Shallots: ಸಾಂಬಾರ್ ಈರುಳ್ಳಿಯನ್ನು ಸ್ವಚ್ಛಗೊಳಿಸಲು ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿದೆ ಸುಲಭ ವಿಧಾನ

ಈ ಪುಟಾಣಿ ಈರುಳ್ಳಿಗಳನ್ನು ಬಳಸಿ ಮಾಡಿದ ಸಾಂಬರ್ ಅಂತೂ ಅತ್ಯಂತ ರುಚಿಕರ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಅದನ್ನು ಕತ್ತರಿಸಿ ಬಳಸುವ ಅಗತ್ಯವಿಲ್ಲ, ಸಾಮಾನ್ಯವಾಗಿ ಹೆಚ್ಚಿನವರು ಇದನ್ನು ಸಾಂಬಾರ್‍ಗಳಲ್ಲಿ ಇಡಿಯಾಗಿಯೇ ಬಳಸುತ್ತಾರೆ. ಯಾವುದೇ ತರಕಾರಿಗಳನ್ನು ಬಳಸದೇ ಕೇವಲ ಈ ಈರುಳ್ಳಿಯನ್ನಷ್ಟೆ ಹಾಕಿಯೂ ಸಾಂಬಾರ್ , ಗೊಜ್ಜು, ಪಲ್ಯ ಇತ್ಯಾದಿಗಳನ್ನು ತಯಾರಿಸಬಹುದು.

ಸಾಂಬಾರ್ ಈರುಳ್ಳಿ

ಸಾಂಬಾರ್ ಈರುಳ್ಳಿ

  • Share this:
ತರಕಾರಿ (Vegetables) ಅಂಗಡಿಗಳಲ್ಲಿ ನೀವು ಚಿಕ್ಕ ಈರುಳ್ಳಿಗಳನ್ನು (Onion) ನೋಡಿರಬಹುದು. ನಮ್ಮ ನಿತ್ಯದ ಬಳಕೆಯ ಈರುಳ್ಳಿಗಳಿಗಿಂತ ಗಾತ್ರದಲ್ಲಿ ಭಿನ್ನವಾಗಿ ಕಾಣುವ ಈ ಪುಟಾಣಿ ಈರುಳ್ಳಿಗಳನ್ನು ಶಾಲೋಟ್‍ಗಳು (Shallot) ಎಂದು ಕರೆಯುತ್ತಾರೆ. ಈ ಕಿರು ಈರುಳ್ಳಿಗಳನ್ನು ಅನೇಕ ಮಂದಿ ಸಾಂಬಾರ್ ಈರುಳ್ಳಿ , ಉಂಡೆ ಈರುಳ್ಳಿ ಎಂದು ಕೂಡ ಕರೆಯುತ್ತಾರೆ. ಕೇರಳಿಗರಿಗಂತೂ ಈ ಶಾಲೊಟ್ ಅಚ್ಚುಮೆಚ್ಚು. ಅವರ ಹೆಚ್ಚಿನ ಖಾದ್ಯಗಳಲ್ಲಿ ಕಂಡು ಬರುವ ಈ ಚಿಕ್ಕ ಈರುಳ್ಳಿಗಳಿಂದ ತರಾವರಿ ತಿನಿಸುಗಳನ್ನು ತಯಾರಿಸಬಹುದು. ಸಾಂಬಾರ್ ಈರುಳ್ಳಿ, ಚಟ್ನಿ ಮತ್ತು ಬಿರಿಯಾನಿಗಳ ರುಚಿಯನ್ನು (Taste) ಇನ್ನಷ್ಟು ಹೆಚ್ಚಿಸುತ್ತದೆ ಎಂಬುವುದು ಶಾಲೊಟ್ ಪ್ರಿಯರ ಅನಿಸಿಕೆ.

ಈ ಪುಟಾಣಿ ಈರುಳ್ಳಿಗಳನ್ನು ಬಳಸಿ ಮಾಡಿದ ಸಾಂಬರ್ ಅಂತೂ ಅತ್ಯಂತ ರುಚಿಕರ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಅದನ್ನು ಕತ್ತರಿಸಿ ಬಳಸುವ ಅಗತ್ಯವಿಲ್ಲ, ಸಾಮಾನ್ಯವಾಗಿ ಹೆಚ್ಚಿನವರು ಇದನ್ನು ಸಾಂಬಾರ್‍ಗಳಲ್ಲಿ ಇಡಿಯಾಗಿಯೇ ಬಳಸುತ್ತಾರೆ. ಯಾವುದೇ ತರಕಾರಿಗಳನ್ನು ಬಳಸದೇ ಕೇವಲ ಈ ಈರುಳ್ಳಿಯನ್ನಷ್ಟೆ ಹಾಕಿಯೂ ಸಾಂಬಾರ್ , ಗೊಜ್ಜು, ಪಲ್ಯ ಇತ್ಯಾದಿಗಳನ್ನು ತಯಾರಿಸಬಹುದು.

ಸಾಂಬಾರ್ ಈರುಳ್ಳಿಯನ್ನು ಸ್ವಚ್ಛಗೊಳಿಸುವುದು ಹೇಗೆ
ಆಹಾ, ಇಷ್ಟೆಲ್ಲಾ ಗುಣಗಾನ ಕೇಳಿದ ಮೇಲೆ, ನಿತ್ಯದ ಬಳಕೆಯ ಈರುಳ್ಳಿಯನ್ನು ಪಕ್ಕಕ್ಕಿಟ್ಟು, ಸಾಂಬಾರ್ ಈರುಳ್ಳಿಯನ್ನು ಬಳಸಿ ನೋಡಲೇಬೇಕು ಎಂಬ ನಿರ್ಧಾರಕ್ಕೆ ನೀವೇನಾದರೂ ಬಂದಿದ್ದರೆ, ಕೊಂಚ ತಾಳ್ಮೆ ಇರಲಿ , ಅವಸರ ಬೇಡ. ಏಕೆಂದರೆ, ಚೋಟ್ ಮೆಣಸಿನಕಾಯಿಗಳು ಹೇಗೆ ಖಾರವಾಗಿರುತ್ತವೋ, ಹಾಗೆಯೇ ಈ ಚೋಟು ಈರುಳ್ಳಿಗಳು ಕೂಡ ಕಟು ವಾಸನೆಯನ್ನು ಹೊಂದಿರುತ್ತವೆ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಎಳನೀರಿನ ದೋಸೆ ಮಾಡಿ

ಮೊದಲ ಬಾರಿಗೆ ಇದನ್ನು ಬಳಸುವವರು ಹರಸಾಹಸ ಪಡುವುದಂತೂ ಖಂಡಿತಾ. ಇದರ ಸಿಪ್ಪೆ ತೆಗೆಯುವುದು ಕಷ್ಟಕರ, ಕತ್ತರಿಸಿದಾಗ ಕಣ್ಣಂತೂ ಸಿಕ್ಕಾಪಟ್ಟೆ ಉರಿಯುತ್ತದೆ, ಆ ಬಳಿಕ ನಿಮ್ಮ ಕೈಯಿಂದ ಅದರ ವಾಸನೆಯನ್ನು ತೊಳೆದು ತೆಗೆಯುವುದು ಮತ್ತೊಂದು ದೊಡ್ಡ ಕೆಲಸ. ಸಾಂಬಾರ್ ಈರುಳ್ಳಿಯ ರುಚಿ ನೋಡುವ ಆಸೆಯೇನೋ ಇದೆ, ಆದರೆ ಇಷ್ಟೆಲ್ಲಾ ಕಿರಿಕಿರಿಯನ್ನು ಎದುರಿಸುವುದು ಹೇಗಪ್ಪಾ ಎಂದು ಆಲೋಚಿಸುತ್ತಿದ್ದೀರಾ? ಚಿಂತಿಸಬೇಡಿ, ಸಾಂಬಾರ್ ಈರುಳ್ಳಿಗಳನ್ನು ಸ್ವಚ್ಚಗೊಳಿಸಿ, ಅವುಗಳ ಸಿಪ್ಪೆ ತೆಗೆದು, ಕಣ್ಣೀರು ಬಾರದ ರೀತಿಯಲ್ಲಿ ಹೇಗೆ ಬಳಸಬೇಕು ಎಂಬ ಮಾಹಿತಿಯನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ.

ಸಾಂಬಾರ್ ಈರುಳ್ಳಿಗಳನ್ನು ಯಾವುದೇ ಕಿರಿಕಿರಿ ಇಲ್ಲದೆ ಸ್ವಚ್ಚಗೊಳಿಸುವ ವಿಧಾನ
ಹಂತ 1
ಯಾವಾಗಲೂ ತಾಜಾ ಸಾಂಬಾರ್ ಈರುಳ್ಳಿಗಳನ್ನೇ ಖರೀದಿಸಿ. ಅಂಗಡಿಯಿಂದ ಕೊಳ್ಳುವಾಗ ಅವು ಸರಿಯಾದ ಸ್ಥಿತಿಯಲ್ಲಿ ಇವೆಯೇ ಎಂದು ಪರಿಶೀಲಿಸಿ ನೋಡುವುದನ್ನು ಮರೆಯಬೇಡಿ.

ಹಂತ 2
ಅವುಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ

ಹಂತ 3
ನೆನೆಸಿಟ್ಟು ಒಂದು ನಿಮಿಷವಾದ ನಂತರ, ನಿಮ್ಮ ಕೈ ಬೆರಳುಗಳನ್ನು ಬಳಸಿಕೊಂಡು ಸಾಂಬಾರ್ ಈರುಳ್ಳಿಗಳನ್ನು ತಿಕ್ಕಿ ತೊಳೆಯಿರಿ. ಈರುಳ್ಳಿಗಳ ಸಿಪ್ಪೆ ಸುಲಭವಾಗಿ ಬಿಡಿಸಿಕೊಳ್ಳುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಈಗ ಸಲೀಸಾಗಿ ಸಿಪ್ಪೆ ತೆಗೆಯಿರಿ.

ಹಂತ 4
ಎಲ್ಲಾ ಸಾಂಬಾರ್ ಈರುಳ್ಳಿಗಳ ಸಿಪ್ಪೆ ತೆಗೆದ ಬಳಿಕ ಸ್ವಚ್ಚವಾದ ನೀರಿನಿಂದ ಅವುಗಳನ್ನು ತೊಳೆಯಿರಿ. ಸಾಂಬಾರ್ ಈರುಳ್ಳಿಗಳನ್ನು ಬಳಸುವ ಮುನ್ನ ಅವುಗಳ ತುದಿಗಳನ್ನು ಕತ್ತರಿಸಿ ತೆಗೆಯಿರಿ.

ಇದನ್ನೂ ಓದಿ: Pickle: ನೀವು ಎಂದಾದ್ರೂ ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ

ಮೊದಲೇ ತಿಳಿಸಿದಂತೆ, ಈ ಪುಟಾಣಿ ಈರುಳ್ಳಿಗಳನ್ನು ಬಳಸಿದಾಗ ಕೈಯಲ್ಲಿ ಅದರ ವಾಸನೆ ಹಾಗೆಯೇ ಉಳಿಯುತ್ತದೆ. ಆ ವಾಸನೆಯನ್ನು ದೂರ ಮಾಡಲು ಕೂಡ ಅನೇಕ ಉಪಾಯಗಳಿವೆ. ಅರ್ಧ ತುಂಡು ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮ್ಮ ಕೈಗಳಿಗೆ ಚೆನ್ನಾಗಿ ಉಜ್ಜಿರಿ ಮತ್ತು ಕೈಗಳನ್ನು ನೀರಿನಿಂದ ತೊಳೆಯಿರಿ. ಅದಾದ ಬಳಿಕ ಮತ್ತೊಮ್ಮೆ ಪರಿಮಳಯುಕ್ತ ಸೋಪ್‍ನಿಂದ ಕೈಗಳನ್ನು ತೊಳೆಯಿರಿ. ಲಿಂಬೆ ಹಣ್ಣು ಇಲ್ಲದಿದ್ದರೆ, ಅದರ ಬದಲಿಗೆ ಟೂತ್‍ಪೇಸ್ಟ್ ವಿಧಾನವನ್ನು ಬಳಸಬಹುದು. ಕೈಗಳಿಗೆ ಒಂದು ಚೂರು ಟೂತ್‍ಪೇಸ್ಟ್ ಅನ್ನು ಹಚ್ಚಿಕೊಳ್ಳಿ, ಬಳಿಕ ಎರಡೂ ಹಸ್ತಗಳನ್ನು ಒಂದಕ್ಕೊಂಡು ಉಜ್ಜಿಕೊಳ್ಳಿ. ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ.
Published by:Ashwini Prabhu
First published: