• Home
  • »
  • News
  • »
  • lifestyle
  • »
  • Uric Acid: ದೇಹದಲ್ಲಿ ಯೂರಿಕ್ ಆಮ್ಲ ಕಡಿಮೆ ಮಾಡೋಕೆ ನಿಮ್ಮ ಮನೆಯಲ್ಲಿದೆ ಮ್ಯಾಜಿಕ್ ವಸ್ತುಗಳು

Uric Acid: ದೇಹದಲ್ಲಿ ಯೂರಿಕ್ ಆಮ್ಲ ಕಡಿಮೆ ಮಾಡೋಕೆ ನಿಮ್ಮ ಮನೆಯಲ್ಲಿದೆ ಮ್ಯಾಜಿಕ್ ವಸ್ತುಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Control Uric Acid: ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು, ಸಮಸ್ಯೆ ಇರುವವರು ತಮ್ಮ ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯ ಹಾಗೂ ಅದಕ್ಕೆ ಈ ಪದಾರ್ಥಗಳು ಅತ್ಯಂತ ಮುಖ್ಯವಾಗಿದೆ.

  • Share this:

ಯೂರಿಕ್ ಆಮ್ಲವು (Uric Acid) ರಕ್ತದಲ್ಲಿ (Blood) ಕಂಡುಬರುವ ತ್ಯಾಜ್ಯ ಉತ್ಪನ್ನ ಎನ್ನಲಾಗುತ್ತದೆ. ಇದು ಪ್ಯೂರಿನ್‌ಗಳಂತಹ ಸಂಯುಕ್ತಗಳು ಚಯಾಪಚಯಗೊಂಡಾಗ ಆಮ್ಲವು ರೂಪುಗೊಳ್ಳುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ, ಯೂರಿಕ್ ಆಮ್ಲವು ಮೂತ್ರಪಿಂಡಗಳು (Kidney) ಮತ್ತು ಮೂತ್ರದ ಮೂಲಕ ಹಾದುಹೋಗುತ್ತದೆ. ಆದರೆ, ನಾವು ಪ್ಯೂರಿನ್ ಭರಿತ ವಸ್ತುಗಳನ್ನು ಹೆಚ್ಚು ಸೇವಿಸಿದಾಗ, ಈ ಆಮ್ಲದ ಮಟ್ಟವು ದೇಹದಲ್ಲಿ (Body) ಹೆಚ್ಚಾಗುತ್ತದೆ. ಇದು ಅಪಾಯಕ್ಕೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಹಾಗಾದ್ರೆ ಈ ಯೂರಿಕ್ ಆಮ್ಲವನ್ನು ದೇಹದಲ್ಲಿ ನಿಯಂತ್ರಿಸುವುದು ಹೇಗೆ ಎನ್ನುವುದು ಇಲ್ಲಿದೆ.


ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳದಿಂದಾಗಿ, ಸಂಧಿವಾತದ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಹಲವಾರು ಜನರು ಹೇಳುತ್ತಾರೆ, ಅಲ್ಲದೇ ಅನುಭವಿಸುತ್ತಿರುವವರು ಸಹ ಯೂರಿಕ್ ಆಮ್ಲವೇ ಕಾರಣ ಎಂದಿದ್ದಾರೆ. ಹೆಚ್ಚಿದ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಆದರೆ, ಈ ಮಟ್ಟವನ್ನು ಕಡಿಮೆ ಮಾಡಲು ಕೆಲವು ಗಿಡಮೂಲಿಕೆಗಳು ಸಹ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಯೂರಿಕ್ ಆಮ್ಲದ ಹೆಚ್ಚಳದ ಸಮಸ್ಯೆ ಇದ್ದರೆ ಅಂದರೆ ಹೈಪರ್ಯುರಿಸೆಮಿಯಾ ಸಮಸ್ಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಗಿಡಮೂಲಿಕೆಗಳು ಯಾವುವು ಎಂಬುದು ಇಲ್ಲಿದೆ.




ತ್ರಿಫಲ : ತ್ರಿಫಲ ಎಂದರೆ ಮೂರು ಹಣ್ಣುಗಳು ಅಂದರೆ ಅಮಲಕಿ, ವಿಭಿತಕಿ, ಹರಿತಕಿ. ಈ ಮೂರು ಹಣ್ಣುಗಳನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ ಎಂದು ಸಾಬೀತಾಗಿದೆ. ಇದು ಹೆಚ್ಚಿದ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಪ್ರಯೋಜನಕಾರಿ , ಹಾಗಾಗಿ ನೀವು ಪ್ರತಿನಿತ್ಯ ತ್ರಿಫಲ ಸೇವನೆ ಮಾಡುವುದು ದೇಹದಲ್ಲಿ ಯೂರಿಕ್ ಆಮ್ಲ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಅಮೃತಬಳ್ಳಿ: ಆಯುರ್ವೇದದಲ್ಲಿ ಅಮೃತಬಳ್ಳಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅದರ ಔಷಧೀಯ ಗುಣಗಳಿಂದಾಗಿ, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದೇಹದಲ್ಲಿ ಯೂರಿಕ್ ಆಮ್ಲದ ಸರಿಯಾದ ಮಟ್ಟವನ್ನು ಕಾಪಾಡಿಕೊಳ್ಳಲು ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಾಬೀತಾಗಿದೆ. ಇದರ ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣಗಳು ದೇಹದಲ್ಲಿ ಯೂರಿಕ್ ಆಮ್ಲ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.




ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಇಳಿಸೋದು ಬಹಳ ಸುಲಭ, ಈ ಆಯುರ್ವೇದ ಮೂಲಿಕೆಗಳಿದ್ರೆ ಸಾಕು


ಬೇವು: ಬೇವು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಮೂಲಿಕೆಯಾಗಿಯೂ ಬಳಸಲ್ಪಡುತ್ತದೆ. ಇದರ ಪ್ರಯೋಜನಗಳ ಬಗ್ಗೆ ನಾವು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಅದರ ಆರೋಗ್ಯ  ಗುಣಲಕ್ಷಣಗಳಿಂದಾಗಿ, ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಇದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರ ಜೊತೆ ಇದು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ ಕೂಡ.




ಹಾಗಲಕಾಯಿ: ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳುವ ಅವಶ್ಯಕತೆ ಇಲ್ಲ. ಇದು ರಕ್ತವನ್ನು ಶುದ್ಧೀಕರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹಾಗೆಯೇ, ಸಂಧಿವಾತದ ಚಿಕಿತ್ಸೆಯಲ್ಲಿಯೂ ಸಹ ಇದನ್ನು ಬಳಸಲು ಸಲಹೆ ನೀಡಲಾಗುತ್ತದೆ. ಆದರೆ, ಇದರ ಬಳಕೆಯು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಅಥವಾ ಕರುಳಿನ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.


ಅರಿಶಿನ: ಅರಿಶಿನವು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಮಸಾಲೆಯಾಗಿದೆ. ಆದರೆ, ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಈ ಮೂಲಿಕೆಯು ದೇಹದಲ್ಲಿ ಸರಿಯಾದ ಯೂರಿಕ್ ಆಮ್ಲದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತರಕಾರಿಗಳು, ಸೂಪ್ ಇತ್ಯಾದಿಗಳಿಗೆ ಸೇರಿಸುವ ಮೂಲಕ ನೀವು ಇದನ್ನು ಸುಲಭವಾಗಿ ಸೇವಿಸಬಹುದು.


ಇದನ್ನೂ ಓದಿ: ಚುಮು ಚುಮು ಚಳಿಯಲ್ಲಿ ಈ ಪಾನೀಯ ಕುಡಿದು ನೋಡಿ, ಸಾಲು ಸಾಲು ಪ್ರಯೋಜನ ಸಿಗುತ್ತೆ


ಹೆಚ್ಚಿದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು, ಸಮಸ್ಯೆ ಇರುವವರು ತಮ್ಮ ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯ ಹಾಗೂ ಅದಕ್ಕೆ ಈ ಪದಾರ್ಥಗಳು ಅತ್ಯಂತ ಮುಖ್ಯವಾಗಿದೆ. ಇನ್ನು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ದಿನನಿತ್ಯ ವ್ಯಾಯಾಮ ಮಾಡಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ. ಇದು ಆರೋಗ್ಯವಾಗಿರಲು ಸಹ ನಿಮಗೆ ಸಹಾಯ ಮಾಡುತ್ತದೆ.

Published by:Sandhya M
First published: