Life Hacks: ಪ್ರಿಜ್ ಸ್ವಚ್ಛ ಮಾಡಲು ಪರದಾಡುತ್ತಿದ್ದೀರಾ? ಇಲ್ಲಿದೆ ಸೂಪರ್ ಟಿಪ್ಸ್

simple Hacks To Clean Fridge: ನಿಂಬೆ ಮತ್ತು ಅಡಿಗೆ ಸೋಡಾವನ್ನು ನೀರಿಗೆ ಹಾಕಿ ಮಿಶ್ರಣ ಮಾಡಿ.  ಇಲ್ಲದಿದ್ದಲ್ಲಿ ನಿಂಬೆ ಹೋಳುಗಳನ್ನು ನಿಮ್ಮ ಪ್ರಿಜ್​ನ ಕೆಲ ಮೂಲೆಗಳಲ್ಲಿ ಇಡುವುದು ಅದರಲ್ಲಿನ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಆದರೆ ನಿಂಬೆ ಹೋಳುಗಳನ್ನು ಬದಲಾಯಿಸಬೇಕು.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆ ಕೆಲಸಗಳನ್ನು ಮಾಡುವುದು  ಹೆಚ್ಚಾಗಿ ಬೇಸರದ ಸಂಗತಿ ಎಂಬುದನ್ನ ಒಪ್ಪಿಕೊಳ್ಳೋಣ.ವಾಸ್ತವವಾಗಿ, ರೆಫ್ರಿಜರೇಟರ್‌ಗಳನ್ನು(Fridge) ಶುಚಿಗೊಳಿಸುವುದು ಖಂಡಿತವಾಗಿಯೂ  ಕಷ್ಟದ ಕೆಲಸ. ಕೆಲಸದಿಂದ ತಪ್ಪಿಸಿಕೊಳ್ಳಲಾಗದಿದ್ದರೂ, ಅರ್ಧದಷ್ಟು ಪ್ರಯತ್ನದಿಂದ ನೀವು ಕೆಲಸವನ್ನು ಎರಡು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಮಾರ್ಗಗಳಿವೆ. ಕೆಲವು ಸ್ಮಾರ್ಟ್ ಐಡಿಯಾಗಳು ನಿಮ್ಮ ಕೆಲಸವನ್ನು ಸುಲಭ ಮಾಡುತ್ತದೆ.  ಆಹಾರ ವಿಷವಾಗುವುದನ್ನು ತಡೆಯಲು ಆಗಾಗ ಫ್ರಿಡ್ಜ್ ನ್ನು ಶುಚಿ ಮಾಡುವುದು ಅತೀ ಅಗತ್ಯವಾಗಿರುವುದು. ಶುಚಿಯಾಗಿರದ ಫ್ರಿಡ್ಜ್ ಕೀಟಾಣುಗಳಿಗೆ ವಾಸಸ್ಥಾನವಾಗುವುದು. ತರಕಾರಿಗಳು(Vegetables) ಹಾಗೂ ಇತರ ಸಾಮಗ್ರಿಗಳನ್ನು ಫ್ರಿಡ್ಜ್ ನಲ್ಲಿ ಇಡುವ ವೇಳೆ ಹಳೆಯದ್ದು ಇದ್ದರೆ ಅದನ್ನು ತೆಗೆದು ಹೊಸತನ್ನು ಇಡಬೇಕು.

 ಹಾಗಾದ್ರೆ ಸುಲಭವಾಗಿ ಫ್ರಿಡ್ಜ್​ ಅನ್ನು ಕ್ಲೀನ್ ಮಾಡುವುದು ಹೇಗೆ ಇಲ್ಲಿದೆ. 

ಫ್ರಿಜ್ ಅನ್ನು ಶುಚಿಗೊಳಿಸಲು ಮೊದಲ ಕೆಲಸ ಎಂದರೆ ಅದರಲ್ಲಿರುವ  ವಸ್ತುಗಳನ್ನು ಹಾಗೂ  ಎಲ್ಲಾ ಆಹಾರವನ್ನು ತೆಗೆದುಹಾಕಿ. ಫ್ರಿಜ್ ಅನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುವ ಮೊದಲು ಸಂಪೂರ್ಣವಾಗಿ ಖಾಲಿ ಮಾಡಿ, ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.  ಅದರ ಕಪಾಟುಗಳನ್ನು ತೆಗೆಯಲು ಬಂದರೆ, ಅದನ್ನು ತೆಗೆದು ಬಿಸಿ ನೀರಿನಲ್ಲಿ ನೆನೆಸಿ. ಕಲೆಗಳಿದ್ದಲ್ಲಿ,  ಒರೆಸುವ ಬಟ್ಟೆಯನ್ನು ತೆಗೆದುಕೊಂಡು ಸ್ವಲ್ಪ ವಿನೆಗರ್ ಅಥವಾ ಅಡುಗೆ ಸೋಡಾವನ್ನು  ಹಾಕಿ ಅದರಲ್ಲಿ ಒರೆಸಿ.

ಇದನ್ನೂ ಓದಿ: ರೇಷ್ಮೆ ಸೀರೆ ಮೇಲೆ ಕಲೆಯಾಗಿದೆಯಾ; ಈ ಸುಲಭ ವಿಧಾನ ಬಳಸಿ ತೆಗೆಯಿರಿ

ಫ್ರಿಡ್ಜ್ ತೊಳೆಯುವ ಮೊದಲು ಅದನ್ನು ಸ್ವಿಚ್ ಆಫ್ ಮಾಡಿಕೊಂಡು ಅದನ್ನು ಅನ್ ಫ್ಲಗ್ ಮಾಡಿಕೊಳ್ಳಿ. ಸರಿಯಾಗಿ ತೊಳೆದ ಬಳಿಕ ಹೆಚ್ಚುವರಿ ನೀರನ್ನು  ಒಣಗಿಸಿ.  ಆಹಾರದ ಪದಾರ್ಥಗಳನ್ನು ಜೋಡಿಸುವುದು. ಆಹಾರ ಪದಾರ್ಥಗಳನ್ನು ಸರಿಯಾಗಿ ಜೋಡಿಸುವುದು ನಿಮ್ಮ ಅರ್ಧದಷ್ಟು ಪ್ರಯತ್ನವನ್ನು ಉಳಿಸಬಹುದು.

ಅನಗತ್ಯವಾಗಿ ನೀರು ಸೋರುವುದನ್ನ ತಪ್ಪಿಸಲು ಕಚ್ಚಾ ಮಾಂಸ ಮತ್ತು ಸಮುದ್ರಾಹಾರವನ್ನು ಫ್ರೀಜರ್‌ನ ಕೆಳಭಾಗದ ಕಪಾಟಿನಲ್ಲಿ ಇರಿಸಿ.  ಫ್ರಿಡ್ಜ್ ನ್ನು ಸರಿಯಾಗಿ  ಕ್ಲೀನ್ ಮಾಡಿದ ಬಳಿಕ ಯಾವಾಗಲೊಮ್ಮೆ ಸ್ಯಾನಿಟೈಸ್ ಮಾಡಿಕೊಳ್ಳಿ ಕಾಯಿಲೆಗಳನ್ನು ಉಂಟು ಮಾಡುವಂತಹ ಆಹಾರವನ್ನು ಹೊರಗೆ ತೆಗೆಯಿರಿ. ಅಂದರೆ ಅವಧಿ ಮುಗಿದ ಪದಾರ್ಥಗಳನ್ನು ಇಟ್ಟುಕೊಳ್ಳಬೇಡಿ.

ಬಾಟಲಿಗಳು ಮತ್ತು ಜಾಡಿಗಳನ್ನು ಒರೆಸಿ ಜಿಗುಟಾದ ಜಾಡಿಗಳನ್ನು ತೆಗೆದುಕೊಂಡು ಅವುಗಳನ್ನು ಸ್ವಚ್ಛವಾಗಿ ಒರೆಸಿ. ದೀರ್ಘಕಾಲದವರೆಗೆ ಸಂಗ್ರಹವಾದ ಕಲೆ ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ನೀವು ಅವುಗಳನ್ನು ಒದ್ದೆಯಾದ ಬಟ್ಟೆಯಿಂದ ಒರೆಸಬಹುದು ಅಥವಾ ಅಡಿಗೆ ಸೋಡಾ ಮತ್ತು ಅಡುಗೆ ಎಣ್ಣೆಯ ಸಮಾನ ಭಾಗಗಳ ಮಿಶ್ರಣವನ್ನು ಮಾಡಿ ಅದರಿಂದ ಒರೆಸಿ.

ವಾರದಲ್ಲಿ ಒಂದು ಸಲ ತರಕಾರಿ ಹಾಕಿ ಹಾಗೂ  ಹಳೆ ತರಕಾರಿ ಬದಲಾಯಿಸುತ್ತಿದ್ದರೆ, ಆಗ ತಿಂಗಳಿಗೆ ಒಂದು ಸಲ ಫ್ರಿಡ್ಜ್ ನ್ನು ಶುಚಿ ಮಾಡಬಹುದು. ಇಲ್ಲದಿದ್ದಲ್ಲಿ ಹಳೆಯ ತರಕಾರಿಗಳ ಕಲೆ ಹಾಗೆಯೆ ಉಳಿಯುತ್ತದೆ.

ಫ್ರಿಡ್ಜ್ ನಲ್ಲಿ ಆಹಾರ ಮತ್ತು ಸಾಮಗ್ರಿಗಳನ್ನು ಇಡುವ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ  ಹೆಚ್ಚು ವಸ್ತುಗಳನ್ನು ತುಂಬಿ ಇಡಬೇಡಿ. ಹೆಚ್ಚು ವಸ್ತುಗಳಿದ್ದಲ್ಲಿ ಗಾಳಿ ಓಡಾಡಲು ಸಾಧ್ಯವಿಲ್ಲ.

ನಿಂಬೆ ಮತ್ತು ಅಡಿಗೆ ಸೋಡಾವನ್ನು ನೀರಿಗೆ ಹಾಕಿ ಮಿಶ್ರಣ ಮಾಡಿ.  ಇಲ್ಲದಿದ್ದಲ್ಲಿ ನಿಂಬೆ ಹೋಳುಗಳನ್ನು ನಿಮ್ಮ ಪ್ರಿಜ್​ನ ಕೆಲ ಮೂಲೆಗಳಲ್ಲಿ ಇಡುವುದು ಅದರಲ್ಲಿನ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಆದರೆ ನಿಂಬೆ ಹೋಳುಗಳನ್ನು ಬದಲಾಯಿಸಬೇಕು.

ಇದನ್ನೂ ಓದಿ: ಮಕ್ಕಳಲ್ಲಿ ಈ ಲಕ್ಷಣಗಳಿದ್ರೆ ಅದು ಮಧುಮೇಹದ ಸೂಚನೆ ಇರಬಹುದು ಎಚ್ಚರ..

ತರಕಾರಿಗಳು ಮತ್ತು ಹಣ್ಣುಗಳನ್ನು ಒಂದೇ ಶೇಲ್ಫನಲ್ಲಿ ಹಾಕಿ ಇಡಬೇಡಿ. ಅದು ಕೂಡ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಫ್ರೀಜರ್ ನ ತಾಪಮಾನವನ್ನು -10 ಡಿಗ್ರಿ ಸೆ.ಯಲ್ಲಿ ಇಡಬೇಕು. ಇದರಲ್ಲಿ ಆಹಾರಗಳನ್ನು ಇಡುವ ವೇಳೆ ಅದನ್ನು ಸರಿಯಾಗಿ ಪ್ಯಾಕ್  ಮಾಡುವುದನ್ನ ಮರೆಯಬೇಡಿ. ನಿಯಮಿತವಾಗಿ ಐಸ್ ಟ್ರೇಯ ನೀರನ್ನು ಬದಲಾಯಿಸುತ್ತಾ ಇರಬೇಕು.
Published by:Sandhya M
First published: