Ear Wax: ಇಯರ್ ವ್ಯಾಕ್ಸ್ ಮಾಡುವುದು ಹೇಗೆ? ಯಾವ ವಸ್ತುಗಳನ್ನು ಕಿವಿಗೆ ಹಾಕಬಾರದು?

ಒಂದು ಅಧ್ಯಯನದ ಪ್ರಕಾರ ಹತ್ತಿ ಸ್ವೇಬ್‌ಗಳಿಂದ ತಮ್ಮ ಕಿವಿ ಸ್ವಚ್ಛಗೊಳಿಸಿದ ಸುಮಾರು 73 ಪ್ರತಿಶತ ಜನರು ಕಿವಿಗೆ ಗಾಯವಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಿವಿಯಲ್ಲಿ (Ear) ಇಯರ್‌ ವಾಕ್ಸ್ (Ear Wax) ಸಂಗ್ರಹ ಆಗುವುದು ಸಹಜ ಮತ್ತು ಸಾಮಾನ್ಯ ಸಂಗತಿ. ಕಿವಿಯಲ್ಲಿ ಸಂಗ್ರಹವಾಗುವ ಇಯರ್ ವ್ಯಾಕ್ಸ್ ನ್ನು ರಿಮೂವ್ (Remove) ಮಾಡದೇ ಹೋದರೆ, ಅದು ಗಂಭೀರ ಸೋಂಕಿಗೆ (Serious Infection) ಕಾರಣ ಆಗಬಹುದು. ಅಷ್ಟೇ ಅಲ್ಲದೇ, ಇದು ನಿಮ್ಮ ಶ್ರವಣ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಇಯರ್‌ ವಾಕ್ಸ್ ನ್ನು ರಿಮೂವ್ ಮಾಡಲು ಅನೇಕ ಜನರು ಹತ್ತಿ ಸ್ವ್ಯಾಬ್‌ ಜೊತೆ ಹೇರ್‌ ಪಿನ್‌, ಟ್ವೀಜರ್‌, ಪೆನ್ನು ಮತ್ತು ಸ್ಟ್ರಾ ಬಳಕೆ ಮಾಡುವುದನ್ನು ನೀವು ನೋಡಿರಬಹುದು. ಅಥವಾ ನೀವು ಸಹ ಇದೇ ರೀತಿ ಆಗಾಗ್ಗೆ ಇಯರ್ ವ್ಯಾಕ್ಸ್ ನ್ನು ರಿಮೂವ್ ಮಾಡಿರಬಹುದು. ಆದರೆ ಇದು ಕಿವಿಗೆ ತುಂಬಾ ಅಪಾಯಕಾರಿ.

    ಇಯರ್ ವ್ಯಾಕ್ಸ್ ಮಾಡುವುದು

    ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಹತ್ತಿ ಸ್ವೇಬ್ಗಳು ಉತ್ತಮ ಮಾರ್ಗವಾಗಿದೆ ಎಂದು ನೀವು ನಂಬಿದರೆ ಅದೂ ಸಹ ತಪ್ಪು ಆಗಿದೆ. ಈ ಕಿವಿಯ ಸೋಂಕು ಕಿವಿಯೋಲೆ ಛಿದ್ರವಾಗಲು ಕಾರಣ ಆಗಬಹುದು. ಒಂದು ಅಧ್ಯಯನದ ಪ್ರಕಾರ ಹತ್ತಿ ಸ್ವೇಬ್‌ಗಳಿಂದ ತಮ್ಮ ಕಿವಿ ಸ್ವಚ್ಛಗೊಳಿಸಿದ ಸುಮಾರು 73 ಪ್ರತಿಶತ ಜನರು ಕಿವಿಗೆ ಗಾಯವಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

    ಹತ್ತಿ ಸ್ವ್ಯಾಬ್ ಮತ್ತು ಕಲ್ಮಶ ತೆಗೆಯುವುದು

    ಹತ್ತಿ ಸ್ವ್ಯಾಬ್ ಕಲ್ಮಶವನ್ನು ಹೊರಗೆ ತೆಗೆಯುವುದರ ಬದಲು ಅದು ಹತ್ತಿಯನ್ನು ಮತ್ತಷ್ಟು ಕಿವಿಯೊಳಗೆ ತಳ್ಳುತ್ತದೆ. ಹತ್ತಿ ಸ್ವ್ಯಾಬ್ನೊಂದಿಗೆ ಕಿವಿ ಸ್ವಚ್ಛಗೊಳಿಸುವಾಗ, ಕಲ್ಮಶವು ಹೊರ ಬರುವುದಿಲ್ಲ. ಅದು ಕಿವಿಗೆ ಆಳವಾಗಿ ಹೋಗುತ್ತದೆ. ಮತ್ತು ಅಲ್ಲಿ ನೆಲೆಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ದೇಹದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆಯ ಲಕ್ಷಣಗಳು ಮತ್ತು ಪದಾರ್ಥಗಳು ಯಾವವು?

    ಇಯರ್‌ ವಾಕ್ಸ್ ನ್ನು ಉತ್ತಮ ರೀತಿಯಲ್ಲಿ ಸ್ವಚ್ಛ ಮಾಡುವುದು ಹೇಗೆ?

    ಇಯರ್‌ ವಾಕ್ಸ್ ನ್ನು ತೆಗೆದು ಹಾಕಲು ಹಲವು ಮಾರ್ಗಗಳು ಇವೆ. ಅವುಗಳನ್ನು ಬಳಸುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕು. ಆ ಪರಿಹಾರಗಳೇನು ಎಂಬುದನ್ನು ತಿಳಿಯೋಣ.

    ಈ ಹಾನಿಗಳು ಹತ್ತಿ ಸ್ವೇಬ್ಗಳ ಜೊತೆ ಕಿವಿಗೆ ಹಾನಿ ಉಂಟು ಮಾಡಬಹುದು

    ಒಂದು ವರದಿಯ ಪ್ರಕಾರ, ಹತ್ತಿ ಸ್ವ್ಯಾಬ್‌ಗಳ ಬಳಕೆ ಕಿವಿಗೆ ಗಾಯದ ಅಪಾಯ ಹೆಚ್ಚು ಮಾಡುತ್ತದೆ. ಕೊಳೆತ ಉಸಿರಾಡುವುದು ಮತ್ತು ಸೋಂಕಿನ ಅಪಾಯ ಹೆಚ್ಚಿಸುತ್ತದೆ. ಕಿವಿಯು ದೇಹದ ಸೂಕ್ಷ್ಮ ಭಾಗವಾಗಿದೆ ಎಂದು ನೆನಪಿಡಿ. ಹೀಗಾಗಿ ನೀವು ಅದನ್ನು ಕಾಳಜಿ ವಹಿಸಲು ಸಾಧನ ಬಳಕೆ ತಪ್ಪಿಸಿ.

    ಕಿವಿ ಹನಿ ಬಳಸಿ

    ಹೆಲ್ತ್‌ಲೈನ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಇದಕ್ಕಾಗಿ ನೀವು ಬೇಬಿ ಆಯಿಲ್, ಮಿನರಲ್ ಆಯಿಲ್ ಅಥವಾ ಗ್ಲಿಸರಿನ್ ನ್ನು ಬಳಸಬಹುದು. ಅವುಗಳ ಎಚ್ಚರಿಕೆಯಿಂದ ಬಳಸಿ. ಅವರೆಲ್ಲರೂ ಇಯರ್‌ ವಾಕ್ಸ್ ನ್ನು ಮೃದುಗೊಳಿಸುವ ಕೆಲಸ ಮಾಡುತ್ತಾರೆ. ಎರಡು ದಿನಗಳ ನಂತರ ಸ್ವಲ್ಪ ಬೆಚ್ಚಗಿನ ನೀರನ್ನು ಕಿವಿಗೆ ಸುರಿಯಿರಿ ಮತ್ತು ಕುತ್ತಿಗೆ ಓರೆಯಾಗಿಸಿ ಇದರಿಂದ ನೀರು ಹೊರ ಬರುತ್ತದೆ. ನಿಮ್ಮ ಕಿವಿಯ ಹೊರ ಭಾಗ ಒರೆಸಲು ನೀವು ಕ್ಲೀನ್ ಟವೆಲ್ ಬಳಸಿ.

    ಶುದ್ಧ ಹಾಗೂ ಮೃದು ಟಿಶ್ಯೂ ಪೇಪರ್ ಬಳಸಿ

    UNC ಹೆಲ್ತ್‌ಕೇರ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ನೀವು ಪ್ರತಿ ಬಾರಿ ಸ್ನಾನಕ್ಕೆ ಹೋದಾಗ, ಕಿವಿಯ ಮೇಣವು ಮೃದುವಾಗುತ್ತದೆ. ನೀವು ಅದನ್ನು ಹೊರ ತೆಗೆಯುವ ಸಮಯ ಇದು. ಇದಕ್ಕಾಗಿ ಮೃದುವಾದ ಟಿಶ್ಯೂ ಪೇಪರ್ ತೆಗೆದುಕೊಂಡು ಕಿವಿ ಸ್ವಚ್ಛಗೊಳಿಸಿ. ನೀವು ಕಿವಿಯ ಹೊರ ಭಾಗ ಸ್ವಚ್ಛಗೊಳಿಸಿ.

    ಇಯರ್ ಕ್ಯಾಂಡ್ಲಿಂಗ್ ತಪ್ಪಿಸಿ

    ಇಯರ್ ಕಾರ್ನಿಂಗ್ ಎಂದೂ ಕರೆಯಲ್ಪಡುವ ಈ ವಿಧಾನವು ಆನ್‌ಲೈನ್‌ನಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಆದರೆ ವೈದ್ಯರ ಪ್ರಕಾರ ಇದು ಪರಿಣಾಮಕಾರಿಯಲ್ಲ.

    ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ

    ಯಾವ ವಸ್ತುಗಳನ್ನು ಎಂದಿಗೂ ಕಿವಿಗೆ ಹಾಕಬೇಡಿ

    ಅನೇಕ ಜನರು ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಪೆನ್ ಕ್ಯಾಪ್ಗಳು, ಕೀ ಮತ್ತು ಬಾಬಿ ಪಿನ್ಗಳನ್ನು ಬಳಸುತ್ತಾರೆ. ಇವುಗಳ ಬಳಕೆ ಮಾಡುವುದು ಗಂಭೀರ ಹಾನಿ ಉಂಟು ಮಾಡಬಹುದು.
    Published by:renukadariyannavar
    First published: