• Home
  • »
  • News
  • »
  • lifestyle
  • »
  • Type 2 Diabetes ಸಮಸ್ಯೆ ಇದ್ರೆ ನಿಮ್ಮ ಆಹಾರ ಕ್ರಮ ಈ ರೀತಿ ಬದಲಾಗಲೇಬೇಕಂತೆ

Type 2 Diabetes ಸಮಸ್ಯೆ ಇದ್ರೆ ನಿಮ್ಮ ಆಹಾರ ಕ್ರಮ ಈ ರೀತಿ ಬದಲಾಗಲೇಬೇಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Control Type 2 Diabetes: ಅಂದಾಜಿನ ಪ್ರಕಾರ ಭಾರತದಲ್ಲಿ 77 ಮಿಲಿಯನ್ ಜನರು ಮಧುಮೇಹವನ್ನು ಹೊಂದಿದ್ದಾರೆ, ಇದು 2045 ರ ವೇಳೆಗೆ 134 ಮಿಲಿಯನ್‌ಗೆ ಏರುವ ನಿರೀಕ್ಷೆಯಿದೆ ಎನ್ನುತ್ತಾರೆ ತಜ್ಞರು.

  • Share this:

ನೀವು ಅನಿಯಂತ್ರಿತ ಟೈಪ್ -2 ಮಧುಮೇಹ (Type 2 Diabetes) ಹೊಂದಿದ್ದರೆ ಕಡಿಮೆ ಕಾರ್ಬ್ ಆಹಾರವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar Level) ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ಸಂಶೋಧನೆ (Research) ತಿಳಿಸಿದೆ. ಈ ಕುರಿತು ಟುಲೇನ್ ವಿಶ್ವವಿದ್ಯಾಲಯದ ಅಧ್ಯಯನಕಾರರು ಸಂಶೋಧನೆ ನಡೆಸಿದ್ದು, ಈ ಬಗ್ಗೆ JAMA ನೆಟ್‌ವರ್ಕ್ ಓಪನ್ ಜರ್ನಲ್‌ನಲ್ಲಿ ಅಧ್ಯಯನವು ಪ್ರಕಟವಾಗಿದೆ. ದಿನದಲ್ಲಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡುವುದು ಅಪಾಯದಲ್ಲಿರುವ ಮಧುಮೇಹ ರೋಗಿಗಳಿಗೆ ವರವಾಗಬಹುದು ಎಂದು ಅಧ್ಯಯನ ಕಂಡುಕೊಂಡಿದೆ.


ಅಧ್ಯಯನದಲ್ಲಿ ಒಂದು ಗುಂಪಿನ ಜನರಿಗೆ ಕಡಿಮೆ ಕಾರ್ಬ್ ಆಹಾರ ತೆಗೆದುಕೊಳ್ಳುವಂತೆ ನಿಯೋಜಿಸಲಾಯ್ತು. ಇನ್ನೊಂದು ಗುಂಪಿನ ಜನರಿಗೆ ಎಂದಿನಂತೆ ಆಹಾರ ಕ್ರಮಗಳನ್ನು ಮುಂದುವರಿಸುವಂತೆ ಹೇಳಲಾಯ್ತು. ಈ ವೇಳೆ ಆ ಎರಡೂ ಗುಂಪಿನವರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ಗಮನಿಸಲಾಯ್ತು.


ಕಡಿಮೆ ಕಾರ್ಬ್‌ ಸೇವನೆಯಿಂದ ಎಷ್ಟೆಲ್ಲ ಪ್ರಯೋಜನ!


ಆರು ತಿಂಗಳ ನಂತರ, ಕಡಿಮೆ-ಕಾರ್ಬ್ ಆಹಾರ ಗುಂಪು ಹಿಮೋಗ್ಲೋಬಿನ್ A1c ನಲ್ಲಿ ಹೆಚ್ಚಿನ ಮಟ್ಟವನ್ನು ಹೊಂದಿತ್ತು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಅವರ ಸಾಮಾನ್ಯ ಆಹಾರವನ್ನು ಸೇವಿಸಿದ ಗುಂಪಿನೊಂದಿಗೆ ಹೋಲಿಸಿದರೆ ರಕ್ತದಲ್ಲಿನ ಕಡಿಮೆ ಸಕ್ಕರೆಯ ಮಟ್ಟವನ್ನು ಗುರುತಿಸುತ್ತದೆ. ಇದಲ್ಲದೆ, ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಗುಂಪು ತೂಕವನ್ನು ಕಳೆದುಕೊಂಡಿತ್ತು. ಜೊತೆಗೆ ಕಡಿಮೆ ಉಪವಾಸದ ಗ್ಲೂಕೋಸ್ ಮಟ್ಟವನ್ನು ಹೊಂದಿತ್ತು ಎಂದು ಗಮನಿಸಲಾಗಿದೆ.




ಒಟ್ನಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದು ಟೈಪ್ 2 ಡಯಾಬಿಟಿಸ್ ಅನ್ನು ಅಪಾಯವನ್ನು ತಡೆಗಟ್ಟಲು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಉಪಯುಕ್ತ ವಿಧಾನವಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಟುಲೇನ್ ಯೂನಿವರ್ಸಿಟಿ ಸ್ಕೂಲ್ ಆಫ್ ಎಪಿಡೆಮಿಯಾಲಜಿಯ ಸಹಾಯಕ ಪ್ರಾಧ್ಯಾಪಕ ಪ್ರಮುಖ ಲೇಖಕ ಕರ್ಸ್ಟನ್ ಡೋರನ್ಸ್ ಹೇಳಿದ್ದಾರೆ.


ಬಹು ಅಂಗಾಂಗ ತೊಡಕಿಗೆ ಕಾರಣವಾಗುತ್ತೆ ಡಯಾಬಿಟಿಸ್‌ !


ಅಂದಹಾಗೆ, ಟೈಪ್ 2 ಡಯಾಬಿಟಿಸ್ ಬಹು ಅಂಗಗಳ ತೊಡಕುಗಳಿಗೆ ಕಾರಣವಾಗಬಹುದು. ಈ ತೊಡಕುಗಳು ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಹೆಚ್ಚಿದ ಅಕಾಲಿಕ ಕಾಯಿಲೆ ಮತ್ತು ಕಡಿಮೆ ಜೀವಿತಾವಧಿಗೆ ಕಾರಣವಾಗುತ್ತದೆ. ಮಧುಮೇಹದ ಆರ್ಥಿಕ ಮತ್ತು ಇತರ ವೆಚ್ಚಗಳು ಭಾರತೀಯ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಆಳವಾದ ಆರ್ಥಿಕ ಹೊರೆಗೆ ಕಾರಣವಾಗುತ್ತದೆ.


ಟೈಪ್ 2 ಮಧುಮೇಹವು ಮಸುಕಾದ ದೃಷ್ಟಿ, ಕೈ ಮತ್ತು ಪಾದಗಳ ಮರಗಟ್ಟುವಿಕೆ ಮತ್ತು ಒಟ್ಟಾರೆ ದಣಿವಿನಂತಹ ರೋಗಲಕ್ಷಣಗಳೊಂದಿಗೆ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಬಹುದು. ಹೃದ್ರೋಗ, ದೃಷ್ಟಿ ನಷ್ಟ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.


ಇದನ್ನೂ ಓದಿ: ಮನೆಯಲ್ಲಿ ನೀರು ವೇಸ್ಟ್​ ಆಗದಂತೆ ತಡೆಯಲು ಸೂಪರ್ ಹ್ಯಾಕ್ಸ್​ ಟ್ರೈ ಮಾಡಿ


ಅಧ್ಯಯನದ ಆವಿಷ್ಕಾರಗಳು ಪ್ರಿ ಡಯಾಬಿಟಿಸ್ ಹೊಂದಿರುವವರಿಗೆ ಸಹ ಮುಖ್ಯವಾಗಿದೆ. ಅವರ A1c ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಆದರೆ ಮಧುಮೇಹ ಎಂದು ವರ್ಗೀಕರಿಸಬಹುದಾದ ಮಟ್ಟಕ್ಕಿಂತ ಕಡಿಮೆಯಾಗಿದೆ. ಪ್ರಿಡಿಯಾಬಿಟಿಸ್ ಹೊಂದಿರುವವರು ಟೈಪ್ 2 ಮಧುಮೇಹ, ಹೃದಯಾಘಾತ ಅಥವಾ ಪಾರ್ಶ್ವವಾಯುಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ ಹೀಗಾಗಿ ಇಂಥವರಲ್ಲಿ ಆರೋಗ್ಯಕರ ಆಹಾರವನ್ನು ಹೆಚ್ಚು ನಿರ್ಣಾಯಕ ಪಾತ್ರ ವಹಿಸುತ್ತದೆ.


ಈ ಅಧ್ಯಯನವು ರಕ್ತದಲ್ಲಿನ ಸಕ್ಕರೆಯು ಪ್ರಿಡಿಯಾಬಿಟಿಕ್‌ನಿಂದ ಮಧುಮೇಹದ ಮಟ್ಟಗಳವರೆಗೆ ಮತ್ತು ಮಧುಮೇಹಕ್ಕೆ ಔಷಧಿಯನ್ನು ತೆಗೆದುಕೊಳ್ಳದ ಭಾಗವಹಿಸುವವರನ್ನು ಒಳಗೊಂಡಿತ್ತು. ಕಡಿಮೆ-ಕಾರ್ಬ್ ಗುಂಪಿನಲ್ಲಿರುವವರ A1c ಮಟ್ಟಗಳು ಸಾಮಾನ್ಯ ಆಹಾರದ ಗುಂಪಿಗಿಂತ 0.23% ಹೆಚ್ಚು ಕಡಿಮೆಯಾಗಿದೆ. ಅಂದಹಾಗೆ ಕಡಿಮೆ ಕಾರ್ಬ್ ಆಹಾರವು ಮಧುಮೇಹವನ್ನು ತಡೆಯುತ್ತದೆ ಎಂದು ಅಧ್ಯಯನವು ಸಾಬೀತುಪಡಿಸುವುದಿಲ್ಲ ಎಂದು ಡೋರನ್ಸ್ ಹೇಳಿದ್ದಾರೆ.


ಆದರೆ ಪ್ರಿಡಯಾಬಿಟಿಸ್ ಮತ್ತು ಮಧುಮೇಹದಿಂದ ಬಳಲುತ್ತಿರುವವರ ಆರೋಗ್ಯದ ಅಪಾಯಗಳನ್ನು ಹೇಗೆ ತಗ್ಗಿಸುವುದು ಎಂಬುದರ ಕುರಿತು ಹೆಚ್ಚಿನ ಸಂಶೋಧನೆಗೆ ಇದು ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ.


ಇದನ್ನೂ ಓದಿ: ಈ ಗೇಮ್​ಗಳು ನಿಮ್ಮ ನೆನಪಿನ ಶಕ್ತಿ ಹೆಚ್ಚು ಮಾಡುತ್ತವೆ, ಮರೆವಿನ ಕಾಯಿಲೆ ಇದ್ರೆ ಟ್ರೈ ಮಾಡಿ


ಇನ್ನು, 2019 ರ ಅಂದಾಜಿನ ಪ್ರಕಾರ ಭಾರತದಲ್ಲಿ 77 ಮಿಲಿಯನ್ ಜನರು ಮಧುಮೇಹವನ್ನು ಹೊಂದಿದ್ದಾರೆ, ಇದು 2045 ರ ವೇಳೆಗೆ 134 ಮಿಲಿಯನ್‌ಗೆ ಏರುವ ನಿರೀಕ್ಷೆಯಿದೆ ಎನ್ನುತ್ತಾರೆ ತಜ್ಞರು.

Published by:Sandhya M
First published: