• Home
 • »
 • News
 • »
 • lifestyle
 • »
 • Postpartum Depression : ತಾಯಿಯಾದ ನಂತರ ಉಂಟಾಗುವ ಖಿನ್ನತೆಯನ್ನು ದೂರ ಮಾಡಲು ಹೀಗೆ ಮಾಡಿ…

Postpartum Depression : ತಾಯಿಯಾದ ನಂತರ ಉಂಟಾಗುವ ಖಿನ್ನತೆಯನ್ನು ದೂರ ಮಾಡಲು ಹೀಗೆ ಮಾಡಿ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಿಯಾದ ನಂತರ ಬಹುತೇಕರು ಖಿನ್ನತೆ ಮಾನಸಿಕ ಹಿಂಸೆ ಒತ್ತಡ ಬಳಲಿಕೆಯನ್ನು ಅನುಭವಿಸುತ್ತಾರೆ. ತಾಯಿಯಾದ ನಂತರ ಉಂಟಾಗುವ ಭಾವನೆಗಳು ದ್ವಂದ್ವ, ಮನಸ್ಸಿನೊಳಗೆ ಗದ್ದಲ ಉಂಟು ಮಾಡುತ್ತವೆ.

 • Share this:

  ಕುಟುಂಬವನ್ನು (Family) ಚೆನ್ನಾಗಿ ನೋಡಿಕೊಳ್ಳುವ, ದೇಶದ (country) ಭವಿಷ್ಯದಲ್ಲಿ (future) ಮುಖ್ಯ ಪಾಲು ಪಡೆದಿರುವ ಮಹಿಳೆ (women) ಸದೃಢವಾಗಿ, ಆರೋಗ್ಯವಾಗಿ (health) ಇರಬೇಕಾದದ್ದು ತುಂಬಾ ಮುಖ್ಯ. ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಅಜ್ಜಿಯಾಗಿ ಮನೆ ಮತ್ತು ಸಮಾಜದಲ್ಲಿ ನಿರ್ಣಾಯಕ ಪಾತ್ರ ವಹಿಸುವವಳು ಹೆಣ್ಣು. ಈಗ ಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮೀತವಾಗಿಲ್ಲ. ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ, ಮನೆ, ಸಂಸಾರದ ನೊಗವನ್ನು ಅಚ್ಚುಕಟ್ಟಾಗಿ ಸಾಗಿಸುತ್ತಿದ್ದಾರೆ. ಆದರೆ ಹಂತ ಹಂತವಾಗಿ ಹೆಣ್ಣಿನ ಜೀವನದಲ್ಲಿ ಆಗುವ ಬದಲಾವಣೆ, ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಹಲವು ತೊಂದರೆಯನ್ನುಂಟು ಮಾಡುತ್ತದೆ. ಅದರಲ್ಲೂ ಮದುವೆಯಾದ ನಂತರ ಹಾರ್ಮೋನ್ ಗಳ (Harmon) ಏರು-ಪೇರು, ಗರ್ಭಿಣಿಯಾದಾಗ ಆಗುವ ಮೂಡ್ ಸ್ವಿಂಗ್ಸ್ (mood swing), ತಾಯಿಯಾದ  ಬಳಿಕ ಮಗು ಮತ್ತು ತನ್ನ ಆರೋಗ್ಯದ ಜೊತೆಗೆ ಮನೆಯನ್ನೂ ಸರಿಯಾಗಿ ನೋಡಿಕೊಂಡು ಹೋಗುವ ಕೆಲಸ ಮತ್ತು ಮುಖ್ಯ ಜವಾಬ್ದಾರಿ ಮಹಿಳೆಯದ್ದಾಗುತ್ತದೆ. ಅದಾಗ್ಯೂ ತಾಯಿಯಾದ ನಂತರ ಆಕೆ ಹೆಚ್ಚು ಒತ್ತಡ ಅನುಭವಿಸುತ್ತಾಳೆ.


  ಮಗುವಿನ ಆರೈಕೆ ಮತ್ತು ತನ್ನ ದೈಹಿಕ ಚಟುವಟಿಕೆ, ಕಾಡುವ ನಿದ್ರಾಹೀನತೆ ಇದೆಲ್ಲವೂ ಆಕೆಯ ಆರೋಗ್ಯಕ್ಕೆ ಕಠಿಣ ಸವಾಲೆಸೆಯುತ್ತವೆ. ತಾಯಿಯಾದ ನಂತರ ಬಹುತೇಕರು ಖಿನ್ನತೆ, ಮಾನಸಿಕ ಹಿಂಸೆ, ಒತ್ತಡ, ಬಳಲಿಕೆಯನ್ನು ಅನುಭವಿಸುತ್ತಾರೆ. ತಾಯಿಯಾದ ನಂತರ ಉಂಟಾಗುವ ಭಾವನೆಗಳು ದ್ವಂದ್ವ, ಮನಸ್ಸಿನೊಳಗೆ ಗದ್ದಲ ಉಂಟು ಮಾಡುತ್ತವೆ. ಭಯ, ದುಃಖ, ಸಂತೋಷ ಹೀಗೆ ಎಲ್ಲ ತರಹದ ಭಾವನೆಗಳು ಕಾಡುತ್ತವೆ. ಇದರ ಜೊತೆಗೆ ಕೀಲು, ಮಂಡಿ ನೋವು, ಬೆನ್ನು ನೋವು ಕೂಡ ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದ ತಾಯಿ ಹೆಚ್ಚು ಒತ್ತಡ ಮತ್ತಷ್ಟು ಖಿನ್ನತೆಗೆ ಒಳಗಾಗುತ್ತಾಳೆ.


  ತಾಯಿಯ ಆರೋಗ್ಯ


  ಪ್ರಸವದ (postpartum) ನಂತರ ಉಂಟಾಗುವ ಮೂಡ್ ಸ್ವಿಂಗ್ಸ್, ಮಗುವಿನ ಅಳು, ಮಗುವಿನ ಜೊತೆಗಿನ ವಾತ್ಸಲ್ಯ, ಮಮತೆ ಮತ್ತು ಬಾಂಧವ್ಯದ ತೊಂದರೆ, ಮುಖ್ಯವಾಗಿ ಮನಸ್ಸನ್ನು ಚಂಚಲಗೊಳಿಸುತ್ತದೆ. ಆಲೋಚನೆ ಅಥವಾ ನಿರ್ಧಾರ ಕೈಗೊಳ್ಳಲು ಮಾರಕವಾಗುತ್ತದೆ. ಇದರಿಂದ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಮತ್ತು ಏರುಪೇರಿಗಳಾಗುತ್ತವೆ. ಹೀಗೆ ಪ್ರಸವದ ನಂತರ ನಿಮ್ಮನ್ನು ಕಾಡುವ ಸಮಸ್ಯೆಗಳಿಗೆ, ಖಿನ್ನತೆ (depression) ಯನ್ನು ಹೋಗಲಾಡಿಸಿಕೊಳ್ಳಲು ನೀವೇ ಪ್ರಯತ್ನಿಸಬೇಕು. ಎಲ್ಲ ಆಲೋಚನೆಗಳನ್ನು ಬದಿಗಿರಿಸಿ, ತಾಯ್ತನದ ಅನುಭವ ಸವಿಯಲು ಕೆಲ ಸಲಹೆಗಳು ಇಲ್ಲಿವೆ…


  ಇದನ್ನೂ ಓದಿ: ಮುಗಿಯದ ಪ್ರಾಬ್ಲೆಮ್ಸ್, ಪ್ರತಿ ದಿನ ಚಿಂತೆ, ಹ್ಯಾಪಿ ಮೂಡ್‌ಗಾಗಿ ಸ್ವಲ್ಪ ಓಡಿ


  ವಾಕಿಂಗ್, ಯೋಗ, ಧ್ಯಾನ ಮಾಡಿ:


  ತಾಯಿಯಾದ ನಂತರ ಜವಾಬ್ದಾರಿ ಹೆಚ್ಚುತ್ತದೆ. ಅದನ್ನೆಲ್ಲಾ ಬದಿಗಿಟ್ಟು ಕೆಲ ಹೊತ್ತು ವಾಕಿಂಗ್ ಮಾಡುವುದು ಒಳ್ಳೆಯದು. ಇದು ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಹಿತ ನೀಡುತ್ತದೆ. ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಯೋಗದ ಭಂಗಿಗಳಿಂದ ದೇಹದ ಭಾಗಗಳಿಗೆ ವ್ಯಾಯಾಮ ಒದಗಿ, ರಿಲ್ಯಾಕ್ಸ್ ಆಗುತ್ತವೆ. ತಾಜಾ ಗಾಳಿಯ ಉಸಿರಾಟ ದೇಹಕ್ಕೆ ಮತ್ತು ಮನಸ್ಸಿಗೆ ಮುದ ನೀಡಿ, ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.


  ಪೌಷ್ಠಿಕ ಆಹಾರ ಸೇವನೆ ಮಾಡಿ:


  ಆದಷ್ಟು ದೇಹಕ್ಕೆ ಪೌಷ್ಠಿಕಾಂಶ ಸಿಗುವ ಆಹಾರ ಸೇವಿಸಿ. ಸರಿಯಾದ ಮತ್ತು ನಿಗದಿತ ಸಮಯಕ್ಕೆ ಊಟ ಮಾಡಿ. ಆಹಾರದಲ್ಲಿ ಹಸಿರು ತರಕಾರಿ, ಕಾಳು, ಕ್ಯಾರೆಟ್, ಸೇಬು, ಬಳಕೆ ಮಾಡಿ.


  ಕೆಲ ಸಮಯವನ್ನು ನಿಮಗಾಗಿ ಯೋಜನೆ ಮಾಡಿ:


  ಸದಾ ಮಗುವಿನ ಆರೋಗ್ಯ, ಆರೈಕೆ, ಮನೆಯವರ ಆರೈಕೆಯಲ್ಲೇ ಕಾಲ ಕಳೆಯುವುದನ್ನ ಕೊಂಚ ತಪ್ಪಿಸಿ. ನೀವು ಖುಷಿಯಾಗಿ ಹಸಿರು ವಾತಾವರಣ ನೋಡುತ್ತ ಕಳೆಯಿರಿ. ಒಳ್ಳೆಯ ಸಂಗೀತ ಆಲಿಸಿ. ಚಿತ್ರಗಳನ್ನು ವೀಕ್ಷಿಸಿ. ನಿಶ್ಚಿಂತೆಯಾಗಿ ಕುಳಿತು ವಿಶ್ರಾಂತಿ ಪಡೆದುಕೊಳ್ಳಿ.


  ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತೆ ಎಚ್ಚರ


  ಒಮೆಗಾ-3 ಕೊಬ್ಬಿನಾಮ್ಲಗಳ ಸೇವನೆ ಮಾಡಿ:


  ಪ್ರಸವ ನಂತರ ಉಂಟಾಗುವ ಖಿನ್ನತೆಯ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಮೀನಿನ ಎಣ್ಣೆ, ಒಮೆಗಾ-3 ಬಳಕೆ, ಸಸ್ಯಹಾರಿಯಾಗಿದ್ದರೆ ಅಗಸೆ ಬೀಜದ ಎಣ್ಣೆಯ ಸೇವನೆ ಮಾಡುವುದು ಒಳಿತು.

  Published by:renukadariyannavar
  First published: