ್ತು ಅನಿವಾರ್ಯ.


    ಪಾರ್ಲರ್ ಬದಲು ಮನೆಯಲ್ಲೇ ಪಾದೋಪಚಾರ ಮಾಡಿ


    ಪಾದೋಪಚಾರ ಮಾಡಲು ಪಾರ್ಲರ್‌ಗೆ ಹೋಗುವುದರ ಬದಲು ಆದಷ್ಟು ಮನೆಯಲ್ಲಿ ಪಾದೋಪಚಾರ ಮಾಡಲು ಪ್ರಯತ್ನ ಮಾಡಿ. ಮನೆಯಲ್ಲೇ ಪೆಡಿಕ್ಯೂರ್ ಮಾಡಿಸಿಕೊಳ್ಳಿ. ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲಿಯೇ ಸುಲಭ ಪಾದೋಪಚಾರ ಮಾಡಬಹುದು. ಈ ರೀತಿ ನಿಮ್ಮ ಪಾದಗಳು ಸುಂದರವಾಗಿ ಕಾಣುತ್ತವೆ. ಮತ್ತು ಸೋಂಕು ಕೂಡ ದೂರ ಆಗುತ್ತದೆ.


    ಇದನ್ನೂ ಓದಿ: ರೂಟ್ ಟು ಸ್ಟೀಮ್ ಕುಕ್ಕಿಂಗ್ ಎಂದರೇನು? ಈರುಳ್ಳಿ ಸಿಪ್ಪೆಯ ಚಹಾ ಮಾಡುವುದು ಹೇಗೆ?


    ಪಾದೋಪಚಾರ ಮಾಡುವುದರಿಂದ ಪ್ರಯೋಜನಗಳು


    - ಪಾದೋಪಚಾರ ಪಾದಗಳ ಸೌಂದರ್ಯ ಹೆಚ್ಚು ಮಾಡುತ್ತದೆ.


    - ಪಾದಗಳ ಮೇಲೆ ಸಂಗ್ರಹವಾದ ಸತ್ತ ಚರ್ಮ ತೆಗೆದು ಹಾಕುತ್ತದೆ. ಮತ್ತು ಹರಿದ ಹಿಮ್ಮಡಿ ಸರಿಪಡಿಸಲಾಗುತ್ತದೆ.


    - ಪಾದೋಪಚಾರ ಮಾಡುವುದರಿಂದ ಪಾದಗಳು ಹೊಳೆಯುತ್ತವೆ. ಅಲ್ಲದೇ ಉಗುರುಗಳ ಹೊಳಪು ಕೂಡ ಹೆಚ್ಚುತ್ತದೆ.


    - ಪಾದೋಪಚಾರ ಮಾಡುವಾಗ, ಪಾದಗಳ ಮಸಾಜ್ ಮಾಡಬೇಕು. ಇದರಿಂದ ದೇಹವು ವಿಶ್ರಾಂತಿ ಪಡೆಯುತ್ತದೆ.


    - ಪಾದೋಪಚಾರದಲ್ಲಿ ಸ್ಕ್ರಬ್ಬಿಂಗ್ ಮಾಡುವುದು ರಕ್ತ ಪರಿಚಲನೆಯನ್ನು ಉತ್ತಮವಾಗಿ ಇರಿಸುತ್ತದೆ.


    ಮನೆಯಲ್ಲಿ ಪಾದೋಪಚಾರ ಮಾಡುವುದು ಹೇಗೆ?


    - ಮೊದಲು ಒಂದು ಟಬ್ ಅಥವಾ ಬಕೆಟ್‌ನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ. ಮತ್ತು ಅದರಲ್ಲಿ ಪಾದಗಳನ್ನು ಒದ್ದೆ ಮಾಡಿ.


    - ಈಗ ನೀರಿನಲ್ಲಿ ಸ್ವಲ್ಪ ಶಾಂಪೂ ಹಾಕಿ ಮತ್ತು 10 ರಿಂದ 15 ನಿಮಿಷಗಳವರೆಗೆ ಪಾದಗಳನ್ನು ನೀರಿನಲ್ಲಿ ಇರಿಸಿ.


    - ಈಗ ಪಾದಗಳನ್ನು ಸ್ಕ್ರಬ್‌ನಿಂದ ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿ. 5 ರಿಂದ 10 ನಿಮಿಷಗಳ ಕಾಲ ಸ್ಕ್ರಬ್ಬಿಂಗ್ ಮಾಡಿ.


    - ಈಗ ಪಾದಗಳನ್ನು ಪ್ಯುಬಿಕ್ ಸ್ಟೋನ್ ಅಥವಾ ಯಾವುದೇ ಫುಟ್‌ಬ್ರಶ್‌ನಿಂದ ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿ.


    - ಪಾದಗಳಲ್ಲಿ ಡೆಡ್ ಸ್ಕಿನ್ ಇದ್ದರೆ ಅದನ್ನು ಪ್ಲಕ್ಕರ್ ಅಥವಾ ನೇಲ್ ಕಟರ್ ಸಹಾಯದಿಂದ ರಿಮೂವ್ ಮಾಡಿ.


    - ಹಿಮ್ಮಡಿ ಮತ್ತು ಉಗುರುಗಳ ಸುತ್ತಲೂ ಚೆನ್ನಾಗಿ ಸ್ವಚ್ಛಗೊಳಿಸಿ.


    - ಪಾದಗಳನ್ನು ಟವೆಲ್ ನಿಂದ ಒರೆಸಿದ ನಂತರ, ಮಾಯಿಶ್ಚರೈಸರ್ ನಿಂದ ಪಾದಗಳನ್ನು ಚೆನ್ನಾಗಿ ಮಸಾಜ್ ಮಾಡಿ.


    - ಪಾದಗಳ ಉಗುರು ಕತ್ತರಿಸಿ. ಮಳೆಯಲ್ಲಿ ಉಗುರುಗಳು ಹಿಗ್ಗುವುದರಿಂದ ಸೋಂಕು ಉಂಟಾಗುತ್ತದೆ.


    ಇದನ್ನೂ ಓದಿ: ದೇಹದ ವಿವಿಧ ಭಾಗಗಳಲ್ಲಿ ಸಂಭವಿಸುವ ಕಾಯಿಲೆಯು ಯಾವ ರೀತಿಯ ಉರಿಯೂತಕ್ಕೆ ಕಾರಣವಾಗುತ್ತದೆ?


    - ಈಗ ನಿಮ್ಮ ಆಯ್ಕೆಯ ಉಗುರು ಬಣ್ಣ ಅನ್ವಯಿಸಿ.


    - ಈ ರೀತಿಯ ಪಾದೋಪಚಾರದಿಂದ ಪಾದಗಳು ಸಂಪೂರ್ಣವಾಗಿ ಸುಂದರವಾಗಿ ಕಾಣುತ್ತವೆ ಮತ್ತು ಉತ್ತಮ ಆರೈಕೆ ಪಡೆಯುತ್ತವೆ.

    Published by:renukadariyannavar
    First published: