Best Garden Influencers: ನಿಮ್ಮ ಮನೆಯಲ್ಲಿ ಗಾರ್ಡನ್​ ಮಾಡ್ಬೇಕಾ? ಹಾಗಾದ್ರೆ ಇವರನ್ನು ಫಾಲೋ ಮಾಡಿ

Gardening Idea: ಅನೇಕರು ಸಾವಯವ ಗಾರ್ಡನ್ ಅನ್ನು ಮನೆಯ ಮುಂದೆ ಅಥವಾ ಮನೆಯ ಮೇಲೆ ಮಾಡಿಕೊಳ್ಳುವುದು ಹೇಗೆ ಅಂತ ನೀವು ತಿಳಿದುಕೊಳ್ಳಬೇಕಾದರೆ, ಇಲ್ಲಿ ಸೂಚಿಸಿದ 10 ಜನರ ಬಗ್ಗೆ ಮೊದಲು ನೀವು ತಿಳಿದುಕೊಳ್ಳುವುದು ಉತ್ತಮ. ಇವರೆಲ್ಲರೂ ಸಾವಯವ ಗಾರ್ಡನ್ ಮಾಡಿದವರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಮಹಾ ನಗರಗಳಲ್ಲಿ (Metro City) ವಾಸ ಮಾಡುತ್ತಿದ್ದರೆ, ಈ ಧೂಳು, ವಾಹನಗಳಿಂದ ಹೊರ ಬರುವಂತಹ ಹೊಗೆ ಇವೆಲ್ಲವುಗಳಿಂದ ಜೀವನ ತುಂಬಾನೇ ಬೇಸತ್ತು ಹೋಗಿ 'ಒಳ್ಳೆಯ ಗಾಳಿ (Fresh Air) ಸಹ ಸಿಗುತ್ತಿಲ್ಲವಲ್ಲ' ಎಂದು ತುಂಬಾ ಸಲ ಕಳವಳ ವ್ಯಕ್ತಪಡಿಸಿದ್ದು ಇದ್ದೇ ಇರುತ್ತದೆ. ಆಗ ನಿಮಗೆ ಮನೆ ಮುಂದೆ ಅಥವಾ ಅಕ್ಕ ಪಕ್ಕದಲ್ಲಿ ಚಿಕ್ಕ ಗಾರ್ಡನ್ (Small Garden) ಮಾಡಿಕೊಳ್ಳಬೇಕೆಂದು ಯೋಚನೆ ಬಂದಿರುತ್ತದೆ. ಆದರೆ ಅದನ್ನು ಮಾಡಿಕೊಳ್ಳಲು ಕಿಂಚಿತ್ತೂ ಜಾಗ ಸಿಗುತ್ತಿಲ್ಲ ಎಂದು ನೀವು ಚಿಂತಿತರಾಗಿರುತ್ತೀರಿ. ಆ ಸ್ಥಳ ಸಿಕ್ಕರೂ ಅದನ್ನು ಹೇಗೆ ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು ಎಂದು ಅನೇಕರಿಗೆ ತಿಳಿದಿರುವುದಿಲ್ಲ.

ಅನೇಕರು ಸಾವಯವ ಗಾರ್ಡನ್ ಅನ್ನು ಮನೆಯ ಮುಂದೆ ಅಥವಾ ಮನೆಯ ಮೇಲೆ ಮಾಡಿಕೊಳ್ಳುವುದು ಹೇಗೆ ಅಂತ ನೀವು ತಿಳಿದುಕೊಳ್ಳಬೇಕಾದರೆ, ಇಲ್ಲಿ ಸೂಚಿಸಿದ 10 ಜನರ ಬಗ್ಗೆ ಮೊದಲು ನೀವು ತಿಳಿದುಕೊಳ್ಳುವುದು ಉತ್ತಮ. ಇವರೆಲ್ಲರೂ ಸಾವಯವ ಗಾರ್ಡನ್ ಮಾಡಿದವರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

1. ಏಕ್ತಾ ಚೌಧರಿ (@gardenup.in)

ಏಕ್ತಾ ಅವರ ಇನ್‌ಸ್ಟಾಗ್ರಾಮ್ ಪುಟವು ಹೆಚ್ಚಾಗಿ ಹಸಿರು ಬಣ್ಣಗಳಿಂದ ಮತ್ತು ಇತರೆ ಬಣ್ಣಗಳಿಂದ ತುಂಬಿದೆ ಎಂದು ಹೇಳಬಹುದು. ನೀವು ಗಾರ್ಡನಿಂಗ್ ಹೇಗೆ ಮಾಡುವುದೆಂದು ಸಲಹೆಯನ್ನು ಹುಡುಕುತ್ತಿದ್ದರೆ, ಅಥವಾ ನಿಮ್ಮ ಮನೆಯ ಮೂಲೆಗಳನ್ನು ಸುಂದರವಾದ ಹಸಿರು ಮೂಲೆಯಾಗಿ ಪರಿವರ್ತಿಸಲು ಯೋಜಿಸುತ್ತಿದ್ದರೆ, ಇಲ್ಲಿ ನೀವು ಸಾಕಷ್ಟು ಆಲೋಚನೆಗಳನ್ನು ಪಡೆಯಬಹುದು. ಏಕ್ತಾ ಉಪಯುಕ್ತ ಸಲಹೆಗಳನ್ನು ಸಹ ಹಂಚಿಕೊಳ್ಳುತ್ತಾರೆ, ಸಸ್ಯ ಉತ್ಸಾಹಿಗಳಿಗಾಗಿ ಕಾರ್ಯಾಗಾರದ ಸೆಷನ್‌ಗಳನ್ನು ಸಹ ಏರ್ಪಡಿಸುತ್ತಾರೆ ಮತ್ತು ಇನ್ನೂ ಹೆಚ್ಚಿನದನ್ನು ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
View this post on Instagram


A post shared by Garden Up (@gardenup.in)


2. ವಿನಾಯಕ್ ಗಾರ್ಗ್ (@lazygardener.in)

ಸಸ್ಯ ಪೋಷಕರಾಗಿರುವುದು ಸುಲಭದ ಕೆಲಸವಲ್ಲ. ಆದರೆ ನೀವು ನಿಮ್ಮಈ ಪ್ರಯಾಣವನ್ನು ಸುಗಮವಾಗಿ ಪ್ರಾರಂಭಿಸಲು ನೋಡುತ್ತಿದ್ದರೆ, ವಿನಾಯಕ್ ಗಾರ್ಗ್ ನಿಮ್ಮ ಗಾರ್ಡನ್‌ಗೆ ಯಾವ ಸಸ್ಯ ಒಳ್ಳೆಯದು ಮತ್ತು ಯಾವುದು ಅಲ್ಲ ಎಂಬುದನ್ನು ವಿವರಿಸುವ ಮೂಲಕ ಪ್ರಕ್ರಿಯೆಯನ್ನು ಸರಳೀಕರಿಸಿದ್ದಾರೆ. "ನನ್ನ ಸಸ್ಯಗಳಿಗೆ ಎಷ್ಟು ನೀರು ಬೇಕು" ಮತ್ತು "ನನಗೆ ಕೀಟದ ಸಮಸ್ಯೆಯಿದ್ದರೆ ನಾನು ಏನು ಮಾಡಬೇಕು" ಎಂಬಂತಹ ಪ್ರಶ್ನೆಗಳಿಗೆ ಬಂದಾಗ, ವಿನಾಯಕ್ ನಿಮಗೆ ಉತ್ತಮ ಮಾರ್ಗದರ್ಶಕರು ಎಂದು ಹೇಳಬಹುದು.

3. ಸುಮೇಶ್ ನಾಯಕ್ (@1500sqft_gardener)

1,500 ಚದರ ಅಡಿ ಜಾಗದಲ್ಲಿ ವಿವಿಧ ಬಗೆಯ ಹಸಿರು ಗಿಡಗಳನ್ನು ನೆಟ್ಟಿರುವ ಸುಮೇಶ್ ನಾಯಕ್, ನಗರ ನಗರದಲ್ಲಿ ಮಿನಿ ಕಾನನವನ್ನು ಹೇಗೆ ಸೃಷ್ಟಿಸಬೇಕು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಸಕ್ಯುಲೆಂಟ್‌ಗಳು, ಹಿಪ್ಪು ನೇರಳೆ, ಮಾನ್‌ಸ್ಟೆರಾಗಳು ಮತ್ತು ಹೆಚ್ಚಿನವುಗಳೊಂದಿಗೆ, ಸುಮೇಶ್ ಅವರ ಗಾರ್ಡನ್ ತುಂಬಾನೇ ಹೇರಳವಾಗಿದೆ.

ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ರೀಲ್ ಮತ್ತು ಫೋಟೋಗಳಲ್ಲಿ ವಿವಿಧ ಸಸ್ಯಗಳು, ಹಣ್ಣಿನ ಮರಗಳು ಮತ್ತು ಹೆಚ್ಚಿನವುಗಳ ಬಗ್ಗೆ ಮಾತನಾಡುವಾಗ ಅವರು ತಮ್ಮ ಫಾಲೋವರ್‌ಗಳನ್ನು ಆ ಒಂದು ಮನಮೋಹಕವಾದ ದೃಶ್ಯಗಳ ಮೂಲಕ ಕರೆದೊಯ್ಯುತ್ತಾರೆ ಎಂಬುದನ್ನು ತಪ್ಪದೆ ನೋಡಿ.
4. ಯಾಶಿಕಾ ಬಿಶ್ತ್ (@palasah_jivika)

ಯಾಶಿಕಾ ಅವರ ಇನ್‌ಸ್ಟಾಗ್ರಾಮ್ ಬಯೋ ಅವರು ಹಿಮಾಲಯದಲ್ಲಿ ನಿಧಾನಗತಿಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರೆ, ಯಾಶಿಕಾ ಅವರ ಪ್ರೊಫೈಲ್ ಎತ್ತರ ಮತ್ತು ಶೀತ ಪರಿಸ್ಥಿತಿಗಳಲ್ಲಿಯೂ ಸಹ, ಸಸ್ಯಗಳನ್ನು ಬೆಳೆಯಬಹುದು ಎಂಬುದಕ್ಕೆ ಪುರಾವೆಯಾಗಿದೆ. ಎಲ್ಲಾ ಹಸಿರು ಸಸ್ಯಗಳ ಮತ್ತು ವಸ್ತುಗಳ ಜೊತೆಗೆ, ಈ ಸಸ್ಯ ಉತ್ಸಾಹಿ ಸುಸ್ಥಿರತೆ, ಪರ್ವತಗಳಲ್ಲಿನ ಜೀವನವು ನಿಜವಾಗಿಯೂ ಹೇಗೆ ಇರುತ್ತದೆ ಎಂಬುದನ್ನು ತೋರಿಸುತ್ತದೆ.

5. ಅನ್ನೆಟ್ ಮ್ಯಾಥ್ಯೂ (@geeksofgreen)

ಇವರ ಧ್ವನಿಯಲ್ಲಿ ಈ ಸಸ್ಯಗಳ ಬಗ್ಗೆ ಕೇಳುವುದೇ ಒಂದು ಆನಂದ ನೀಡುತ್ತದೆ ಎಂದು ಹೇಳಬಹುದು ಮತ್ತು ಅವರು ತಾವು ಬೆಳೆಸಿದ ಸಸ್ಯಗಳ ಬಗ್ಗೆ ಮಾತನಾಡುವಾಗ ತನ್ನ ಸಂಗ್ರಹದ ಬಗ್ಗೆ ಅನ್ನೆಟ್ ಎಷ್ಟು ಭಾವೋದ್ರಿಕ್ತರಾಗಿದ್ದಾರೆಂದು ತಿಳಿದುಕೊಳ್ಳಲು ಇವರ ವಿಡಿಯೋಗಳನ್ನು ನೋಡಿ. ತಾನು ಬೆಳೆದಿರುವ ಸಸ್ಯಗಳನ್ನು ತೋರಿಸುವುದರಲ್ಲಿ ಇವರು ತುಂಬಾನೇ ಮಗ್ನರಾಗಿರುತ್ತಾರೆ. ಅವರು ತನ್ನ ಫಾಲೋವರ್‌ಗಳಿಗೆ ಮತ್ತು ಇತರ ಉತ್ಸಾಹಿಗಳಿಗೆ ಸಸ್ಯ ಪೋಷಕರೊಂದಿಗೆ ತಮ್ಮ ತೋಟಗಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ಸಹ ಹಂಚಿಕೊಳ್ಳುತ್ತಾರೆ.

6. ಖುಷಿ ಚೌಧರಿ (@khushis_balcony_garden)

ನಿಮ್ಮದೇ ಆದ ಒಂದು ಪುಟ್ಟ ಉದ್ಯಾನವನ್ನು ಮಾಡಿಕೊಳ್ಳಲು ಅದಕ್ಕೆ ಒಂದು ಸ್ಥಳವನ್ನು ಮಾಡಿ ಮತ್ತು ನಿಮಗೆ ಸಾಕಷ್ಟು ಸಮಯವಿರಬೇಕು. ಬಾಲ್ಕನಿ ಉದ್ಯಾನವು ಇದಕ್ಕೆ ಪರಿಪೂರ್ಣ ಪರಿಹಾರವಾಗಬಹುದು. ಇದನ್ನು ನೋಡಿಕೊಳ್ಳುವುದು ತುಂಬಾನೇ ಸರಳವಾಗಿರುತ್ತದೆ ಮತ್ತು ನಿಮ್ಮ ಸ್ವಂತ ಮನೆಯಲ್ಲಿಯೇ ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇದಲ್ಲದೆ, ನಿಮ್ಮ ಮನೆಯು ಬೇಸಿಗೆಯಲ್ಲಿ ತಂಪಾಗಿರಲು ಸಹ ಇದು ಸಹಾಯ ಮಾಡುತ್ತದೆ, ಏಕೆಂದರೆ ಈ ಸಸ್ಯಗಳು ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಬಾಯಿ ಕೆಂಪು ಮಾಡುವ ವೀಳ್ಯದೆಲೆಯಲ್ಲಿ ಇಷ್ಟೆಲ್ಲಾ ಔಷಧೀಯ ಗುಣಗಳಿವೆಯೇ?

ಅಂತಹ ಉದ್ಯಾನವನ್ನು ಹೇಗೆ ಮಾಡಿಕೊಳ್ಳಬೇಕು ಮತ್ತು ಅದು ಏನನ್ನು ಒಳಗೊಂಡಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಖುಷಿ ತನ್ನ ಫಾಲೋವರ್‌ಗಳಿಗೆ ಸಹಾಯ ಮಾಡುತ್ತಾರೆ.

7. ಪ್ರಿಯಾಂಕಾ (@colorsbypriyanka)

ಗಾರ್ಡನಿಂಗ್ ಕೇವಲ ಮನೆಯ ಅಥವಾ ತಾರಸಿಯ ಒಂದು ಮೂಲೆಯಲ್ಲಿ ನಿಮ್ಮ ಸಸ್ಯಗಳನ್ನು ನೋಡಿಕೊಳ್ಳಲು ಮಾತ್ರ ಸೀಮಿತವಾಗಬೇಕಾಗಿಲ್ಲ. ನೀವು ಲಿವಿಂಗ್ ರೂಮ್ ಅನ್ನು ಬೆಳಗಿಸುವ, ಬಳ್ಳಿಗಳು ಮತ್ತು ಬೋನ್ಸಾಯ್‌ಗಳೊಂದಿಗೆ ನಿಮ್ಮ ಎಂದಿನ ಅಲಂಕಾರವನ್ನು ಸಂಯೋಜಿಸುವ ಮತ್ತು ಕಂಪನವನ್ನು ಜೀವಂತಗೊಳಿಸುವ ಕೆಲವು ದಿಯಾಗಳನ್ನು ಸಹ ಇರಿಸಿಕೊಳ್ಳಬಹುದು.

ಪ್ರಿಯಾಂಕಾ ಅವರ ಪುಟವು ಸಸ್ಯಗಳನ್ನು ಅಲಂಕಾರಕ್ಕೆ ಸೇರಿಸುವ ಮೂಲಕ ಮತ್ತು ಬೋಹೋ ಶೈಲಿಯನ್ನು ಲಿವಿಂಗ್ ರೂಮ್‌ಗೆ ಮರಳಿ ತರುವ ಮೂಲಕ ಅವುಗಳೊಂದಿಗೆ ಹೇಗೆ ಪ್ರಯೋಗ ಮಾಡಬೇಕು ಎಂಬುದರ ಬಗ್ಗೆ ಇದೆ.

8. ಅದಿತಿ (@thegreenishaffair)

ಅದಿತಿ ತನ್ನ ಇನ್‌ಸ್ಟಾಗ್ರಾಮ್ ಸಮುದಾಯ ಟ್ಯುಟೋರಿಯಲ್‌ಗಳನ್ನು ಪ್ರಾರಂಭದಿಂದ ಅಂತ್ಯದವರೆಗೆ ವಿವಿಧ ರೀತಿಯ ಸಸ್ಯಗಳನ್ನು ಬೆಳೆಸುವ ಬಗ್ಗೆ ನೀಡುತ್ತಾರೆ. ವಿಭಿನ್ನ ಸಸ್ಯಗಳ ಅವಶ್ಯಕತೆಗಳಲ್ಲಿನ ಅಗಾಧ ವ್ಯತ್ಯಾಸದಿಂದಾಗಿ, ಸಸ್ಯ ಪೋಷಕರು ಮತ್ತು ಹೊಸಬರು ಇದನ್ನು ತಿಳಿದುಕೊಳ್ಳುವುದು ಆಗಾಗ್ಗೆ ಕಷ್ಟಕರವಾಗಿರುತ್ತದೆ.

ಪುದೀನಾ ಮತ್ತು ಸೂರ್ಯಕಾಂತಿ ಬೆಳೆಯುವುದರಿಂದ ಹಿಡಿದು, ಟೊಮ್ಯಾಟೋ, ಸ್ಟ್ರಾಬೆರಿಗಳು ಮತ್ತು ಹೆಚ್ಚಿನವುಗಳವರೆಗೆ, ಅದಿತಿಯವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಎಲ್ಲದಕ್ಕೂ ಉತ್ತರಿಸಲಾಗಿದೆ ನೋಡಿ.

9. ಮಾಧವಿ ಗುತ್ತಿಕೊಂಡ (@mad_gardener_)

ಸಾವಯವ ಕೃಷಿ, ಸುಸ್ಥಿರತೆ ಮತ್ತು ಇತರ ವಿಷಯಗಳ ಬಗ್ಗೆ ಮಾಧವಿ ಅವರು ಬೆಳಕು ಚೆಲ್ಲುತ್ತಾರೆ, ಜೊತೆಗೆ ತನ್ನದೇ ಆದ ಅನುಭವಗಳನ್ನು ಸಹ ಹಂಚಿಕೊಳ್ಳುವುದರ ಜೊತೆಗೆ ಅವರು ತನ್ನ ತೋಟವನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಸಹ ಹಂಚಿಕೊಳ್ಳುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಸೂಚಿಸುವಂತೆ, ನಿಮ್ಮ ಸ್ವಂತ ತೋಟದಲ್ಲಿ ಬೆಳೆದಂತಹ ಹಣ್ಣುಗಳು ಮತ್ತು ಸೊಪ್ಪುಗಳಿಗಿಂತಲೂ ಉತ್ತಮವಾದದ್ದು ಬೇರೆ ಏನು ಇಲ್ಲ ಎಂದು ಸಾರಿ ಸಾರಿ ಹೇಳುತ್ತದೆ.

ಇದನ್ನೂ ಓದಿ: ಪೋಷಕರೇ ಎದೆಹಾಲನ್ನು ದಾನ ಪಡೆಯುವ ಮುನ್ನ ಈ ವಿಷಯಗಳನ್ನು ನೆನಪಿಡಿ

10. ದಿವ್ಯಾ ಕನ್ವರ್ (@indiangreendreams)

ಪ್ರತಿಯೊಬ್ಬರೂ ಉತ್ತಮ ಸಲಹೆಯನ್ನು ಇಷ್ಟಪಡುತ್ತಾರೆ, ಮತ್ತು ದಿವ್ಯಾ ಕನ್ವರ್ ಅವರ ಇನ್‌ಸ್ಟಾಗ್ರಾಮ್ ಪುಟವು ನಿಮಗೆ ಅದನ್ನು ನೀಡುತ್ತದೆ ಎಂದು ಹೇಳಬಹುದು. ನೀವು ನಿಮ್ಮ ಸಾವಯವ ತೋಟವನ್ನು ಹೇಗೆ ಸುಧಾರಿಸಬಹುದು ಮತ್ತು ಋತುಮಾನದ ಹಣ್ಣುಗಳಿಗಾಗಿ ವಿಭಿನ್ನ ಬೆಳೆಯುವ ಮಾದರಿಗಳನ್ನು ಹೇಗೆ ಸುಧಾರಿಸಬಹುದು ಎಂಬುದರ ತುಣುಕುಗಳನ್ನು ಅವಳು ಹಂಚಿಕೊಳ್ಳುತ್ತಾರೆ.
Published by:Sandhya M
First published: