Cooking Tips: ರಾಜ್ಮಾವನ್ನು ನೆನೆಸಿಡುವ ಬದಲು ಈ ರೀತಿಯಾಗಿ ಕೂಡ ಬೇಯಿಸಿಕೊಳ್ಳಬಹುದು

ನಾವು ರಾಜ್ಮಾವನ್ನು ಮುಂಚಿತವಾಗಿಯೇ ನೆನೆಸುವುದನ್ನು ಒಂದು ವೇಳೆ ಮರೆತರೆ ಏನು ಮಾಡುವುದು? ಇದನ್ನು ಕೇಳಿ ನೀವು ಒಂದು ಕ್ಷಣ ವಿಚಲಿತರಾಗುವುದು ಸಹಜ. ನಾವು ಇದಕ್ಕೆ ಪರಿಪೂರ್ಣ ಪರಿಹಾರವನ್ನು ಕಂಡು ಕೊಂಡಿದ್ದೇವೆ. ಸೆಲೆಬ್ರಿಟಿ ಬಾಣಸಿಗ ಪಂಕಜ್ ಭದೌರಿಯಾ ಇತ್ತೀಚೆಗೆ ರಾಜ್ಮಾವನ್ನು ರಾತ್ರಿಯಿಡೀ ನೆನೆಸಿಡದೆ ಹೇಗೆ ಬೇಯಿಸಬೇಕು ಎಂಬುದರ ಬಗ್ಗೆ ತ್ವರಿತ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ.

ರಾಜ್ಮಾ

ರಾಜ್ಮಾ

  • Share this:
ಸಾಮಾನ್ಯವಾಗಿ ಈ ಕೆಲವು ಕಾಳುಗಳ (Seeds) ಪಲ್ಯವನ್ನು ಮಾಡಿಕೊಳ್ಳಬೇಕಾದರೆ ನಾವು ಅವುಗಳನ್ನು ರಾತ್ರಿ ಹೊತ್ತಿನಲ್ಲಿ (Over Night) ಮಲಗುವ ಮುಂಚೆ ಒಂದು ನೀರು (Water) ತುಂಬಿದ ಬೌಲ್ ನಲ್ಲಿ ಹಾಕಿ ನೆನೆಸಿಡುತ್ತೇವೆ. ಮರುದಿನ ಬೆಳಿಗ್ಗೆ ಆ ಬೌಲ್ ನಲ್ಲಿರುವ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಆ ನೆನೆಸಿಟ್ಟ ಕಾಳುಗಳನ್ನು ಪಕ್ಕಕ್ಕೆ ಇರಿಸಿಕೊಳ್ಳುತ್ತೇವೆ. ನಂತರ ಎಲ್ಲಾ ಮಸಾಲೆ ಪದಾರ್ಥಗಳನ್ನು ಅದಕ್ಕೆ ಸೇರಿಸಿಕೊಂಡು ಪಲ್ಯವನ್ನು ಮಾಡಿಕೊಳ್ಳುತ್ತೇವೆ. ಅದರಲ್ಲೂ, ನಾವು ಈ ರಾಜ್ಮಾ (Rajma) ಪಲ್ಯವನ್ನು ಮಾಡಿಕೊಳ್ಳಲು ಅವುಗಳನ್ನು ರಾತ್ರಿಯಿಡಿ ಒಂದು ಬೌಲ್ ನಲ್ಲಿ ನೆನೆಸಿಡುತ್ತೇವೆ. ರಾಜ್ಮಾ-ಚಾವಲ್ ಎಂದು ಕೇಳಿದರೆ ಸಾಕು ನಮ್ಮ ಮನಸ್ಸಿಗೆ ಮೊದಲು ಬರುವ ಯೋಚನೆ ಎಂದರೆ ರಾಜ್ಮಾ ತುಂಬಾನೇ ಮೃದುವಾಗಿರಬೇಕು ಅಂತ.

ಪ್ರೋಟೀನ್ ಹಾಗೂ ಫೈಬರ್ ಸಮೃದ್ಧವಾದ ರಾಜ್ಮಾ
ಚೆನ್ನಾಗಿ ಬೇಯಿಸಿದ ರಾಜ್ಮಾ ವನ್ನು ಮಸಾಲೆಗಳಲ್ಲಿ ಹಾಕಿ ಕಲಸಿ ಸ್ವಾದಿಷ್ಟವಾದ ಪಲ್ಯ ಮಾಡಿಕೊಂಡು ಅದನ್ನು ಅನ್ನದ ಜೊತೆಯಲ್ಲಿ ತಿಂದರೆ ಎಷ್ಟು ಚೆನ್ನಾಗಿರುತ್ತದೆ. ಈ ಜೋಡಿ ಆಹಾರದ ಹೆಸರು ಕೇಳಿದರೆನೇ ಬಾಯಲ್ಲಿ ನೀರು ಬರಲು ಶುರುವಾಗುತ್ತದೆ ಅಲ್ಲವೇ? ದಿನದ ಯಾವುದೇ ಸಮಯದಲ್ಲಿಯಾದರೂ ಇವುಗಳನ್ನು ಮಾಡಿಕೊಂಡು ತಿನ್ನಬಹುದು. ಇದು ಆರೋಗ್ಯಕ್ಕೂ ಸಹ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಪ್ರೋಟೀನ್, ಫೈಬರ್-ಸಮೃದ್ಧವಾಗಿದೆ ಮತ್ತು ಹೊಟ್ಟೆಯನ್ನು ತುಂಬಿಸುತ್ತದೆ ಎಂದು ಹೇಳಬಹುದು.

ಇದಲ್ಲದೆ, ರಾಜ್ಮಾ ಬೀನ್ಸ್ ಸಹ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ ಮತ್ತು ಕೊಲೆಸ್ಟ್ರಾಲ್ ಮುಕ್ತವಾಗಿರುತ್ತದೆ. ಇದು ತಮ್ಮ ಆಹಾರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡಲು ಬಯಸುವ ಜನರಿಗೆ ಸೂಕ್ತವಾಗಿದೆ.

ಇದನ್ನೂ ಓದಿ:   Health Tips: ಬಸಳೆ ಸೊಪ್ಪಿನಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳು ಇವೆ, ಇದರ ಸೇವನೆ ಆರೋಗ್ಯಕ್ಕೆ ಲಾಭ

ರಾಜ್ಮಾ ವನ್ನು ರಾತ್ರಿಯಿಡಿ ನೆನೆಸಿಡುವುದು ಮುಖ್ಯ
ರಾಜ್ಮಾದಿಂದ ಸ್ವಾದಿಷ್ಟಕರವಾದ ಪಲ್ಯವನ್ನು ಮಾಡಿಕೊಳ್ಳುವುದರ ಜೊತೆಗೆ ಯಾವುದೇ ಪಲ್ಯದ ಮೇಲೆ ಮೇಲೋಗರದ ಹಾಗೆ ಸಹ ತಯಾರಿಸಿಕೊಳ್ಳಬಹುದು. ಈ ಹುರುಳಿಯನ್ನು ಕಬಾಬ್, ಸಲಾಡ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಭಕ್ಷ್ಯಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಅದು ಏನೇ ಇರಲಿ, ಯಾವುದೇ ರಾಜ್ಮಾ ಆಧಾರಿತ ಪಾಕವಿಧಾನವನ್ನು ತಯಾರಿಸುವ ಮೊದಲ ಹಂತವೆಂದರೆ ಅದನ್ನು ರಾತ್ರಿಯಿಡೀ ನೆನೆಸುವುದು ಎಂದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ರಾಜ್ಮಾ ಒಂದು ಗಟ್ಟಿಯಾದ ದ್ವಿದಳ ಧಾನ್ಯವಾಗಿದ್ದು, ಕುದಿಯಲು ಸಾಕಷ್ಟು ಸಮಯ ಬೇಕಾಗುತ್ತದೆ.

ಅದಕ್ಕಾಗಿಯೇ, ಮಹಿಳೆಯರು ಅದನ್ನು ಆರರಿಂದ ಎಂಟು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಲು ಬಯಸುತ್ತಾರೆ. ಇದು ರಾಜ್ಮಾದ ಹೊರ ಕವಚವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕುದಿಯಲು ಸುಲಭವಾಗುತ್ತದೆ.

ಆದರೆ ನಾವು ರಾಜ್ಮಾವನ್ನು ಮುಂಚಿತವಾಗಿಯೇ ನೆನೆಸುವುದನ್ನು ಒಂದು ವೇಳೆ ಮರೆತರೆ ಏನು ಮಾಡುವುದು? ಇದನ್ನು ಕೇಳಿ ನೀವು ಒಂದು ಕ್ಷಣ ವಿಚಲಿತರಾಗುವುದು ಸಹಜ. ನಾವು ಇದಕ್ಕೆ ಪರಿಪೂರ್ಣ ಪರಿಹಾರವನ್ನು ಕಂಡು ಕೊಂಡಿದ್ದೇವೆ. ಸೆಲೆಬ್ರಿಟಿ ಬಾಣಸಿಗ ಪಂಕಜ್ ಭದೌರಿಯಾ ಇತ್ತೀಚೆಗೆ ರಾಜ್ಮಾವನ್ನು ರಾತ್ರಿಯಿಡೀ ನೆನೆಸಿಡದೆ ಹೇಗೆ ಬೇಯಿಸಬೇಕು ಎಂಬುದರ ಬಗ್ಗೆ ತ್ವರಿತ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಸಲಹೆಯನ್ನು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನೀಡಿದ್ದಾರೆ. "ಬೀನ್ಸ್, ರಾಜ್ಮಾ, ಚೋಲೆಯನ್ನು ಅಡುಗೆ ಮಾಡುವ ಮೊದಲು ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೆನೆಸಿಡಬೇಕು. ಆದರೆ ನೀವು ಒಮ್ಮೊಮ್ಮೆ ಮರೆತರೆ ಕೇವಲ 30 ನಿಮಿಷಗಳಲ್ಲಿಯೇ ಇವುಗಳನ್ನು ಬೇಯಿಸಿಕೊಳ್ಳುವುದಕ್ಕೆ ಇಲ್ಲೊಂದು ಅವಕಾಶವಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:   Oil And Health: ಅಡುಗೆಗೆ ಯಾವ ಎಣ್ಣೆ ಬಳಸಬಾರದು ಮತ್ತು ಯಾವ ಪ್ರಮಾಣದಲ್ಲಿ ಆಯಿಲ್​ ಬಳಸಬೇಕು?

6 ರಿಂದ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸದೆ ರಾಜ್ಮಾವನ್ನು ಬೇಯಿಸುವುದು ಹೇಗೆ?
ಬಾಣಸಿಗ ಪಂಕಜ್ ಅವರ ಪ್ರಕಾರ, ನೀವು ಮಾಡಬೇಕಾಗಿರುವುದು ಏನಪ್ಪಾ ಎಂದರೆ ಮೊದಲು ರಾಜ್ಮಾವನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ, ಅದಕ್ಕೆ ಕುದಿಯುವ ನೀರನ್ನು ಸೇರಿಸಿ. ನೀರಿನ ಮಟ್ಟವು ರಾಜ್ಮಾದ ಪದರಿಗಿಂತ ಹೆಚ್ಚಾಗಿರುವಂತೆ ನೋಡಿಕೊಳ್ಳಿರಿ. ಮುಚ್ಚಳವನ್ನು ಮುಚ್ಚಿ ಅರ್ಧಗಂಟೆಯವರೆಗೆ ಹಾಗೆ ಬಿಡಿ. ನಂತರ ನಿಮಗೆ ಮೃದುವಾದ ರಾಜ್ಮಾವನ್ನು ಅಡುಗೆಗೆ ಬಳಸಲು ಸಿದ್ದವಾಗಿರುತ್ತದೆ. ಚೋಲೆ ಮತ್ತು ಉದ್ದಿನ ಬೇಳೆ ಸೇರಿದಂತೆ ಇತರ ದ್ವಿದಳ ಧಾನ್ಯಗಳಿಗೂ ನೀವು ಇದೇ ಉಪಾಯವನ್ನು ಅನುಸರಿಸಬಹುದು.
Published by:Ashwini Prabhu
First published: