• Home
  • »
  • News
  • »
  • lifestyle
  • »
  • Cleaning Tips: ನಿಮ್ಮ ಯೋಗ ಮ್ಯಾಟ್​ ಕ್ಲೀನ್ ಮಾಡೋಕೆ ಈ ಟ್ರಿಕ್​ ಯೂಸ್ ಮಾಡಿ

Cleaning Tips: ನಿಮ್ಮ ಯೋಗ ಮ್ಯಾಟ್​ ಕ್ಲೀನ್ ಮಾಡೋಕೆ ಈ ಟ್ರಿಕ್​ ಯೂಸ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Clean Your Yoga Mat: ನೀವು ಯೋಗ ಸ್ಟುಡಿಯೋದಲ್ಲಿ ಅಭ್ಯಾಸ ಮಾಡುತ್ತಿದ್ದರೆ ನಿಮ್ಮ ಯೋಗ ಮ್ಯಾಟ್ ಅನ್ನು ಸ್ವಚ್ಛಗೊಳಿಸುವುದು ಮುಖ್ಯವಾಗಿದೆ, ಅಲ್ಲಿ ನೀವು ಇತರರೊಂದಿಗೆ ಮ್ಯಾಟ್ಸ್ ಹಂಚಿಕೊಳ್ಳುತ್ತೀರಿ. ನೆನಪಿಡಿ ಮ್ಯಾಟ್​ ಕ್ಲೀನ್ ಮಾಡುವುದು ಸೂಕ್ಷ್ಮಜೀವಿಗಳನ್ನು ಕೊಲ್ಲುವುದಿಲ್ಲ.

ಮುಂದೆ ಓದಿ ...
  • Share this:

ದೇಹವನ್ನು ಆರೋಗ್ಯವಾಗಿಡಲು (Health) ಹಲವು ಮಾರ್ಗಗಳಿದ್ದರೂ ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡುವ ಯೋಗ (Yoga) ಎದ್ದು ಕಾಣುತ್ತದೆ. ಭಾರತೀಯ ಸಂಸ್ಕೃತಿಯ (Indian Culture) ಭಾಗವಾಗಿರುವ ಯೋಗ ಕಲೆ ಯು.ಎನ್ ಸಂಸ್ಥೆಯಿಂದ ಮಾನ್ಯತೆ ದೊರೆತ ನಂತರ ವಿಶ್ವಾದ್ಯಂತ ಇದರ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಈಗ ಯೋಗಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅನೇಕ ಜನರು ಈಗ ಯೋಗವನ್ನು ಭಾರತೀಯ ಕಲೆ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂದು ಅಭ್ಯಾಸ ಮಾಡಲು ಪ್ರಾರಂಭಿಸುತ್ತಿದ್ದಾರೆ. ಈ ಯೋಗ ಮಾಡುವಾಗ ಸಾಮಾನ್ಯವಾಗಿ ಮ್ಯಾಟ್​ (Yoga Mat) ಬಳಕೆ ಮಾಡುತ್ತೇವೆ. ಆದರೆ ಅದನ್ನು ಸರಿಯಾಗಿ ಸ್ವಚ್ಛ ಮಾಡದಿದ್ದರೆ, ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಮನೆಯಲ್ಲಿ ಯೋಗ ಮ್ಯಾಟ್ ಕ್ಲೀನ್ ಮಾಡುವುದು ಹೇಗೆ ಎಂಬುದು ಇಲ್ಲಿದೆ. 


ಯೋಗ ಮಾಡುವುದು ಏಕೆ?


ಯಾವ ಆಸನದಿಂದ ನಾವು ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನಾವು ಉತ್ತಮ ಸಾಧಕರಿಂದ ತಿಳಿದುಕೊಳ್ಳಬೇಕು. ಅದೇ ಸಮಯದಲ್ಲಿ, ಯೋಗವನ್ನು ಅಭ್ಯಾಸ ಮಾಡಲು ಪ್ರಾರಂಭಿಸುವ ಮೊದಲು ನಾವು ಯಾವಾಗಲೂ ಒಂದು ಮುಖ್ಯವಾದ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, ಯೋಗಾಭ್ಯಾಸಕ್ಕೆ ಪ್ರಾಮುಖ್ಯತೆ ಕೊಡುವಷ್ಟರ ಮಟ್ಟಿಗೆ ಚಾಪೆ ಅಥವಾ ಮ್ಯಾಟ್​ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಅಜಾಗರೂಕತೆಯಿಂದ, ನಾವು ಆಗಾಗ ಅದನ್ನು ಕೊಳಕು ಮಾಡುತ್ತೇವೆ. ಸ್ವಚ್ಛ ಮಾಡುವುದನ್ನ ಮರೆತು ಬಿಡುತ್ತೇವೆ.


