• Home
  • »
  • News
  • »
  • lifestyle
  • »
  • Pomegranate Tips: ದಾಳಿಂಬೆ ಹಣ್ಣನ್ನು ಬಿಡಿಸಲು ಒಂದು ವಿಧಾನವಿದೆ, ಇಲ್ಲಿದೆ ನೋಡಿ ಜ್ಯೂಸ್​ ಮಾಡುವ ರೀತಿ

Pomegranate Tips: ದಾಳಿಂಬೆ ಹಣ್ಣನ್ನು ಬಿಡಿಸಲು ಒಂದು ವಿಧಾನವಿದೆ, ಇಲ್ಲಿದೆ ನೋಡಿ ಜ್ಯೂಸ್​ ಮಾಡುವ ರೀತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How To Deseed Pomegranate: ದಾಳಿಂಬೆ ಹಣ್ಣಿನಿಂದ ಕಾಳುಗಳನ್ನು ತೆಗೆಯುವುದು ಒಂದು ಕೆಲಸವಾಗಿದ್ದರೂ, ಅದರ ರಸವನ್ನು ತಯಾರಿಸುವುದು ಸಾಕಷ್ಟು ಸುಲಭ. ಶೆಫ್​ ಕುನಾಲ್ ಕಪೂರ್ ಅವರ ವಿಧಾನವನ್ನು ಅನುಸರಿಸಿದರೆ, ನಿಮಗೆ ಜ್ಯೂಸರ್ ಸಹ ಅಗತ್ಯವಿಲ್ಲ.

  • Share this:

ಬಹುತೇಕವಾಗಿ ಎಲ್ಲಾ ರೀತಿಯ ಹಣ್ಣುಗಳು (Fruits) ಆರೋಗ್ಯಕ್ಕೆ (Health) ತುಂಬಾನೇ ಒಳ್ಳೆಯದು. ಆದರೆ ಎಲ್ಲರೂ ಎಲ್ಲಾ ಹಣ್ಣುಗಳನ್ನು ತಿನ್ನುವುದಿಲ್ಲ ಮತ್ತು ಇಷ್ಟಪಡುವುದಿಲ್ಲ ಅಂತ ಹೇಳಬಹುದು. ಕೆಲವರಿಗೆ ಕೆಲವು ಹಣ್ಣುಗಳು ತುಂಬಾನೇ ಇಷ್ಟವಾದರೆ, ಇನ್ನೂ ಕೆಲವರಿಗೆ ಬೇರೆ ಹಣ್ಣುಗಳು ಇಷ್ಟವಾಗುತ್ತವೆ. ಹಣ್ಣುಗಳ ಬಗ್ಗೆ ಇಷ್ಟವಿರುವುದನ್ನು ಸ್ವಲ್ಪ ಬದಿಗಿಟ್ಟು ಕಷ್ಟದ ಮಾತು ಅಂತ ಬಂದಾಗ, ಕೆಲವು ಹಣ್ಣುಗಳ ಸಿಪ್ಪೆಯನ್ನು ಸುಲಿದು ಅವುಗಳಲ್ಲಿರುವ ಕಾಳುಗಳನ್ನು ತೆಗೆದು ಬೇರ್ಪಡಿಸಿ ತಿನ್ನಬೇಕಾಗುತ್ತದೆ. ಹೀಗೆ ಸಿಪ್ಪೆಯನ್ನು ಸುಲಿದು ನಂತರ ಅದರಲ್ಲಿರುವ ಕಾಳುಗಳನ್ನು ಹೊರ ತೆಗೆದು ತಿನ್ನುವುದು ಸ್ವಲ್ಪ ಜಾಸ್ತಿಯೇ ಸಮಯ ಹಿಡಿಯುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಬಹುತೇಕ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನಬೇಕಾಗುತ್ತದೆ, ಆದರೆ ದಾಳಿಂಬೆ, ಕಲ್ಲಂಗಡಿ, ಪಪಾಯ ಮತ್ತು ಇನ್ನಿತರೆ ಹಣ್ಣುಗಳನ್ನು ಅದರಲ್ಲಿರುವ ಬೀಜಗಳು ಮತ್ತು ಕಾಳುಗಳನ್ನು ಹೊರ ತೆಗೆಯಬೇಕಾಗುತ್ತದೆ. ಅನಂತರವಷ್ಟೆ ಅವು ತಿನ್ನಲು ಸುಲಭವಾಗಿರುತ್ತವೆ ಮತ್ತು ಮಜವಾಗಿರುತ್ತವೆ.


ದಾಳಿಂಬೆ ಹಣ್ಣಿನಲ್ಲಿರುವ ಕಾಳುಗಳನ್ನು ಬಿಡಿಸುವುದು ಕಷ್ಟವಂತೆ!


ಹಣ್ಣುಗಳನ್ನು ಕೊಂಡುಕೊಳ್ಳಲು ನಾವು ಮಾರುಕಟ್ಟೆಗೆ ಹೋದಾಗ ನಮ್ಮ ಕಣ್ಣುಗಳು ಸಾಮಾನ್ಯವಾಗಿ ಅಲ್ಲಿ ಸುಂದರವಾಗಿ ಜೋಡಿಸಿಟ್ಟ ದಾಳಿಂಬೆ ಹಣ್ಣುಗಳ ಮೇಲೆ ಬೀಳುತ್ತವೆ. ಆದರೆ ದಾಳಿಂಬೆ ತಿನ್ನಲು ತುಂಬಾನೇ ಇಷ್ಟವಾದರೂ ಸಹ ಅದರ ಸಿಪ್ಪೆ ತೆಗೆದು ಅದರಲ್ಲಿರುವ ಕಾಳುಗಳನ್ನು ಅರಿಸಿಕೊಂಡು, ಬಿಡಿಸಿಕೊಂಡು ತಿನ್ನುವುದು ಎಂದರೆ ಸ್ವಲ್ಪ ಕಷ್ಟದ ಕೆಲಸ ಅಂತ ಕೆಲವರಿಗೆ ಖಂಡಿತವಾಗಿಯೂ ಅನ್ನಿಸಿರುತ್ತದೆ. ಹೆಚ್ಚಿನ ಜನರು ಇದನ್ನು ಜ್ಯೂಸ್ ಮಾಡಿಕೊಂಡು ಕುಡಿಯಲು ಇಷ್ಟಪಟ್ಟರೆ, ಇನ್ನೂ ಕೆಲವರು ಇದರಲ್ಲಿರುವ ಕಾಳುಗಳನ್ನು ಒಂದೊಂದಾಗಿ ಬಿಡಿಸಿಕೊಂಡು ತಿನ್ನುತ್ತಾರೆ.


ದಾಳಿಂಬೆ ಹಣ್ಣಿನ ರಸವು ಖಂಡಿತವಾಗಿಯೂ ಅತ್ಯಂತ ಇಷ್ಟವಾಗುವ ಹಣ್ಣಿನ ರಸಗಳಲ್ಲಿ ಒಂದಾಗಿದೆ ಅಂತ ಹೇಳಬಹುದು. ದಾಳಿಂಬೆ ಹಣ್ಣುಗಳು ಉತ್ಕರ್ಷಣ ನಿರೋಧಕಗಳು, ನಾರಿನಂಶ, ಉತ್ತಮ ಕೊಬ್ಬುಗಳು, ವಿಟಮಿನ್ ಇ, ವಿಟಮಿನ್ ಕೆ ಮತ್ತು ಮೆಗ್ನೀಸಿಯಮ್ ಗಳಿಂದ ತುಂಬಿರುತ್ತವೆ, ಆದ್ದರಿಂದ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ಬನ್ನಿ ದಾಳಿಂಬೆ ಹಣ್ಣನ್ನ ಚೆನ್ನಾಗಿ ಕತ್ತರಿಸುವುದು ಹೇಗೆ ಅಂತ ಇಲ್ಲಿ ವೀಡಿಯೋದಲ್ಲಿ ತೋರಿಸಿ ಕೊಟ್ಟಿದ್ದಾರೆ ನೋಡಿ.


ದಾಳಿಂಬೆ ಹಣ್ಣಿನ ಕಾಳುಗಳನ್ನು ಹೀಗೆ ಸುಲಭವಾಗಿ ಬಿಡಿಸಿ


ದಾಳಿಂಬೆ ಹಣ್ಣಿನಿಂದ ಕಾಳುಗಳನ್ನು ತೆಗೆಯುವುದು ಒಂದು ಕೆಲಸವಾಗಿದ್ದರೂ, ಅದರ ರಸವನ್ನು ತಯಾರಿಸುವುದು ಸಾಕಷ್ಟು ಸುಲಭ. ಶೆಫ್​ ಕುನಾಲ್ ಕಪೂರ್ ಅವರ ವಿಧಾನವನ್ನು ಅನುಸರಿಸಿದರೆ, ನಿಮಗೆ ಜ್ಯೂಸರ್ ಸಹ ಅಗತ್ಯವಿಲ್ಲ. ಈ ಚೆಫ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ದಾಳಿಂಬೆಯನ್ನು 'ಡೀಸೀಡ್' ಮಾಡಲು ತೊಂದರೆಯಿಲ್ಲದ ಮಾರ್ಗವನ್ನು ಸಹ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ಆ್ಯಪಲ್ ಟೀ ಕುಡಿಯಿರಿ ಸಾಕು, ಅಸಿಡಿಟಿ ಸಮಸ್ಯೆ ಮಾಯವಾಗುತ್ತೆ


ಈ ಬಗ್ಗೆ ಟ್ವೀಟ್ ಮಾಡಿರುವ ಕುನಾಲ್ ಕಪೂರ್ "ದಾಳಿಂಬೆಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಅಂಶಗಳನ್ನು ಹೊಂದಿರುವ ಹಣ್ಣಾಗಿದೆ. ಜೊತೆಗೆ ವಿಟಮಿನ್ ಇ, ಕೆ ಮತ್ತು ಮೆಗ್ನೀಸಿಯಮ್ ಸಹ ಇದರಲ್ಲಿ ಇದೆ. ಯಾವುದೇ ಜ್ಯೂಸರ್ ಇಲ್ಲದೆ ಕೆಲವೇ ಕೆಲವು ನಿಮಿಷಗಳಲ್ಲಿ ದಾಳಿಂಬೆ ರಸವನ್ನು ತಯಾರಿಸುವುದು ಹೇಗೆಂದು ಕಲಿಯಿರಿ" ಎಂದು ಹೇಳಿದ್ದಾರೆ.









View this post on Instagram






A post shared by Kunal Kapur (@chefkunal)





  • ಮೊದಲು, ದಾಳಿಂಬೆಯ ಸಿಪ್ಪೆಯನ್ನು ಚೆನ್ನಾಗಿ ಕತ್ತರಿಸಿಕೊಳ್ಳಿರಿ.

  • ಚಾಕುವನ್ನು ಬಳಸಿ, ದಾಳಿಂಬೆಯ ಈ ಅಗಲವಾದ ಪಕ್ಕೆಲುಬಿನ ಭಾಗಗಳ ಉದ್ದಕ್ಕೂ ಕತ್ತರಿಸಿಕೊಳ್ಳಿ. ನೀವು ಆ ಸಿಪ್ಪೆಯನ್ನು ಚೆನ್ನಾಗಿ ಕತ್ತರಿಸಿಕೊಳ್ಳಿರಿ. ಒಳಗಿರುವ ಕಾಳುಗಳನ್ನು ಕತ್ತರಿಸಬೇಡಿ, ಹಾಗೆ ಮಾಡಿದರೆ ನಿಮಗೆ ಆ ಕಾಳುಗಳಲ್ಲಿರುವ ರಸ ಪೂರ್ತಿಯಾಗಿ ಸಿಗುವುದಿಲ್ಲ.

  • ದಾಳಿಂಬೆ ಮೇಲಿನ ತೊಗಟೆ ಕಿತ್ತಿ ಆ ಕೆಂಪು ಕಾಳುಗಳನ್ನು ಬೇರ್ಪಡಿಸುವ ತೆಳುವಾದ ಬಿಳಿ ಪೊರೆಗಳನ್ನು ಸ್ವಚ್ಛಗೊಳಿಸಿಕೊಳ್ಳಿ.


ಇದನ್ನೂ ಓದಿ: ಮಧುಮೇಹ ಇದ್ರೆ ಕಾರ್ಬೋಹೈಡ್ರೇಟ್ ಕೌಂಟ್ ಮುಖ್ಯವಾಗೋದು ಇದೇ ಕಾರಣಕ್ಕೆ

  • ನೀವು ದಾಳಿಂಬೆ ಬೀಜಗಳನ್ನು ತೆಗೆದುಕೊಳ್ಳುವಾಗ, ಅವುಗಳನ್ನು ಒಂದು ಬೌಲ್ ನೀರಿನಲ್ಲಿ ಎಸೆಯುತ್ತಲೇ ಇರಿ. ಹಣ್ಣನ್ನು ಸ್ವಚ್ಛಗೊಳಿಸಲು ಇದು ಸುಲಭವಾದ ಮಾರ್ಗವಾಗಿದೆ.

  • ಈಗ ದಾಳಿಂಬೆ ಬೀಜಗಳನ್ನು ಮಿಕ್ಸರ್ ಗೆ ಹಾಕಿಕೊಂಡು ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿರಿ.

  • ಬೀಜಗಳನ್ನು ತೆಗೆದುಹಾಕಲು ರಸವನ್ನು ಸೋಸಿಕೊಳ್ಳಿರಿ.

  • ರಸವನ್ನು ಒಂದು ಲೋಟಕ್ಕೆ ಸುರಿದುಕೊಂಡು ಕುಡಿಯಿರಿ.

Published by:Sandhya M
First published: