ಗಣೇಶ ಚತುರ್ಥಿ: ಮೂರ್ತಿ ಪ್ರತಿಸ್ಠಾಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

news18
Updated:September 11, 2018, 4:29 PM IST
ಗಣೇಶ ಚತುರ್ಥಿ: ಮೂರ್ತಿ ಪ್ರತಿಸ್ಠಾಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
news18
Updated: September 11, 2018, 4:29 PM IST
-ನ್ಯೂಸ್ 18 ಕನ್ನಡ

ಎಲ್ಲೆಡೆಯು ಗಣೇಶ ಚತುರ್ಥಿ ಹಬ್ಬದ ಸಡಗರ ಮನೆ ಮಾಡಿದೆ. ಚೌತಿಯ ದಿನದಂದು ಮನೆ, ಸಾರ್ವಜನಿಕ ಸ್ಥಳ ಮತ್ತು ಕಚೇರಿಗಳಲ್ಲಿ ಗಣೇಶನ ವಿಗ್ರಹವನ್ನು ಪ್ರತಿಸ್ಠಾಪಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ಮೂಲಕ ವಿಘ್ನ ನಿವಾರಕನನ್ನು ಪೂಜಿಸಲಾಗುತ್ತದೆ. ಆದರೆ ಪೂಜೆಯ ಸಮಯದಲ್ಲಿ ನಾವು ಮಾಡುವ ಕೆಲ ತಪ್ಪುಗಳೇ ನಮಗೆ ಸಂಕಷ್ಟವನ್ನು ತಂದೊಡ್ಡಬಹುದು. ಇಂತಹ ವಿಘ್ನಗಳಿಂದ ದೂರವಿರಲು ಗಮನಿಸಬೇಕಾದ ಕೆಲವು ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.

ಗಣೇಶನ ಮೂರ್ತಿಯನ್ನು ಖರೀದಿಸುವಾಗ ವಿಗ್ರಹದ ಸೊಂಡಿಲು ಎಡಗೈ ಭಾಗಕ್ಕೆ ಸುತ್ತಿರುವುದನ್ನು ಆರಿಸಿಕೊಳ್ಳಿ. ಬಲಗೈ ಕಡೆ ಸೊಂಡಿಲ್ಲಿದ್ದರೆ ಅಂತಹ ಗಣಪತಿ ಸಂಕಷ್ಟಕರ ಎಂದು ಪರಿಗಣಿಸಲಾಗುತ್ತದೆ.

*  ವಿಗ್ರಹವನ್ನು ಪ್ರತಿಸ್ಠಾಪಿಸುವಾಗ ಗಮನ ಹರಿಸಬೇಕಾದ ಮತ್ತೊಂದು ವಿಷಯವೆಂದರೆ ಮೂರ್ತಿಯ ದಿಕ್ಕು. ಗಣೇಶನ ಮೂರ್ತಿಯು ಯಾವತ್ತೂ ದಕ್ಷಿಣದತ್ತ ಮುಖ ಮಾಡಿರಬಾರದು. ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ಗಣಪತಿಯನ್ನು ಕೂರಿಸಿದರೆ ಕಷ್ಟ ನಷ್ಟಗಳುಂಟಾಗುತ್ತದೆ ಎಂದು ನಂಬಲಾಗುತ್ತದೆ.

*  ಮನೆಯಲ್ಲಿ ಮುದ್ರಾ ಆಸನದಲ್ಲಿರುವ ಗಣಪತಿ ಮೂರ್ತಿಯನ್ನು ಪ್ರತಿಸ್ಠಾಪಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ.

*  ನೀವು ಪ್ರತಿಸ್ಠಾಪಿಸುವ ವಿಗ್ರಹದ ಪಾದಗಳು ನೆಲವನ್ನು ಮುಟ್ಟುತ್ತದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಏಕೆಂದರೆ ನೆಲವನ್ನು ಮುಟ್ಟುವ ವಿಗ್ರಹದಿಂದ ಯಶಸ್ಸು ನಿಮ್ಮದಾಗುತ್ತದೆ ಎನ್ನಲಾಗಿದೆ.

*   ಮನೆಯಲ್ಲಿ ವಾಸ್ತುದೋಷದ ಸಮಸ್ಯೆಯಿದ್ದರೆ, ಮನೆಯ ಪ್ರವೇಶದ್ವಾರದಲ್ಲಿ ಎರಡು ಗಣೇಶನ ವಿಗ್ರಹಗಳನ್ನು ಪ್ರತಿಸ್ಠಾಪಿಸಬೇಕು.
Loading...

*   ಬಿಳಿ ಪ್ರತಿಮೆಯ ಗಣೇಶ ಮೂರ್ತಿಯನ್ನು ಮನೆಯಲ್ಲಿರಿಸಿದರೆ ಸಂತೋಷ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗುತ್ತದೆ

*   ಮನೆಯ ಮಧ್ಯದಲ್ಲಿ ಮತ್ತು ಪೂರ್ವದಲ್ಲಿ ಗಣೇಶನನ್ನು ಪ್ರತಿಸ್ಠಾಪಿಸುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

*   ಸಿಂಧೂರ ಬಣ್ಣದ ಗಣಪತಿಯನ್ನು ಪೂಜಿಸುವುದರಿಂದ ಇಷ್ಟ ಕಾರ್ಯಗಳನ್ನು ಸಿದ್ದಿಸಿಕೊಳ್ಳಬಹುದು ಎನ್ನಲಾಗುತ್ತದೆ.

*   ಗಣೇಶನ ಪೋಟೋಗಳಿಗೆ ಪೂಜೆ ಸಲ್ಲಿಸುವುದಾದರೆ ಚಿತ್ರದಲ್ಲಿ ನೈವೇದ್ಯ ಮತ್ತು ಮೂಷಿಕ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

*   ಗಣೇಶ ಹಬ್ಬದ ಸಮಯದಲ್ಲಿ ಗಣಪತಿಯನ್ನು ಅತಿಥಿಯ ರೀತಿಯಲ್ಲಿ ಸತ್ಕರಿಸಿ. ಇದಕ್ಕಾಗಿ ದಿನಕ್ಕೆ ಮೂರು ಬಾರಿಯಾದರೂ ನೈವೇದ್ಯವನ್ನು ಅರ್ಪಿಸಿ. ಇದರಿಂದ ವಿನಾಯಕನ ಕೃಪೆಗೆ ಪಾತ್ರರಾಗುತ್ತೀರಿ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