ನೆಲದ ಮೇಲೆ ಹರಡುವ ವಸ್ತುವು ಆ ರೀತಿಯಲ್ಲಿ ಕೊಳಕಾಗಿ ಕಾಣುತ್ತದೆ. ಅದರ ಬಗ್ಗೆ ನಾವು ಯಾವಾಗಲೂ ಯೋಚನೆ ಮಾಡಬೇಕು. ಆದರೆ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಇತ್ಯಾದಿಗಳು ಕೊಳೆಯಾದ ಚಾಪೆ ಅಥವಾ ಕಾರ್ಪೆಟ್ ಮೇಲೆ ಸ್ವಾಭಾವಿಕವಾಗಿ ಬೆಳೆದು ನಮ್ಮನ್ನು ಆಕ್ರಮಿಸಿ, ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ನಮಗೆ ಅರ್ಥವಾಗುತ್ತಿಲ್ಲ.  ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ, ಹಲವಾರು ರೀತಿಯ ರೋಗಗಳು ನಮ್ಮನ್ನ ಕಾಡುತ್ತದೆ.


ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡುವಾಗ ನಾವು ತೊರಿಸುವ ನಿಲರ್ಕ್ಷ್ಯದ ಕಾರಣ ನಾವು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ. ಹಾಗಾದ್ರೆ ಹೇಗೆ ಮ್ಯಾಟ್​ ಸ್ವಚ್ಛ ಮಾಡಬೇಕು ಎಂಬುದು ಇಲ್ಲಿದೆ.


ಇದನ್ನೂ ಓದಿ: ಮನೆಯಲ್ಲಿಯೇ ಮುಖದ ಕೂದಲನ್ನು ಸುಲಭವಾಗಿ ತೆಗೆಯಲು ಈ 4 ಫೇಸ್​ಮಾಸ್ಕ್​ ಬಳಸಿ ಸಾಕು


ಕ್ಲೀನ್ ಮಾಡುವುದು ಹೇಗೆ?


ದೊಡ್ಡ ಬಕೆಟ್ ಅನ್ನು ಫುಲ್​ ನೀರಿನಿಂದ ತುಂಬಿಸಿ. ಸೋಪ್ ಪೌಡರ್ ಅಥವಾ ಸೋಪ್ ಹಾಕಿ ಅದನ್ನು ಕರಗಿಸಿ. ಅದರಲ್ಲಿ ನೊರೆ ಬರುವಂತೆ ನೋಡಿಕೊಳ್ಳಿ. ಈಗ ನಿಮ್ಮ ಕಾರ್ಪೆಟ್ ಅನ್ನು ಅದರಲ್ಲಿ ನೆನೆಸಿ ಇಡಿ.  ಸುಮಾರು 10 ನಿಮಿಷಗಳ ನಂತರ, ನಿಮ್ಮ ಕಾರ್ಪೆಟ್ ಅನ್ನು ಸೋಪ್​ ನೀರಿನಿಂದ ತೆಗೆದು ಹಿಂಡಿ. ಈಗ ಈ ಮ್ಯಾಟ್​ ಅನ್ನು ಬೇರೆ ನೀರಿನಿಂದ ತೊಳೆಯಿರಿ ಮತ್ತು ಬಿಸಿಲಿನಲ್ಲಿ ಒಣಗಲು ಬಿಡಿ.


ಕಾರ್ಪೆಟ್​ ಅನ್ನು ಎರಡೂ ಬದಿಗಳನ್ನು ಸ್ವಚ್ಛಗೊಳಿಸಿ. ಅದರಲ್ಲಿ ಕೊಳಕು ಇದ್ದರೆ, ಆ ಕೊಳಕು ಹೋಗುವವರೆಗೂ ಸೋಪ್ ಅನ್ನು  ಹಚ್ಚಿ ಉಜ್ಜಿ.  ನಿಮ್ಮ ಕಾರ್ಪೆಟ್ ಅನ್ನು ಒಣಗಲು ಬಿಸಿಲಿಗೆ ಹಾಕುವ ಮೊದಲು ಕ್ಲೀನ್​ ಹಾಗೂ  ಒದ್ದೆಯಾದ ಬಟ್ಟೆಯಿಂದ ಒರೆಸಿ. ನಿಮ್ಮ ಮ್ಯಾಟ್​ ಒಣಗಿದ ನಂತರ, ಅದನ್ನು ಮಡಚಿ ಮತ್ತು ಸುರಕ್ಷಿತವಾಗಿ ಇಡಿ.
ಪ್ರತಿ ಬಾರಿ ನೀವು ಅದನ್ನು ಬಳಸುವಾಗ ಮ್ಯಾಟ್​ಗೆ ಸ್ಯಾನಿಟೈಸರ್ ಅನ್ನು ಹಾಕಿ. ಇದೇ ರೀತಿಯ ವಾರಕ್ಕೊಮ್ಮೆ ಅಥವಾ 10 ದಿನಗಳಲ್ಲಿ ಒಮ್ಮೆ ಈ ಕ್ಲೀನ್ ಮಾಡುವ ಕೆಲ ಮಾಡಿ. ಇದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.  ಸೂಕ್ಷ್ಮಜೀವಿಗಳು ಮತ್ತು ಕೊಳೆಯಾದ ಮ್ಯಾಟ್​ ವಾಸನೆಯನ್ನು ತಪ್ಪಿಸಲು, ನಿಯಮಿತವಾಗಿ ನಿಮ್ಮ ಮ್ಯಾಟ್​ ಅನ್ನು ಸರಿಯಾಗಿ ಸ್ವಚ್ಛಗೊಳಿಸಿ.


ಇದನ್ನೂ ಓದಿ: ಅಪ್ಪು ಮಾಡಿರುವ ಸ್ಕೂಬಾ ಡೈವಿಂಗ್ ನೀವೂ ಮಾಡ್ಬೇಕಾ? ಹಾಗಿದ್ರೆ ನೇರವಾಗಿ ಈ ಸ್ಥಳಕ್ಕೆ ಬನ್ನಿ! ರೋಚಕ ಸ್ಥಳದ ಕುತೂಹಲಕಾರಿ ಡಿಟೇಲ್ಸ್ ಇಲ್ಲಿದೆ


ನೀವು ಯೋಗ ಸ್ಟುಡಿಯೋದಲ್ಲಿ ಅಭ್ಯಾಸ ಮಾಡುತ್ತಿದ್ದರೆ ನಿಮ್ಮ ಯೋಗ ಮ್ಯಾಟ್ ಅನ್ನು ಸ್ವಚ್ಛಗೊಳಿಸುವುದು ಮುಖ್ಯವಾಗಿದೆ, ಅಲ್ಲಿ ನೀವು ಇತರರೊಂದಿಗೆ ಮ್ಯಾಟ್ಸ್ ಹಂಚಿಕೊಳ್ಳುತ್ತೀರಿ. ನೆನಪಿಡಿ ಮ್ಯಾಟ್​ ಕ್ಲೀನ್ ಮಾಡುವುದು ಸೂಕ್ಷ್ಮಜೀವಿಗಳನ್ನು ಕೊಲ್ಲುವುದಿಲ್ಲ, ಆದರೆ ಕೊಳಕು ಮತ್ತು ಕಲ್ಮಶಗಳ ಜೊತೆಗೆ ಅವುಗಳನ್ನು ತೆಗೆದುಹಾಕುತ್ತದೆ. ಸೂಕ್ಷ್ಮಜೀವಿಗಳನ್ನು ಕೊಲ್ಲಲು ಮತ್ತು ಸೋಂಕಿನ ಹರಡುವಿಕೆಯನ್ನು ತಡೆಯಲು ನಿಮ್ಮ ಮ್ಯಾಟ್​ ಅನ್ನು ಸ್ಯಾನಿಟೈಸ್​ ಮಾಡಿ.

Published by:Sandhya M
First published: